ಜಿಯೋ ಟೆಲಿಕಾಂನಿಂದ ಆರು ಹೊಸ ಜಿಯೋಫೈಬರ್‌ ಪ್ಲಾನ್‌ ಲಾಂಚ್‌!

|

ದೇಶದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಜಿಯೋ ತನ್ನ ವಿಶೇಷ ಪ್ಲಾನ್‌ಗಳ ಮೂಲಕ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ ಈಗಾಗಲೇ ತನ್ನ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಬಳಕೆದಾರರಿಗೆ ಹಲವು ಆಕರ್ಷಕ ಪ್ಲಾನ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ಪೋಸ್ಟ್‌ಪೇಯ್ಡ್ ಚಂದಾದಾರರಿಗೆ ಆರು ಹೊಸ ಜಿಯೋಫೈಬರ್ ಪ್ಲಾನ್‌ಗಳನ್ನು ಘೋಷಿಸಿದೆ. ಇನ್ನು ಈ ಪ್ಲಾನ್‌ಗಳು 399ರೂ.ಗಳಿಂದ ಪ್ರಾರಂಭವಾಗಲಿದ್ದು, 3,999ರೂ ವರೆಗಿನ ಬೆಲೆಯಲ್ಲಿ ಲಭ್ಯವಾಗಲಿದೆ.

ಜಿಯೋ ಟೆಲಿಕಾಂ

ಹೌದು, ಜಿಯೋ ಟೆಲಿಕಾಂ ಹೊಸ ಪೋಸ್ಟ್‌ಪೇಯ್ಡ್‌ ಬಳಕೆದಾರರಿಗೆ ಆರು ಹೊಸ ಜಿಯೋಫೈಬರ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳನ್ನು ಆಯ್ಕೆ ಮಾಡುವ ಬಳಕೆದಾರರು ಉಚಿತ ಸೆಟ್-ಟಾಪ್ ಬಾಕ್ಸ್ ಮತ್ತು ಹೋಮ್‌ ಇನ್‌ಸ್ಟಾಲೇಶನ್‌ ಪಡೆಯಲು ಅರ್ಹರಾಗಿರುತ್ತಾರೆ. ಈ ಪ್ಲಾನ್‌ಗಳು 399ರೂ, 699ರೂ, 999ರೂ, 1499ರೂ, 2499 ಮತ್ತು 3999ರೂ, ಬೆಲೆಯನ್ನು ಹೊಂದಿದೆ. ಇನ್ನು ಈ ಎಲ್ಲಾ ಆರು ಪ್ಲಾನ್‌ಗಳು ಬಳಕೆದಾರರಿಗೆ ಇದೇ ಏಪ್ರಿಲ್ 22 ರಿಂದ ಲಭ್ಯವಿರುತ್ತವೆ. ಇನ್ನುಳಿದಂತೆ ಈ ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಟೆಲಿಕಾಂ

ಜಿಯೋ ಟೆಲಿಕಾಂ ಪರಿಚಯಿಸಿರುವ ಹೊಸ ಆರು ಜಿಯೋ ಫೈಬರ್‌ ಪ್ಲಾನ್‌ಗಳನ್ನು ಆಯ್ಕೆ ಮಾಡುವ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಉಚಿತ ಗೇಟ್‌ವೇ ರೂಟರ್, ಸೆಟ್-ಟಾಪ್ ಬಾಕ್ಸ್ ಮತ್ತು 10,000ರೂ. ಕ್ಕಿಂತ ಹೆಚ್ಚು ಮೌಲ್ಯದ ಇನ್‌ಸ್ಟಾಲೇಶನ್‌ ಅನ್ನು ಪಡೆಯುತ್ತಾರೆ. ಈ ಪ್ಲಾನ್‌ಗಳು ಏಪ್ರಿಲ್ 22 ರಿಂದ ಲಭ್ಯವಿರುತ್ತವೆ. ಪ್ಲಾನ್‌ಗಳು ಲೈವ್ ಆದ ನಂತರ ಅಧಿಕೃತ ವೆಬ್‌ಸೈಟ್ ಮತ್ತು MyJio ಅಪ್ಲಿಕೇಶನ್‌ನಲ್ಲಿ ಪಟ್ಟಿಯಲ್ಲಿ ಲಭ್ಯವಾಗಲಿವೆ.

ಜಿಯೋ ಫೈಬರ್‌ 399ರೂ.ಪ್ಲಾನ್‌

ಜಿಯೋ ಫೈಬರ್‌ 399ರೂ.ಪ್ಲಾನ್‌

ಜಿಯೋ ಫೈಬರ್‌ 399ರೂ. ಪ್ಲಾನ್‌ 30mbps ವೇಗದ ಅನಿಯಮಿತ ಇಂಟರ್‌ನೆಟ್ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100ರೂ. ಹೆಚ್ಚುವರಿ ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಜೊತೆಗೆ ಗ್ರಾಹಕರು ತಿಂಗಳಿಗೆ 200ರೂ. ಹೆಚ್ಚುವರಿ ಪಾವತಿಸಿ ಮಾಡುವ ಮೂಲಕ ಎಂಟರ್‌ಟೈನ್‌ಮೆಂಟ್‌ ಪ್ಲಾನ್‌ನಲ್ಲಿ 14 ಅಪ್ಲಿಕೇಶನ್‌ಗಳಿಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ.

ಜಿಯೋ ಫೈಬರ್‌ 699ರೂ.ಪ್ಲಾನ್‌

ಜಿಯೋ ಫೈಬರ್‌ 699ರೂ.ಪ್ಲಾನ್‌

ಜಿಯೋ ಫೈಬರ್‌ 699ರೂ. ಪ್ಲಾನ್‌ ನಿಮಗೆ 100mbps ವೇಗದ ಅನಿಯಮಿತ ಇಂಟರ್ನೆಟ್ ಪ್ರಯೋಜನ ನೀಡಲಿದೆ. ಹಾಗೆಯೇ ಈ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100ರೂ. ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಮತ್ತು ಪ್ರತಿ ತಿಂಗಳು 200ರೂ. ಹೆಚ್ಚುವರಿ ಪಾವತಿಸುವ ಮೂಲಕ 14 ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಜಿಯೋ ಫೈಬರ್‌ 999ರೂ.ಪ್ಲಾನ್‌

ಜಿಯೋ ಫೈಬರ್‌ 999ರೂ.ಪ್ಲಾನ್‌

ಜಿಯೋ ಫೈಬರ್‌ 999ರೂ.ಪ್ಲಾನ್‌ನಲ್ಲಿ ನೀವು 150mbps ವೇಗದ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಪ್ಲಾನ್‌ ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾದ ಎಲ್ಲಾ ವಿಷಯಗಳಿಗೆ ಪ್ರವೇಶವನ್ನು ನೀಡುತ್ತದೆ.

ಜಿಯೋ ಫೈಬರ್‌ 1499ರೂ. ಪ್ಲಾನ್‌

ಜಿಯೋ ಫೈಬರ್‌ 1499ರೂ. ಪ್ಲಾನ್‌

ಯೋಜನೆಯು 300mbps ವೇಗದೊಂದಿಗೆ ಅನಿಯಮಿತ ಇಂಟರ್ನೆಟ್ ಅನ್ನು ನೀಡುತ್ತದೆ. ಈ ಯೋಜನೆಯು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್ ಬೇಸಿಕ್‌ಗೆ ಪ್ರವೇಶವನ್ನು ನೀಡುತ್ತದೆ, ಇದು ರೂ 199 ಮೌಲ್ಯದ್ದಾಗಿದೆ.

ಜಿಯೋ ಫೈಬರ್‌ 2499ರೂ. ಪ್ಲಾನ್‌

ಜಿಯೋ ಫೈಬರ್‌ 2499ರೂ. ಪ್ಲಾನ್‌

ಜಿಯೋ ಫೈಬರ್‌ 2499ರೂ. ಪ್ಲಾನ್‌ನಲ್ಲಿ 500mbps ವೇಗದ ಅನ್‌ಲಿಮಿಟೆಡ್‌ ಇಂಟರ್‌ನೆಟ್‌ ಪ್ರಯೋಜನ ದೊರೆಯಲಿದೆ. ಜೊತೆಗೆ ಈ ಪ್ಲಾನ್‌ನಲ್ಲಿ ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ನೆಟ್‌ಫ್ಲಿಕ್ಸ್ ಸ್ಟ್ಯಾಂಡರ್ಡ್‌ಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋ ಫೈಬರ್‌

ಇನ್ನು ಈಗಾಗಲೇ ಸಕ್ರಿಯರಾಗಿರುವ ಜಿಯೋ ಫೈಬರ್‌ ಪೋಸ್ಟ್‌ಪೇಯ್ಡ್ ಬಳಕೆದಾರರು MyJio ಅಪ್ಲಿಕೇಶನ್‌ನಲ್ಲಿ ಪಡೆಯಲು ಬಯಸುವ ಎಂಟರ್‌ಟೈನ್‌ಮೆಂಟ್‌ ಪ್ಲಾನ್‌ ಅನ್ನು ಆಯ್ಕೆ ಮಾಡಬಹುದು. ಅಲ್ಲದೆ ಬಳಕೆದಾರರು ಆಯ್ಕೆಮಾಡಿದ ಹೊಸ ಪ್ಲಾನ್‌ಗೆ ರೆಂಟಲ್‌ ಅಡ್ವಾನ್ಸ್‌ ಅನ್ನು ಪಾವತಿಸಬಹುದು. ಆದರೆ, ಜಿಯೋ ಫೈಬರ್‌ ಪ್ರಿಪೇಯ್ಡ್ ಬಳಕೆದಾರರು ಮೊದಲಿಗೆ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಮೈಗ್ರೇಶನ್‌ ಪ್ರಾರಂಭಿಸಬೇಕಾಗುತ್ತದೆ. ನಂತರ, OTP ಅನ್ನು ನಮೂದಿಸುವ ಮೂಲಕ ವಿವರಗಳನ್ನು ಪರಿಶೀಲಿಸಬೇಕು. ನಂತರ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ಎಂಟರ್‌ಟೈನ್‌ಮೆಂಟ್‌ ಪ್ಲಾನ್‌ ಆಯ್ಕೆಮಾಡಿ ಮತ್ತು ಆಯ್ಕೆಮಾಡಿದ ಪ್ಲಾನ್‌ಗೆ ರೆಂಟಲ್‌ ಅಡ್ವಾನ್ಸ್‌ ಅನ್ನು ಪಾವತಿಸಬಹುದು.

Best Mobiles in India

Read more about:
English summary
These new JioFiber plans will be available for existing and new subscribers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X