ಆಕಾಶ್ ಅಂಬಾನಿ ನೇತೃತ್ವದಲ್ಲಿ ಜಿಯೋದಿಂದ ಎಐಗೆ ಲಗ್ಗೆ..!!

By Avinash
|

ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‍ನಿಂದ ಆಕಾಶ್ ಅಂಬಾನಿ ನೇತೃತ್ವದಲ್ಲಿ ಆರ್ಟಿಫೀಷಿಯಲ್ ಇಂಟಲಿಜೆನ್ಸ್ (ಎಐ) ವೃತ್ತಿಪರರನ್ನು ನೇಮಕ ಮಾಡಲು ಪ್ರಾರಂಭಿಸಿದ್ದು, ಜಿಯೋ ಟೆಲಿಕಾಂ ಸಂಬಂಧೀತ ಕೆಲಸಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ, ಕಂಪನಿಯು ಈ ನೇಮಕಾತಿಗೆ ಯಾವುದೇ ಸ್ಥಳವನ್ನು ಇನ್ನು ಆಯ್ಕೆ ಮಾಡಿಕೊಂಡಿಲ್ಲ.

ಆರ್ಟಿಫೀಷಿಯಲ್ ಇಂಟಲಿಜೆನ್ಸ್ ತಂಡದ ನಿರ್ಮಾಣಕ್ಕಾಗಿ ಜಿಯೋ ಕೆಲವು ಹಿರಿಯರನ್ನು ನೇಮಕ ಮಾಡಿಕೊಂಡಿದ್ದು, ಬೆಂಗಳೂರು ಅಥವಾ ಹೈದ್ರಾಬಾದ್‍ನಲ್ಲಿ ಈ ತಂಡದ ನಿರ್ಮಾಣ ಮಾಡುವ ಯೋಚನೆಯಲ್ಲಿದೆ. ಆಕಾಶ್ ಅಂಬಾನಿ ಈ ಬಗ್ಗೆ ಆಸಕ್ತಿ ವಹಿಸಿದ್ದು, ಆದಷ್ಟು ಬೇಗ ಕಾರ್ಯರೂಪಕ್ಕೆ ಬರುತ್ತದೆ. ಆದರೆ, ಕಂಪನಿಯು ಎಐ ತಂಡದ ರಚನೆಗೆ ಯಾವುದೇ ಸ್ಥಳವನ್ನು ಇದುವರೆಗೂ ಆಯ್ಕೆ ಮಾಡಿಲ್ಲ. ಆದರೆ, ಈಗಾಗಲೇ ಬೆಂಗಳೂರಿನಲ್ಲಿ ಫೀಶಿಯಲ್ ಇಂಟಲಿಜೆನ್ಸ್ ಹೊರತುಪಡಿಸಿ ಬೇರೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ ಎಂದು ಹೆಸರೆಳಲಿಚ್ಚಿಸದ ಕಂಪನಿಯ ಉದ್ಯೋಗಿಗಳು ಹೇಳಿದ್ದಾರೆ.

ಆಕಾಶ್ ಅಂಬಾನಿ ನೇತೃತ್ವದಲ್ಲಿ ಜಿಯೋದಿಂದ ಎಐಗೆ ಲಗ್ಗೆ..!!

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅತಿವೇಗವಾಗಿ ತನ್ನ ವಿಕ್ರಮ ಸಾಧಿಸುತ್ತಿರುವ ಜಿಯೋ 2016ರ ಸೆಪ್ಟೆಂಬರ್‍ನಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ 186 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಅತಿ ಅಗ್ಗದ ದರದಲ್ಲಿ ಇಂಟರ್‍ನೆಟ್ ಸೇವೆ ಮತ್ತು ಕರೆಗಳನ್ನು ನೀಡುತ್ತಿರುವ ಜಿಯೋ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿಯುಂಟು ಮಾಡಿದೆ. ಮಾರುಕಟ್ಟೆಯಲ್ಲಿ ಉಚಿತ ಜಿಯೋ ಪೋನ್ ಬಿಡುಗಡೆ ಮಾಡಿ, 1500 ರೂ. ಮರುಪಾವತಿಸಬಹುದಾದ ಭದ್ರತಾ ಠೇವಣಿ ಅವಕಾಶವನ್ನು ನೀಡಿ ಬೇರೆ ಟೆಲಿಕಾಂ ಸೇವಾ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿದೆ. 4ಜಿ ತಂತ್ರಜ್ಞಾನದ ಜೊತೆಗೆ ಅದರ ಮುಂದಿನ ಹಂತವಾದ 5ಜಿಗೆ ಮುನ್ನುಗ್ಗಲು ಬ್ಲಾಕ್‍ಚೈನ್‍ನಂತಹ ತಂತ್ರಜ್ಞಾನಗಳ ಕುರಿತು ಜಿಯೋ ಆಲೋಚಿಸುತ್ತಿದೆ.

ವಾಯ್ಸ್ ಅಸಿಸ್ಟೆನ್ಸ್, ಗುರುತಿಸುವಿಕೆ ಮುಂತಾದ ದೈನಂದಿನ ಬಳಕೆಯಲ್ಲಿರುವ ತಂತ್ರಜ್ಞಾನ ಆಧರಿಸಿ ಜಾಗತಿಕವಾಗಿ ಆರ್ಟಿಫೀಶಿಂiÀiಲ್ ಇಂಟಲಿಜೆನ್ಸ್ ಪ್ರಮುಖ ತಂತ್ರಜ್ಞಾನಗಳಲ್ಲಿ ಒಂದಾಗಿದೆ ಎಂದು ಮುಂಬೈನಲ್ಲಿ ಇದೇ ಜನವರಿಯಲ್ಲಿ ನಡೆದ ಭಾರತೀಯ ಡಿಜಿಟಲ್ ಒಪನ್ ಶೃಂಗಸಭೆಯಲ್ಲಿ ಆಕಾಶ್ ಅಂಬಾನಿ ಹೇಳಿದ್ದರು.

ಆಕಾಶ್ ಅಂಬಾನಿ ನೇತೃತ್ವದಲ್ಲಿ ಜಿಯೋದಿಂದ ಎಐಗೆ ಲಗ್ಗೆ..!!

ಜಿಯೋನ ಪ್ರತಿಸ್ಪರ್ಧಿ ಭಾರ್ತಿ ಏರಟೆಲ್ ಸಹ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕ್ಷೇತ್ರದ ಕಡೆ ಗಮನ ಹರಿಸಿದ್ದು, ದತ್ತಾಂಶ ವಿಜ್ಞಾನ ಸಾಮಥ್ರ್ಯ ಮತ್ತು ವಿಶ್ಲೇಷಣೆ, ಗ್ರಾಹಕರ ಅಗತ್ಯಗಳನ್ನು ಅರಿತುಕೊಳ್ಳಲು ಮತ್ತು ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಏಪ್ರೀಲ್‍ನಲ್ಲಿ ಸಂತನು ಭಟ್ಟಾಚಾರ್ಯರನ್ನು ಮುಖ್ಯ ದತ್ತಾಂಶ ವಿಜ್ಞಾನಿಯಾಗಿ ಏರಟೆಲ್ ನೇಮಿಸಿದ್ದು, ಭಾರ್ತಿ ಏರಟೆಲ್‍ನ ಜಾಗತಿಕ ಮುಖ್ಯ ಮಾಹಿತಿ ಅಧಿಕಾರಿ ಮತ್ತು ಡಿಜಿಟಲ್ ಮುಖ್ಯಸ್ಥ ಹರ್ಮಿನ್ ಮೆಹ್ತಾ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

How to Send Message to Multiple Contacts on WhatsApp - GIZBOT KANNADA

ಜಿಯೋ ಹೀಗಾಗಲೇ ಚಿತ್ರ ಪ್ರಚಾರಕ್ಕಾಗಿ ಮತ್ತು ಬ್ರಾಂಡ್ ಮೌಲ್ಯ ವೃದ್ಧಿಗಾಗಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಆಧಾರಿತ ಜಿಯೋಇಂಟರ್ಯ್‍ಕ್ಟ್ ಸೇವೆಯನ್ನು ಮೇನಲ್ಲಿ ಪ್ರಾರಂಭಿಸಿದೆ. ಇದು ಬಳಕೆದಾರರ ಪ್ರಶ್ನೆಗಳನ್ನು ಕೇಳಿ ಪ್ರತಿಕ್ರಿಯೆ ನೀಡುವ ಆಯ್ಕೆಯನ್ನು ಹೊಂದಿದೆ. ಜಿಯೋ ಇಂಟರ್‍ಆ್ಯಕ್ಟ್ ಸ್ವಯಂ-ಕಲಿಕೆಯ ವಿಶೇಷತೆ ಹೊಂದಿದೆ. ರಿಲಯನ್ಸ್ ಜಿಯೋದೊಂದಿಗೆ ವರ್ಚುವಲ್ ಶೋರೂಂಗಳು, ಉತ್ಪನ್ನ ಪ್ರದರ್ಶನ, ಇ-ಕಾಮರ್ಸ್ ಕ್ಷೇತ್ರಗಳತ್ತಲೂ ಹೆಜ್ಜೆ ಹಾಕುತ್ತೇವೆ ಎಂದು ಜಿಯೋ ಸಂಸ್ಥೆ ಹೇಳಿಕೆ ನೀಡಿದೆ.

Best Mobiles in India

English summary
Reliance Jio begins hiring AI team under Akash Ambani. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X