RBIನಿಂದ UPI ಲೈಟ್‌ ಲಾಂಚ್‌! ಇಂಟರ್‌ನೆಟ್‌ ಇಲ್ಲದಿದ್ದರೂ ಹಣ ಪಾವತಿ ಸಾಧ್ಯ!

|

ಇನ್ಮುಂದೆ ಯುಪಿಐ ಪಾವತಿ ಮೂಲಕ ಹಣ ವರ್ಗಾವಣೆ ಮಾಡುವುದಕ್ಕೆ ಇಂಟರ್‌ನೆಟ್‌ ಸೌಲಭ್ಯವಿಲ್ಲ ಎಂದು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಭಾರತೀಯರಿಗಾಗಿ ಇಂಟರ್‌ನೆಟ್‌ ಇಲ್ಲದ ಸಮಯದಲ್ಲಿಯೂ ಪಾವತಿ ಮಾಡಲು ಅವಕಾಶ ನೀಡುವ ಹೊಸ ಅಪ್ಲಿಕೇಶನ್‌ ಪರಿಚಯಿಸಿದೆ. ಈ ಅಪ್ಲಿಕೇಶನ್‌ನಲ್ಲಿ ಕಡಿಮೆ ಮೌಲ್ಯದ ವಹಿವಾಟುಗಳನ್ನು ನಡೆಸಬಹುದಾಗಿದ್ದು, ಇದಕ್ಕೆ ಯುಪಿಐ ಲೈಟ್‌ ಎಂದು ಹೆಸರಿಸಲಾಗಿದೆ.

ಆರ್‌ಬಿಐ

ಹೌದು, ಆರ್‌ಬಿಐ ಭಾರತದಲ್ಲಿ ಹೊಸ ಯುಪಿಐ ಲೈಟ್‌ ಅಪ್ಲಿಕೇಶನ್‌ ಪರಿಚಯಿಸಿದೆ. ಇದು ಯುಪಿಐ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಆದರೆ ಇದು ಇಂಟರ್‌ನೆಟ್‌ ಇಲ್ಲದಿದ್ದರೂ ಕೂಡ ವೇಗವಾಗಿ ಮತ್ತು ಸರಳವಾಗಿ ಹಣ ಪಾವತಿಯನ್ನು ಮಾಡಲಿದೆ. ಇದರಿಂದ ಹಣ ಪಾವತಿ ಮಾಡುವುದಕ್ಕೆ ಇಂಟರ್‌ನೆಟ್‌ ಕನೆಕ್ಟಿವಿಟಿಗಾಗಿ ಪರದಾಡಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ. ಹಾಗಾದ್ರೆ ಯುಪಿಐ ಲೈಟ್‌ ಅಪ್ಲಿಕೇಶನ್‌ ಹೇಗೆ ಕಾರ್ಯನಿರ್ವಹಿಸಲಿದೆ? ಇದರ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

UPI ಲೈಟ್‌ ವಿಶೇಷತೆ ಏನು?

UPI ಲೈಟ್‌ ವಿಶೇಷತೆ ಏನು?

UPI ಲೈಟ್‌ ಯಪಿಐ ಗಿಂತ ಭಿನ್ನವಾಗಿ ಕಾರ್ಯನಿರ್ವಹಿಸಲಿದೆ. ಯುಪಿಐ ಲೈಟ್‌ನ ಪ್ರಮುಖ ವಿಶೇಷತೆ ಎಂದರೆ ಇದು ಇಂಟರ್‌ನೆಟ್‌ ಇಲ್ಲದೆ ಹೋದರೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವುದು. ಇದರಲ್ಲಿ ನೀವು ಹಣ ಪಾವತಿ ಮಾಡುವಾಗ ಯುಪಿಐ ಪಿನ್‌ ನಮೂದಿಸಬೇಕಾದ ಅವಶ್ಯಕತೆಯಿಲ್ಲ, ಇದು ನಿಮ್ಮ ಬ್ಯಾಂಕ್ ಖಾತೆಯನ್ನು ನೇರವಾಗಿ ಪ್ರವೇಶಿಸುತ್ತದೆ ಮತ್ತು ಹಣವನ್ನು ಕಳುಹಿಸುತ್ತದೆ ಅಥವಾ ಸ್ವೀಕರಿಸುತ್ತದೆ.

'ಆನ್-ಡಿವೈಸ್' ವ್ಯಾಲೆಟ್

'ಆನ್-ಡಿವೈಸ್' ವ್ಯಾಲೆಟ್

ಇನ್ನು ಈ ಅಪ್ಲಿಕೇಶನ್‌ 'ಆನ್-ಡಿವೈಸ್' ವ್ಯಾಲೆಟ್ ಆಗಿದೆ. ಇದರಲ್ಲಿ ಬಳಕೆದಾರರು ಹಣವನ್ನು ಸೇರಿಸುವ ಮತ್ತು ತ್ವರಿತವಾಗಿ ಯಾರಿಗಾದರೂ ಹಣವನ್ನು ಕಳುಹಿಸಬಹುದಾಗಿದೆ. ಇದು ವ್ಯಾಲೆಟ್ ಆಗಿರುವುದರಿಂದ, ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ವಾಲೆಟ್‌ಗೆ ಹಣವನ್ನು ಸೇರಿಸಬೇಕಾಗುತ್ತದೆ. ನಂತರ ಇಂಟರ್‌ನೆಟ್‌ ಇಲ್ಲದ ಸಮಯದಲ್ಲಿ ಯಾರಿಗಾದರೂ ಹಣವನ್ನು ಕಳುಹಿಸಬಹುದು. ಆದರೆ ಹಣ ಸ್ವೀಕರಿಸುವ ವ್ಯಕ್ತಿಯು ಆಫ್‌ಲೈನ್‌ನಲ್ಲಿದ್ದರೆ ಅವರ ಖಾತೆಗೆ ಹಣ ಕ್ರೆಡಿಟ್ ಆಗಿರುವುದಿಲ್ಲ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.

UPI ಪಿನ್ ಬೇಕಾಗಿಲ್ಲ!

UPI ಪಿನ್ ಬೇಕಾಗಿಲ್ಲ!

UPI ಲೈಟ್‌ನ ಮತ್ತೊಂದು ಪ್ರಮುಖವಾದ ಅಂಶವೆಂದರೆ ಇದನ್ನು ಬಳಸುವುದಕ್ಕೆ UPI ಪಿನ್ ಅಗತ್ಯವಿಲ್ಲ. ಇದು ನಿಮ್ಮ ವ್ಯಾಲೆಟ್‌ನಲ್ಲಿರುವ ಹಣವನ್ನು ನೇರವಾಗಿ ಕಳುಹಿಸುವುದಕ್ಕೆ ಅನುಮತಿಸಲಿದೆ. ಆದರೆ ನೀವು ನಿಮ್ಮ ವ್ಯಾಲೆಟ್‌ಗೆ 2000 ರೂ.ವರೆಗೆ ಮಾತ್ರ ಸೇರಿಸುವುದಕ್ಕೆ ಅನುಮತಿಸಲಿದೆ. ಏಕೆಂದರೆ ಇದು ಇಂಟರ್‌ನೆಟ್‌ ಇಲ್ಲದೆ ಇರುವಾಗ ಕಾರ್ಯನಿರ್ವಹಿಸುವುದರಿಂದ ಕಡಿಮೆ ಮೌಲ್ಯದ ಪಾವತಿಗಳಿಗೆ ಮಾತ್ರ ಅನುಮತಿಸಲಿದೆ. ಅಲ್ಲದೆ, ನೀವು ಪ್ರತಿ ವಹಿವಾಟಿಗೆ ಗರಿಷ್ಠ 200 ರೂ.ಗಳನ್ನು ಮಾತ್ರ ಕಳುಹಿಸಲು ಸಾಧ್ಯವಾಗಲಿದೆ.

ಅನ್‌ಲಿಮಿಟೆಡ್‌ ಟ್ರಾನ್ಸಾಕ್ಷನ್ಸ್

ಅನ್‌ಲಿಮಿಟೆಡ್‌ ಟ್ರಾನ್ಸಾಕ್ಷನ್ಸ್

ಯುಪಿಐ ಲೈಟ್‌ನಲ್ಲಿ ನೀವು ದಿನವೊಂದಕ್ಕೆ ಎಷ್ಟು ವಹಿವಾಟುಗಳನ್ನು ಬೇಕಾದರೂ ನಡೆಸುವುದಕ್ಕೆ ಅವಕಾಶವಿದೆ. ಇದು ಕಡಿಮೆ ಮೌಲ್ಯ ವಹಿವಾಟುಗಳನ್ನು ಬೆಂಬಲಿಸುವುದರಿಂದ ಅನ್‌ಲಿಮಿಟೆಡ್‌ ಟ್ರಾನ್ಸಾಕ್ಷನ್ಸ್ ಗೆ ಅವಕಾಶ ನೀಡಲಾಗಿದೆ. ಇದು ಅಫ್‌ಲೈಟ್‌ ಆಗಿರುವುದರಿಂದ ಹೆಚ್ಚಿನ ಜನರು ಕಡಿಮೆ ಮೌಲ್ಯದ ಪಾವತಿ ಅಗತ್ಯವಿದ್ದಾಗ ಇದನ್ನು ಬಳಸುವುದಕ್ಕೆ ಬಯಸಬಹುದು.

UPI

ಇನ್ನು UPI ಲೈಟ್ ಫೀಚರ್ಸ್‌ ಪ್ರಸ್ತುತ BHIM ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ನೀವು ಈ ವ್ಯಾಲೆಟ್ ಅನ್ನು ಪ್ರವೇಶಿಸಬಹುದು ಅಲ್ಲದೆ ಹಣವನ್ನು ಸೇರಿಸುವುದಕ್ಕೆ ಅವಕಾಶವಿದೆ. ಇನ್ನು UPI ಲೈಟ್ ಫೀಚರ್ಸ್‌ ಅನ್ನು ಎಂಟು ಬ್ಯಾಂಕ್‌ಗಳು ಬೆಂಬಲಿಸುತ್ತಿವೆ. ಇವುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು ಸೇರಿವೆ. ಇದಲ್ಲದೆ ಶೀಘ್ರದಲ್ಲೇ ಇನ್ನು ಹೆಚ್ಚಿನ ಬ್ಯಾಂಕ್‌ಗಳು ಯುಪಿಐ ಲೈಟ್‌ ಅನ್ನು ಬೆಂಬಲಿಸುವ ಸಾಧ್ಯತೆಯಿದೆ.

Best Mobiles in India

English summary
RBI has launched UPI Lite in India for low-value transactions

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X