ರಿಲಯನ್ಸ್ ಜಿಯೋ ಸೆಲಬ್ರೇಷನ್ ಪ್ಯಾಕ್: 2ಜಿಬಿ ಹೆಚ್ಚುವರಿ ಡಾಟಾ ಪಡೆಯಲು ಕೊನೆಯ ಅವಕಾಶ

|

ನವೆಂಬರ್ 30 ರ ವರೆಗೆ ರಿಲಯನ್ಸ್ ಜಿಯೋ ಸೆಲಬ್ರೇಷನ್ ಪ್ಯಾಕ್ ನ ಅವಧಿಯನ್ನು ಕೆಲವು ಬಳಕೆದಾರರಿಗೆ ಹೆಚ್ಚಿಸಲಾಗಿದ್ದು ಪ್ರತಿದಿ ನ 8 ಜಿಬಿವರೆಗೆ ಡಾಟಾ ವನ್ನು ಉಚಿತವಾಗಿ ಪಡೆಯಬಹುದಾಗಿದೆ. ಈ ಪ್ಯಾಕ್ 5 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ ಮತ್ತು ಚಂದಾದಾರರು ಪ್ರತಿ ದಿನ 2 ಜಿಬಿ ಡಾಟಾವನ್ನು ಉಚಿತವಾಗಿ ಬಳಕೆ ಮಾಡಬಹುದು. ಆದರೆ ಈ ಪ್ಯಾಕ್ ಎಲ್ಲಾ ಬಳಕೆದಾರರಿಗೂ ಲಭ್ಯವಿರುವುದಿಲ್ಲ ಆಯ್ದ ಕೆಲವು ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ. ನೀವೂ ಕೂಡ ಈ ಪಟ್ಟಿಯಲ್ಲಿ ಬರುತ್ತೀರೋ ಅಥವಾ ಇಲ್ಲವೋ ಎಂಬುದನ್ನು ಮೈ ಜಿಯೋ ಆಪ್ ಮೂಲಕ ಪರೀಕ್ಷಿಸಿಕೊಳ್ಳಿ.

ಸೆಲಬ್ರೇಷನ್ ಪ್ಯಾಕ್:

ಸೆಲಬ್ರೇಷನ್ ಪ್ಯಾಕ್:

ರಿಲಯನ್ಸ್ ಜಿಯೋ ಸೆಪ್ಟೆಂಬರ್ ನಲ್ಲಿ ಮೊದಲ ಬಾರಿಗೆ ಸೆಲೆಬ್ರೇಷನ್ ಪ್ಯಾಕ್ ನ್ನು ಪ್ರಕಟಿಸಿತು. ಇಂಡಿಯನ್ ಟೆಲಿಕಾಂ ಇಂಡಸ್ಟ್ರಿಗೆ ಕಾಲಿಟ್ಟು ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇದನ್ನು ಬಿಡುಗಡೆಗೊಳಿಸಲಾಗಿತ್ತು.

ಚಾಕಲೇಟ್ ಗೆ ಉಚಿತ ಡಾಟಾ:

ಚಾಕಲೇಟ್ ಗೆ ಉಚಿತ ಡಾಟಾ:

ಕ್ಯಾಬ್ಡರಿ ಜೊತೆಗೆ ಸಹಭಾಗಿತ್ವವನ್ನು ಹೊಂದಿದ್ದ ಕಂಪೆನಿ ಕ್ಯಾಬ್ಡರಿ ಡೈರಿ ಮಿಲ್ಕ್ ಚಾಕಲೇಟ್ ಖರೀದಿಸಿದವರಿಗೆ 1ಜಿಬಿ ಡಾಟಾವನ್ನು ಉಚಿತವಾಗಿ ನೀಡಿತ್ತು.

ಈ ಮೊದಲು ರಿಲಯನ್ಸ್ ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ 2ಜಿಬಿ ಹೆಚ್ಚುವರಿ ಡಾಟಾವನ್ನು ಗಿಫ್ಟ್ ನಂತೆ 4 ಸತತ ದಿನಗಳಿಗೆ ನೀಡಿತ್ತು. ಈ ಮೊದಲು ಸೆಪ್ಟೆಂಬರ್ 30 ರ ವರೆಗೆ ಇದು ಲಭ್ಯವಿತ್ತು. ಇದೀಗ ನವೆಂಬರ್ 30 ರ ತನಕ ಹೆಚ್ಚಿಸಲಾಗಿದ್ದು ಕೆಲವು ಬಳಕೆದಾರರು ಇದರ ಸದುಪಯೋಗವನ್ನು ಪಡೆಯಲಿದ್ದಾರೆ.

ದೀಪಾವಳಿ ಕ್ಯಾಷ್ ಬ್ಯಾಕ್ ನೀಡಿದ್ದ ಕಂಪೆನಿ:

ದೀಪಾವಳಿ ಕ್ಯಾಷ್ ಬ್ಯಾಕ್ ನೀಡಿದ್ದ ಕಂಪೆನಿ:

ಇದೇ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಇತ್ತೀಚೆಗೆ ದೀಪಾವಳಿ 100% ಕ್ಯಾಷ್ ಬ್ಯಾಕ್ ಆಫರ್ ನ್ನು ಕೂಡ ಬಳಕೆದಾರರಿಗೆ ನೀಡಿತ್ತು. ಹೊಸ ಪ್ಲಾನ್ ನ ಅನ್ವಯ ರಿಲಯನ್ಸ್ ಜಿಯೋ ಎಲ್ಲಾ ರೇಂಜಿನ ತಾರಿಫ್ ಪ್ಲಾನ್ ಗಳಿಗೆ 100% ಕ್ಯಾಷ್ ಬ್ಯಾಕ್ ನ್ನು ನೀಡುತ್ತಿತ್ತು.

ಹೊಸ ಆಫರ್ ನ ಅವಧಿ:

ಹೊಸ ಆಫರ್ ನ ಅವಧಿ:

ಹೊಸ ಆಫರ್ ನವೆಂಬರ್ 30,2018 ರ ವರೆಗೆ ಇರುತ್ತದೆ. ಆದರೆ, ಬಳಕೆದಾರರಿಗೆ ನೀಡಲಾಗಿರುವ ಕ್ಯಾಷ್ ಬ್ಯಾಕ್ ಕೂಪನ್ ನ್ನು ಡಿಸೆಂಬರ್ 31,2018 ರ ವರೆಗೆ ಬಳಕೆ ಮಾಡಬಹುದು. ಯಾರು ಈ ಪ್ಲಾನ್ ನ್ನು ಪಡೆಯಲು ಮುಂದಾಗುತ್ತಾರೋ ಅವರಿಗೆ ಕ್ಯಾಷ್ ಬ್ಯಾಕ್ ಕೂಪನ್ ಗಳ ರೂಪದಲ್ಲಿ ಸಿಗುತ್ತದೆ. 1,699 ರುಪಾಯಿಯ ರಿಲಯನ್ಸ್ ಜಿಯೋ ಬಳಕೆದಾರರಿಗೆ 500 ರುಪಾಯಿಯ 3 ವೋಚರ್ ಮತ್ತು 200 ರುಪಾಯಿ ಒಂದು ವೋಚರ್ ಸಿಗುತ್ತದೆ. ಗ್ರಾಹಕರು ಈ ಕೂಪನ್ ಗಳನ್ನು ಯಾವುದೇ ರಿಲಯನ್ಸ್ ಡಿಜಿಟಲ್ ಅಥವಾ ರಿಲಯನ್ಸ್ ಡಿಜಿಟಲ್ ಎಕ್ಸ್ ಪ್ರೆಸ್ ಮಿನಿ ಸ್ಟೋರ್ ಗಳಲ್ಲಿ ಕನಿಷ್ಟ 5,000 ರುಪಾಯಿ ಖರೀದಿಯ ಸಂದರ್ಭದಲ್ಲಿ ಬಳಕೆ ಮಾಡಬಹುದು.

ಒಂದು ವರ್ಷದ ಪ್ಲಾನ್:

ಒಂದು ವರ್ಷದ ಪ್ಲಾನ್:

ಈ ಆಫರ್ ನ ಒಂದು ಭಾಗವಾಗಿ ಕಂಪೆನಿಯು ಹೊಸ ಪ್ಲಾನ್ ನಲ್ಲಿ ಅಧಿಕ ವ್ಯಾಲಿಡಿಟಿ ಇರುವಂತೆ ಪರಿಚಯಿಸಿದೆ. ಒಂದು ವರ್ಷದ ಅವಧಿಯ 1,699 ರುಪಾಯಿ ಪ್ಲಾನ್ ನ್ನು ಈ ಸರ್ವೀಸ್ ಪ್ರೊವೈಡರ್ ಬಿಡುಗಡೆಗೊಳಿಸಿದೆ.ಈ ಪ್ಲಾನ್ ನ ಅಡಿಯಲ್ಲಿ ರಿಲಯನ್ಸ್ ಜಿಯೋ ಬಳಕೆದಾರರು ಅನಿಯಮಿತ ಸ್ಥಳೀಯ ಮತ್ತು ಎಸ್ ಡಿಟಿ ಕರೆಗಳನ ಬೆನಿಫಿಟ್ ಜೊತೆಗೆ ನೋ ಎಫ್ ಯುಪಿ ಲಿಮಿಟ್ ಮತ್ತು 100ಎಸ್ಎಂಎಸ್ ಪ್ರತಿ ದಿನ ಉಚಿತವಾಗಿ ಪಡೆಯಲಿದ್ದಾರೆ.

ಈ ಪ್ಲಾನ್ 365 ದಿನಗಳ ಅವಧಿಯನ್ನು ಹೊಂದಿದೆ ಮತ್ತು ಚಂದಾದಾರರಿಗೆ ಒಟ್ಟು 547.5ಜಿಬಿ ಡಾಟಾ ಲಭ್ಯವಾಗುತ್ತದೆ. ಅಂದರೆ ಪ್ರತಿದಿನ 1.5ಜಿಬಿ ಡಾಟಾ ಬಳಕೆ ಮಾಡಬಹುದು. ಪ್ರತಿದಿನದ ಲಿಮಿಟ್ ನ ನಂತರ ಇಂಟರ್ನೆಟ್ ಸ್ಪೀಡ್ 64ಕೆಬಿಪಿಎಸ್ ಗೆ ಇಳಿಯಲಿದೆ.ಡಾಟಾ ಮತ್ತು ಕಾಲಿಂಗ್ ಬೆನಿಫಿಟ್ ಗಳ ಜೊತೆಗೆ ಬಳಕೆದಾರರು ಜಿಯೋ ಸ್ಯೂಟ್ ಆಪ್ ಗೆ ಉಚಿತ ಆಕ್ಸಿಸ್ ನ್ನು ಕೂಡ ಗ್ರಾಹಕರು ಪಡೆಯಲಿದ್ದಾರೆ.

Best Mobiles in India

Read more about:
English summary
Reliance Jio ‘celebrations pack’: Here’s your last chance to get 2GB extra free daily data

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X