ರಿಯಲ್‌ಮಿ ಫೆಸ್ಟಿವ್‌ ಡೇಸ್‌: ಈ ಡಿವೈಸ್‌ಗಳು ಆಕರ್ಷಕ ರಿಯಾಯಿತಿಯಲ್ಲಿ ಲಭ್ಯ!

|

ಹಬ್ಬಗಳು ಹತ್ತಿರ ಬಂದ್ರೆ ಸಾಕು ಇ-ಕಾಮರ್ಸ್‌ ತಾಣಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಬಿಗ್‌ ಸೇಲ್‌ಗಳನ್ನೇ ಆಯೋಜನೆ ಮಾಡುತ್ತವೆ. ಅದರಂತೆ ಸೆಪ್ಟೆಂಬರ್‌ 23 ಅಂದರೆ ನಾಳೆ ಅತ್ಯಾಕರ್ಷಕ ರಿಯಾಯಿತಿ ನೀಡಿ ತಮ್ಮ ಪ್ರೊಡಕ್ಟ್‌ಗಳನ್ನು ಮಾರಾಟ ಮಾಡಲು ಮುಂದಾಗಿವೆ. ಇದೇ ರೀತಿಯಾಗಿ ರಿಯಲ್‌ಮಿಯು ಸಹ ರಿಯಲ್‌ಮಿ ಫೆಸ್ಟಿವ್‌ ಡೇಸ್‌ ಸೇಲ್‌ ಆಯೋಜನೆ ಮಾಡಿದೆ. ಈ ಮೂಲಕ ತನ್ನ ಡಿವೈಸ್‌ಗಳಿಗೆ ಹೆಚ್ಚಿನ ರಿಯಾಯಿತಿ ನೀಡಿ ಮಾರಾಟ ಮಾಡಲಿದೆ. ಈ ರಿಯಲ್‌ಮಿಯ ಫೆಸ್ಟಿವ್‌ ಡೇಸ್‌ ಸೇಲ್‌ ಸಹ ನಾಳೆಯೇ ಆರಂಭ ಆಗಲಿದೆ.

ಆಫರ್‌

ಈ ಆಫರ್‌ನಲ್ಲಿ ಗ್ರಾಹಕರು ಕಂಪೆನಿ ನೀಡುವ ರಿಯಾಯಿತಿ ಪಡೆಯುವುದರ ಜೊತೆಗೆ ಕೂಪನ್‌ನಲ್ಲಿ 100 ರಿಯಾಯಿತಿ ಸಹ ಪಡೆಯಬಹುದಾಗಿದೆ. ಇದಕ್ಕಾಗಿ ರಿಯಲ್‌ಮಿ ಕಂಪೆನಿಯು ತನ್ನ ಅಧಿಕೃತ ತಾಣದಲ್ಲಿ ಮೈಕ್ರೋ ಸೈಟ್‌ನ್ನು ತೆರೆದಿದೆ. ಹಾಗೆಯೇ Notify Me ಎಂಬ ಬಟನ್‌ ಆಯ್ಕೆ ನೀಡಲಾಗಿದ್ದು, ಇದನ್ನು ಒತ್ತುವ ಮೂಲಕ ನೀವು ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಸೆಪ್ಟೆಂಬರ್ 23 ರಂದು ಆರಂಭ ಆಗುವ ಈ ಮಾರಾಟ ಸೆಪ್ಟೆಂಬರ್ 30 ರವರೆಗೆ ಇರಲಿದೆ.

ಫೆಸ್ಟಿವ್‌

ಈ ಫೆಸ್ಟಿವ್‌ನಲ್ಲಿ ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿ ನೀಡಿದೆ. ಇಷ್ಟೇ ಅಲ್ಲದೆ, ರಿಯಲ್‌ಮಿಯು ಸ್ಮಾರ್ಟ್‌ಫೋನ್‌ಗಳ ಜೊತೆಗೆ ಲ್ಯಾಪ್‌ಟಾಪ್‌, ವೈರ್‌ಲೆಸ್ ಇಯರ್‌ಬಡ್‌ಗಳು ಸೇರಿದಂತೆ ಇನ್ನಿತರ ಡಿವೈಸ್‌ಗಳ ಮೇಲೆ ಭಾರೀ ರಿಯಾಯಿತಿ ಘೋಷಣೆ ಮಾಡಿದೆ. ರಿಯಲ್‌ಮಿ C33 ಸ್ಮಾರ್ಟ್‌ಫೋನ್‌, ರಿಯಲ್‌ಮಿ ನಾರ್ಜೋ 50i , ರಿಯಲ್‌ಮಿ GT ಮಾಡೆಲ್‌ಗಳು, ರಿಯಲ್‌ಮಿ GT 2, ರಿಯಲ್‌ಮಿ GT 2 ಪ್ರೊ, ರಿಯಲ್‌ಮಿ GT ನಿಯೋ 3T, ಅಲ್ಲದೆ ರಿಯಲ್‌ಮಿ 9 ಪ್ರೊ+ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಡಿಸ್ಕೌಂಟ್‌ ಪಡೆದಿವೆ. ಹಾಗಿದ್ರೆ ಉಳಿದ ಯಾವೆಲ್ಲಾ ಡಿವೈಸ್‌ಗಳಿಗೆ ಎಷ್ಟು ರಿಯಾಯಿತಿ ನೀಡಿ ಮಾರಾಟ ಮಾಡಲಿದೆ ಎನ್ನುವ ವಿವರ ಇಲ್ಲಿದೆ ಓದಿರಿ.

ಫೋನ್‌ಗಳ ಮೇಲೆ ರಿಯಾಯಿತಿ

ಫೋನ್‌ಗಳ ಮೇಲೆ ರಿಯಾಯಿತಿ

ಈ ಫೆಸ್ಟಿವ್‌ ಮಾರಾಟದಲ್ಲಿ ರಿಯಲ್‌ಮಿ C33 ಸ್ಮಾರ್ಟ್‌ಫೋನ್‌ 1,000 ರಿಯಾಯಿತಿ ಪಡೆದು 7,999 ರೂ.ಗಳಿಗೆ ಲಭ್ಯ ಆಗಲಿದೆ. ಹಾಗೆಯೇ ರಿಯಲ್‌ಮಿ ನಾರ್ಜೋ 50i 7,999 ರೂ.ಗಳಿಗೆ ಲಭ್ಯವಾಗಲಿದೆ. ರಿಯಲ್‌ಮಿ GT ಮಾಡೆಲ್‌ಗಳ ಮೇಲೆಯೂ ಭಾರಿ ರಿಯಾಯಿತಿಗಳನ್ನು ಘೋಷಣೆ ಮಾಡಿದ್ದು, ರಿಯಲ್‌ಮಿ GT 2 ಬೆಲೆ 29,999 ಇದ್ದು, ರಿಯಲ್‌ಮಿ GT 2 ಪ್ರೊ ನ 8GB RAM ವೇರಿಯಂಟ್‌ಗೆ 34,999 ರೂ. ಬೆಲೆ ಇದೆ. ಜೊತೆಗೆ 12GB RAM ವೇರಿಯಂಟ್‌ಗೆ 42,999 ರೂ. ನಿಗದಿಯಾಗಿದೆ.

ರಿಯಲ್‌ಮಿ

ಇನ್ನುಳಿದಂತೆ ರಿಯಲ್‌ಮಿ ಫೆಸ್ಟಿವ್ ಡೇಸ್ ಮಾರಾಟದಲ್ಲಿ ಇತ್ತೀಚೆಗೆ ಬಿಡುಗಡೆಯಾದ ರಿಯಲ್‌ಮಿ GT ನಿಯೋ 3T ಗೂ ಆಕರ್ಷಕ ಆಫರ್‌ ನೀಡಲಾಗಿದೆ. 6GB ವೇರಿಯಂಟ್‌ಗೆ 22,999 ರೂ ಹಾಗೂ 8GB ಸ್ಟೋರೇಜ್‌ನ ರೂಪಾಂತರದ ಸ್ಮಾರ್ಟ್‌ಫೋನ್‌ಗೆ 24,999 ರೂ.ಗಳಾಗಿದೆ. ಇದೇ ಫೋನ್‌ನ ಟಾಪ್-ಎಂಡ್ ಮಾಡೆಲ್ 8GB RAM ಹಾಗೂ 256GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಸ್ಮಾರ್ಟ್‌ಫೋನ್‌ಗೆ 26,999 ರೂ. ಗಳನ್ನು ನಿಗದಿ ಮಾಡಿದೆ. ಇದರ ಮೂಲ ಬೆಲೆ 33,999 ರೂ.ಗಳಾಗಿದೆ.

ರಿಯಲ್‌ಮಿ 9 ಪ್ರೊ+

ಇಷ್ಟೇ ಅಲ್ಲದೆ, ರಿಯಲ್‌ಮಿ 9 ಪ್ರೊ+ ಗೆ 17,999 ರೂ. ನಿಗದಿ ಮಾಡಲಾಗಿದ್ದು, ಇದರ ಮೂಲ ಬೆಲೆ 24,999 ರೂ. ಇದೆ. ಈ ಮೂಲಕ ನೀವು ಈ ಫೋನ್‌ ಖರೀದಿ ಮಾಡಿದರೆ ಬರೋಬ್ಬರಿ 7,000 ರೂ.ಗಳ ರಿಯಾಯಿತಿ ಪಡೆಯಬಹುದಾಗಿದೆ. ರಿಯಲ್‌ಮಿ 9 ಪ್ರೊ ದ 6GB RAM ವೇರಿಯಂಟ್‌ಗೆ 14,999 ರೂ. ನಿಗದಿ ಮಾಡಲಾಗಿದ್ದು, ಇದರ ಮತ್ತೊಂದು ವೇರಿಯಂಟ್‌ 8GB RAM ಇರುವ ಸ್ಮಾರ್ಟ್‌ಫೋನ್‌ಗೆ 16,999 ಬೆಲೆ ನಿಗದಿ ಮಾಡಲಾಗಿದೆ.

ಸ್ಮಾರ್ಟ್‌ವಾಚ್‌ ಹಾಗೂ ಇಯರ್‌ಪಾಡ್ಸ್

ಸ್ಮಾರ್ಟ್‌ವಾಚ್‌ ಹಾಗೂ ಇಯರ್‌ಪಾಡ್ಸ್

ರಿಯಲ್‌ಮಿ ವಾಚ್‌ 3 ಪ್ರೊ ಗೆ 4,999 ರೂ.ಗಳನ್ನು ನಿಗದಿ ಮಾಡಿರುವ ಕಂಪೆನಿ ರಿಯಲ್‌ಮಿ ಬಡ್ಸ್‌ ಏರ್‌ 3 ಗೆ 2,499 ರೂ.ಗಳನ್ನು ನಿಗದಿ ಮಾಡಿ ಮಾರಾಟ ಮಾಡುವುದಾಗಿ ತಿಳಿಸಿದೆ.

Best Mobiles in India

English summary
Realme's Festive Days Sale will start tomorrow. In this article we have given the information about price of some realme mobile.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X