ರೆಡ್ಮಿ ನೋಟ್‌11 ಪ್ರೊ+ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ; ಬೆಲೆ ಕೇವಲ 3,499ರೂ. ಗಳು!?

|

ಮಾರುಕಟ್ಟೆಯಲ್ಲಿ ರೆಡ್ಮಿ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಂತೆ ಹಲವಾರು ರೆಡ್ಮಿ ಸ್ಮಾರ್ಟ್‌ಫೋನ್‌ಗಳು ಭಿನ್ನ ವಿಭಿನ್ನ ಫೀಚರ್ಸ್‌ಗಳ ಜೊತೆಗೆ ಗ್ರಾಹಕರ ಕೈ ಸೇರುತ್ತಿದ್ದು, ಇದರ ನಡುವೆಯೇ ರೆಡ್ಮಿ ನೀವು ಅಚ್ಚರಿ ಆಗುವ ಆಫರ್‌ವೊಂದನ್ನು ಘೋಷಣೆ ಮಾಡಿದೆ. ಅದುವೇ ಈ ವರ್ಷದ ಆರಂಭದಲ್ಲಿ ಅನಾವರಣವಾದ ರೆಡ್ಮಿ ನೋಟ್‌11 ಪ್ರೊ+ (Redmi Note 11 Pro+) ಬೆಲೆಯಲ್ಲಿ ಕಡಿತ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಈಗಾಗಲೇ ರೆಡ್ಮಿ ನೋಟ್‌11 ಪ್ರೊ+ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಇದರ ಬೇಡಿಕೆಗೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ಗಳನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಗ್ರಾಹಕರಿಗೆ ತಲುಪಿಸುತ್ತಿರುವ ಕಂಪೆನಿಯು ಇದೀಗ ಇದರ ಬೆಲೆಯನ್ನೂ ಸಹ ಇಳಿಕೆ ಮಾಡುವ ಮೂಲಕ ಫೋನ್‌ ಅನ್ನು ಖರೀದಿ ಮಾಡುವವರಿಗೆ ಸಂತಸದ ಸುದ್ದಿ ನೀಡಿದೆ.

ಫೊನ್‌

ಇನ್ನು ಈ ಫೊನ್‌ ಮೂರು ವೇರಿಯಂಟ್‌ನಲ್ಲಿ ಲಭ್ಯವಾಗಲಿದ್ದು, ಇದರಲ್ಲಿ 6GB RAM ನ ವೇರಿಯಂಟ್‌ನಲ್ಲಿ 1,000 ರೂ. ಗಳ ವರೆಗೆ ಕಡಿತವಾದರೆ, 8GB RAM ವೇರಿಯಂಟ್‌ಗೆ 2,000 ರೂ. ಗಳ ವರೆಗೆ ಬೆಲೆ ಕಡಿತವಾಗಿದೆ. ಹಾಗಿದ್ರೆ, ಇದರ ಪ್ರಸ್ತುತ ಬೆಲೆ ಎಷ್ಟು, ಫೋನ್ ಪ್ರಮುಖ ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ರೆಡ್ಮಿ ನೋಟ್‌11 ಪ್ರೊ+ ಡಿಸ್‌ಪ್ಲೇ ವಿವರ

ರೆಡ್ಮಿ ನೋಟ್‌11 ಪ್ರೊ+ ಡಿಸ್‌ಪ್ಲೇ ವಿವರ

ಈ ಫೋನ್ 6.67 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಆಯ್ಕ ಪಡೆದುಕೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇ 1080x2400 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದ್ದು, 120Hz ರಿಫ್ರೆಶ್ ರೇಟ್‌ ಹೊಂದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಈ ಫೋನ್‌ನಲ್ಲಿ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಅಳವಡಿಸಲಾಗಿದ್ದು, ಉತ್ತಮ ಕಾರ್ಯಕ್ಷಮತೆ ಇರಲಿದೆ. ಹಾಗೆಯೆ 6GB, 8GB RAM ಜೊತೆಗೆ 128GB ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಇದು ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ಅನ್ನು ಚಾಲನೆ ಮಾಡುತ್ತದೆ.

ಕ್ಯಾಮೆರಾ ವಿವರ

ಕ್ಯಾಮೆರಾ ವಿವರ

ರೆಡ್ಮಿ ನೋಟ್‌11 ಪ್ರೊ+ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ 108MP ಯ ಮುಖ್ಯ ಕ್ಯಾಮೆರಾ 8MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಹಾಗೂ 2MP ಮ್ಯಾಕ್ರೋ ಕ್ಯಾಮೆರಾದ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 16MP ಸೆಲ್ಪಿ ಕ್ಯಾಮೆರಾ ಈ ಫೋನ್‌ನಲ್ಲಿದೆ.

ಬ್ಯಾಟರಿ ವಿಶೇಷತೆ

ಬ್ಯಾಟರಿ ವಿಶೇಷತೆ

ಈ ಸ್ಮಾರ್ಟ್‌ಫೋನ್ 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ ಇನ್ನುಳಿದಂತೆ ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ನೊಂದಿಗೆ IP53 ರೇಟಿಂಗ್ ಅನ್ನು ಹೊಂದಿದ್ದು, ಇದು ಸ್ಪ್ಲಾಶ್ ನಿರೋಧಕವಾಗಿದೆ.

ಫೋನ್‌ನ ಮೂಲ ಬೆಲೆ

ಫೋನ್‌ನ ಮೂಲ ಬೆಲೆ

ಈ ಫೋನ್‌ ಸದ್ಯಕ್ಕೆ ಮೂರು ವೇರಿಯಂಟ್‌ನಲ್ಲಿ ನಿಮಗೆ ಲಭ್ಯವಿದೆ. ಅದರಲ್ಲಿ 6GB+128GB, 8GB+128GB ಹಾಗೂ 8GB+256GB . ಹಾಗೆಯೇ 6GB+128GB ಆಯ್ಕೆ ಇರುವ ಸ್ಮಾರ್ಟ್‌ಫೋನ್‌ಗೆ 20,999ರೂ. ಗಳು, 8GB+128GB ನ ವೇರಿಯಂಟ್‌ ಇರುವ ಫೋನ್‌ಗೆ 22,999ರೂ. ಗಳು ಹಾಗೂ 8GB+256GB ವೇರಿಯಂಟ್‌ನ ಫೋನ್‌ಗೆ 24,999ರೂ. ಗಳ ಬೆಲೆ ನಿಗದಿ ಮಾಡಲಾಗಿದೆ.

ಆಫರ್‌ ಬೆಲೆ ಎಷ್ಟು?

ಆಫರ್‌ ಬೆಲೆ ಎಷ್ಟು?

ಬೆಲೆ ಕಡಿತಗೊಂಡ ನಂತರ ನೀವು 6GB+128GB ವೇರಿಯಂಟ್‌ಗೆ 19,999ರೂ. ಗಳು, 8GB+128GB ವೇರಿಯಂಟ್‌ಗೆ 20,999ರೂ. ಗಳು ಹಾಗೂ 8GB+256GB ವೇರಿಯಂಟ್‌ಗೆ 22,999ರೂ. ನಿಗದಿ ಮಾಡಲಾಗಿದ್ದು, ಈ ಫೋನ್‌ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಸೂಕ್ತ ಸಮಯ. ಹಾಗೆಯೇ ಈ ಫೋನ್‌ ನೀಲಿ, ಬಿಳಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಕಂಡುಬರುತ್ತದೆ.

ಬ್ಯಾಂಕ್‌ ಆಫರ್‌ ಏನಿದೆ?

ಬ್ಯಾಂಕ್‌ ಆಫರ್‌ ಏನಿದೆ?

ಬೆಲೆ ಕಡಿಮೆಯ ಜೊತೆಗೆ ನೀವು ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 1,500 ರೂಪಾಯಿಗಳ ತ್ವರಿತ ರಿಯಾಯಿತಿಯನ್ನೂ ಸಹ ಪಡೆಯಬಹುದು. ಹಾಗೆಯೇ 3,000 ರೂಪಾಯಿಗಳ ಕ್ಯಾಶ್‌ಬ್ಯಾಕ್ ಹಾಗೂ ಜಸ್ಟ್‌ಮನಿ ಮೂಲಕ ನಲ್ಲಿ 0% ಬಡ್ಡಿದರದಲ್ಲಿ ಫೋನ್‌ ಖರೀದಿ ಮಾಡಬಹುದು. ಇದೆಲ್ಲದರ ಜೊತೆಗೆ 16,500ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಈ ಮೂಲಕ ನೀವು 19,999ರೂ. ಗಳ ಫೋನ್‌ ಗೆ ಕೇವಲ 3,499ರೂ. ಗಳನ್ನು ನೀಡಿ ಖರೀದಿ ಮಾಡಬಹುದಾಗಿದೆ.

Best Mobiles in India

Read more about:
English summary
Redmi Note 11 Pro+ Phone Price Dropped.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X