Subscribe to Gizbot

ಈ ಆಫರ್ ಕೇಳಿದ ಮೇಲೆ ಜಿಯೋ ಗಿಂತ ಏರ್‌ಟೆಲ್ ಬೆಸ್ಟು ಅಂತ ನೀವೆ ಅಂತೀರಾ

Written By:

ಜಿಯೋ ಹೊಸದಾಗಿ ಲಾಂಚ್ ಮಾಡಿದ 'ಧನ್ ಧನಾ ಧನ್' ಆಫರ್ ಏರ್‌ಟೆಲ್ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳ ನಿದ್ದೆಗೇಡಿಸಿದೆ. ಜಿಯೋ ಮತ್ತೆ ಮೂರು ತಿಂಗಳು ಉಚಿತ ಸೇವೆಯನ್ನು ನೀಡಿರುವುದಕ್ಕೆ ಪ್ರತಿಯಾಗಿ ಏರ್‌ಟೆಲ್ ನಿನ್ನೇ 399 ರೂ.ಗಳಿಗೆ 70 ದಿನಗಳ ಕಾಲ ಪ್ರತಿ ನಿತ್ಯ 1 GB ಡೇಟಾವನ್ನ ಉಚಿತ ಕರೆ ಮಾಡುವ ಸೇವೆಯನ್ನು ನೀಡಲು ಮುಂದಾಗಿತ್ತು. ಆದರೆ ಈಗ ಮತ್ತೆ ತನ್ನ ದರಗಳಲ್ಲಿ ಕಡಿತ ಮಾಡಿದ್ದು, ಹೊಸ ಆಫರ್ ಘೋಷಣೆ ಮಾಡಿದೆ.

ಈ ಆಫರ್ ಕೇಳಿದ ಮೇಲೆ ಜಿಯೋ ಗಿಂತ ಏರ್‌ಟೆಲ್ ಬೆಸ್ಟು ಅಂತ ನೀವೆ ಅಂತೀರಾ

ಓದಿರಿ: ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಮಾಹಿತಿ

ಜಿಯೋ ಮಾದರಿಯನ್ನು ಅನುಸರಿಸಲು ಮುಂದಾಗಿರುವ ಏರ್‌ಟೆಲ್, ತನ್ನ ಗ್ರಾಹಕರಿಗೆ ಬಳಕೆಗೆ ಅನುಸಾರವಾಗಿ ಆಫರ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ರೂ.244, ರೂ.399 ಹಾಗೂ ರೂ. 345 ರೂ. ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಹಿನ್ನಲೆಯಲ್ಲಿ ಪ್ಲಾನ್‌ಗಳ ಕುರಿತ ಮಾಹಿತಿ ಇಲ್ಲಿದೆ.

ಓದಿರಿ: ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಹೇಗೆ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ ರೂ.244 ಪ್ಯಾಕ್:

ಏರ್‌ಟೆಲ್ ರೂ.244 ಪ್ಯಾಕ್:

ಜಿಯೋ ನೀಡಿರುವ ಆಫರ್ ಎರುರಾಗಿ ಹೊಸ ಆಫರ್ ನೀಡಿರುವ ಏರ್‌ಟೆಲ್, ರೂ.244ಕ್ಕೆ 70 ದಿನಗಳ ಕಾಲಕ್ಕೆ 70 GB ಎನ್ನುವಂತೆ ಪ್ರತಿ ದಿನ 1 GB 4G ಡೇಟಾವನ್ನು ನೀಡಲು ಮುಂದಾಗಿದೆ. ಆದರೆ ಇದು 4G ಸಿಮ್ ಮತ್ತು 4G ಹ್ಯಾಂಡ್‌ಸೆಟ್ ಇರುವವರಿಗೆ ಮಾತ್ರ ಈ ಆಫರ್ ದೊರೆಯಲಿದೆ. ಇದರಲ್ಲಿ ಪ್ರತಿ ದಿನ 300 ನಿಮಿಷ ಏರ್‌ಟೆಲ್ ನಿಂದ ಏರ್‌ಟೆಲ್‌ಗೆ ಉಚಿತ ಕರೆ ಮಾಡುವ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಏರ್‌ಟೆಲ್‌ ನಿಂದ ಬೇರೆ ನೆಟ್‌ವರ್ಕ್‌ಗೆ ಪ್ರತಿ ವಾರ 1,200 ನಿಮಿಷಗಳ ಉಚಿತ ಕರೆ ಮಾಡುವ ಅವಕಾಶ ಇದೆ. ಇದಕ್ಕಿಂತ ಜಾಸ್ತಿ ಬಳಸುವವರಿಗೆ ನಿಮಿಷಕ್ಕೆ 10ಪೈಸ ನೀಡಬೇಕಾಗಿದೆ.

ಏರ್‌ಟೆಲ್ ರೂ.399 ಪ್ಯಾಕ್‌:

ಏರ್‌ಟೆಲ್ ರೂ.399 ಪ್ಯಾಕ್‌:

ಇದೇ ಮಾದರಿಯಲ್ಲಿ ಏರ್‌ಟೆಲ್ ರೂ.399 ಪ್ಯಾಕ್‌ ಸಹ ಘೋಷಣೆ ಮಾಡಿದ್ದು, 70 ದಿನಗಳ ಕಾಲ ಪ್ರತಿ ನಿತ್ಯ 1GB 4G ಡೇಟಾದಂತೆ 70 GB ಗ್ರಾಹಕರ ಬಳಕೆಗೆ ದೊರೆಯಲಿದೆ. 3000 ನಿಮಿಷಗಳ ಉಚಿತ ಕರೆ ಮಾಡುವ ಅವಕಾಶವನ್ನು ಇದು ಮಾಡಿಕೊಡಲಿದೆ. ಪ್ರತಿ ನಿತ್ಯ 300 ನಿಮಿಷ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿದೆ.

ಏರ್‌ಟೆಲ್ ರೂ.345 ಪ್ಯಾಕ್‌:

ಏರ್‌ಟೆಲ್ ರೂ.345 ಪ್ಯಾಕ್‌:

ಇದರೊಂದಿಗೆ ಏರ್‌ಟೆಲ್ ರೂ.345 ಪ್ಯಾಕ್‌ ಬಿಡುಗಡೆ ಮಾಡಿದ್ದು, ಇದರಲ್ಲಿ 28 ದಿನಗಳ ಕಾಲ ಪ್ರತಿ ದಿನ 2GB ಡೇಟಾವನ್ನು ನೀಡಲು ಮುಂದಾಗಿದೆ. ಉಚಿತ ಕರೆ ಮಾಡುವ ಅವಕಾಶವನ್ನು ತನ್ನ ಗ್ರಾಹಕರಿಗೆ ಮಾಡಿಕೊಟ್ಟಿದೆ. ಈ ಆಫರ್‌ಗಳು ಏಪ್ರಿಲ್ 15 ರಿಂದ ಆರಂಭವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
biggest telecom operator Airtel has launched a new offer that provides 70GB of data for 70 days for Rs. 244 and Rs. 399. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot