Subscribe to Gizbot

ಪಾನ್‌ಕಾರ್ಡ್‌ ಬೇಕೆ..? 5 ನಿಮಿಷದಲ್ಲಿ ನಿಮ್ಮ ಪಾನ್‌ಕಾರ್ಡ್‌ ನಿಮ್ಮ ಕೈ ಸೇರಲಿದೆ.

Written By:
ದೇಶದಲ್ಲಿ ಡಿಜಿಟಲ್ ಕಾಂತ್ರಿ ವೇಗವಾಗಿ ಸಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸರಕಾರಿ ಸೇವೆಗಳು ವೇಗ ಪಡೆದುಕೊಂಡಿವೆ. ಹಾಗಾಗಿ ಇನ್ನು ಮುಂದೆ ಅಗತ್ಯವಾಗಿ ಬೇಕಾದ ಪಾನ್‌ಕಾರ್ಡ್‌ ಪಡೆಯಲು ತಿಂಗಳುಗಟ್ಟಲೇ ಕಾಯಬೇಕಾದ ಅವಶ್ಯಕತೆಯೇ ಇಲ್ಲ. ಕೇವಲ 5 ನಿಮಿಷದಲ್ಲಿ ನಿಮ್ಮ ಪಾನ್ ಕಾರ್ಡ್‌ ರೆಡಿಯಾಗಲಿದೆ.

ಪಾನ್‌ಕಾರ್ಡ್‌ ಬೇಕೆ..? 5 ನಿಮಿಷದಲ್ಲಿ ನಿಮ್ಮ ಪಾನ್‌ಕಾರ್ಡ್‌ ನಿಮ್ಮ ಕೈ ಸೇರಲಿದೆ.

ಇನ್ನು ಮುಂದೇ ನೀವು ಪ್ಯಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿದ 5 ನಿಮಿಷದಲ್ಲಿ ನಿಮ್ಮ ಪ್ಯಾನ್‌ಕಾರ್ಡ್‌ ರೆಡಿಯಾಗಲಿದೆ. ಇದು ಕೈಗೆ ಸಿಕ್ಕರೆ ನಿಮ್ಮ ಆದಾಯ ತೆರಿಗೆಯನ್ನು ನಿಮ್ಮ ಮೊಬೈಲ್‌ ಮೂಲಕವೇ ಪಾವತಿಸ ಬಹುದಾಗಿದೆ.

ಪ್ಯಾನ್‌ಕಾರ್ಡ್‌ ವಿತರಣೆ ಮಾಡುವುದು ನಿಧಾನವಾಗುತ್ತಿದ್ದ ಹಿನ್ನಲೆಯಲ್ಲಿ ಆಧಾರ್ ಇ-ಕೆವೈಸಿ ಬಳಸಿಕೊಂಡು ಪಾನ್‌ಕಾರ್ಡ್‌ ವಿತರಿಸುವಂತೆ ಕೇಂದ್ರ ಸರಕಾರವು ಸೂಚನೆ ನೀಡಿದ್ದು, ಈ ಹಿನ್ನಲೆಯಲ್ಲಿ ಆಧಾರ್‌ಗೆ ನೀಡಿರುವ ವಿವರಗಳನ್ನು ಬಳಿಸಿಕೊಂಡು ಪಾನ್‌ಕಾರ್ಡ್‌ ನೀಡಲು ಕೇಂದ್ರ ನೇರ ತೆರಿಗೆ ಮಂಡಳಿ ಮುಂದಾಗಿದೆ.

ಪಾನ್‌ಕಾರ್ಡ್‌ ಬೇಕೆ..? 5 ನಿಮಿಷದಲ್ಲಿ ನಿಮ್ಮ ಪಾನ್‌ಕಾರ್ಡ್‌ ನಿಮ್ಮ ಕೈ ಸೇರಲಿದೆ.

ಓದಿರಿ: ಕೇವಲ 3,799 ರೂಗಳಿಗೆ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನು

ಆಧಾರ್ ಇ-ಕೆವೈಸಿನಲ್ಲಿ ಬೆರಳಚ್ಚು, ವಿಳಾಸ, ಪೋಟೋ ಮುಂತಾದ ಎಲ್ಲಾ ಮಾಹಿತಿಗಳು ದೊರೆಯುವುದರಿಂದ ಪ್ಯಾನ್‌ ಕಾರ್ಡ್ ಮಾಡಿಕೊಡುವುದು ನಿಧಾನವಾಗುವುದಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ದೊರೆಯಲಿದೆ.

ವೇಗವಾಗಿ ಪ್ಯಾನ್‌ಕಾರ್ಡ್‌ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ನೇರ ತೆರಿಗೆ ಮಂಡಳಿಯೂ ಅನೇಖ ಕಂಪನಿಗಳೊಂದಿಗೆ ಮಾತುಕತೆ ಪೂರ್ಣಗೊಂಡಿದ್ದು, ಶೀಘ್ರವೇ ಕಾರ್ಯ ರೂಪಕ್ಕೆ ಬರಳಿದೆ.

Read more about:
English summary
Central Board of Direct Taxes and Ministry of Corporate affairs are working together on a new methodology that will help you get a Permanent account number within minutes. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot