Subscribe to Gizbot

ಮೊದಲ ವೃತ್ತಿಯಲ್ಲೇ ಅದ್ಭುತ ಯಶಸ್ಸು ಗಳಿಸಿದವರು

Written By:

ಪ್ರತಿಯೊಬ್ಬರೂ ತಮ್ಮ ಆರಂಭವನ್ನು ಎಲ್ಲಿಂದಲಾದರೂ ಆರಂಭಿಸಲೇಬೇಕು. ಜಗತ್ತಿನ ಅತಿ ವಿಶಿಷ್ಟ ವ್ಯಕ್ತಿಗಳು ಇಂದು ಶ್ರೀಮಂತ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇಂದು ಮಿಲಿಯನ್ ಹಾಗೂ ಬಿಲಿಯನ್‌ಗಳಲ್ಲಿ ಅವರು ಆದಾಯವನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ವ್ಯಕ್ತಿಗಳು ತಮ್ಮ ಬದುಕನ್ನು ಕಟ್ಟಿಕೊಂಡ ಬಗೆಯನ್ನು ನೀವು ಅರಿತಿರುವಿರಾ?

ಈ ಗಣ್ಯ ವ್ಯಕ್ತಿಗಳು ತಮ್ಮ ಪ್ರಸಿದ್ಧತೆಯನ್ನು ಹೇಗೆ ಪಡೆದುಕೊಂಡರು ಎಂಬ ಕಥೆಯನ್ನು ನೀವು ಅರಿತಿರಿ ಎಂದಾದಲ್ಲಿ ನಿಮಗೂ ಇವರೊಳಗಿನ ಸಾಧನೆಯ ಕಿಚ್ಚು ಹತ್ತಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಇವರೇನೂ ತಮ್ಮ ಮೊದಲ ವೃತ್ತಿಯನ್ನು ಅತಿ ರಂಜಕವಾಗಿ ಪ್ರಾರಂಭಿಸಿಲ್ಲ ಹಲವಾರು ಏಳುಬೀಳುಗಳೊಂದಿಗೆ ಇವರು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಕಷ್ಟವೆಂಬ ಸಮುದ್ರವನ್ನು ಈಜಿ ದಡ ಸೇರಿದ್ದಾರೆ.

ವಿಶ್ವದಲ್ಲಿ ಇವರು ತಮ್ಮ ಹೆಸರನ್ನು ಅತಿ ವಿಶಿಷ್ಟವಾಗಿ ಗಳಿಸಿಕೊಂಡಿದ್ದಾರೆ ಎಂದಾದಲ್ಲಿ ಇವರು ಮಾಡಿರುವ ಸಾಧನೆ ಕೆಲಸದಲ್ಲಿ ತೋರಿಸಿರುವ ಬದ್ಧತೆ ಹೇಗಿರಬಹುದು ಎಂಬುದನ್ನು ನೀವು ಅರಿತುಕೊಳ್ಳಲೇಬೇಕು. ಸಾಧಿಸುವ ಮನಸ್ಸೊಂದಿದ್ದರೆ ಎಷ್ಟೇ ಪ್ರಬಲ ಬಿರುಗಾಳಿಯನ್ನು ಕೂಡ ತಮ್ಮ ನಿಯಂತ್ರಣಕ್ಕೆ ತಂದುಕೊಂಡು ಸಾಧಿಸಬಹುದು ಎಂಬುದನ್ನು ಈ ಲೇಖನಲ್ಲಿ ನೀವು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮರಿಸ್ಸಾ ಮೇಯರ್

#1

ಯಾಹೂನ ಸಿಇಒ ಆಗಿರುವ ಮರಿಸ್ಸಾ ಮೇಯರ್ ತಮ್ಮ ವೃತ್ತಿಯನ್ನು ಶಿಕ್ಷಕಿಯಾಗಿ ಆರಂಭಿಸಿದರು. ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ) ತರಗತಿಗಳನ್ನು ತೆಗೆದುಕೊಳ್ಳುವ ಶಿಕ್ಷಕಿಯಾಗಿ ಇವರು ಬದುಕನ್ನು ಕಟ್ಟಿಕೊಳ್ಳಲು ಕಲಿತರು. ತಮ್ಮ ವೃತ್ತಿಯನ್ನು ಪ್ರೀತಿಸಿ ಇದರಲ್ಲೇ ಸಾಧನೆಯ ಉತ್ತುಂಗ ಶಿಖರವನ್ನು ಇವರು ತಲುಪಿದರು.

ಜಾನ್‌ಥನ್ ಈವ್

#2

ಆಪಲ್‌ನ ಬುದ್ಧಿವಂತ ವಿನ್ಯಾಸಕಾರರಾದ ಜಾನ್‌ಥನ್ ಈವ್ ತಮ್ಮ ಮೊದಲ ವೃತ್ತಿಯ ತೊಡಕವನ್ನು ಶೌಚಾಲಯವನ್ನು ವಿನ್ಯಾಸಗೊಳಿಸುವುದರ ಮೂಲಕ ಆರಂಭಿಸಿದರು. ಇವರು ನಂತರ ಏರಿದ ಸಾಧನೆ ಮಾತ್ರ ನಿಜಕ್ಕೂ ಅದ್ಭುತವಾಗಿದ್ದು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ. 1992 ರಲ್ಲಿ ಆಪಲ್‌ ಅನ್ನು ಸೇರುವ ಮುನ್ನ, ಇವರು ಲಂಡನ್ ಆಧರಿತ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಸರ್ಜೇ ಬಿನ್

#3

ಗೂಗಲ್‌ನ ಸಹಸ್ಥಾಪಕರಾಗಿರುವ ಸರ್ಜೇ ಬಿನ್, ಇವರು ಸಂಶೋಧಕರಾಗಿ ತಮ್ಮ ಆರಂಭ ವೃತ್ತಿಯನ್ನು ಪ್ರಾರಂಭಿಸಿಕೊಂಡವರು. 1996 ರಿಂದ ಇವರ ಹಿಂದಿನ ವೃತ್ತಿ ಮಾಹಿತಿಯನ್ನು ನೋಡುವಾಗ ಇವರೊಬ್ಬ ಕೋಡರ್ ಆಗಿದ್ದರು ಎಂಬುದು ತಿಳಿದು ಬರುತ್ತದೆ.

ಟಿಮ್ ಕುಕ್

#4

ಆಪಲ್‌ನ ಸಿಇಒ ಟಿಮ್ ಕುಕ್ ಮೊದಲಿಗೆ ಸುದ್ದಿಪತ್ರಿಕೆಗಳನ್ನು ವಿತರಿಸುವವರಾಗಿದ್ದರು ಎಂಬುದು ನಿಮಗೆ ಗೊತ್ತೇ? ಮತ್ತು ಪೇಪರ್ ಮಿಲ್‌ನಲ್ಲಿ ಕೂಡ ಇವರು ಉದ್ಯೋಗವನ್ನು ಮಾಡಿಕೊಂಡಿದ್ದರು.

ಜೆಫ್ ಬಿಸೋಜ್

#5

ಅಮೆಜಾನ್ ಸಿಇಒ ಜೆಫ್ ಬಿಸೋಜ್ ಬೇಸಿಗೆ ಶಿಬಿರಗಳನ್ನು ನಡೆಸುತ್ತಾ ತಮ್ಮ ವೃತ್ತಿಯನ್ನು ಆರಂಭಿಸಿದರು. ತಮ್ಮ ಸ್ನೇಹಿತೆಯೊಂದಿಗೆ ಇವರು ಮಕ್ಕಳಿಗಾಗಿ ಈ ಬೇಸಿಗೆ ಶಿಬಿರವನ್ನು ಆರಂಭಿಸುತ್ತಾ ತಮ್ಮ ವೃತ್ತಿ ಬದುಕಿನ ಏಳು ಬೀಳುಗಳನ್ನು ಕಂಡುಕೊಂಡವರು.

ಬಿಲ್ ಗೇಟ್ಸ್

#6

ಮೈಕ್ರೋಸಾಫ್ಟ್ ಸ್ಥಾಪಕರಾದ ಬಿಲ್ ಗೇಟ್ಸ್ ತಮ್ಮ ವೃತ್ತಿಯ ಆರಂಭವನ್ನು ಪ್ರೊಗ್ರಾಮರ್ ಆಗಿ ಶುರುಮಾಡಿಕೊಂಡರು. ನಂತರ ಇವರು ಸಾಧಿಸಿದ ಸಾಧನೆಗೆ ಜಗತ್ತು ನಿಬ್ಬೆರಗಾಯಿತು.

ಶೆರಿಲ್ ಸ್ಯಾಂಡ್‌ಬರ್ಗ್

#7

ಫೇಸ್‌ಬುಕ್ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ ಭಾರತದಲ್ಲಿ ರೋಗಿಗಳನ್ನು ಉಪಚರಿಸಿ ಅವರ ಬೆನ್ನೆಲುಬಾಗಿ ಸಹಾಯ ಹಸ್ತವನ್ನು ಚಾಚಿದವರು.

ಜೆಫ್ ವೀನರ್

#8

ಲಿಂಕ್‌ಡ್ ಇನ್ ಸಿಇಒ ಆಗುವ ಮೊದಲು ಇವರು ವಾರ್ನರ್ ಬ್ರೋಸ್ ಕುರಿತ ವರದಿಯನ್ನು ಬರೆಯುತ್ತಿದ್ದರು ಈ ಲೇಖನಗಳ ಮೂಲಕವೇ ಇವರು ಅಪಾರ ಪ್ರಚಾರವನ್ನು ಪಡೆದುಕೊಂಡರು.

ಸ್ಟೀವ್ ಬಾಲ್ಮರ್

#9

ಮೈಕ್ರೋಸಾಫ್ಟ್‌ನ ಮಾಜಿ ಸಿಇಒ ಸ್ಟೀವ್ ಬಾಲ್ಮರ್ ಕೋಲ್ಡ್ ಸ್ನ್ಯಾಪ್ ಫ್ರೀಜರ್ ಡೆಸರ್ಟ್ ಮೇಕರ್ ಎಂಬ ಯಂತ್ರವನ್ನು ಮಾರಾಟ ಮಾಡುತ್ತಿದ್ದರು. ನಿಜಕ್ಕೂಇವರು ನಂತರ ಏರಿದ ಎತ್ತರ ಮುಂದೆ ಬರಲು ಆಗ್ರಹಿಸುವವರಿಗೆ ದಾರಿದೀಪವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Really challenging First jobs of 10 biggest tech giants.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot