Subscribe to Gizbot

ಉಚಿತ ಕೊಡುಗೆಗಳು ನಿಯಮಬದ್ಧವಾಗಿಯೇ ಇದೆ: ರಿಲಯನ್ಸ್ ಜಿಯೋ

Written By:
ರಿಲಯನ್ಸ್ ಮಾಲೀಕತ್ವದ ಜಿಯೋ ಉಚಿತ ಸೇವೆಗಳ ಕುರಿತು ದೆಹಲಿ ಹೈಕೋರ್ಟ್‌ಗೆ ವಿವರಣೆ ನೀಡಿದ್ದು, ದೂರಸಂಪರ್ಕ ನಿಯಂತ್ರಣ ಮಂಡಳಿ ಟ್ರಾಯ್ ನಿಯಮಗಳಿಗೆ ಬದ್ಧವಾಗಿಯೇ ಗ್ರಾಹಕರಿಗೆ ಉಚಿತ ಸೇವೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.

ಉಚಿತ ಕೊಡುಗೆಗಳು ನಿಯಮಬದ್ಧವಾಗಿಯೇ ಇದೆ: ರಿಲಯನ್ಸ್ ಜಿಯೋ

ಜಿಯೋ ಆಫರ್‌ಗಳ ಕುರಿತು ಕೋರ್ಟ್‌ ಮೇಟ್ಟಿಲೆರಿದ್ದ ವೊಡೊಪೋನ್ ಇಂಡಿಯಾ, ರಿಲಿಯನ್ಸ್ ಜಿಯೋ ಟ್ರಾಯ್ ನಿಯಮಗಳನ್ನು ಗಾಳಿಗೇ ತೂರಿದ್ದು, ಟ್ರಾಯ್ ನಿರ್ದೇಶನ, ನಿಯಮಗಳು ಸೇರಿದಂತೆ ಎಲ್ಲವನ್ನು ಜಿಯೋ ಉಲ್ಲಂಘಿಸಿದೆ ಎಂದು ಕೇಸ್‌ ಹಾಕಿತ್ತು. ಅಲ್ಲದೇ ಟ್ರಾಯ್ ಸಹ ಜಿಯೋ ನಿಯಂತ್ರಿಸಲು ಮುಂದಾಗುತ್ತಿಲ್ಲ ಎಂದ ಆರೋಪ ಮಾಡಿತ್ತು.

ಈ ಕುರಿತಂತೆ ವಿಚಾರಣೆ ನಡೆಸಿದ ಕೋರ್ಟ್‌, ಜಿಯೋ ವೆಲ್‌ಕಮ್ ಆಫರ್ ಮತ್ತು ಹ್ಯಾಪಿ ನ್ಯೂಯಿರ್ ಆಫರ್ ಗಳ ಕುರಿತು ಸರಿಯಾದ ಮಾಹಿತಿ ನೀಡುವಂತೆ ಟ್ರಾಯ್‌ಗೆ ಸೂಚನೆ ನೀಡಿತ್ತು. ಇದಕ್ಕೆ ವಿವರಣೆ ನೀಡಿದ್ದ ಟ್ರಾಯ್, ಜಿಯೋ ಕೊಡುಗೆಗಳು ನ್ಯಾಯ ಸಮ್ಮತವಾಗಿದೆ ಎಂದು ತಿಳಿಸಿತ್ತು.

ಉಚಿತ ಕೊಡುಗೆಗಳು ನಿಯಮಬದ್ಧವಾಗಿಯೇ ಇದೆ: ರಿಲಯನ್ಸ್ ಜಿಯೋ

ಓದಿರಿ: ಏಪ್ರೀಲ್‌ನಲ್ಲಿ ಜಿಯೋ ಡಿಟಿಹೆಚ್ ಲಾಂಚ್: ಮೊದಲ ಮೂರು ತಿಂಗಳೂ ಉಚಿತ, ನಂತರ ಕೇವಲ 99 ರೂ.ಮಾತ್ರ...!

ಈ ಕುರಿತಂತೆ ಇಂದು ಕೋರ್ಟ್‌ಗೆ ವಿವರಣೆ ನೀಡಿದ ಜಿಯೋ, ತನ್ನ ಎಲ್ಲಾ ಕೊಡುಗೆಗಳು ಟ್ರಾಯ್ ನಿಯಮಾನುಸಾರವೇ ಇದೆ. ಯಾವುದೇ ರೀತಿಯಲ್ಲಿಯೂ ನಿಯಮಗಳ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಟ್ರಾಯ್ ಪರಿವಿದಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದೆ.

Read more about:
English summary
Reliance Jio (RJio) on Tuesday told Delhi High Court that telecom regulator TRAI has held that its free offers to subscribers was perfectly legitimate. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot