ರಿಯಲ್‌ಮಿ ಡೇಸ್‌ ಸೇಲ್‌: ಈ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ಡಿಸ್ಕೌಂಟ್‌!

|

ಪ್ರಸ್ತುತ ಇ ಕಾಮರ್ಸ್‌ ತಾಣಗಳಂತೆ ಪ್ರತಿಷ್ಠಿತ ಮೊಬೈಲ್ ಕಂಪನಿಗಳು ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತ ಸಾಗಿವೆ. ಆ ಪೈಕಿ ಜನಪ್ರಿಯ ಕಂಪನಿಗಳಲ್ಲಿ ಒಂದಾದ ರಿಯಲ್‌ಮಿ ಇದೀಗ ರಿಯಲ್‌ಮಿ ಡೇಸ್‌ ಸೇಲ್‌ ಮಾರಾಟ ಮೇಳವನ್ನು ಆಯೋಜಿಸಿದೆ. ಈ ರಿಯಲ್‌ಮಿ ಡೇಸ್‌ ಸೇಲ್ ನಲ್ಲಿ ಸಂಸ್ಥೆಯ ಜನಪ್ರಿಯ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ಘೋಷಿಸಿದಲಾಗಿದ್ದು, ಇತರ ಕೊಡುಗೆಗಗಳು ಲಭ್ಯವಾಗಲಿವೆ.

ಇರಲಿದೆ

ಹೌದು, ರಿಯಲ್‌ಮಿ ಕಂಪೆನಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ರಿಯಲ್‌ಮಿ ಡೇಸ್‌ ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ (ಏ.21 ) ಇಂದಿನಿಂದ ಪ್ರಾರಂಭವಾಗಿದ್ದು, ಏಪ್ರಿಲ್‌ 24ರ ವರೆಗೂ ಇರಲಿದೆ. ಈ ವೇಳೆ ಕಂಪನಿಯ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ತಿಳಿಸಿದೆ. ಆ ಪೈಕಿ ರಿಯಲ್‌ಮಿ 7 ಸರಣಿಯ ಫೋನ್‌ಗಳು, ರಿಯಲ್‌ಮಿ ನಾರ್ಜೋ ಸರಣಿಯ ಫೋನ್‌ಗಳು ಹಾಗೂ ರಿಯಲ್‌ಮಿ ಟಿವಿ ಸಹ ಸೇರಿವೆ. ಹಾಗೆಯೇ ಕ್ಯಾಶ್‌ಬ್ಯಾಕ್‌ ಹಾಗೂ ಇನ್‌ಸ್ಟಂಟ್ ಡಿಸ್ಕೌಂಟ್‌ ಸಹ ಲಭ್ಯವಾಗಲಿದೆ. ಹಾಗಾದರೇ ರಿಯಲ್‌ಮಿ ಡೇಸ್‌ ಸೇಲ್‌ನಲ್ಲಿ ಯಾವೆಲ್ಲಾ ಫೋನ್‌ಗಳು ಡಿಸ್ಕೌಂಟ್ ಪಡೆದಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ ಮಿ 7

ರಿಯಲ್‌ ಮಿ 7

ರಿಯಲ್‌ ಮಿ 7 ಸ್ಮಾರ್ಟ್‌ಫೋನ್‌ 13,499ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಾಗಲಿದೆ. ಈ ಫೋನ್ 1,080x2,400 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 6.5 ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಹಾಗೂ ಮೀಡಿಯಾ ಟೆಕ್ ಹಿಲಿಯೊ G95 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಜೊತೆಗೆ 6GB/64GB ಹಾಗೂ 8GB + 128GB ಸ್ಟೋರೇಜ್ ಆಯ್ಕೆ ಹೊಂದಿದೆ. ‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಇದು 5,000mAh ಬ್ಯಾಟರಿಯನ್ನು ಪಡೆದಿದೆ.

ರಿಯಲ್‌ಮಿ 6

ರಿಯಲ್‌ಮಿ 6

ರಿಯಲ್‌ಮಿ 6 ಸ್ಮಾರ್ಟ್‌ಫೋನ್‌ 17,999ರೂ. ಗಳ ದರದಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಫೋನ್ 6.5-ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, 480 ನಿಟ್ಸ್‌ ಬ್ರೈಟ್‌ನೆಶ್‌ ಅನ್ನು ಹೊಂದಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G90T 12 nm ಪ್ರೊಸೆಸರ್ ಅನ್ನು ಹೊಂದಿದೆ. ಹಾಗೇಯೆ 64GB ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬಳಸಿ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ರಿಯಲ್‌ಮಿ ಸ್ಮಾರ್ಟ್ ಟಿವಿ

ರಿಯಲ್‌ಮಿ ಸ್ಮಾರ್ಟ್ ಟಿವಿ

ರಿಯಲ್‌ಮಿ ಸಂಸ್ಥೆಯ 55 ಇಂಚಿನ ಸ್ಮಾರ್ಟ್‌ಟಿವಿ 40,999ರೂ.ಗಳಿಗೆ ಲಭ್ಯವಾಗಿದೆ. ಈ ಟಿವಿಯು ಎಸ್‌ಎಲ್‌ಇಡಿ ಸೌಲಭ್ಯ ಹೊಂದಿದೆ. ಡಾಲ್ಬಿ ಆಡಿಯೊ ಧ್ವನಿಯೊಂದಿಗೆ 4K ಟಿವಿಯಾಗಿದ್ದು ಆಂಡ್ರಾಯ್ಡ್ ಟಿವಿ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ರಿಯಲ್‌ಮಿ 7 ಪ್ರೊ

ರಿಯಲ್‌ಮಿ 7 ಪ್ರೊ

ರಿಯಲ್‌ಮಿ 7 ಪ್ರೊ ಫೋನ್ 17,999ರೂ.ಗೆ ಮಾರಾಟವಾಗುತ್ತಿದೆ. ಈ ಫೋನ್ ಮೊಬೈಲ್ ಛಾಯಾಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಇದು 64 ಮೆಗಾ ಪಿಕ್ಸೆಲ್ ಸೋನಿ ಕ್ಯಾಮೆರಾ ಹೊಂದಿದ್ದು, 65W ಫಾಸ್ಟ್ ಚಾರ್ಜಿಂಗ್ ಮತ್ತು ಅಮೋಲೆಡ್ ಡಿಸ್ಪ್ಲೇ ಹೊಂದಿದೆ.

ರಿಯಲ್‌ಮಿ ನಾರ್ಜೊ 20 ಪ್ರೊ

ರಿಯಲ್‌ಮಿ ನಾರ್ಜೊ 20 ಪ್ರೊ

ರಿಯಲ್‌ಮಿ ನಾರ್ಜೊ 20 ಪ್ರೊ ಫೋನ್ 12,999 ರೂ.ಗಳ ಆಫರ್ ಬೆಲೆಯಲ್ಲಿ ಲಭ್ಯವಿದೆ. ರಿಯಲ್‌ಮಿ ನಾರ್ಜೊ 20 ಪ್ರೊ ಫೋನ್ 65W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಮುಖ್ಯ ರಿಯರ್ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ.

Most Read Articles
Best Mobiles in India

English summary
The Realme Days sale has begun and here are some notable offers you should definitely check out.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X