ಜನವರಿ 7ಕ್ಕೆ ಲಾಂಚ್‌ ಆಗಲಿದೆ ರಿಯಲ್‌ಮಿ X50 5G ಫೋನ್‌..!

By Gizbot Bureau
|

ಕೊನೆಗೂ ರಿಯಲ್‌ಮಿ X50 5G ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ತನ್ನ ಮೊದಲ 5G ಫೋನ್ ಅನ್ನು ಜನವರಿ 7, 2020 ರಂದು ಲಾಂಚ್ ಮಾಡುವುದಾಗಿ ಪ್ರಕಟಿಸಿದೆ. ರಿಯಲ್‌ಮಿ X50 5G ಫೋನ್ ಸ್ನಾಪ್‌ಡ್ರಾಗನ್ 765G SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವುದು ಕೂಡ ಖಚಿತವಾಗಿದೆ. ಮತ್ತು ಡ್ಯುಯಲ್-ಚಾನೆಲ್ ವೈ-ಫೈ ಮತ್ತು 5G ಸಂಪರ್ಕ ಬೆಂಬಲದೊಂದಿಗೆ ಬರಲಿದ್ದು, ಹೆಚ್ಚುವರಿಯಾಗಿ, ಸ್ಮಾರ್ಟ್‌ಫೋನ್ ಎರಡು ಸೆಲ್ಫಿ ಕ್ಯಾಮೆರಾಗಳೊಂದಿಗೆ ಪಂಚ್‌ ಹೋಲ್‌ ಡಿಸ್‌ಪ್ಲೇ ವಿನ್ಯಾಸದಲ್ಲಿ ಗ್ರಾಹಕರ ಕೈಸೇರಲಿದೆ.

ವೀಬೋದಲ್ಲಿ ಘೋಷಣೆ

ವೀಬೋದಲ್ಲಿ ಘೋಷಣೆ

ರಿಯಲ್‌ಮಿ X50 5G ಸ್ಮಾರ್ಟ್‌ಫೋನ್‌ ಬಿಡುಗಡೆಯ ಪ್ರಕಟಣೆಯನ್ನು ಕಂಪನಿ ವೀವೋ ವೇದಿಕೆಯಲ್ಲಿ ಪ್ರಕಟಿಸಿತು.

ಜನವರಿ 7, ಮಧ್ಯಾಹ್ನ 2ಕ್ಕೆಎ ಸಿಎಸ್‌ಟಿ ಏಷ್ಯಾದಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂದು ಪೋಸ್ಟ್ ಹೇಳಿದೆ.

ಆಧುನಿಕ ಫೀಚರ್ಸ್‌

ಆಧುನಿಕ ಫೀಚರ್ಸ್‌

ಇನ್ನು, ವೀಬೋದ ಮತ್ತೊಂದು ಪೋಸ್ಟ್‌ನಲ್ಲಿ ರಿಯಲ್‌ಮಿ X50 5G ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್‌ಗಳನ್ನು ಪಟ್ಟಿ ಮಾಡಲಾಗಿದೆ. ಸ್ನ್ಯಾಪ್‌ಡ್ರಾಗನ್ 765G SoC ಪ್ರೊಸೆಸರ್‌ ಬೆಂಬಲದೊಂದಿಗೆ ಅಡ್ರಿನೊ 620 ಜಿಪಿಯು ಮತ್ತು 5G SA / NSA ಮೋಡೆಮ್‌ನೊಂದಿಗೆ ಕಾರ್ಯನಿರ್ವಹಿಲಿದೆ.

ವೇಗದ ಚಾರ್ಜಿಂಗ್‌

ವೇಗದ ಚಾರ್ಜಿಂಗ್‌

ವರ್ಧಿತ VOOC 4.0 ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನವನ್ನು ರಿಯಲ್‌ಮಿ X50 5G ಸ್ಮಾರ್ಟ್‌ಫೋನ್‌ ಬೆಂಬಲಿಸಲಿದೆ. ಈ ತಂತ್ರಜ್ಞಾನದಿಂದ ಶೇ.70ರಷ್ಟು ಬ್ಯಾಟರಿಯನ್ನು ಚಾರ್ಜ್‌ ಮಾಡಲು ಕೇವಲ 30 ನಿಮಿಷಗಳು ಸಾಕು ಎಂದು ಕಂಪನಿ ಹೇಳಿದೆ. ಇದರರ್ಥ ಒಂದು ಗಂಟೆಯೊಳಗೆ ಫೋನ್‌ನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ರಿಯಲ್‌ಮಿ X50 5G ಸ್ಮಾರ್ಟ್‌ಫೋನ್‌ 90Hz ರಿಫ್ರೆಶ್ ದರ ಹೊಂದಿದ 6.44 ಇಂಚಿನ AMOLED ಡಿಸ್‌ಪ್ಲೇಯೊಂದಿಗೆ ಬರಲಿದೆ ಎಂಬ ವದಂತಿಗಳಿವೆ. ಹಾಗೂ 8GB RAM, 4,500mAh ಬ್ಯಾಟರಿ, ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಮತ್ತು 256GB ವರೆಗೆ ಆನ್‌ಬೋರ್ಡ್ ಸ್ಟೋರೆಜ್‌ ಹೊಂದಿರುವ ನಿರೀಕ್ಷೆ ಇದೆ. 64 ಮೆಗಾಪಿಕ್ಸೆಲ್ ಮುಖ್ಯ ಹಿಂಭಾಗದ ಕ್ಯಾಮೆರಾ ಮತ್ತು ಡ್ಯುಯಲ್ ಸೆಲ್ಫಿ ಕ್ಯಾಮೆರಾ ಸೆಟಪ್‌ನಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಶೂಟರ್ ಮತ್ತು 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಶೂಟರ್ ಬರುವ ಸಾಧ್ಯತೆಯಿದ್ದು, ಯೂತ್ ಎಡಿಷನ್ ರೂಪಾಂತರವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Most Read Articles
Best Mobiles in India

English summary
Realme X50 5G Powered By Snapdragon 765G To Launch On January 7.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X