ಸ್ಮಾರ್ಟ್‌ವಾಚ್‌ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ರೆಡ್ಮಿ ವಾಚ್‌ 3!..ಏನೆಲ್ಲಾ ಫೀಚರ್ಸ್‌!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ವಾಚ್‌ ಮಾರುಕಟ್ಟೆ ರಾಕೆಟ್‌ ವೇಗದ ಜನಪ್ರಿಯತೆಯನ್ನು ಪಡೆದಿದೆ. ತಂತ್ರಜ್ಞಾನ ಮುಂದುವರೆದಂತೆ ಸ್ಮಾರ್ಟ್‌ವಾಚ್‌ಗಳ ಆರ್ಭಟ ಜೋರಾಗಿದ್ದು, ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳ ಸ್ಮಾರ್ಟ್‌ವಾಚ್‌ಗಳು ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿವೆ. ಇದರಲ್ಲಿ ಶಿಯೋಮಿ ರೆಡ್ಮಿ ಬ್ರ್ಯಾಂಡ್‌ ಕೂಡ ಒಂದಾಗಿದೆ. ಸದ್ಯ ರೆಡ್ಮಿ ಬ್ರ್ಯಾಂಡ್‌ ಹೊಸದಾಗಿ ರೆಡ್ಮಿ ವಾಚ್‌ 3 ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ 60Hz ರಿಫ್ರೆಶ್ ರೇಟ್‌ ಬೆಂಬಲಿಸುವ 1.75 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ.

ರೆಡ್ಮಿ

ಹೌದು, ರೆಡ್ಮಿ ಕಂಪೆನಿ ಹೊಸ ರೆಡ್ಮಿ ವಾಚ್‌ 3 ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 121 ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ. ಜೊತೆಗೆ ಇದು ಐದು ಪ್ರಮುಖ ಸ್ಯಾಟ್‌ಲೈಟ್‌ ಸ್ಥಾನೀಕರಣ ವ್ಯವಸ್ಥೆಗಳಿಗೆ ಬೆಂಬಲವನ್ನು ಸಹ ನೀಡಲಿದೆ. ಇದಲ್ಲದೆ ರೆಡ್ಮಿ ವಾಚ್‌ 3 ರಕ್ತದ ಆಮ್ಲಜನಕ ಟ್ರ್ಯಾಕಿಂಗ್, 24/7 ಹೃದಯ ಬಡಿತ ಮಾನಿಟರಿಂಗ್ ಮತ್ತು ಸ್ಲಿಪ್‌ ಮಾನಿಟರಿಂಗ್‌ ಅನ್ನು ಕೂಡ ಮಾಡಲಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ ಯಾವೆಲಗ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೀಚರ್ಸ್‌ ಹೇಗಿದೆ?

ಫೀಚರ್ಸ್‌ ಹೇಗಿದೆ?

ಈ ಸ್ಮಾರ್ಟ್ ವಾಚ್ 1.75 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 390x450 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 60Hz ರಿಫ್ರೆಶ್ ರೇಟ್ ಬೆಂಬಲವನ್ನು ಪಡೆದಿದ್ದು, 600 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ. ಜೊತೆಗೆ ಈ ಡಿಸ್‌ಪ್ಲೇ ಅಮೋಲೆಡ್‌ ಡಿಸ್‌ಪ್ಲೇ ಆಗಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ SOS ಎಮರ್ಜೆನ್ಸಿ ಕಾಲ್‌ ಫೀಚರ್ಸ್‌ ಕೂಡ ಹೊಂದಿದೆ.

ಹೊರಾಂಗಣ

ರೆಡ್ಮಿ ವಾಚ್‌ 3 ಹೊರಾಂಗಣ ಓಟ, ಸೈಕ್ಲಿಂಗ್, ಪರ್ವತಾರೋಹಣ ಮತ್ತು ಸ್ವಿಮ್ಮಿಂಗ್‌ ಸೇರಿದಂತೆ 121 ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಬ್ಲಡ್‌ ಆಕ್ಸಿಜನ್‌ ಲೆವೆಲ್‌ ಅನ್ನು ಪತ್ತೆ ಹಚ್ಚುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ದಿನವಿಡೀ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡಲು ಇದನ್ನು ಬಳಸಬಹುದು. ಇದರೊಂದಿಗೆ ಬಳಕೆದಾರರ ಸ್ಲಿಪ್‌ ಮಾನಿಟರಿಂಗ್‌ ಟ್ರ್ಯಾಕ್‌ ಮಾಡುವ ಟೆಕ್ನಾಲಜಿಯನ್ನು ಸಹ ಹೊಂದಿದೆ. ಈ ಸ್ಮಾರ್ಟ್ ವಾಚ್ 289mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ.

ಸ್ಮಾರ್ಟ್‌ವಾಚ್‌

ರೆಡ್ಮಿ ವಾಚ್‌ 3 ಸ್ಮಾರ್ಟ್‌ವಾಚ್‌ 12 ದಿನಗಳ ಫೀಚರ್ಸ್‌ ಅನ್ನು ಒಳಗೊಂಡಿದೆ ಎಂದು ಹೇಳಲಾಗಿದೆ. ಇದು 5ATM ವಾಟರ್‌ ರೆಸಿಸ್ಟೆನ್ಸಿಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ರೆಡ್ಮಿ ವಾಚ್‌ 3 ಆಂಡ್ರಾಯ್ಡ್‌ 6.0 ಅಥವಾ iOS 12 ಹೆಚ್ಚಿನ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ರನ್‌ ಆಗಲಿದೆ. ಹೈ ಎಂಡ್‌ ಲೆವೆಲ್‌ GNSS ಚಿಪ್ Beidou, GPS, ಗ್ಲೋನಾಸ್‌, ಗೆಲಲಿಯೋ ಮತ್ತು QZSS ಸ್ಯಾಟ್‌ಲೈಟ್‌ ಪೊಸಿಷನಿಂಗ್ ಸಿಸ್ಟಂಗಳೊಂದಿಗೆ ಹೊಂದಿಕೊಳ್ಳುತ್ತದೆ ಎಂದು ಹೇಳಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರೆಡ್ಮಿ ವಾಚ್ 3 ಸ್ಮಾರ್ಟ್‌ವಾಚ್‌ ಪ್ರಸ್ತುತ ಚೀನಾದಲ್ಲಿ ಬಿಡುಗಡೆಯಾಗಿದೆ. ಚೀನಾದಲ್ಲಿ CNY 599 (ಅಂದಾಜು 7,000ರೂ)ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ವಾಚ್ ಎಲಿಗಂಟ್ ಬ್ಲಾಂಕ್ ಮತ್ತು ಐವರಿ ವೈಟ್ ಬಣ್ಣಗಳಲ್ಲಿ ಬರುತ್ತದೆ. ಇದರೊಂದಿಗೆ ರೆಡ್ಮಿ ಕಂಪೆನಿ ತನ್ನ ಹೊಸ ರೆಡ್ಮಿ ಬ್ಯಾಂಡ್‌ 2 ಅನ್ನು ಬಿಡುಗಡೆ ಮಾಡಿದೆ. ಈ ಬ್ಯಾಂಡ್‌ ಬೆಲೆ CNY 159 (ಸುಮಾರು 2,000ರೂ) ಲಭ್ಯವಾಗಲಿದೆ. ಇದು ಮಿಡ್ನೈಟ್ ಬ್ಲಾಕ್ ಮತ್ತು ಡ್ರೀಮ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಇದು ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

Best Mobiles in India

English summary
Redmi Watch 3 with 60Hz refresh rate Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X