ಭಾರತದಲ್ಲಿ ರಿಯಲ್‌ಮಿ ವಾಚ್‌ 3 ಪ್ರೊ ಮತ್ತು ರಿಯಲ್‌ಮಿ ಬಡ್ಸ್‌ ಏರ್‌ 3S ಬಿಡುಗಡೆ!

|

ರಿಯಲ್‌ಮಿ ಸಂಸ್ಥೆಯು ನೂತನವಾಗಿ ರಿಯಲ್‌ಮಿ C33 ಸ್ಮಾರ್ಟ್‌ಫೋನ್‌ ಜೊತೆಗೆ ಇತರೆ ಎರಡು ಹೊಸ ಡಿವೈಸ್‌ಗಳನ್ನು ಪರಿಚಯಸಿದೆ. ಅವುಗಳು ಕ್ರಮವಾಗಿ ರಿಯಲ್‌ಮಿ ವಾಚ್‌ 3 ಪ್ರೊ (Realme Watch 3 Pro) ಮತ್ತು ರಿಯಲ್‌ಮಿ ಬಡ್ಸ್‌ ಏರ್‌ 3S (Realme Buds Air 3S) ಆಗಿವೆ. ಈ ಎರಡು ಸಾಧನಗಳು ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿವೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಸಂಸ್ಥೆಯು ರಿಯಲ್‌ಮಿ ವಾಚ್‌ 3 ಪ್ರೊ ಮತ್ತು ರಿಯಲ್‌ಮಿ ಬಡ್ಸ್‌ ಏರ್‌ 3S ಡಿವೈಸ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನೂತನ ರಿಯಲ್‌ಮಿ ಬಡ್ಸ್‌ ಏರ್‌ 3S ಡಿವಯಸ್ ಆಯಂಟಿ ನಾಯಿಸ್‌ ಕ್ಯಾನ್ಸಲೇಶನ್‌ (ANC) ಸೌಲಭ್ಯವನ್ನು ಪಡೆದಿದ್ದು, ಡಾಲ್ಬಿ ಅಟ್ಮೋಸ್‌ ಆಡಿಯೋ ಸಪೋರ್ಟ್‌ ಪಡೆದಿದೆ. ಇನ್ನು ರಿಯಲ್‌ಮಿ ವಾಚ್‌ 3 ಪ್ರೊ ಸಾಧನವು ಹಾರ್ಟ್‌ ರೇಟ್ ಮಾನಿಟರಿಂಗ್ ಹಾಗೂ SpO2 ಸೌಲಭ್ಯವನ್ನು ಒಳಗೊಂಡಿದೆ.

ಬಣ್ಣಗಳ

ರಿಯಲ್‌ಮಿ ಬಡ್ಸ್‌ ಏರ್‌ 3S ಬ್ಲ್ಯಾಕ್‌ ಮತ್ತು ವೈಟ್‌ ಕಲರ್‌ ಆಯ್ಕೆಗಳನ್ನು ಪಡೆದಿದ್ದು, ಸೆಪ್ಟೆಂಬರ್ 14 ರಿಂದ ಮಾರಾಟ ಪ್ರಾರಂಭಿಸಲಿದೆ. ಅದೇ ರೀತಿ ರಿಯಲ್‌ಮಿ ವಾಚ್‌ 3 ಪ್ರೊ ಡಿವೈಸ್‌ ಬ್ಲ್ಯಾಕ್‌ ಮತ್ತು ಗ್ರೇ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ. ಈ ಸಾಧನವು ಇದೇ ಸೆಪ್ಟೆಂಬರ್ 9 ರಿಂದ ಖರೀದಿಗೆ ಲಭ್ಯವಾಗಲಿದೆ. ಹಾಗಾದರೆ ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ ವಾಚ್‌ 3 ಪ್ರೊ ಮತ್ತು ರಿಯಲ್‌ಮಿ ಬಡ್ಸ್‌ ಏರ್‌ 3S ಡಿವೈಸ್‌ಗಳ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ ವಾಚ್‌ 3 ಪ್ರೊ ಫೀಚರ್ಸ್‌

ರಿಯಲ್‌ಮಿ ವಾಚ್‌ 3 ಪ್ರೊ ಫೀಚರ್ಸ್‌

ರಿಯಲ್‌ಮಿ ವಾಚ್‌ 3 ಪ್ರೊ (Realme Watch 3 Pro) ಸಾಧನವು ತೆಳುವಾದ ಬೆಜೆಲ್‌ಗಳೊಂದಿಗೆ 1.78 ಇಂಚಿನ AMOLED HD ಕರ್ವ ಡಿಸ್‌ಪ್ಲೇಯನ್ನು ಹೊಂದಿದೆ. ಇದು GPS ಮತ್ತು Cywee ನ ವೃತ್ತಿಪರ GPS ಅಲ್ಗಾರಿದಮ್ ಅನ್ನು ಹೊಂದಿದೆ. ಈ ಜಿಪಿಎಸ್ ವ್ಯವಸ್ಥೆಯು ನಿರಂತರ ಬಳಕೆಯಲ್ಲೂ 20 ಗಂಟೆಗಳ ಕಾಲ ಇರುತ್ತದೆ. ಹಾಗೆಯೇ ಇದು ಬ್ಲೂಟೂತ್ ಕಾಲ್ ಮಾಡಲು ಹಾಗೂ ಕರೆಗಳನ್ನು ಸ್ವೀಕರಿಸಲು ಗ್ರಾಹಕರು ಫೋನ್ ಬಳಸುವ ಅಗತ್ಯವನ್ನು ಇರುವುದಿಲ್ಲ. ಈ ವಾಚ್ 110 ಕ್ರೀಡಾ ವಿಧಾನಗಳನ್ನು ಆಕ್ಸಸ್ ಮಾಡಲು ಅನುಮತಿಸುತ್ತದೆ.

ವಾಚ್

ಹಾಗೆಯೇ ರಿಯಲ್‌ ಟೈಮ್‌ ಹೃದಯ ಬಡಿತ ಮಾನಿಟರಿಂಗ್, SpO2 ಮಾನಿಟರಿಂಗ್, ಒತ್ತಡದ ಮಟ್ಟ ಮಾಪನ ಮತ್ತು ನಿದ್ರೆ ಟ್ರ್ಯಾಕಿಂಗ್‌ನಂತಹ ಫೀಚರ್ಸ್‌ಗಳನ್ನು ಬೆಂಬಲಿಸುತ್ತದೆ. ಹಾಗೆಯೇ ಈ ಹೊಸ ಸ್ಮಾರ್ಟ್ ವಾಚ್ 345mAh ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 10 ದಿನಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿದೆ.

ರಿಯಲ್‌ಮಿ ಬಡ್ಸ್‌ ಏರ್‌ 3S ಫೀಚರ್ಸ್‌

ರಿಯಲ್‌ಮಿ ಬಡ್ಸ್‌ ಏರ್‌ 3S ಫೀಚರ್ಸ್‌

ರಿಯಲ್‌ಮಿ ಬಡ್ಸ್‌ ಏರ್‌ 3S (Realme Buds Air 3S) ಸಾಧನವು ಕಿವಿಗೆ ಕಂಫರ್ಟ್‌ ವಿನ್ಯಾಸವನ್ನು ಹೊಂದಿದೆ. ನೂತನ ಇಯರ್‌ಬಡ್‌ಗಳು ಡಾಲ್ಬಿ ಅಟ್ಮಾಸ್‌ಗೆ ಹೊಂದಿಕೆಯಾಗುವ 11 ಎಂಎಂ ಟ್ರಿಪಲ್ ಟೈಟಾನಿಯಂ ಬಾಸ್ ಡ್ರೈವರ್ ಅನ್ನು ಬಳಸುತ್ತವೆ. ಬಡ್ಸ್ ಏರ್ 3S ಇತರ ಸಾಧನಗಳೊಂದಿಗೆ ಸಂಪರ್ಕಕ್ಕಾಗಿ ಬ್ಲೂಟೂತ್ 5.3 ಅನ್ನು ಬಳಸುತ್ತದೆ. ANC ಇಲ್ಲದಿರುವಾಗ, ಇಯರ್‌ಬಡ್‌ಗಳು ಶಬ್ದ-ಮುಕ್ತ ಕರೆಗಳನ್ನು ಮಾಡುತ್ತವೆ.

ಪ್ಲೇಬ್ಯಾಕ್

ಇನ್ನು ಬಡ್ಸ್ ಏರ್ 3S ಟ್ರೂಲಿ ಇಯರ್‌ಬಡ್‌ ಡಿವೈಸ್‌ 43mAh ಬ್ಯಾಟರಿ ಸಾಮರ್ಥ್ಯದೊಂದಿಗೆ 30 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ. ರಿಯಲ್‌ಮಿ ಬಡ್ಸ್‌ ಏರ್‌ 3S ಒಂದೇ ವೇಳೆಗೆ ಎರಡು ಡಿವೈಸ್‌ಗಳಿಗೆ ಸಂಪರ್ಕಿಸಬಹುದು, ಆದ್ದರಿಂದ ನೀವು ಪರ್ಯಾಯವಾಗಿ ಬದಲಾಯಿಸಬಹುದು.

ಬೆಲೆ ಎಷ್ಟು ಮತ್ತು ಲಭ್ಯತೆ?

ಬೆಲೆ ಎಷ್ಟು ಮತ್ತು ಲಭ್ಯತೆ?

ರಿಯಲ್‌ಮಿ ವಾಚ್‌ 3 ಪ್ರೊ ಸಾಧನದ ಬೆಲೆ 4,999 ರೂ. ಆಗಿದೆ. ಈ ಸಾಧನವು ಬ್ಲ್ಯಾಕ್‌ ಮತ್ತು ಗ್ರೇ ಬಣ್ಣಗಳ ಆಯ್ಕೆ ಪಡೆದಿದ್ದು, ಇದೇ ಸೆಪ್ಟೆಂಬರ್ 9 ರಿಂದ ರಿಯಲ್‌ಮಿ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಇತರೆ ಪ್ರಮುಖ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಅದೇ ರೀತಿ ರಿಯಲ್‌ಮಿ ಬಡ್ಸ್‌ ಏರ್‌ 3S ಸಾಧನದ ಬೆಲೆ 2,499 ರೂ. ಆಗಿದ್ದು, ಇಯರ್‌ಬಡ್‌ಗಳು ಬ್ಲ್ಯಾಕ್‌ ಮತ್ತು ವೈಟ್‌ ಬಣ್ಣಗಳ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿದೆ. ಇನ್ನು ಈ ಫೋನ್ ಇದೇ ಸೆಪ್ಟೆಂಬರ್ 14 ರಿಂದ ಲಭ್ಯವಾಗಲಿದೆ.

Best Mobiles in India

English summary
Realme Watch 3 Pro, Buds Air 3S launched: Price and specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X