ಜಿಯೋ4Gವಾಯ್ಸ್ ವರ್ಕ್‌ ಆಗುತ್ತಿಲ್ಲವೇ? ಸಮಸ್ಯೆ ಏಕೆ ಮತ್ತು ಪರಿಹಾರಗಳನ್ನು ತಿಳಿಯಿರಿ

By Suneel
|

ರಿಲಾಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಕ್ಷೇತ್ರಕ್ಕೂ ಕಾಲಿರಿಸಿದ್ದು 500 ರೂಗೆ 600GB ಡಾಟಾವನ್ನು ನೀಡುವ ನಿರೀಕ್ಷೆಯಲ್ಲಿದೆ. ಇಂತಹ ಹಲವು ಉತ್ತಮ ಆಫರ್‌ಗಳೊಂದಿಗೆ, ಉಚಿತ ಅನ್‌ಲಿಮಿಟೆಡ್ 4G ಡಾಟಾ, ವಾಯ್ಸ್ ಕರೆ, ಉಚಿತ ಎಸ್‌ಎಂಎಸ್ ಆಫರ್‌ಗಳನ್ನು ನೀಡುವ ಮುಖಾಂತರ ಇತರೆ ಟೆಲಿಕಾಂ ಗ್ರಾಹಕರನ್ನೆಲ್ಲಾ ತನ್ನತ್ತ ಸೆಳೆಯುತ್ತಿದೆ.

ಉಚಿತ ಮತ್ತು ಅತೀ ಕಡಿಮೆ ಬೆಲೆಯ ಟ್ಯಾರಿಫ್ ಪ್ಲಾನ್‌ಗಳ ಪ್ರಕಟಣೆ ಇಂದ ದಿನನಿತ್ಯ ಸುದ್ದಿಯಲ್ಲಿದೆ. ಆದರೆ ರಿಲಾಯನ್ಸ್ ಜಿಯೋ ಸಂಪರ್ಕ ಪಡೆದ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆ ಎಂದರೆ ವಾಯ್ಸ್ ಕರೆ ಡ್ರಾಪ್‌ ಮತ್ತು ಉತ್ತಮವಲ್ಲದ ಗ್ರಾಹಕರ ಸೇವೆ, ಸಿಮ್‌ ಆಕ್ಟಿವೇಶನ್ ವಿಳಂಬ ಅಥವಾ ಇತರೆ ಸಮಸ್ಯೆಗಳು. ಜಿಯೋ ಗ್ರಾಹಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದರು, ಆದರೆ ಕೆಲವು ಸಮಸ್ಯೆಗಳು ಮಾತ್ರ ಪಟ್ಟಿಯಾಗಿಯೇ ಉಳಿದಿವೆ.

ರಿಲಾಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಪ್ಲಾನ್: 500 ರೂಗೆ 600GB ಡಾಟಾ!

ಆದರೆ ಇಂದು ಜಿಯೋ ಸಮಸ್ಯೆಗಳ ಪಟ್ಟಿಯಲ್ಲಿ ಹೊಸದಾಗಿ "ಜಿಯೋ4Gವಾಯ್ಸ್ ವರ್ಕ್‌ ಆಗುತ್ತಿಲ್ಲ' ಎಂಬ ಮಾಹಿತಿ ದಾಖಲಾಗುತ್ತಿದೆ. ಹೌದು, ಈ ಸಮಸ್ಯೆಯನ್ನು ಜಿಯೋ(Jio) ಬಳಕೆದಾರರು ಹೆಚ್ಚಿನ ಮಟ್ಟದಲ್ಲೇ ದೂರುತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ರಿಲಾಯನ್ಸ್ ಜಿಯೋ ಸೇವಾವಾಣಿ ಪರಿಹಾರಕ್ಕೆ ಖಂಡಿತ ಬಹುಬೇಗ ಬರುವುದಿಲ್ಲ. ಆದರೆ ಗಿಜ್‌ಬಾಟ್ 'ಜಿಯೋ4Gವಾಯ್ಸ್' ಏಕೆ ವರ್ಕ್‌ ಆಗುತ್ತಿಲ್ಲ, ಮತ್ತು ಪರಿಹಾರ ಏನು ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದೆ.

 ನಿಮ್ಮ ಫೋನ್‌ VoLTE ಸಪೋರ್ಟ್‌ ಮಾಡದಿರಬಹುದು

ನಿಮ್ಮ ಫೋನ್‌ VoLTE ಸಪೋರ್ಟ್‌ ಮಾಡದಿರಬಹುದು

ಜಿಯೋ4Gವಾಯ್ಸ್ ಮೂಲಕ ಕರೆ ಮಾಡಲು, VoLTE ಕಡ್ಡಾಯ ಫೀಚರ್ ಅನ್ನು ಮೊಬೈಲ್‌ ಸಪೋರ್ಟ್‌ ಮಾಡಬೇಕು. ಇದು ಡಾಟಾ ನೆಟ್‌ವರ್ಕ್‌ ಮೂಲಕ ಕರೆ ಮಾಡಲು ಅವಕಾಶ ನೀಡುತ್ತದೆ. ಜಿಯೋ4Gವಾಯ್ಸ್ ಸೌಲಭ್ಯ HD ವಾಯ್ಸ್ ಮತ್ತು ವೀಡಿಯೊ ಕರೆ ಮಾಡಲು ಅವಕಾಶ ನೀಡುತ್ತದೆ.

ಆದ್ದರಿಂದ ನಿಮ್ಮ ಫೋನ್ VoLTE ಸಪೋರ್ಟ್ ಮಾಡುತ್ತದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಸಪೋರ್ಟ್ ಮಾಡಿದಲ್ಲಿ ಉಚಿತ ವಾಯ್ಸ್ ಮತ್ತು ವೀಡಿಯೊ ಕರೆ ಸೌಲಭ್ಯ ಎಂಜಾಯ್‌ ಮಾಡಬಹುದು.

ಟೆಲಿ-ವೆರಿಫಿಕೇಶನ್ ಖಂಡಿತ ಆಗಿರುವುದಿಲ್ಲ

ಟೆಲಿ-ವೆರಿಫಿಕೇಶನ್ ಖಂಡಿತ ಆಗಿರುವುದಿಲ್ಲ

ಬಹುಶಃ ಜಿಯೋ4Gವಾಯ್ಸ್ ವರ್ಕ್‌ ಆಗದಿರಲು ಕಾರಣಗಳಲ್ಲಿ, ಜಿಯೋ ಸಿಮ್ ಟೆಲಿ-ವೆರಿಫಿಕೇಶನ್ ಖಂಡಿತ ಆಗಿರುವುದಿಲ್ಲ ಎನಿಸುತ್ತದೆ. ನಿಮ್ಮ ಜಿಯೋ ಸಿಮ್‌ ಅನ್ನು ಟೆಲಿ-ವೆರಿಫಿಕೇಶನ್ ಮಾಡಲು 1977 ಗೆ ಕರೆ ಮಾಡಿ. ನಂತರ ನೀವು ನೀಡಿದ ದಾಖಲೆಗಳನ್ನು ಇನ್ನೊಮ್ಮೆ ಕರೆಯಲ್ಲಿ ತಿಳಿಸಿ, ವೆರಿಫಿಕೇಶನ್‌ ಪೂರ್ಣಗೊಳಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಅಪ್ಲಿಕೇಶನ್ ಸರಿಯಾಗಿ ಕಾನ್ಫಿಗರ್ ಮಾಡಿ

ಅಪ್ಲಿಕೇಶನ್ ಸರಿಯಾಗಿ ಕಾನ್ಫಿಗರ್ ಮಾಡಿ

ಬಹುಶಃ ಆಪ್‌ ಅನ್ನು ಸರಿಯಾಗಿ ಕಾನ್ಫಿಗರ್ ಮಾಡಿರುವುದಿಲ್ಲ ಎನಿಸುತ್ತದೆ. ಆದ್ದರಿಂದ ಆಪ್‌ ಅನ್ನು ಒಮ್ಮೆ ಅನ್‌ಇನ್‌ಸ್ಟಾಲ್ ಮಾಡಿ, ಪುನಃ ರೀಇನ್‌ಸ್ಟಾಲ್‌ ಮಾಡಿ. ಆಪ್‌ ರೀಇನ್‌ಸ್ಟಾಲ್ ಮಾಡುವಾಗ ಸರಿಯಾದ ಮಾಹಿತಿ ನೀಡಿ.

ಮೊಬೈಲ್ ಡಾಟಾ ವರ್ಕ್‌ ಆಗುತ್ತಿದೆಯೇ ಚೆಕ್‌ ಮಾಡಿ

ಮೊಬೈಲ್ ಡಾಟಾ ವರ್ಕ್‌ ಆಗುತ್ತಿದೆಯೇ ಚೆಕ್‌ ಮಾಡಿ

ಅಂದಹಾಗೆ ಜಿಯೋ4Gವಾಯ್ಸ್ ಕರೆಗಳು ಮತ್ತು ವೀಡಿಯೊ ಕರೆಗಳ ಮೊಬೈಲ್ ಡಾಟಾದಿಂದಲೇ ವರ್ಕ್ ಆಗುವುದು. ಮೊಬೈಲ್ ಡಾಟಾ ಆನ್ ಮಾಡದೇ ಜಿಯೋ4Gವಾಯ್ಸ್ ಕರೆ ತಪ್ಪಾದ ಕ್ರಮ. ವಾಯ್ಸ್ ಕರೆ ಮಾಡುವ ಮೊದಲು ಮೊಬೈಲ್ ಡಾಟಾ ಆನ್‌ ಆಗಿರುವ ಬಗ್ಗೆ ಚೆಕ್‌ ಮಾಡಿಕೊಳ್ಳಿ.

ಫೋನ್‌ ರೀಸ್ಟಾರ್ಟ್ ಮಾಡಿ

ಫೋನ್‌ ರೀಸ್ಟಾರ್ಟ್ ಮಾಡಿ

ಮೇಲೆ ತಿಳಿಸಿದ ಎಲ್ಲಾ ಅಂಶಗಳು ಸರಿಯಾಗಿ ಇದ್ದು, ಜಿಯೋ4Gವಾಯ್ಸ್ ಕರೆ ಡ್ರಾಪ್‌ ಸಮಸ್ಯೆ ಇದ್ದಲ್ಲಿ, ಒಮ್ಮೆ ಫೋನ್‌ ಅನ್ನು ರೀಸ್ಟಾರ್ಟ್ ಮಾಡಿ. ದಟ್ಸ್‌ ಇಟ್‌.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
“Jio4GVoice Not Working” Issue: Here are 5 Possible Reasons and Quick Fixes. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X