ಭಾರತದಲ್ಲಿ ರಿಯಲ್‌ಮಿ ಕೇರ್‌ ಪ್ಲಸ್‌ ಸರ್ವಿಸ್‌ ಲಾಂಚ್‌! ಉಪಯೋಗಗಳೇನು?

|

ಭಾರತದ ಮಾರುಕಟ್ಟೆಯಲ್ಲಿ ರಿಯಲ್‌ಮಿ ಕಂಪೆನಿ ಪ್ರಸಿದ್ಧ ಬ್ರಾಂಡ್‌ ಆಗುವ ನಿಟ್ಟಿನಲ್ಲಿ ಸಾಗಿದೆ. ಇದೇ ಹಾದಿಯಲ್ಲ ಅನೇಕ ಡಿವೈಸ್‌ಗಳನ್ನು ಭಾರತದಲ್ಲಿ ಪರಿಚಯಿಸಿದೆ. ಸದ್ಯ ಇದೀಗ ಭಾರತದಲ್ಲಿ ಬಳಕೆದಾರರಿಗೆ ಅನುಕೂಲವಾಗುವಂತೆ ಹೊಸ ರಿಯಲ್‌ಮಿ ಕೇರ್‌ ಪ್ಲಸ್‌ ಸರ್ವಿಸ್‌ ಅನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ಮಾರಾಟದ ನಂತರದ ಸೇವೆಯನ್ನು ಓದಗಿಸಲಿದೆ. ಅಂದರೆ ನಿವು ಯಾವುದೇ ರಿಯಲ್‌ಮಿ ಡಿವೈಸ್‌ ಖರೀದಿಸಿದ ನಂತರ ಸದಕ್ಕೆ ಸಂಬಂಧಿಸಿದ ಸರ್ವಿಸ್‌ ಪಡೆಯಲು ಇದು ಸಹಾಯ ಮಾಡಲಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ಭಾರತದಲ್ಲಿ ರಿಯಲ್‌ಮಿ ಕೇರ್‌ ಪ್ಲಸ್‌ ಸರ್ವಿಸ್‌ ಲಾಂಚ್‌ ಮಾಡಿದೆ. ಇದನ್ನು ಆಫ್‌ಲೈನ್ ಮತ್ತು ಆನ್‌ಲೈನ್ ಎರಡರಲ್ಲೂ ಬಳಸಬಹುದಾಗಿದೆ. ಇದು ಆಪಲ್‌ ಕೇರ್‌ ಪ್ಲಸ್‌ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರ ಮೂಲಕ ರಿಯಲ್‌ಮಿ ಮೊಬೈಲ್‌ಗಳ ಸರ್ವಿಸ್‌ ದೊರೆಯಲಿದೆ. ಇದು ಮೊಬೈಲ್‌ ಸೆಕ್ಯುರ್‌ ಸರ್ವಿಸ್‌ಗಳನ್ನು ನೀಡಲಿದೆ. ಹಾಗಾದ್ರೆ ರಿಯಲ್‌ಮಿ ಕೇರ್‌ ಪ್ಲಸ್‌ ಸರ್ವಿಸ್‌ನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ

ರಿಯಲ್‌ಮಿ ಕೇರ್‌ ಪ್ಲಸ್‌ ಸೇವೆ ನಿಮ್ಮ ಮೊಬೈಲ್‌ಗಳಿಗೆ ಸೆಕ್ಯುರ್‌ ಸರ್ವಿಸ್‌ ನೀಡಲಿದೆ. ಭಾರತದಲ್ಲಿ ರಿಯಲ್‌ಮಿ ಕೇರ್‌ ಪ್ಲಸ್‌ ಸರ್ವಿಸ್‌ ಪ್ರಕಟಣೆಯ ನಂತರ ಮಾತನಾಡಿರುವ ರಿಯಲ್‌ಮಿ ಇಂಡಿಯಾದ ಸಿಇಒ ಮತ್ತು ಅಧ್ಯಕ್ಷರಾದ ಶ್ರೀ ಮಾಧವ್ ಶೇಠ್ ನಾವು ಡಿಜಿಟಲ್ ತಂತ್ರಜ್ಞಾನದ ಮೂಲಕ ಸಂಪೂರ್ಣ ಸೇವೆಯನ್ನು ನೀಡಲಿದ್ದೆವೆ. ಸೇವಾ ಗುಣಮಟ್ಟದಲ್ಲಿ 'ಸ್ಥಿರತೆ, ಅನುಕೂಲತೆ ಮತ್ತು ಕಾಳಜಿಯನ್ನು ನಾವು ನೀಡುವುದಾಗಿ ಹೇಳಿದ್ದಾರೆ.

ರಿಯಲ್‌ಮಿ

ರಿಯಲ್‌ಮಿ ಕೇರ್‌ ಪ್ಲಸ್‌ ಸರ್ವಿಸ್‌ ಮೂಲಕ ಜನರು ಕಂಪನಿಯ ಅಧಿಕೃತ ಕಸ್ಟಮರ್‌ ಕೇರ್‌ ಸೆಂಟರ್‌, ವಿಶ್ವಾಸಾರ್ಹ ತಜ್ಞರು ಮತ್ತು ಸುಲಭವಾದ ಕ್ಲೈಮ್ ಲಭ್ಯತೆಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇದರಲ್ಲಿ ವಿಸ್ತೃತ ಖಾತರಿಯು ದೋಷಗಳು ಮತ್ತು ಅನಿರೀಕ್ಷಿತ ಯಾಂತ್ರಿಕ ಅಥವಾ ಪವರ್‌ ಪ್ರಾಬ್ಲಂ ನಂತಹ ಸೇವೆಗಳನ್ನು ನೀಡಲಿದೆ. ಅಲ್ಲದೆ ನೀವು ಹೊಂದಿರುವ ಡಿವೈಸ್‌ನ ಆಧಾರದ ಮೇಲೆ 589ರೂ. ಗಳಿಂದ 2,799ರೂ ವರಗೆ ಇದರ ಬೆಲೆಯನ್ನು ನಿಗಧಿಪಡಿಸಲಾಗಿದೆ.

ರಿಂದ

ಇನ್ನು ರಿಯಲ್‌ಮಿ ಕೇರ್‌ ಪ್ಲಸ್‌ ಸರ್ವಿಸ್‌ನಲ್ಲಿ ಸ್ಕ್ರೀನ್ ಪ್ರೊಟೆಕ್ಷನ್ ಬೆಲೆ 489 ರಿಂದ 2,549 ರೂ. ಇರಲಿದೆ. ಹಾಗೆಯೇ ಆಕ್ಸಿಡೆಂಟಲ್ ಮತ್ತು ಲಿಕ್ವಿಡ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲಾನ್ ನಿಮಗೆ 689ರೂ. ಮತ್ತು 4,899ರೂ. ಗಳ ನಡುವೆ ಬರಲಿದೆ ಎಂದು ಹೇಳಲಾಗಿದೆ. ಇದಲ್ಲದೆ ನಿಮ್ಮ ಬಳಿಯಿರುವ ರಿಯಲ್‌ಮಿ ಫೋನ್‌ ಸರಣಿ ಹೆಸರು ಇಲ್ಲವೇ ಫೋನ್‌ನ IMEI ಸಂಖ್ಯೆಯನ್ನು ನಮೂದಿಸುವ ಮೂಲಕ ರಿಯಲ್‌ಮಿ ಕೇರ್‌ ಪ್ಲಸ್‌ ಸರ್ವಿಸ್‌ನ ನಿಖರವಾದ ಬೆಲೆಯನ್ನು ಪರಿಶೀಲಿಸಬಹುದು.

ರಿಯಲ್‌ಮಿ

ರಿಯಲ್‌ಮಿ ಕೇರ್‌ ಪ್ಲಸ್‌ ಇದೀಗ ಭಾರತದಲ್ಲಿ ಹೊಸ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಲಭ್ಯವಿದೆ. ನೀವು ಹೊಸ ಸ್ಮಾರ್ಟ್‌ಫೋನ್ ಮೂಲಕ ರಿಯಲ್‌ಮಿ ಕೇರ್‌ ಪ್ಲಸ್‌ ಸೇವೆ ಖರೀದಿಸಿದರೆ ಬಳಕೆದಾರರು ಈ ಯೋಜನೆಗಳ ಖರೀದಿಯನ್ನು ರದ್ದುಗೊಳಿಸಬಹುದು ಎಂದು ತಿಳಿದುಬಂದಿದೆ. ಇದರ ಕುರಿತು ಇನ್ನು ಹೆಚ್ಚಿನ ವಿವರಗಳನ್ನು ರಿಯಲ್‌ಮಿ ಕೇರ್‌ + ಸರ್ವಿಸ್‌ ಮೈಕ್ರೋಸೈಟ್‌ಗೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದು.

ರಿಯಲ್‌ಮಿ

ಇನ್ನು ರಿಯಲ್‌ಮಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸದಾಗಿ ರಿಯಲ್‌ಮಿ C30s ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 6.5 ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್ ಯುನಿಸೋಕ್‌ SC9863A SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 12 ಬೆಂಬಲವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ 8 ಮೆಗಾಪಿಕ್ಸೆಲ್ AI ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

Best Mobiles in India

Read more about:
English summary
Realme has announced the Realme Care service system in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X