ಇತ್ತೀಚಿಗೆ ಬಿಡುಗಡೆ ಆದ 'ರಿಯಲ್‌ ಮಿ 5' ಫೋನ್ ಬೆಲೆಯಲ್ಲಿ ಇಳಿಕೆ!

|

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಗಟ್ಟಿಸ್ಥಾನ ಪಡೆದಿರುವ ಚೀನಾ ಮೂಲದ 'ರಿಯಲ್‌ ಮಿ' ಸ್ಮಾರ್ಟ್‌ಫೋನ್ ಕಂಪನಿಯು ಹಲವು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಇತ್ತೀಚಿಗೆ ಸಂಸ್ಥೆಯು ಬಜೆಟ್‌ ಬೆಲೆಯಲ್ಲಿ ರಿಯಲ್‌ ಮಿ 5 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ್ದು, ಆದ್ರೆ ಇದೀಗ ಈ ಸ್ಮಾರ್ಟ್‌ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ.

ರಿಯಲ್‌ ಮಿ 5

ಹೌದು, ರಿಯಲ್ ಮಿ ಸಂಸ್ಥೆಯ 'ರಿಯಲ್‌ ಮಿ 5' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿತವಾಗಿದ್ದು, 9,999ರೂ.ಗಳಿಗೆ ಲಭ್ಯವಿದ್ದ ಫೋನ್ ಈಗ 8,999ರೂ.ಗಳಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಒಟ್ಟು ಮೂರು ವೇರಿಯಂಟ್‌ಗಳಲ್ಲಿ ಲಾಂಚ್ ಆಗಿದ್ದು, ಅವುಗಳು 3GB + 32GB, 4GB + 64GB ಮತ್ತು 4GB RAM + 128GB ಆಗಿವೆ. ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಕ್ರಿಸ್ಟಲ್ ಬ್ಲೂ ಮತ್ತು ಪರ್ಪಲ್ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಹಾಗಾದರೇ 'ರಿಯಲ್‌ ಮಿ 5' ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೆನು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ರಿಯಲ್ ಮಿ 5 ಡಿಸ್‌ಪ್ಲೇ

ರಿಯಲ್ ಮಿ 5 ಡಿಸ್‌ಪ್ಲೇ

ರಿಯಲ್ ಮಿ 5 ಸ್ಮಾರ್ಟ್‌ಫೋನ್ 720×1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ವಿಶಾಲ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ 3 ನೀಡಲಾಗಿದ್ದು, ಅಂಚು ರಹಿತ ಮತ್ತು ಮಿನಿಡ್ರಾಪ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 164.4x75.6x9.3mm ಸುತ್ತಳತೆಯನ್ನು ಪಡೆದಿದ್ದು, ಅತ್ಯುತ್ತಮ ವೀಕ್ಷಣೆಯ ಅನುಭೂತಿ ನೀಡಲಿದೆ.

ರಿಯಲ್ ಮಿ 5 ಪ್ರೊಸೆಸರ್

ರಿಯಲ್ ಮಿ 5 ಪ್ರೊಸೆಸರ್

ರಿಯಲ್ ಮಿ 5 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 SoC ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದರ ಪ್ರೊಸೆಸರ್ ವೇಗವು 2.0Ghz ಆಗಿದ್ದು, ಪ್ರೊಸೆಸರ್ ವೇಗಕ್ಕೆ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲವಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 3GB + 32GB ಸ್ಟೋರೇಜ್, 4GB + 64GB ಸ್ಟೋರೇಜ್ ಮತ್ತು 4GB + 128GB ಆಂತರಿಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ.

ರಿಯಲ್ ಮಿ 5 ಕ್ಯಾಮೆರಾ

ರಿಯಲ್ ಮಿ 5 ಕ್ಯಾಮೆರಾ

ಈ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಕ್ವಾಡ್‌ ಕ್ಯಾಮೆರಾ ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು f/1.8 ಅಪರ್ಚರ್ನೊಂದಿಗೆ 12ಎಂಪಿ ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಅಲ್ಟ್ರಾವೈಲ್ಡ್‌ ಆಂಗಲ್ ಸೆನ್ಸಾರ್‌ನಲ್ಲಿದ್ದು, ಹಾಗೆಯೇ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ಸಾಮರ್ಥ್ಯದೊಂದಿಗೆ ಡೆಪ್ತ್ ಮತ್ತು ಮಾಕ್ರೋ ಮೋಡ್‌ನಲ್ಲಿವೆ. ಇನ್ನು ಸೆಲ್ಫಿ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದ್ದು, AI ಬ್ಯೂಟಿ ಮೋಡ್ ಹೊಂದಿದೆ.

ರಿಯಲ್ ಮಿ 5 ಬ್ಯಾಟರಿ ಬಲ

ರಿಯಲ್ ಮಿ 5 ಬ್ಯಾಟರಿ ಬಲ

ರಿಯಲ್ ಮಿ 5 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿಯನ್ನು ಪಡೆದಿದ್ದು, ಸ್ಮಾರ್ಟ್‌ಫೋನ್‌ಗೆ ದೀರ್ಘಕಾಲದ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದೆ. ಇದರೊಂದಿಗೆ 10W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದ್ದು, ಸ್ಮಾರ್ಟ್‌ಫೋನ್‌ಗೆ ವೇಗವಾಗಿ ಚಾರ್ಜ್ ಒದಗಿಸಲಿದೆ. ನಿರಂತರ 30ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಸಾಮರ್ಥ್ಯ ಒಳಗೊಂಡಿದೆ.

ಲಭ್ಯತೆ ಮತ್ತು ಬೆಲೆ

ಲಭ್ಯತೆ ಮತ್ತು ಬೆಲೆ

ರಿಯಲ್ ಮಿ 5 ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ ಆಯ್ಕೆ ಹೊಂದಿದೆ. 3GB + 32GB ಸ್ಟೋರೇಜ್‌ನ ಬೇಸಿಕ್ ವೇರಿಯಂಟ್ ಬೆಲೆ ಇಳಿಕೆಯಿಂದಾಗಿ ಈಗ 8,999 ರೂ.ಗಳಿಗೆ ದೊರೆಯಲಿದೆ. ಹಾಗೆಯೇ 4GB + 64GB ವೇರಿಯಂಟ್ ಬೆಲೆಯು 9,999ರೂ.ಗಳಾಗಿದ್ದು, 4GB + 128GB ವೇರಿಯಂಟ್ ಬೆಲೆಯು 10,999ರೂ.ಗಳು ಆಗಿದೆ. ಗ್ರಾಹಕರು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Realme 5 smartphone has received a price cut in India. Buyers can now purchase the Realme 5 for Rs 8,999 via Flipkart. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X