ಜಿಯೋದಿಂದ ಹೊಸ ಆಲ್‌-ಇನ್‌-ಒನ್‌ ಪ್ಲಾನ್‌..! ಏರ್‌ಟೆಲ್‌, ವೊಡಾಫೋನ್‌ಗಿಂತ ಬೆಸ್ಟಾ..?

By Gizbot Bureau
|

ಬಹಳ ಕಡಿಮೆ ಅವಧಿಯ ನಂತರ ಟೆಲಿಕಾಂ ಕ್ಷೇತ್ರದ ಸ್ಪರ್ಧೆ ಮತ್ತೆ ಆರಂಭಗೊಂಡಿದೆ. ಭಾರತೀಯ ಟೆಲಿಕಾಂ ಲೋಕದಲ್ಲಿ ಅಗ್ಗದ ಬೆಲೆಯಿಂದ ಜನರ ಮನೆ ಮಾತಾಗಿದ್ದ ರಿಲಾಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಹೊಸ ಆಲ್ ಇನ್ ಒನ್ ಯೋಜನೆಗಳನ್ನು ಪರಿಚಯಿಸಿದೆ. ಹೊಸ ಯೋಜನೆಗಳು 222 ರೂ.ಗಳಿಂದ ಪ್ರಾರಂಭವಾಗುತ್ತಿದ್ದು, ಅನಿಯಮಿತ ಜಿಯೋ-ಟು-ಜಿಯೋ ಕರೆಗಳು, ಇತರ ಮೊಬೈಲ್ ಆಪರೇಟರ್‌ಗಳಿಗೆ 1000 ನಿಮಿಷ ಉಚಿತ ಕರೆ ಮತ್ತು ದೈನಂದಿನ 2 ಜಿಬಿ 4ಜಿ ಡೇಟಾವನ್ನು ಗ್ರಾಹಕರಿಗೆ ನೀಡುತ್ತಿವೆ. ಈ ಯೋಜನೆ ಏರ್‌ಟೆಲ್‌ನ 249 ರೂ. ಪ್ಲಾನ್‌ ಮತ್ತು ವೊಡಾಫೋನ್‌ನ 229 ರೂ. ಪ್ಲಾನ್‌ಗೆ ಪ್ರಮುಖ ಸ್ಪರ್ಧಿಯಾಗಿದೆ.

ಜಿಯೋದ 222 ರೂ. ಪ್ಲಾನ್‌

ಜಿಯೋದ 222 ರೂ. ಪ್ಲಾನ್‌

ಜಿಯೋ ಆಲ್-ಇನ್-ಒನ್ ಯೋಜನೆಯು ತಿಂಗಳಿಗೆ 222 ರೂ.ಗಳಿಂದ ಪ್ರಾರಂಭವಾಗುತ್ತದೆ. ಈ ಪ್ಲಾನ್‌ನಲ್ಲಿ ಗ್ರಾಹಕರು ಪ್ರತಿದಿನ 2ಜಿಬಿ 4ಜಿ ಡೇಟಾ ಪಡೆಯಲಿದ್ದು, ಭಾರತದಾದ್ಯಂತ ಜಿಯೋ-ಟು-ಜಿಯೋ ಸಂಖ್ಯೆಗಳಿಗೆ ಅನಿಯಮಿತ ಕರೆಗಳು ಮತ್ತು ಇತರ ಮೊಬೈಲ್ ನೆಟ್‌ವರ್ಕ್‌ಗಳಿಗೆ 1000 ನಿಮಿಷಗಳ ಧ್ವನಿ ಕರೆಗಳು ಮತ್ತು ಅನಿಯಮಿತ ಎಸ್‌ಎಂಎಸ್‌ಗಳನ್ನು ನೀಡಲಾಗುತ್ತಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್‌ನಲ್ಲಿ ಜಿಯೋ ಟಿವಿ ಮತ್ತು ಜಿಯೋ ಸಿನೆಮಾ ಸೇರಿ ಜಿಯೋದ ಎಲ್ಲಾ ಅಪ್ಲಿಕೇಶನ್‌ಗಳು ಉಚಿತವಾಗಿ ಸಿಗಲಿವೆ.

ಏರ್‌ಟೆಲ್‌ನ 249 ರೂ.ಪ್ಲಾನ್‌

ಏರ್‌ಟೆಲ್‌ನ 249 ರೂ.ಪ್ಲಾನ್‌

ಏರ್‌ಟೆಲ್ ತಿಂಗಳಿಗೆ 249 ರೂ. ಯೋಜನೆ ಹೊಂದಿದ್ದು, ಅನಿಯಮಿತ ಸ್ಥಳೀಯ + ಎಸ್‌ಟಿಡಿ + ರೋಮಿಂಗ್ ಕರೆಗಳನ್ನು ಮತ್ತು ದಿನಕ್ಕೆ 2 ಜಿಬಿ ಡೇಟಾವನ್ನು 28 ದಿನಗಳ ಮಾನ್ಯತೆಯೊಂದಿಗೆ ನೀಡುತ್ತಿದೆ, ಇದರೊಂದಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ವಿಡಿಯೋ ಸ್ಟ್ರೀಮಿಂಗ್ ಸೇವೆಯನ್ನು ನೀಡುತ್ತಿದ್ದು, ಇದು ಜೀ5 ಮತ್ತು ಹೂಕ್ ಮತ್ತು ಲೈವ್ ಟಿವಿ ಸೇರಿ ಅನೇಕ ವಿಡಿಯೋ ಸ್ಟ್ರೀಮಿಂಗ್‌ ವೇದಿಕೆಗಳ ಪ್ರೀಮಿಯಂ ವಿಡಿಯೋಗಳನ್ನು ಒಳಗೊಂಡಿದೆ. ಇನ್ನು, ಏರ್‌ಟೆಲ್ ವಿಂಕ್ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ ಉಚಿತ ಚಂದಾದಾರಿಕೆ ಮತ್ತು ಎಚ್‌ಡಿಎಫ್‌ಸಿ ಲೈಫ್‌ನಿಂದ 4 ಲಕ್ಷ ರೂ.ನ ಜೀವ ವಿಮೆಯ ಪ್ರಯೋಜನವನ್ನು ಪಡೆಯುತ್ತೀರಿ.

ವೊಡಾಫೋನ್‌ ಐಡಿಯಾದ 229 ರೂ. ಪ್ಲಾನ್‌

ವೊಡಾಫೋನ್‌ ಐಡಿಯಾದ 229 ರೂ. ಪ್ಲಾನ್‌

ವೊಡಾಫೋನ್ ಐಡಿಯಾ ಕೂಡ 229 ರೂ.ಗಳ ಯೋಜನೆಯನ್ನು ಹೊಂದಿದ್ದು, ಇದು ಅನಿಯಮಿತ ಸ್ಥಳೀಯ + ಎಸ್‌ಟಿಡಿ + ರೋಮಿಂಗ್ ಕರೆಗಳನ್ನು ಮತ್ತು ದಿನಕ್ಕೆ 2 ಜಿಬಿ ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಇದರೊಂದಿಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿ ವಿಡಿಯೋ ಸ್ಟ್ರೀಮಿಂಗ್, ಸಂಗೀತ ಮತ್ತು ಹೆಚ್ಚಿನ ಫೀಚರ್‌ಗಳನ್ನು ಉಚಿತವಾಗಿ ನೀಡುತ್ತದೆ.

ಎರಡಕ್ಕಿಂತ ಜಿಯೋ ಬೆಸ್ಟ್‌..?

ಎರಡಕ್ಕಿಂತ ಜಿಯೋ ಬೆಸ್ಟ್‌..?

ಏರ್‌ಟೆಲ್ ಮತ್ತು ವೊಡಾಫೋನ್ ಯೋಜನೆಗಳಿಗಿಂತ ಭಿನ್ನವಾಗಿ ಜಿಯೋ ನಿಲ್ಲುತ್ತದೆ. ಮೂಲ ಯೋಜನೆಗೆ ಪ್ರತಿ 111 ರೂ ಹೆಚ್ಚುವರಿಯಾಗಿ ಪಾವತಿ ಮಾಡಿದರೆ 1 ತಿಂಗಳ ಹೆಚ್ಚುವರಿ ಸೇವೆಯನ್ನು ಜಿಯೋ ಒದಗಿಸುತ್ತದೆ. ಇದರರ್ಥ ಜಿಯೋ ಆಲ್ ಇನ್ ಒನ್ ಯೋಜನೆಗೆ 56 ದಿನಗಳಲ್ಲಿ 333 ರೂ. ನೀಡಿದರೆ, 84 ದಿನಗಳಿಗೆ 444 ರೂ. ಪಾವತಿಸಬೇಕಾಗುತ್ತದೆ. ಇದರೊಂದಿಗೆ 84 ದಿನಗಳ ವ್ಯಾಲಿಡಿಟಿಯೊಂದಿಗೆ 555 ರೂ.ಗಳ ಯೋಜನೆಯೂ ಇದ್ದು, ಇತರ ಮೊಬೈಲ್ ನೆಟ್‌ವರ್ಕ್‌ಗಳಿಗೆ 3000 ನಿಮಿಷಗಳ ಕರೆ ಸೌಲಭ್ಯವನ್ನು ನೀಡುತ್ತದೆ. ಇನ್ನು, ಏರ್‌ಟೆಲ್‌ನಲ್ಲಿ ಪ್ರತಿ 28 ದಿನಗಳಿಗೊಮ್ಮೆ 249 ರೂ. ಯೋಜನೆ ರೀಚಾರ್ಜ್‌ ಮಾಡಿದರೆ, 56 ದಿನಗಳಿಗೆ 498 ರೂ. ಮತ್ತು 84 ದಿನಗಳಿಗೆ 747 ರೂ. ಪಾವತಿಸಬೇಕಾಗುತ್ತದೆ. ವೊಡಾಫೋನ್‌ನಲ್ಲೂ 28 ದಿನಕ್ಕೆ 229 ರೂ., 56 ದಿನಗಳಿಗೆ 458 ರೂ. ಮತ್ತು 84 ದಿನಗಳಿಗೆ 687 ರೂ. ಆಗುತ್ತದೆ.

ಹೆಚ್ಚಿನ ಪ್ರಯೋಜನ

ಹೆಚ್ಚಿನ ಪ್ರಯೋಜನ

ಹೊಸ ಜಿಯೋ ಆಲ್-ಇನ್-ಒನ್ ಯೋಜನೆಗಳು ಅಸ್ತಿತ್ವದಲ್ಲಿರುವ ಜಿಯೋ ಪ್ಲಾನ್‌ಗಳಿಗಿಂತ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ. ನೀವು ಈಗಾಗಲೇ ಜಿಯೋದಲ್ಲಿ ದಿನಕ್ಕೆ 2 ಜಿಬಿ ಡೇಟಾ ಪ್ಲ್ಯಾನ್‌ ಹೊಂದಿದ್ದರೆ, ಮೂರು ತಿಂಗಳ ಅವಧಿಗೆ ಅದರ ವೆಚ್ಚ 448 ರೂ. ಆಗುತ್ತದೆ. ಆದರೆ, ಆಲ್-ಇನ್-ಒನ್ ಯೋಜನೆಯಲ್ಲಿ 444 ರೂ. ಆಗುತ್ತದೆ. ಈ ಪ್ಲಾನ್‌ ಇತರ ಮೊಬೈಲ್ ನೆಟ್‌ವರ್ಕ್‌ಗಳಿಗೆ 1000 ನಿಮಿಷಗಳ ಕರೆಗಳನ್ನು ಸಹ ನೀಡುತ್ತಿದ್ದು, ಈ ಫೀಚರ್‌ಗೆ ಬೇರೆ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ 80 ರೂ. ಪಾವತಿಸಬೇಕಾಗುತ್ತದೆ. ಇನ್ನು, ಎರಡು ತಿಂಗಳ ಆಲ್-ಇನ್-ಒನ್ ಯೋಜನೆಯ ಬೆಲೆ 333 ರೂ. ಆಗಿದ್ದು, ಹಿಂದೆ 396 ರೂ.ಗಳನ್ನು ಪಾವತಿಸಬೇಕಾಗಿತ್ತು. ಎಲ್ಲಾ ಹೊಸ ಪ್ಲಾನ್‌ಗಳು ಇತರೆ ನೆಟ್‌ವರ್ಕ್‌ಗಳಿಗೆ 1000 ನಿಮಿಷಗಳ ಕರೆ ಸೌಲಭ್ಯ ಹೊಂದಿವೆ ಇದರ ಜೊತೆ ಹೆಚ್ಚುವರಿ ಡೇಟಾ ಪಡೆಯಲು ಗ್ರಾಹಕರು ಪ್ರತಿ ಜಿಬಿಗೆ 1 ರೂ. ಪಾವತಿಸಿದರೆ ಸಾಕು.

Best Mobiles in India

English summary
Reliance Jio Announces All-In-One Plans For Rs. 222; How Does They Stack Up Against The Competition

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X