ಜಿಯೋಗೆ ಸ್ಪರ್ಧಿಯಾಗಿ ಆಫರ್‌ಗಳ ಪೂರ ಹರಿಸಲಿರುವ ಏರ್‌ಟೆಲ್, ವೊಡಾಫೋನ್

By Shwetha
|

ರಿಲಾಯನ್ಸ್ ಜಿಯೋ ತನ್ನ 4ಜಿ ಪ್ರಿವ್ಯೂ ಆಫರ್‌ನಲ್ಲಿ ಗ್ರಾಹಕರಿಗೆ ಭರ್ಜರಿ ಕೊಡುಗೆಯನ್ನು ನೀಡುತ್ತಿದ್ದು ಬಳಕೆದಾರರು ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈಗ ಇತರ ಟೆಲಿಕಾಮ್ ಆಪರೇಟರ್‌ಗಳು ಸಂಕಷ್ಟವನ್ನು ಅನುಭವಿಸುತ್ತಿದ್ದು ಬಳಕೆದಾರರನ್ನು ಹಿಡಿದಿಡುವುದಕ್ಕಾಗಿ ಇವರುಗಳು ದರಕಡಿತದಂತಹ ಆಫರ್‌ಗಳನ್ನು ನೀಡುತ್ತಿದ್ದಾರೆ.

ಓದಿರಿ: ಜಿಯೋ ಸಿಮ್‌ನಲ್ಲಿ ಬಳಕೆದಾರರಿಗೆ ತಲೆನೋವಾಗಿರುವ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಪರೇಟರ್‌ಗಳು ನೀಡುತ್ತಿರುವ ಉತ್ತಮ ಆಫರ್‌ಗಳ ವಿವರಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ವ್ಯತ್ಯಾಸಗಳನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ಏರ್‌ಟೆಲ್

ಏರ್‌ಟೆಲ್

ತನ್ನ ಡೇಟಾ ಪ್ಯಾಕ್ ಯೋಜನೆಗಳನ್ನು ಪ್ರಿಪೈಡ್ ಮತ್ತು ಕಾರ್ಪೋರೇಟ್ ಗ್ರಾಹಕರಿಗೆ ಕಡಿತಗೊಳಿಸಿದೆ. ತನ್ನ ಇಂಟರ್ನೆಟ್ ಪ್ರಿಪೈಡ್ ಟಾರಿಫ್ಸ್ ಅನ್ನು 80 ಶೇಕಡಾ ಕಡಿತಗೊಳಿಸಿದ್ದು ತನ್ನ ಕಾರ್ಪೋರೇಟ್ ಗ್ರಾಹಕರಿಗೆ 150 ಶೇಕಡಾ ಇಳಿಕೆ ಮಾಡಿದೆ. 51 ಜಿಬಿಗೆ ಇದನ್ನು ಇಳಿಸಿದ್ದು ನಂತರ 95.5 ಜಿಬಿಗೆ ಮಾಡಿದೆ.

ಏರ್‌ಟೆಲ್ ಆಫರ್

ಏರ್‌ಟೆಲ್ ಆಫರ್

ಪ್ರಸ್ತುತ ಏರ್‌ಟೆಲ್ ಆಫರ್ ಪ್ರಕಾರ 1ಜಿಬಿ 3ಜಿ/4ಜಿ ಡೇಟಾಗಾಗಿ ನೀವು ರೂ 1,498 ಅನ್ನು ನೀಡಿ ಮತ್ತು ರೂ 51 ಕ್ಕೆ 1ಜಿಬಿ 3ಜಿ/4ಜಿ ಅನ್ನು ಗ್ರಾಹಕರು ಬಳಸಿಕೊಳ್ಳಬಹುದಾಗಿದೆ.

ಏರ್‌ಟೆಲ್ ಗ್ರಾಹಕರಾಗಿರಬೇಕು

ಏರ್‌ಟೆಲ್ ಗ್ರಾಹಕರಾಗಿರಬೇಕು

ದೀರ್ಘ ಸಮಯದವರೆಗೆ, 12 ತಿಂಗಳಿಗಾಗಿ ರೂ 2110 ಕ್ಕೆ ನೀವು 12 ಜಿಬಿ 3ಜಿ/4ಜಿ ಡೇಟಾವನ್ನು ಬಳಸಿಕೊಳ್ಳಬಹುದಾಗಿದೆ. ನೀವು ಏರ್‌ಟೆಲ್ ಗ್ರಾಹಕರಾಗಿರಬೇಕು.

ವೊಡಾಫೋನ್ ಆಫರ್

ವೊಡಾಫೋನ್ ಆಫರ್

ವೊಡಾಫೋನ್ ರೂ 297 ಕ್ಕೆ 28 ದಿನಗಳ ಕಾಲ 1ಜಿಬಿ ಡೇಟಾ (3ಜಿ/4ಜಿ) ವನ್ನು ನೀಡುತ್ತಿದೆ ಮತ್ತು 12 ತಿಂಗಳುಗಳಿಗೆ ರೂ 3,861 ಕ್ಕೆ 13 ಜಿಬಿ ಡೇಟಾವನ್ನು ಇದು ನೀಡುತ್ತಿದೆ.

ಸ್ಪರ್ಧಿ

ಸ್ಪರ್ಧಿ

ಬಿಎಸ್‌ಎನ್‌ಎಲ್ ಪಂದ್ಯದಲ್ಲಿ ಸ್ಪರ್ಧಿಸುತ್ತಿದ್ದು ರೂ 198 ಕ್ಕೆ 1ಜಿಬಿ (3ಜಿ ಡೇಟಾ) ವನ್ನು ನೀಡುತ್ತಿದೆ. ಒಂದು ವರ್ಷಕ್ಕೆ ನೀವು 13 ಜಿಬಿಗಾಗಿ ರೂ 2574 ಅನ್ನು ನೀಡಬೇಕಾಗುತ್ತದೆ.

ಐಡಿಯಾ ಸ್ಪರ್ಧೆ

ಐಡಿಯಾ ಸ್ಪರ್ಧೆ

ಐಡಿಯಾ ಸ್ಪರ್ಧಿಗಳೊಂದಿಗೆ ತನ್ನನ್ನು ಪೈಪೋಟಿಗೆ ತೊಡಗಿಸಿಕೊಂಡಿದ್ದು ರೂ 249 ಕ್ಕೆ 1ಜಿಬಿ (3ಜಿ) ಡೇಟಾವನ್ನು ನೀಡುತ್ತದೆ ಅದೂ 28 ದಿನಗಳಿಗಾಗಿ. ಒಂದು ವರ್ಷಕ್ಕೆ ರೂ 3,237 ಕ್ಕೆ 13 ಜಿಬಿ ಡೇಟಾವನ್ನು ಬಳಸಿಕೊಳ್ಳಬಹುದಾಗಿದೆ.

ಅಧಿಕೃತ ಲಾಂಚ್

ಅಧಿಕೃತ ಲಾಂಚ್

ರಿಲಾಯನ್ಸ್ ಜಿಯೋ ಎರಡು ದಿನಗಳಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ, ಸ್ಪರ್ಧೆ ಇನ್ನಷ್ಟು ಬಿಗಿಯಾಗಲಿದ್ದು ಬಳಕೆದಾರರಿಗೆ ಇದು ಲಾಭವನ್ನೇ ಉಂಟುಮಾಡಲಿದೆ.

28 ದಿನಗಳು ಮಾತ್ರವೇ ಲಭ್ಯ

28 ದಿನಗಳು ಮಾತ್ರವೇ ಲಭ್ಯ

ಈ ಆಫರ್‌ಗಳು 28 ದಿನಗಳು ಮಾತ್ರವೇ ಲಭ್ಯವಿರುತ್ತದೆ. 12 ತಿಂಗಳುಗಳ ಒಳಗಾಗಿ ನೀವು 13 ಪ್ಯಾಕ್‌ಗಳನ್ನು ಖರೀದಿಸಿ ವರ್ಷವನ್ನು ಮುಗಿಸಿಕೊಳ್ಳಬಹುದಾಗಿದೆ.

Best Mobiles in India

English summary
we have done a quick comparison of current internet data rates for the prepaid customer. Would be worth your time to check this out.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X