ಸಿಹಿಸುದ್ದಿ..'ರೆಡ್‌ಮಿ ನೋಟ್ 6 ಪ್ರೊ' ಬೆಲೆ ಮತ್ತೊಮ್ಮೆ ಇಳಿಕೆ!

|

ಭಾರತದ ನಂಬರ್ ಒನ್ ಸ್ಮಾರ್ಟ್‌ಫೋನ್ ಮಾರಾಟಗಾರ ಕಂಪೆನಿ ಶಿಯೋಮಿ ತನ್ನ ಜನಪ್ರಿಯ ರೆಡ್‌ಮಿ ನೋಟ್ 6 ಪ್ರೊ ಬೆಲೆಯನ್ನು ಮತ್ತೊಮ್ಮೆ ಇಳಿಕೆ ಮಾಡಿ ಸಿಹಿಸುದ್ದಿ ನೀಡಿದೆ. ಬೆಲೆ ಇಳಿಕೆ ಜೊತೆಯಲ್ಲೇ ಜಿಯೋ ಜೊತೆಗೂಡಿರುವ ಕಂಪೆನಿ, ಸ್ಮಾರ್ಟ್‌ಪೋನ್ ಮೇಲೆ 2,200 ರೂ. ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಮತ್ತು 4.2TB ಹೈ ಸ್ಪೀಡ್ ಡೇಟಾವನ್ನು ಉಚಿತವಾಗಿ ನೀಡುತ್ತಿದೆ.

ಹೌದು, ಇದೇ 27ನೇ ತಾರೀಖಿನಿಂದ 31ನೇ ತಾರೀಖಿನವರೆಗೂ ಶಿಯೋಮಿ ಮಿ ಸೂಪರ್ ಸೇಲ್ ಅನ್ನು ಆಯೋಜಿಸಲಾಗಿದ್ದು, ಈ ಐದು ದಿನಗಳ ಕಾಲ ಸ್ಮಾರ್ಟ್‌ಪೋನ್ ಮೇಲೆ ಈ ಆಫರ್ ಲಭ್ಯವಿರಲಿದೆ. ಬೆಲೆ ಇಳಿಕೆ, ಜಿಯೋ ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಸೇರಿದಂತೆ ಸ್ಮಾರ್ಟ್‌ಪೋನಿನ ಮೇಲೆ 5,000 ರೂ.ವರೆಗಿನ ಎಕ್ಸ್‌ಚೇಂಜ್ ಆಫರ್ ಅನ್ನು ಸಹ ಶಿಯೋಮಿ ಕಂಪೆನಿ ಕಲ್ಪಿಸಿದೆ.

ಸಿಹಿಸುದ್ದಿ..'ರೆಡ್‌ಮಿ ನೋಟ್ 6 ಪ್ರೊ' ಬೆಲೆ ಮತ್ತೊಮ್ಮೆ ಇಳಿಕೆ!

ತನ್ನ ಮೊದಲ ಫ್ಲಾಶ್‌ಸೇಲ್‌ನಲ್ಲಿಯೇ 6,00,000 ಮಾರಾಟ ಕಂಡಿದ್ದ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನ್‌ ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಮಾರಾಟವಾಗಿ ಇತಿಹಾಸದ ದಾಖಲೆ ನಿರ್ಮಿಸಿತ್ತು. ಇದೀಗ ಮತ್ತೆ ಬೆಲೆ ಕಳೆದುಕೊಂಡು ಮೊಬೈಲ್ ಪ್ರಿಯರ ಕೈಸೇರಲು ತಯಾರಾಗಿದೆ. ಹಾಗಾದರೆ, ಭಾರತದ ಮೊಬೈಲ್ ಮಾರುಕಟ್ಟೆಯ ಇತಿಹಾಸದಲ್ಲಿ ಈಗಲೂ ದಾಖಲೆಯ ಒಡೆಯನಾಗಿರುವ'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನ್ ಹೇಗಿದೆ?, ಪ್ರಸ್ತುತ ಸ್ಮಾರ್ಟ್‌ಫೋನ್ ದರಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿದೆ?

ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿದೆ?

ಆಪಲ್ ಐಫೋನ್ ಎಕ್ಸ್ ಮಾದರಿಯ ಡಿಸ್‌ಪ್ಲೇ ನೋಚ್, ನಾಲ್ಕು ಕ್ಯಾಮೆರಾಗಳು ಹಾಗೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಸ್ಮಾರ್ಟ್‌ಫೋನಿನ ನಾಲ್ಕು ಬದಿಗಳಲ್ಲಿ ರೌಂಡೆಡ್ ಕಾರ್ನರ್ ಎಡ್ಜ್ ವಿನ್ಯಾಸವಿರುವುದು ಸ್ಮಾರ್ಟ್‌ಫೋನಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ಮಾರ್ಟ್‌ಪೋನ್ ಡಿಸ್‌ಪ್ಲೇ!

ಸ್ಮಾರ್ಟ್‌ಪೋನ್ ಡಿಸ್‌ಪ್ಲೇ!

ಈಗಾಗಲೇ ತಿಳಿದಿರುವಂತೆ, ರೆಡ್‌ಮಿ ನೋಟ್ 6 ಪ್ರೊ ಸ್ಮಾರ್ಟ್‌ಪೋನ್ 6.26-ಇಂಚಿನ ಪೂರ್ಣ ಹೆಚ್‌ಡಿ+ ಐಪಿಎಸ್ ಎಲ್ಸಿಡಿ (1080*2280p) ಡಿಸ್‌ಪ್ಲೇಯನ್ನು ಹೊಂದಿದೆ. 1080*2280 ಪಿಕ್ಸೆಲ್ ಸಾಮರ್ಥ್ಯದ ಡಿಸ್‌ಪ್ಲೇ ಶೇ. 86 ಪ್ರತಿಶತ ಸ್ಕ್ರೀನ್-ಟು-ಬಾಡಿಯನ್ನು ಹೊಂದಿದ್ದು, 19:9 ಆಕಾರ ಅನುಪಾತದಲ್ಲಿರುವುದರಿಂದ ಮಲ್ಟಿಮೀಡಿಯಾ ಪ್ರಿಯರಿಗೆ ಡಿಸ್‌ಪ್ಲೇ ಹೇಳಿ ಮಾಡಿಸಿದಂತಿದೆ. ಇನ್ನು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿರುವುದು ಡಿಸ್‌ಪ್ಲೇ ಸುರಕ್ಷತೆಗೆ ಖಾತ್ರಿಯಾಗಿದೆ.

ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್

ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್

'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನ ಪ್ರಮುಖ ಆಕರ್ಷಣೆಯೇ ನಾಲ್ಕು ಕ್ಯಾಮೆರಾಗಳಲಾಗಿದ್ದು, 12MP + 5MP ಹಿಂಬದಿಯ ಕ್ಯಾಮರಾ, 20MP + 2MP ಸೆಲ್ಫಿ ಕ್ಯಾಮರಾಗಳನ್ನು ನೀಡಲಾಗಿದೆ. ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್, 1.4-ಮೈಕ್ರಾನ್ ಪಿಕ್ಸೆಲ್‌ಗಳು, ಎಐ ಭಾವಚಿತ್ರ 2.0 ಮತ್ತು ಎಐ ಡೈನಾಮಿಕ್ ಬೊಕೆ ವೈಶಿಷ್ಟ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಶಿಯೋಮಿಯ ಮೊದಲ ಎಐ ಆಧಾರಿತ ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿ 'ರೆಡ್ ಮಿ ನೋಟ್ 6 ಪ್ರೊ' ಹೊರಹೊಮ್ಮಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಕ್ಯಾಮೆರಾಗೆ ಹೆಚ್ಚು ಒತ್ತು ನೀಡಿರುವ ಶಿಯೋಮಿ ಕಂಪೆನಿ, ಈ ಸ್ಮಾರ್ಟ್‌ಫೋನಿನಲ್ಲಿ 'ರೆಡ್ ಮಿ ನೋಟ್ 5 ಪ್ರೊ'ನಲ್ಲಿ ನೀಡಲಾಗಿದ್ದ ಸ್ನ್ಯಾಪ್‌ಡ್ರಾಗನ್ 636 ಆಕ್ಟಕೋರ್ ಪ್ರೊಸೆಸರ್ ಅನ್ನೇ ನೀಡಿದೆ. ಕ್ವಾಲ್ಕಮ್ ಸ್ಪೆಕ್ಟ್ರಾ ಪ್ರೊಸೆಸರ್ ,ಅಡ್ರಿನೋ 509 ಜಿಪಿಯು, 4ಜಿಬಿ RAM ಮತ್ತು 64GB ಹಾಗೂ 6ಜಿಬಿ RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

MIUI 10 ಆಧಾರಿತ ಟಾಪ್ ಆಂಡ್ರಾಯ್ಡ್

MIUI 10 ಆಧಾರಿತ ಟಾಪ್ ಆಂಡ್ರಾಯ್ಡ್

ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ MIUI 10 ಆಧಾರಿತ ಟಾಪ್ ಆಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಣೆ ನೀಡಲಿದೆ. ಇದು ಶೇ. 30 ರಷ್ಟು ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ವೇಗವನ್ನು ಹೆಚ್ಚಿಸಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ. ಬ್ಯಾಟರಿ ಉಳಿತಾಯದಲ್ಲಿ MIUI 10 ಆಧಾರಿತ ಟಾಪ್ ಆಂಡ್ರಾಯ್ಡ್ ಸಾಮರ್ಥ್ಯ ಹೆಚ್ಚಿದೆಯಂತೆ. ಪ್ರಸ್ತುತ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ ಪೈಗೆ ಬಹುಬೇಗ ಅಪ್‌ಡೇಟ್ ಆಗಲಿದೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.

4000mAh ಬ್ಯಾಟರಿ ಸಾಮರ್ಥ್ಯ!

4000mAh ಬ್ಯಾಟರಿ ಸಾಮರ್ಥ್ಯ!

ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ 4,000 mAh ಬ್ಯಾಟರಿಯೊಂದಿಗೆ ಏಕೈಕ ಪೂರ್ಣ ಚಾರ್ಜನಲ್ಲಿ 2 ದಿನ ಬ್ಯಾಟರಿ ಬಾಳಿಕೆ ಅವಧಿಯ ಭರವಸೆಯನ್ನು ಶಿಯೋಮಿ ನೀಡಿದೆ. ವೇಗವಾಗಿ ಚಾರ್ಜಿಂಗ್‌ಗಾಗಿ ರೆಡ್‌ಮಿ ನೋಟ್ 6 ಪ್ರೊ ಕ್ವಿಕ್ ಚಾರ್ಜ್ 3.0 ಅನ್ನು ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಶಿಯೋಮಿ ಮೊಬೈಲ್ ಪ್ರಿಯರು ಎದುರುನೋಡುತ್ತಿದ್ದ ಬಹುನಿರೀಕ್ಷಿತ ಕ್ವಿಕ್ ಚಾರ್ಜ್ ಫೀಚರ್ ಈಗ ಸಿಕ್ಕಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಇಷ್ಟೆಲ್ಲಾ ಮುಖ್ಯ ಫೀಚರ್ಸ್‌ಗಳನ್ನು ಹೊಂದಿರುವ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್, 4-ಇನ್ -1 ಸೂಪರ್ ಪಿಕ್ಸೆಲ್ ಮತ್ತು ಎಐ ಫೇಸ್ ಅನ್ಲಾಕ್ ಸಾಮರ್ಥ್ಯಗಳನ್ನು ಹೊಂದಿರುವುದು ವಿಶೇಷತೆಯಾದರೆ, ಕ್ಯಾಮೆರಾ ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದಿದೆ. ಎಐ ಆಧಾರಿತ ಕ್ಯಾಮೆರಾ ತಂತ್ರಜ್ಞಾನದಿಂದ ಅದ್ಬುತ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿ ಸ್ಮಾರ್ಟ್‌ಫೋನ್ ಹೊರಹೊಮ್ಮಿದೆ. ಇನ್ನು ಫೋನ್ ಡ್ಯುಯಲ್ ಸಿಮ್‌ಗಳನ್ನು ಹೊಂದಿದ್ದು, ಎರಡೂ ಸಿಮ್‌ಗಳು ವೋಲ್ಟ್ ಸೇವೆಗೆ ಲಭ್ಯವಿವೆ. ಜೊತೆಗೆ ಫೋನ್ ರಸ್ಟ್ ಪ್ರೊಟೆಕ್ಷನ್ ಹೊಂದಿದೆ.

ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಶೀಯೋಮಿ ತನ್ನ ರೆಡ್ ಮಿ ನೋಟ್ 6 ಪ್ರೊ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ನಿರೀಕ್ಷೆಗೂ ಮೀರಿ ಕಡಿತಗೊಳಿಸಿದ್ದು, 3ಜಿಬಿ RAM ಮತ್ತು 32GB ಆಂತರಿಕ ಮೆಮೊರಿ ಮಾದರಿಯ ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ ಬೆಲೆ ಇದೀಗ ಕೇವಲ 8,999 ರೂಪಾಯಿಗಳಾಗಿವೆ. ಹಾಗೆಯೇ, 6ಜಿಬಿ RAM ಮತ್ತು 64GB ಆಂತರಿಕ ಮೆಮೊರಿ ಮಾದರಿಯ ಸ್ಮಾರ್ಟ್‌ಪೋನ್ ಬೆಲೆ 11,999 ರೂಪಾಯಿಗಳಾಗಿವೆ.

Best Mobiles in India

English summary
Xiaomi reduced the price of the Note 6 Pro after the launch of the Redmi Note 7 Pro which costs Rs 8,999 for the base model. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X