ಇಂದು ರೆಡ್ಮಿ ನೋಟ್‌ 12 ಪ್ರೊ 5G ಸರಣಿಯ ಫಸ್ಟ್‌ ಸೇಲ್‌! ಏನೆಲ್ಲಾ ಆಫರ್‌!

|

ಕೆಲ ದಿನಗಳ ಹಿಂದೆ ಭಾರತದಲ್ಲಿ ಬಿಡುಗಡೆಯಾದ ರೆಡ್ಮಿ ನೋಟ್‌ 12 ಸರಣಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ತನ್ನ ಆಕರ್ಷಕ ಫೀಚರ್ಸ್‌ ಹಾಗೂ ಕಾರ್ಯದಕ್ಷತೆಯ ಕಾರಣಕ್ಕೆ ಸಿಕ್ಕಾಪಟ್ಟೆ ಕ್ರೇಜ್‌ ಹುಟ್ಟುಹಾಕಿದೆ. ಸದ್ಯ ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಇಂದು(ಜ.11) ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್‌ ಮತ್ತು ಶಿಯೋಮಿಯ ಅಧಿಕೃತ ವೆಬ್‌ಸೈಟ್‌ Mi.com ಮೂಲಕ ತನ್ನ ಫಸ್ಟ್‌ ಸೇಲ್‌ ನಡೆಸಲಿವೆ. ಇದರಲ್ಲಿ ರೆಡ್‌ಮಿ ನೋಟ್‌ 12 ಪ್ರೊ 5G ಮತ್ತು ರೆಡ್‌ಮಿ ನೋಟ್‌ 12 ಪ್ರೊ ಪ್ಲಸ್‌ 5G ಸ್ಮಾರ್ಟ್‌ಫೋನ್‌ಗಳು ಭಾರಿ ಆಫರ್‌ ಪಡೆದುಕೊಂಡಿವೆ.

ಇಂದು ರೆಡ್ಮಿ ನೋಟ್‌ 12 ಪ್ರೊ 5G ಸರಣಿಯ ಫಸ್ಟ್‌ ಸೇಲ್‌! ಏನೆಲ್ಲಾ ಆಫರ್‌!

ಹೌದು, ರೆಡ್‌ಮಿ ನೋಟ್‌ 12 ಪ್ರೊ 5G ಮತ್ತು ರೆಡ್‌ಮಿ ನೋಟ್‌ 12 ಪ್ರೊ ಪ್ಲಸ್‌ 5G ಸ್ಮಾರ್ಟ್‌ಫೋನ್‌ಗಳ ಫಸ್ಟ್‌ ಸೇಲ್‌ ಇಂದು(ಜ.11) ಮಧ್ಯಾಹ್ನ 12 ರಿಂದ ಪ್ರಾರಂಭವಾಗಲಿದೆ. ಇದರಲ್ಲಿ ರೆಡ್‌ಮಿ ನೋಟ್‌ 12 ಪ್ರೊ 5G ಫೋನ್‌ನ ಆರಂಭಿಕ ಬೆಲೆ 20,999ರೂ.ಆಗಿದೆ. ಹಾಗೆಯೇ ರೆಡ್‌ಮಿ ನೋಟ್‌ 12 ಪ್ರೊ ಪ್ಲಸ್‌ 5G ಫೋನ್‌ ಬೆಲೆ 25,999ರೂ. ಆಗಿದೆ. ಇದಲ್ಲದೆ ಫಸ್ಟ್‌ ಸೇಲ್‌ ಪ್ರಯುಕ್ತ ಈ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ಆಫರ್‌ಗಳು ಕೂಡ ಲಭ್ಯವಿದೆ. ಹಾಗಾದ್ರೆ ಫಸ್ಟ್‌ ಸೇಲ್‌ನಲ್ಲಿ ಏನೆಲ್ಲಾ ಆಫರ್‌ ಲಭ್ಯವಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೆಲೆ ಎಷ್ಟು?
ರೆಡ್ಮಿ ನೋಟ್‌ 12 ಪ್ರೊ 5G ಸ್ಮಾರ್ಟ್‌ಫೋನ್‌ 6GB+128GB ಸ್ಟೋರೇಜ್‌ ಆಯ್ಕೆಯು 24,999ರೂ,ಬೆಲೆ ಹೊಂದಿದೆ. ಇದರ 8GB+128GB ಆಯ್ಕೆಯು 26,999ರೂ ಬೆಲೆ ಪಡೆದಿದೆ. ಇನ್ನು 8GB+256GB ಆಯ್ಕೆಗೆ 27,999ರೂ. ಬೆಲೆಯನ್ನು ಹೊಂದಿದೆ. ಇದು ಮಿ.ಕಾಮ್‌, ಫ್ಲಿಪ್‌ಕಾರ್ಟ್‌, ಮಿ.ಹೋಮ್‌ ಮೂಲಕ ಖರೀದಿಗೆ ಲಭ್ಯವಾಗಲಿದೆ.
ಇನ್ನು ರೆಡ್ಮಿ ನೋಟ್‌ 12 ಪ್ರೊ ಪ್ಲಸ್‌ 5G ಸ್ಮಾರ್ಟ್‌ಫೋನ್‌ 8GB + 256GB ಸ್ಟೋರೇಜ್‌ ಆಯ್ಕೆಯ ಬೆಲೆ 29,999ರೂ. ಆಗಿದೆ. ಇದರ 12GB + 256GB ಆಯ್ಕೆಯು 32,999ರೂ. ಬೆಲೆ ಹೊಂದಿದೆ. ಇದು ಮಿ.ಕಾಮ್‌, ಫ್ಲಿಪ್‌ಕಾರ್ಟ್‌, ಮಿ.ಹೋಮ್‌ ಮೂಲಕ ಖರೀದಿಗೆ ಲಭ್ಯವಾಗಲಿದೆ.

ಇಂದು ರೆಡ್ಮಿ ನೋಟ್‌ 12 ಪ್ರೊ 5G ಸರಣಿಯ ಫಸ್ಟ್‌ ಸೇಲ್‌! ಏನೆಲ್ಲಾ ಆಫರ್‌!

ಫಸ್ಟ್‌ ಸೇಲ್‌ ಆಫರ್‌ ಏನಿದೆ?
ರೆಡ್ಮಿ ನೋಟ್‌ 12 ಪ್ರೊ 5G ಮತ್ತು ರೆಡ್ಮಿ ನೋಟ್‌ 12 ಪ್ರೊ ಪ್ಲಸ್‌ 5G ಫೋನ್‌ಗಳ ಮೇಲೆ ಫಸ್ಟ್‌ ಸೇಲ್‌ ಪ್ರಯುಕ್ತ ವಿಶೇಷ ಆಫರ್‌ ಲಭ್ಯವಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಯಾವುದೇ ಫೋನ್‌ ಅನ್ನು ICICI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 3000ರೂ. ರಿಯಾಯಿತಿಯನ್ನು ಪಡೆಯಬಹುದು. ಹಾಗೆಯೇ ನೀವು ಶಿಯೋಮಿ ಮತ್ತು ರೆಡ್ಮಿ ಸ್ಮಾರ್ಟ್‌ಫೋನ್‌ ಬಳಕೆದಾರರು ಆಗಿದ್ದರೆ ಹೆಚ್ಚುವರಿಯಾಗಿ 1000ರೂ.ಗಳ ರಿಯಾಯಿತಿ ಕೂಡ ದೊರೆಯಲಿದೆ. ಆದರಿಂದ ಈ ಫೋನ್‌ಗಳನ್ನು ಫಸ್ಟ್‌ ಸೇಲ್‌ನಲ್ಲಿ ಖರೀದಿಸಿದರೆ ಮೂರರಿಂದ ನಾಲ್ಕು ಸಾವಿರದವರೆಗೆ ಹಣವನ್ನು ಉಳಿಸಬಹುದಾಗಿದೆ.

ರೆಡ್ಮಿ ನೋಟ್‌ 12 ಪ್ರೊ 5G ಫೀಚರ್ಸ್‌ ಹೇಗಿದೆ?
ರೆಡ್ಮಿ ನೋಟ್‌ 12 ಪ್ರೊ 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 1080SoC ಪ್ರೊಸೆಸರ್‌ ವೇಗವನ್ನು ಪಡೆದಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ನೀಡಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX766 ಸೆನ್ಸಾರ್‌ ಹೊಂದಿದೆ. ಜೊತೆಗೆ 5,000mAh ಬ್ಯಾಟರಿಬ್ಯಾಕ್‌ಅಪ್‌ ಹೊಂದಿದ್ದು, ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇಂದು ರೆಡ್ಮಿ ನೋಟ್‌ 12 ಪ್ರೊ 5G ಸರಣಿಯ ಫಸ್ಟ್‌ ಸೇಲ್‌! ಏನೆಲ್ಲಾ ಆಫರ್‌!

ರೆಡ್ಮಿ ನೋಟ್‌ 12 ಪ್ರೊ ಪ್ಲಸ್‌ 5G ಫೀಚರ್ಸ್‌ ಹೇಗಿದೆ?
ರೆಡ್ಮಿ ನೋಟ್‌ 12 ಪ್ರೊ ಪ್ಲಸ್‌ 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 1080SoC ಪ್ರೊಸೆಸರ್‌ ವೇಗವನ್ನು ಪಡೆದಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ನೀಡಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸ್ಯಾಮ್‌ಸಂಗ್‌ HPX ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 4,980mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರಲ್ಲಿರುವ ವೇಗದ ಚಾರ್ಜಿಂಗ್ ತಂತ್ರಜ್ಞಾನವು ಕೇವಲ 19 ನಿಮಿಷಗಳಲ್ಲಿ ಫೋನ್‌ ಅನ್ನು 100% ಚಾರ್ಜ್ ಮಾಡಲಿದೆ.

Best Mobiles in India

English summary
Redmi Note 12 Pro 5G, Redmi Note 12 Pro+ 5G first sale in India today

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X