ಬಳಕೆದಾರರಿಗೆ ಭಾರಿ ಬೇಸರ ತಂದ 'ರಿಯಲ್‌ ಮಿ' ನಡೆ!

|

ಸ್ಮಾರ್ಟ್‌ಫೋನ್‌ಗಳಲ್ಲಿನ ಪ್ರೊಸೆಸರ್‌ಗಳ ಕಾರ್ಯವೈಖರಿಗೆ ಬೆಂಬಲ ನೀಡುವ ಆಂಡ್ರಾಯ್ಡ್‌ ಓಎಸ್‌ ಈಗಾಗಲೇ ಹಲವು ಆವೃತ್ತಿಗಳಲ್ಲಿ ಅಪ್‌ಡೇಟ ಕಂಡಿದೆ. ಸದ್ಯ ಬಹುತೇಕ ಸ್ಮಾರ್ಟ್‌ಫೋನ್‌ಗಳು 'ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್'ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದ್ರೆ ಇತ್ತೀಚಿಗಷ್ಟೆ ಹೊಸದಾಗಿ ಆಂಡ್ರಾಯ್ಡ್ 10 ಓಎಸ್‌ ಲಗ್ಗೆ ಇಟ್ಟಿದ್ದು, ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸತನವನ್ನು ಪರಿಚಯಿಸಿದೆ.

ಸ್ಮಾರ್ಟ್‌ಫೋನ್‌ಗಳು

ಹೌದು, ಇಂದಿನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್‌ ಪಡೆದುಕೊಳ್ಳುತ್ತಿವೆ. ಆ ಲಿಸ್ಟಿಗೆ ಶಿಯೋಮಿ, ಸ್ಯಾಮ್‌ಸಂಗ್, ಒನ್‌ಪ್ಲಸ್‌, ಸೇರಿದಂತೆ ಪ್ರಮುಖ ಕಂಪನಿಗಳ ಫೋನ್‌ಗಳು ಸೇರಿವೆ. ಆದ್ರೆ ರಿಯಲ್‌ ಮಿ ಸಂಸ್ಥೆಯ ನಾಲ್ಕು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 10 ಓಎಸ್‌ ಅಪ್‌ಡೇಟ್ ಆಗುವುದಿಲ್ಲ ಎನ್ನುವ ಸಂಗತಿ 'ರಿಯಲ್‌ ಮಿ'ಯ ಆ ಫೋನ್‌ಗಳ ಬಳಕೆದಾರರಿಗೆ ಶಾಕ್ ಅನಿಸಿದೆ. ಹಾಗಾದರೇ ರಿಯಲ್‌ ಮಿ'ಯ ಆ ನಾಲ್ಕು ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ ಮಿ U1

ರಿಯಲ್‌ ಮಿ U1

ರಿಯಲ್‌ ಮಿ U1 ಸ್ಮಾರ್ಟ್‌ಫೋನ್ 6.3 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಹಿಲಿಯೊ ಪಿ70 ಪ್ರೊಸೆಸರ್‌ ಹೊಂದಿದೆ. ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಜೊತೆಗೆ 25ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 8.1 ಓರಿಯೊ ಆಪರೇಟಿಂಗ್ ಸಿಸ್ಟಮ್‌fನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನಿಗೆ ಆಂಡ್ರಾಯ್ಡ್‌ 10 ಓಎಸ್‌ಗೆ ಅಪ್‌ಡೇಟ್ ಆಗುವ ಭಾಗ್ಯವಿಲ್ಲ.

ರಿಯಲ್‌ ಮಿ 2

ರಿಯಲ್‌ ಮಿ 2

ರಿಯಲ್‌ ಮಿ 2 ಸ್ಮಾರ್ಟ್‌ಫೋನ್ 6.2 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಜೊತೆಗೆ 8ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್ ಸಹ ಆಂಡ್ರಾಯ್ಡ್‌ 8.1 ಓರಿಯೊ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಸಹ ಆಂಡ್ರಾಯ್ಡ್‌ 10 ಓಎಸ್‌ಗೆ ಅಪ್‌ಡೇಟ್ ಆಗುವುದಿಲ್ಲ.

ರಿಯಲ್‌ ಮಿ C1

ರಿಯಲ್‌ ಮಿ C1

ರಿಯಲ್‌ ಮಿ ಕಂಪನಿಯ ಅಗ್ಗದ ಬೆಲೆಯ ಫೋನ್‌ಗಳಲ್ಲಿ 'ರಿಯಲ್‌ ಮಿ C1' ಸಹ ಒಂದಾಗಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 450 ಪ್ರೊಸೆಸರ್‌ ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 8.1 ಓರಿಯೊ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಉಳಿದಂತೆ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಜೊತೆಗೆ 5ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ.

ರಿಯಲ್‌ ಮಿ 1

ರಿಯಲ್‌ ಮಿ 1

ರಿಯಲ್‌ ಮಿ 1 ಸ್ಮಾರ್ಟ್‌ಫೋನ್ ಕೂಡಾ ಆಂಡ್ರಾಯ್ಡ್‌ 8.1 ಓರಿಯೊ ಆಪರೇಟಿಂಗ್ ಸಿಸ್ಟಮ್‌ ಅನ್ನು ಹೊಂದಿದ್ದು, ಜೊತೆಗೆ ಮೀಡಿಯಾ ಟೆಕ್ ಹಿಲಿಯೊ ಪಿ60 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಹಿಂಬದಿಯಲ್ಲಿ 13ಎಂಪಿಯ ಸಿಂಗಲ್ ರಿಯರ್‌ ಕ್ಯಾಮೆರಾ ಮತ್ತು 8ಎಂಪಿಯ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ಈ ಫೋನ್ ಕೂಡಾ ಆಂಡ್ರಾಯ್ಡ್‌ 10ಗೆ ಅಪ್‌ಡೇಟ್ ಪಡೆಯಲ್ಲ.

ಆಂಡ್ರಾಯ್ಡ್‌ 10 ಓಎಸ್‌ ಅಲಭ್ಯ

ಆಂಡ್ರಾಯ್ಡ್‌ 10 ಓಎಸ್‌ ಅಲಭ್ಯ

ರಿಯಲ್‌ ಮಿ ಕಂಪನಿಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳು 2018ರಲ್ಲಿ ಮಾರುಕಟ್ಟೆಗೆ ಬಂದಿವೆ. ಹಾಗೂ ಈ ನಾಲ್ಕು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 8.1 ಓಎಸ್‌ ಸಿಸ್ಟಮ್‌ ನಲ್ಲಿ ಕಾರ್ಯನಿರ್ವಹಿಸುತ್ತವೆ. ಆಂಡ್ರಾಯ್ಡ್‌ 10 ಓಎಸ್‌ ಬೆಂಬಲ ಲಭ್ಯವಾಗುವುದಿಲ್ಲ. ಆದರೆ ಆಂಡ್ರಾಯ್ಡ್ 9 ಪೈ ಓಎಸ್‌ ಲಭ್ಯವಾಗುವ ಸಾಧ್ಯತೆಗಳಿವೆ.

Best Mobiles in India

English summary
Realme 1, Realme U1, Realme C1, and Realme 2 users will not only rue the lack of new Android 10 features. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X