2019 ರಲ್ಲಿ ರಿಲಯನ್ಸ್ ಜಿಯೋದಿಂದ ನೀವೇನು ನಿರೀಕ್ಷಿಸಬಹುದು ಗೊತ್ತಾ?

|

ಜಿಯೋ ಟೆಲಿಕಾಂ ಸಂಸ್ಥೆ ಜಗತ್ತಿಗೆ ಪರಿಚಿತವಾಯಿತು. ಹಲವಾರು ಆವಿಷ್ಕಾರಗಳ ಜೊತೆಗೆ 250 ಮಿಲಿಯನ್ ಚಂದಾದಾರನ್ನು ಹೊಂದಿ ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿರುವ ಟೆಲಿಕಾಂ ಸಂಸ್ಥೆ ಇದು.

2018 ಜಿಯೋ ಪಾಲಿಗೆ ಬಹಳ ಮಹತ್ವದ್ದೇ ಆಗಿತ್ತು ಮತ್ತು ಬಹಳ ನಿರೀಕ್ಷೆಯ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಇದು ಪರಿಚಯಿಸಿತು. ಚಂದಾದಾರಿಕೆಯ ಸಂಖ್ಯೆಯಲ್ಲಿ ಇದು ಹೊಸ ಹೆಜ್ಜೆಯನ್ನೇ ಇಡುವ ನಿರೀಕ್ಷೆ ಇದೆ.

2019 ರಲ್ಲಿ ರಿಲಯನ್ಸ್ ಜಿಯೋದಿಂದ ನೀವೇನು ನಿರೀಕ್ಷಿಸಬಹುದು ಗೊತ್ತಾ?

ಇದೀಗ ನಾವು 2019 ಕ್ಕೆ ಕಾಲಿಟ್ಟಿದ್ದೇವೆ ಮತ್ತು ರಿಲಯನ್ಸ್ ಜಿಯೋ ಈ ವರ್ಷ ಏನೆಲ್ಲ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದೆ ಎಂಬ ಬಗ್ಗೆ ಚರ್ಚಿಸುವ ಸಮಯ ಬಂದಿದೆ. ಗಿಗಾ ಟಿವಿ ಸೇವೆ ಮತ್ತು ಹೆಚ್ಚಿನ ಪ್ರೊಡಕ್ಟ್ ಮತ್ತು ಸೇವೆಯನ್ನು ರಿಲಯನ್ಸ್ ಜಿಯೋ ಮೂಲಕ ನಿರೀಕ್ಷಿಸುತ್ತಿರುವ ಈ ಸಂದರ್ಬದಲ್ಲಿ ಸಂಸ್ಥೆಯ ಮುಂದಿನ ಯೋಜನೆಗಳ ಪಟ್ಟಿ ಇಲ್ಲಿದೆ ನೋಡಿ.

ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ನ ವಿಸ್ತರಣೆ

ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ನ ವಿಸ್ತರಣೆ

ಜುಲೈ ನಲ್ಲಿ ಕಂಪೆನಿಯ ವಾರ್ಷಿಕ ಜನರಲ್ ಮೀಟಿಂಗ್ ನಲ್ಲಿ ಜಿಯೋಫೋನ್ 2 ಜೊತೆಜೊತೆಗೆ ಜಿಯೋ ಗಿಗಾ ಫೈಬರ್ ಬ್ರಾಡ್ ಬ್ರ್ಯಾಂಡ್ ಕೂಡ ಬಿಡುಗಡೆಗೊಂಡಿದೆ. ಆದರೆ ಬ್ರಾಡ್ ಬ್ಯಾಂಡ್ ಸೇವೆಯು ದೇಶದಾದ್ಯಂತ ಸಂಪೂರ್ಣವಾಗಿ ಇನ್ನೂ ಬಿಡುಗಡೆಗೊಂಡಿಲ್ಲ. ಸದ್ಯದ ಮಟ್ಟಿಗೆ ಕೆಲವೇ ಕೆಲವು ಸಿಟಿಗಳಲ್ಲಿ ಆಸಕ್ತ ಚಂದಾದಾರರಿಂದಾಗಿ ಮಾತ್ರವೇ ಲಭ್ಯವಿದೆ. ಹೊಸ ಗ್ರಾಹಕರಿಗೆ ಈ ಸೇವೆಯು ನಿಧಾನವಾಗಿ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಇದು ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಇದೇ ಸಮಯದಲ್ಲಿ ತಾರಿಫ್ ಪ್ಲಾನ್ ಗಳ ಬಗ್ಗೆಯೂ ಕೂಡ ಮಾಹಿತಿ ಲಭ್ಯವಾಗುತ್ತದೆ.

ಜಿಯೋ ಗಿಗಾಟಿವಿ

ಜಿಯೋ ಗಿಗಾಟಿವಿ

ಮುಂದಿನ ವಾರ್ಷಿಕ ಮೀಟಿಂಗ್ ಸಂದರ್ಬದಲ್ಲಿ ಗಿಗಾಫೈಬರ್ ಜೊತೆಗೆ ಕಂಪೆನಿಯು ಗಿಗಾ ಟಿವಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ. 4ಕೆ ಬೆಂಬಲದಲ್ಲಿ ಮತ್ತು ವೀಡಿಯೋ ಕಾಲಿಂಗ್ ನಂತರ ಸೇವೆಗಳನ್ನು ಇದರಲ್ಲಿ ಸಾಧಿಸುವಂತಹ ಫೈಬರ್ ನೆಟ್ ವರ್ಕ್ ಬೆಂಬಲಿತ ಟಿವಿ ಇದಾಗಿರುತ್ತದೆ. ಒಂದು ವೇಳೆ ಇದು ಸಾಧ್ಯವಾದಲ್ಲಿ ದೇಶದ ಡಿಟಿಹೆಚ್ ಮಾರುಕಟ್ಟೆಯನ್ನು ಲೂಟಿ ಮಾಡುವದರಲ್ಲಿ ಯಾವುದೇ ಸಂಶಯವಿಲ್ಲ.

ಜಿಯೋ ಫೋನ್ 3

ಜಿಯೋ ಫೋನ್ 3

ಜಿಯೋಫೋನ್ ಮತ್ತು ಜಿಯೋಫೋನ್ 2 ಗಳ ಯಶಸ್ಸಿನ ನಂತರ ಕಂಪೆನಿಯು ತನ್ನ ಮೂರನೇ ಜನರೇಷನ್ನಿನ ಮಾಡೆಲ್ ಬಗ್ಗೆ ಚಿಂತಿಸುತ್ತಿದ್ದು 2019 ರ ಮಧ್ಯಭಾಗದಲ್ಲಿ ಜಿಯೋಫೋನ್ 3 ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. 2018 ರ ಮಾಡೆಲ್ ಗೂ ಹೆಚ್ಚಿನ ಫೀಚರ್ ಗಳನ್ನು ಒಳಗೊಂಡಿರುವ ಫೋನ್ ಇದಾಗಿರುತ್ತದೆ. ಆದರೆ ಹೇಗಿರುತ್ತದೆ ಎಂಬುದು ಮಾತ್ರ ಇದುವರೆಗೂ ನಿಗೂಢವಾಗಿದೆ.

ದೊಡ್ಡ ಸ್ಕ್ರೀನಿನ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್

ದೊಡ್ಡ ಸ್ಕ್ರೀನಿನ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್

ಇತ್ತೀಚೆಗೆ ಬಂದಿರುವ ವರದಿಗಳ ಅನುಸಾರ ಈಗಾಗಲೇ ಜಿಯೋ ಸಂಸ್ಥೆ ಯುಎಸ್ ಮೂಲದ ಸಂಸ್ಥೆ ಫ್ಲೆಕ್ಸ್ ಜೊತೆಗೆ ಸ್ಮಾರ್ಟ್ ಫೋನ್ ತಯಾರಿಕೆಯ ಬಗ್ಗೆ ಚರ್ಚೆ ಮಾಡುತ್ತಿದೆ ಮತ್ತು ಈ ಫೋನ್ ಗಳು ಭಾರತದಲ್ಲೇ ತಯಾರಿಸಬೇಕು ಎಂಬುದಾಗಿ ಹೇಳಿದೆ.ಖಂಡಿತ ಇದು ಕೈಗೆಟುಕುವ ಬೆಲೆಯ ದೊಡ್ಡ ಸ್ಕ್ರೀನಿನ ಸ್ಮಾರ್ಟ್ ಫೋನ್ ಆಗಿರುತ್ತದೆ ಎಂಬುದು ಎಲ್ಲರ ವಿಶ್ವಾಸವಾಗಿದ್ದು ಆ ನಿಟ್ಟಿನಲ್ಲಿ ಮಾತುಕತೆಗಳು ನಡೆಯುತ್ತಿದೆ ಎನ್ನಲಾಗುತ್ತಿದೆ.

ಪಾಲುದಾರಿಕೆಗಳು ಮತ್ತು ಸ್ವಾಧೀನಗಳು

ಪಾಲುದಾರಿಕೆಗಳು ಮತ್ತು ಸ್ವಾಧೀನಗಳು

2018 ರಲ್ಲಿ ಮಹತ್ವದ ಕೆಲವು ಪಾಲುದಾರಿಕೆಗಳು ಮತ್ತು ಸ್ವಾಧೀನಗಳನ್ನು ಮಾಡಿಕೊಂಡಿದ್ದವು. ಈ ವರ್ಷವೂ ಅದು ಮುಂದುವರಿಯುವ ಸಾಧ್ಯತೆ ಇದೆ. ಕ್ರಿಕೆಟ್ ಕಂಟೆಂಟ್ ಗಾಗಿ ಸ್ಟಾರ್ ಇಂಡಿಯಾ,ಯುರೋಸ್ ಮತ್ತು ಟಿವಿ ಚಾನಲ್ ಗಳಿಗಾಗಿ ಝೀ ಇತ್ಯಾದಿಗಳೊಂದಿಗೆ ಜಿಯೋ ಕೈಜೋಡಿಸಿದೆ. ಇತ್ತೀಚೆಗೆ ಜಿಯೋಸಾವನ್ ಆಪ್ ನ್ನು ಕೂಡ ಇದು ಬಿಡುಗಡೆಗೊಳಿಸಿದೆ.

ಜಿಯೋ ವೋ-ವೈ-ಫೈ ಸೇವೆ

ಜಿಯೋ ವೋ-ವೈ-ಫೈ ಸೇವೆ

ಇತ್ತೀಚೆಗಿನ ವರದಿಯೊಂದರ ಪ್ರಕಾರ ವೋವೈ-ಫೈ ಫೀಚರ್ ಈ ವರ್ಷದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಜುಲೈ 2018 ರಿಂದ ಇದರ ಟ್ರಯಲ್ ನಡೆಯುತ್ತಿದೆ. ಟೆಸ್ಟಿಂಗ್ ಸಮಯದ ನಂತರ ಆಯ್ದ ಕೆಲವು ರಾಜ್ಯಗಳಲ್ಲಿ ಇದನ್ನು ಬಿಡುಗಡೆಗೊಳಿಸಲಾಗುತ್ತದೆ.ವೋವೈ-ಫೈ ಮೂಲಕ ಒಂದು ವೇಳೆ ಸೆಲ್ಯುಲರ್ ಸಿಗ್ನಲ್ ಇಲ್ಲದೆ ಇದ್ದರೂ ಕೂಡ ಟೆಲಿಕಾಂ ಆಪರೇಟರ್ ಗಳು ಬಳಕೆದಾರರೊಂದಿಗೆ ಕನೆಕ್ಟ್ ಆಗಿರಲು ಸಾಧ್ಯವಾಗುತ್ತದೆ.ವೊವೈ-ಪೈ ಮೂಲಕ ಸ್ಮಾರ್ಟ್ ಫೋನ್ ಅಪ್ ಡೇಟ್ ಕೂಡ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಜಿಯೋ ಸ್ಮಾರ್ಟ್ ಹೋಮ್

ಜಿಯೋ ಸ್ಮಾರ್ಟ್ ಹೋಮ್

ಜಿಯೋ ಕೇವಲ ಗಿಗಾಫೈಬರ್ ಅಥವಾ ಗಿಗಾ ಟಿವಿಗೆ ಮಾತ್ರವೇ ಸೀಮಿತವಾಗಿ ಉಳಿಯುವುದಿಲ್ಲ. ಇದು ಇಡೀ ಮನೆಯ ಕನೆಕ್ಷನ್ ಬಗ್ಗೆ ಗುರಿ ಇಟ್ಟುಕೊಂಡಿದೆ. ಸ್ಮಾರ್ಟ್ ಹೋಮ್ ಸೇವೆಗಳಲ್ಲಿ ವೈ-ಫೈ ಎಕ್ಸ್-ಟೆಂಡರ್ಸ್, ಡೋರ್ ಸೆನ್ಸರ್, ಸ್ಮಾರ್ಟ್ ಪ್ಲಗ್ ಗಳು, ಸ್ಮಾರ್ಟ್ ಸ್ಪೀಕರ್ ಗಳು, ಆಡಿಯೋ/ವೀಡಿಯೋ ಡಾಂಗಲ್, ಟಿವಿ ಕ್ಯಾಮರಾಗಳು, ಥರ್ಮೋಸ್ಟಾಟ್ಸ್ ಇತ್ಯಾದಿಗಳು ಸೇರಿವೆ. ಗಿಗಾಫೈಬರ್ ಸೇವೆಯು ಸಂಪೂರ್ಣವಾಗಿ ಬಿಡುಗಡೆಗೊಂಡ ನಂತರ ಈ ನಿಟ್ಟಿನಲ್ಲಿ ಕಂಪೆನಿ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

ಎಂಟರ್ಪೈಸ್ ಸೇವೆಗಳು

ಎಂಟರ್ಪೈಸ್ ಸೇವೆಗಳು

ಟೆಲಿಕಾಂ ಸ್ಪೇಸ್ ನ್ನು ಭಾರತದಲ್ಲಿ ಸೃಷ್ಟಿ ಮಾಡಿದ ನಂತರ ಜಿಯೋ ಇದೀಗ ಎಂಟರ್ಪ್ರೈಸ್ ಸೇವೆಗಳ ಬಗ್ಗೆ ಚಿಂತನೆ ನಡೆಸಿದೆ. ಮುಂದಿನ ಮಾಸಿಕಗಳಲ್ಲಿ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸಣ್ಣ ಮಟ್ಟದಲ್ಲಿಚರ್ಚೆಗಳು ಕಂಪೆನಿಯಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಕ್ಲೌಡ್ ಸೇವೆಗಳು, ಯುನಿಫೈಡ್ ಕಮ್ಯುನಿಕೇಷನ್, ವೀಡಿಯೋ ಕಾನ್ಫರೆನ್ಸ್ ಗಳ ಮ್ಯಾನೇಜ್ಮೆಂಟ್ ಇತ್ಯಾದಿ ಸೇವೆಗಳು ಇದರ ಅಡಿಯಲ್ಲಿ ಲಭ್ಯವಾಗುತ್ತದೆ.

ಜಿಯೋ 5ಜಿ

ಜಿಯೋ 5ಜಿ

5ಜಿ ಸೇವೆಯ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜಿಯೋ ಕೂಡ ಕಾರ್ಯ ನಿರ್ವಹಿಸುತ್ತಿದೆ.ವರದಿಗಳು ಹೇಳುವಂತೆ 5ಜಿ ಸೇವೆಯನ್ನು ಜಿಯೋ ಸಂಸ್ಥೆ ಮುಂದಿನ ಆರು ತಿಂಗಳ ಒಳಗಾಗಿ ಅಂದರೆ 2019 ರ ಮಧ್ಯಭಾಗದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.

Best Mobiles in India

English summary
Reliance Jio in 2019: What to expect from the telco this year

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X