ಜಿಯೋ 5G ಫೋನ್‌ ಬಗ್ಗೆ ಪ್ರಮುಖ ಘೋಷಣೆ ಮಾಡಿದ ಜಿಯೋ! ಲಾಂಚ್‌ ಯಾವಾಗ?

|

ಭಾರತದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಜಿಯೋ 5G ಫೋನ್‌ ಬಗ್ಗೆ ಮುಖೇಶ್‌ ಅಂಬಾನಿ ಪ್ರಮುಖ ಘೋಷಣೆ ಮಾಡಿದ್ದಾರೆ. ರಿಲಯನ್ಸ್‌ ಕಂಪೆನಿ ತನ್ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ 5G ನೆಟ್‌ವರ್ಕ್‌ ಮಾತ್ರವಲ್ಲದೆ ಜಿಯೋ 5G ಫೋನ್‌ ಬಗ್ಗೆ ಕೂಡ ಘೋಷಣೆ ಮಾಡಲಾಗಿದೆ. ಈ ಮೂಲಕ ಭಾರತದಲ್ಲಿ ಜಿಯೋ 5G ಫೋನ್‌ ಬರುವುದು ಕನ್ಫರ್ಮ್‌ ಆಗಿದೆ. ಆದರೆ ಸದ್ಯದಲ್ಲಿಯೇ ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆಗುವುದಿಲ್ಲ ಎನ್ನಲಾಗಿದೆ.

ಜಿಯೋ

ಹೌದು, ಜಿಯೋ ಮುಖ್ಯಸ್ಥ ಮುಖೇಶ್‌ ಅಂಬಾನಿ ಜಿಯೋ 5G ಫೋನ್‌ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ರಿಲಯನ್ಸ್ ಜಿಯೋ 5G ಫೋನ್‌ಗಳನ್ನು ಪರಿಚಯಿಸಲು ಗೂಗಲ್‌ನೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಆದರೆ ಇದೇ ವರ್ಷ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಏಕೆಂದರೆ ಈ ಸ್ಮಾರ್ಟ್‌ಫೋನ್‌ ಇನ್ನು ಕೂಡ ಅಭಿವೃದ್ದಿ ಹಂತದಲ್ಲಿ ಎಂದು ಹೇಳಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಕುರಿತು ಕೆಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ರಿಲಯನ್ಸ್ ಜಿಯೋ 5G ಫೋನ್‌ ಬಗ್ಗೆ ಮುಖೇಶ್‌ ಅಂಬಾನಿ ಹೇಳಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ 5G ಫೋನ್

ಜಿಯೋ 5G ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಮತ್ತು ಆಂಟಿಫಿಂಗರ್‌ಪ್ರಿಂಟ್ ಲೇಪನವನ್ನು ಹೊಂದಿರುವ 6.5 ಇಂಚಿನ IPS LCD ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಜಿಯೋ ಕಂಪೆನಿ ತನ್ನ ಜಿಯೋ 5G ಫೋನ್‌ಗಾಗಿ ಕ್ವಾಲ್ಕಾಮ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಆದರಿಂದ ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯಲ್ಲಿ ಬರುವುದರಿಂದ ಇದು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 400 ಸರಣಿಯ ಚಿಪ್‌ಸೆಟ್ ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಇದು ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ 4GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ಯ ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ ಎಂದು ಹೇಳಲಾಗಿದೆ. ಜಿಯೋ ಫೋನ್ 5G ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರುವ ಸಾದ್ಯತೆಯಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿರಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಇದು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಸ್ಮಾರ್ಟ್‌ಫೋನ್‌

ಪ್ರಸ್ತುತ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಅನೇಕ 5G ಫೋನ್‌ಗಳು ಸುಮಾರು 20,000ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಆದರೆ, ರಿಲಯನ್ಸ್ ಜಿಯೋ 5G ಫೋನ್ ಅನ್ನು 11,000 ರಿಂದ 15,000 ರೂಪಾಯಿಗಳ ನಡುವೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ.

ಜಿಯೋ

ಇದಲ್ಲದೆ ರಿಲಯನ್ಸ್‌ ಸಂಸ್ಥೆ ತನ್ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಜಿಯೋ 5G, ಜಿಯೋ ಏರ್‌ಫೈಬರ್‌ ಹಾಗೂ ಇತರ ಸೇವೆಗಳನ್ನು ಘೋಷಣೆ ಮಾಡಲಾಗಿದೆ. ಸಭೆಯಲ್ಲಿ ಮಾತನಾಡಿದ ರಿಲಯನ್ಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೆಶಕ ಮುಖೇಶ್‌ ಅಂಬಾನಿ ದೀಪಾವಳಿ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಹಾಗೆಯೇ, ಹೊಸದಾಗಿ ಜಿಯೋ ಏರ್‌ಫೈಬರ್‌ ಡಿವೈಸ್‌ ಬಗ್ಗೆ ಘೋಷಣೆ ಮಾಡಿದ್ದಾರೆ.

ಜಿಯೋ

ರಿಲಯನ್ಸ್‌ ಜಿಯೋ ಹೊಸದಾಗಿ ಘೋಷಣೆ ಮಾಡಿರುವ ಜಿಯೋ ಏರ್‌ಫೈಬರ್‌ ಪ್ಲಗ್-ಅಂಡ್-ಪ್ಲೇ ಡಿವೈಸ್‌ ಅನ್ನು ಬಳಕೆದಾರರಿಗೆ ಯಾವುದೇ ವಾಯರ್‌ಗಳಿಲ್ಲದೆ ಗಾಳಿಯಲ್ಲಿ ಫೈಬರ್ ತರಹದ ವೇಗವನ್ನು ಅನುಭವಿಸುವುದಕ್ಕೆ ಅವಕಾಶ ನೀಡುವ ಡಿವೈಸ್‌ ಆಗಿದೆ. ಈ ಡಿವೈಸ್‌ ಮೂಲಕ ನೀವು ಮನೆ ಅಥವಾ ಕಚೇರಿಗಳಲ್ಲಿ ವೈಯುಕ್ತಿಕ ವೈಫೈ ಹಾಟ್‌ಸ್ಪಾಟ್‌ ಪಡೆದುಕೊಳ್ಳಬಹುದಾಗಿದೆ. ಇದು ಅಲ್ಟ್ರಾ-ಹೈ-ಸ್ಪೀಡ್ ಜಿಯೋ ಟ್ರೂ 5G ಇಂಟರ್ನೆಟ್‌ಗೆ ಸಂಪರ್ಕ ಹೊಂದಿರಲಿದೆ.

Best Mobiles in India

English summary
Reliance Jio has finally confirmed the existence of the 5G smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X