ರೆಡ್‌ ಮಿ 4 ದಾಖಲೆಗೆ ನಡುಗಿದೆ ಭಾರತೀಯಾ ಸ್ಮಾರ್ಟ್‌ಫೋನ್‌ ಲೋಕ..! ಏನದು ಅಂತಹ ಸಾಧನೆ...?

Written By:

ಭಾರತೀಯಾ ಮಾರುಕಟ್ಟೆಯಲ್ಲಿ ಹೆಮ್ಮರವಾಗಿ ಬೆಳೆಯುತ್ತಿರುವ ಚೀನಾ ಮೂಲದ ಶಿಯೋಮಿ ಕಂಪನಿ ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆ ಮಾಡಿರುವ ಶಿಯೋಮಿ ರೆಡ್‌ಮಿ 4 ಫೋನ್ ಇಂದು ನಡೆದ ಫ್ಲಾಶ್ ಸೇಲಿನಲ್ಲಿ ಬಿಸಿ ದೋಸೆಗಿಂತಲೂ ವೇಗವಾಗಿ ಖರ್ಚಾಗಿದೆ. ಕೇಲವ 8 ನಿಮಿಷದಲ್ಲಿ ಒಟ್ಟು 2.5 ಲಕ್ಷ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದೆ.

ರೆಡ್‌ ಮಿ 4 ದಾಖಲೆಗೆ ನಡುಗಿದೆ ಭಾರತೀಯಾ ಸ್ಮಾರ್ಟ್‌ಫೋನ್‌ ಲೋಕ..!

ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..?

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂತಸವನ್ನು ಹಂಚಿಕೊಂಡಿರುವ ರೆಡ್‌ಮಿ ಇಂಡಿಯಾ, ಟ್ವೀಟರ್ ಮತ್ತು ಫೇಸ್‌ಬುಕ್ ನಲ್ಲಿ ತನ್ನ ಸಾಧನೆಯನ್ನು ಬಿಂಬಿಸಿಕೊಂಡಿದ್ದು, ಅದರೊಂದಿಗೆ ತನ್ನ ಮೆಚ್ಚಿನ ಗ್ರಾಹಕರಿಗೆ ವಂದನೆಗಳನ್ನು ತಿಳಿಸಿದೆ.

ಓದಿರಿ: ಮಾರುಕಟ್ಟೆಗೆ ಲಗ್ಗೆ ಇಡುವ ರೆಡ್‌ಮಿ 4 ಹೇಗಿದೆ ಗೊತ್ತಾ..? ವಿಡಿಯೋ ನೋಡಿ..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತದಲ್ಲಿ ಹ್ಯಾಟ್ರಿಕ್ ಸಾಧಿಸಿದ ಶಿಯೋಮಿ:

ಭಾರತದಲ್ಲಿ ಹ್ಯಾಟ್ರಿಕ್ ಸಾಧಿಸಿದ ಶಿಯೋಮಿ:

ಆನ್‌ಲೈನ್ ಶಾಪಿಂಗ್ ಮಾರುಕಟ್ಟೆಯಲ್ಲಿ ಅದರಲ್ಲೂ ಮೊಬೈಲ್ ಮಾರಾಟದಲ್ಲಿ ಶಿಯೋಮಿಗೆ ಮೊದಲ ಸ್ಥಾನ ಎಂದರೆ ತಪ್ಪಾಗುವುದಿಲ್ಲ. ರೆಡ್‌ಮಿ ನೋಟ್ 4, ರೆಡ್‌ಮಿ 4A ಮತ್ತು ರೆಡ್‌ಮಿ 4 ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಲಾಂಚ್ ಆದ ದಿನವೇ ಕೆಲವೇ ನಿಮಿಷಗಳಲ್ಲಿ ತಲಾ 2.5 ಲಕ್ಷ ಪೋನ್‌ಗಳನ್ನು ಮಾರಾಟ ಮಾಡಿ ಹ್ಯಾಟ್ರಿಕ್ ಸಾಧಿಸಿದೆ.

ರೆಡ್‌ಮಿ ನೋಟ್ 4: ಜನವರಿ 23

ರೆಡ್‌ಮಿ ನೋಟ್ 4: ಜನವರಿ 23

ಜನವರಿ 23ರಂದು ಭಾರತದಲ್ಲಿ ನಡೆದ ಆನ್‌ಲೈನ್ ಫ್ಲಾಷ್ ಸೇಲ್‌ನಲ್ಲಿ ಶಿಯೋಮಿಯ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ 10 ನಿಮಿಷದಲ್ಲಿ 2.5 ಲಕ್ಷ ಪೋನ್‌ಗಳು ಮಾರಾಟವಾಗಿತ್ತು.

ರೆಡ್‌ಮಿ 4A ಮಾರ್ಚ್ 23:

ರೆಡ್‌ಮಿ 4A ಮಾರ್ಚ್ 23:

ಮಾರ್ಷ್ 23 ರಂದು ಭಾರತದಲ್ಲಿ ಫ್ಲಾಶ್ ಸೇಲಿನಲ್ಲಿ ಗ್ರಾಹಕರ ಬಳಿಗೆ ಬಂದ ರೆಡ್‌ಮಿ 4A ಕೇವಲ 4 ನಿಮಿಷಗಳಲ್ಲಿ 2.5 ಲಕ್ಷಗಳ ಮಾರಾಟದ ಗಡಿಯನ್ನು ಮುಟ್ಟಿತ್ತು.

ರೆಡ್‌ಮಿ 4 ಮೇ 23:

ರೆಡ್‌ಮಿ 4 ಮೇ 23:

ಮೇ 23 ರಂದು ಫ್ಲಾಶ್ ಸೇಲಿನಲ್ಲಿ ಮಾರಾಟಗೊಂಡ ರೆಡ್‌ಮಿ 4 ಕೇಲವ 8 ನಿಮಿಷದಲ್ಲಿ 2.5 ಲಕ್ಷ ಫೋನ್ ಗಳು ಗ್ರಾಹಕರ ಕೈ ಸೇರಿತ್ತು. ಈ ಮೂಲಕ ಶಿಯೋಮಿ ಭಾರತದಲ್ಲಿ ಹೊಸ ಭಾಷ್ಯವನ್ನು ಬರೆದಿದೆ.

ಮೊದಲ ದಿನವೇ 12 ಗಂಟೆಯಲ್ಲಿ 5 ಕೋಟಿ ರೂ:

ಮೊದಲ ದಿನವೇ 12 ಗಂಟೆಯಲ್ಲಿ 5 ಕೋಟಿ ರೂ:

ಮೇ 20ಕ್ಕೆ ರಂದು ಶಿಯೋಮಿ ಬೆಂಗಳೂರಿನ ಫಿನೆಕ್ಸ್ ಮಾಲ್‌ನಲ್ಲಿ ಶಿಯೋಮಿ ತನ್ನ ಮೊದಲ ಮಿ ಹೋಮ್ ಸ್ಟೋರ್ ಆರಂಭಿಸಿತ್ತು. ಈ ಮಳಿಗೆ ಆರಂಭಗೊಂಡ ಕೇವಲ 12 ಗಂಟೆಯಲ್ಲಿ 5 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿತ್ತು, ಈ ಮೂಲಕ ಹೊಸ ಟ್ರೆಂಡ್ ಹುಟ್ಟಿ ಹಾಕಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Xiaomi Redmi Note 4 and Redmi 4A, the all-new Redmi 4 has also seen tremendous response in its first sale in India. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot