ಮುಂಬೈ ನಗರದಲ್ಲಿ 5G ನೆಟ್‌ವರ್ಕ್‌ ಪ್ರಾಯೋಗಿಕ ಪರೀಕ್ಷೆ ನಡೆಸಿದ ಜಿಯೋ!

|

ದೇಶದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ರಿಲಯನ್ಸ್‌ ಜಿಯೋ 5G ನೆಟ್‌ವರ್ಕ್‌ ವಿಚಾರದಲ್ಲಿ ಮೊದಲಿನಿಂದಲೂ ಸಾಕಷ್ಟು ಉತ್ಸುಕವಾಗಿದೆ. ಅಷ್ಟೇ ಅಲ್ಲ ದೇಶದಲ್ಲಿ ಲಬ್ಯವಿರುವ ಸಂಪನ್ಮೂಲ ಬಳಸಿಕೊಂಡು ಮೇಡ್‌ ಇನ್‌ ಇಂಡಿಯಾ 5G ಪ್ರಾರಂಬಿಸುವುದಾಗಿಯೋ ಈಗಾಗಲೇ ಹೇಳಿಕೊಮಡಿದೆ. ಸದ್ಯ ಇದೀಗ ರಿಲಯನ್ಸ್‌ ಜಿಯೋ ಮುಂಬೈನಲ್ಲಿ 5G ಫೀಲ್ಡ್ ಟ್ರಯಲ್ಸ್ ಪ್ರಾರಂಭಿಸಿದೆ. ಇದಕ್ಕಾಗಿ ಜಿಯೋ ತನ್ನದೇ ಆದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 5G ಉಪಕರಣಗಳನ್ನು ಬಳಸಿದೆ ಅನ್ನೊದು ಗಮನಾರ್ಹವಾಗಿದೆ.

5G

ಹೌದು, ಮೇಡ್‌ ಇನ್‌ ಇಂಡಿಯಾ 5G ಶುರುಮಾಡುವ ಜಿಯೋ ಕನಸ್ಸು ನನಸಾಗುವ ಹಾದಿಯಲ್ಲಿದೆ. ಇದಕ್ಕೆ ಪೂರಕ ಎಂಬಂತೆ ಮುಂಬೈನಲ್ಲಿ 5G ಫಿಲ್ಡ್‌ ಟ್ರಯಲ್ಸ್‌ ಅನ್ನು ಪ್ರಾರಂಭಿಸಿದ. ಅಲ್ಲದೆ, ಕಂಪನಿಯು ಮುಂದಿನ ದಿನಗಳಲ್ಲಿ ಇತರ ವಲಯಗಳಲ್ಲಿ ಪ್ರಯೋಗಗಳನ್ನು ನಡೆಸಲು ಸ್ಯಾಮ್‌ಸಂಗ್, ನೋಕಿಯಾ ಮತ್ತು ಎರಿಕ್ಸನ್ ಜೊತೆ ಪಾಲುದಾರಿಕೆ ಹೊಂದುವ ನಿರೀಕ್ಷೆಯಿದೆ. "ಡಿಒಟಿಯಿಂದ ಟ್ರಯಲ್ ಸ್ಪೆಕ್ಟ್ರಮ್ ಪಡೆದ ನಂತರ ನೆಟ್‌ವರ್ಕ್ ತ್ವರಿತವಾಗಿ ಲೈವ್ ಆಗಿದೆ. ಟ್ರಯಲ್ಸ್‌ ಯಶಸ್ವಿಯಾದರೆ ಶೀಘ್ರದಲ್ಲೇ 5G ನೆಟ್‌ವರ್ಕ್‌ ಭಾರತದಲ್ಲಿ ಲಭ್ಯವಾಗಲಿದೆ. ಹಾಗಾದ್ರೆ ಜಿಯೋ 5G ನೆಟ್‌ವರ್ಕ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ

ಭಾರತದಲ್ಲಿ 5G ನೆಟ್‌ವರ್ಕ್‌ ಪ್ರಾರಂಭವಾಗುವುದು ಯಾವಾಗ ಅನ್ನೊ ಚರ್ಚೆ ಕೆಲವು ವರ್ಷಗಳಿಂದ ಚರ್ಚೆಯಲ್ಲಿದೆ. ಈ ವರ್ಷಾಂತ್ಯದ ವೇಳೆಗೆ 5G ನೆಟ್‌ವರ್ಕ್‌ ಬಂದೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಡಿಒಟಿಯಿಂದ ಟ್ರಯಲ್ ಸ್ಪೆಕ್ಟ್ರಮ್ ಪಡೆದುಕೊಂಡ ನಂತರ ಭಾರತದಲ್ಲಿ 5G ನೆಟ್‌ವರ್ಕ್‌ನ ಟ್ರಯಲ್ಸ್‌ ಪ್ರಮುಖ ವಲಯಗಳಲ್ಲಿ ನಡೆಯುತ್ತಲೇ ಇದೆ. ಈ ವಿಚಾರದಲ್ಲಿ ಜಿಯೋ, ಏರ್‌ಟೆಲ್‌ ಮುಂಚೂಣಿಯಲ್ಲಿವೆ. ಇನ್ನು ಸೈಟ್‌ಗಳ ವಿಷಯದಲ್ಲಿ ಜಿಯೋ 5G ಪ್ರಯೋಗಗಳು ದೊಡ್ಡದಾಗಿರುತ್ತವೆ. ಶೀಘ್ರದಲ್ಲೇ ಜಿಯೋ ಕಂಪನಿಯು ಇತರ ನಗರಗಳು ಅಥವಾ ಪ್ರದೇಶಗಳಲ್ಲಿ 5G ನೆಟ್‌ವರ್ಕ್‌ಗಳನ್ನು ಪರೀಕ್ಷಿಸುತ್ತದೆ ಎಂದು ಇಟಿ ವರದಿ ಮಾಡಿದೆ. ಇದಲ್ಲದೆ, ರಿಲಯನ್ಸ್ ಜಿಯೋ ಗುಜರಾತ್, ಹೈದರಾಬಾದ್ ಮತ್ತು ದೆಹಲಿಯಲ್ಲಿ 5G ಸೇವೆಗಳನ್ನು ಪರೀಕ್ಷಿಸುವ ಸಾಧ್ಯತೆಯಿದೆ.

ಗುರುಗಾಂವ್‌ ನಲ್ಲಿ ಏರ್‌ಟೆಲ್‌ 5G ಟ್ರಯಲ್ಸ್

ಗುರುಗಾಂವ್‌ ನಲ್ಲಿ ಏರ್‌ಟೆಲ್‌ 5G ಟ್ರಯಲ್ಸ್

ಇನ್ನು ಜೂನ್ 13, 2021 ರಂದು ಏರ್‌ಟೆಲ್ ಗುರಗಾಂವ್‌ನಲ್ಲಿ 5G ಪ್ರಯೋಗಗಳನ್ನು ನಡೆಸಿದೆ. ಏರ್‌ಟೆಲ್‌ 5G ಟ್ರಯಲ್ಸ್‌ ನಡೆಸಿದ ನಂತರ ಜಿಯೋ ಕೂಡ ಟ್ರಯಲ್ಸ್‌ ನಡೆಸಿದೆ. ಏರ್‌ಟೆಲ್‌ 3500MHz ಬ್ಯಾಂಡ್‌ನಲ್ಲಿ ನೆಟ್‌ವರ್ಕ್‌ಗಳನ್ನು ಪರೀಕ್ಷಿಸಲು ಟೆಲಿಕಾಂ ಆಪರೇಟರ್ ಎರಿಕ್ಸನ್ ಅವರೊಂದಿಗೆ ಕೈಜೋಡಿಸಿದೆ. ಪ್ರಯೋಗಗಳ ಸಮಯದಲ್ಲಿ ಎರಡೂ ಕಂಪನಿಗಳು 1 ಜಿಬಿಪಿಎಸ್ ವೇಗವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಮುಂಬೈ, ದೆಹಲಿ, ಎನ್‌ಸಿಆರ್, ಕೋಲ್ಕತಾ, ಮತ್ತು ಬೆಂಗಳೂರಿನಲ್ಲಿ ಪ್ರಯೋಗಗಳನ್ನು ನಡೆಸಲು ಏರ್‌ಟೆಲ್ 5G ಸ್ಪೆಕ್ಟ್ರಮ್ ಪಡೆದಿದೆ.

5G

ಇತ್ತೀಚೆಗೆ, ಟೆಲಿಕಾಂ ಸಚಿವಾಲಯವು 5G ನೆಟ್‌ವರ್ಕ್ ಅನ್ನು ಪರೀಕ್ಷಿಸಲು ಮತ್ತು ಹೊಸ ತಂತ್ರಜ್ಞಾನದಲ್ಲಿ ಬಳಕೆಯ ಪ್ರಕರಣಗಳನ್ನು ಅಭಿವೃದ್ಧಿಪಡಿಸಲು 3.5 GHz, 26 GHz, ಮತ್ತು 700 MHz ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಅನ್ನು ನಿಗದಿಪಡಿಸಿದೆ. ರಿಲಯನ್ಸ್ ಜಿಯೋ ತನ್ನ 5G ರೇಡಿಯೋ ಮತ್ತು ಕೋರ್ ಪರಿಹಾರವನ್ನು ಪರೀಕ್ಷಿಸಿದೆ, ಇದು ಟೆಲ್ಕೊಗೆ ಸ್ವಾವಲಂಬಿ ಮತ್ತು ವೆಚ್ಚ-ಪರಿಣಾಮಕಾರಿ ಸೇವೆಗಳನ್ನು ಹೊರತರಲು ಅನುವು ಮಾಡಿಕೊಡುತ್ತದೆ. ಆದರೆ, ಎರಡೂ ಟೆಲಿಕಾಂಗಳು ಗ್ರಾಮೀಣ ಪ್ರದೇಶದಲ್ಲಿ 5G ಪರೀಕ್ಷಿಸುವ ಯೋಜನೆಯನ್ನು ಇನ್ನು ಪ್ರಕಟಿಸಿಲ್ಲ.

ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋಗೆ 5G ಪ್ರಯೋಗಗಳು ಏಕೆ ಮುಖ್ಯ?

ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋಗೆ 5G ಪ್ರಯೋಗಗಳು ಏಕೆ ಮುಖ್ಯ?

ಗಮನಿಸಬೇಕಾದ ಸಂಗತಿಯೆಂದರೆ, ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಂತಹ ಎರಡು ಪ್ರಮುಖ ಟೆಲ್ಕೋಗಳಿಗೆ 5G ಹಂಚಿಕೆ ನಿಜವಾಗಿಯೂ ಮುಖ್ಯವಾಗಿದೆ. ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಅವರು 5G ಎನ್‌ಆರ್ ಪರಿಹಾರಗಳ ಪರೀಕ್ಷೆಯ ಸಮಯದಲ್ಲಿ 1 ಜಿಬಿಪಿಎಸ್ ವೇಗವನ್ನು ಸಾಧಿಸಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಆದಾಗ್ಯೂ, ಭಾರತವು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ನೆಟ್‌ವರ್ಕ್ ಅನ್ನು ಪ್ರಾರಂಭಿಸಿದ ನಂತರ ಟೆಲ್ಕೋಗಳು ಅದೇ ವೇಗವನ್ನು ನೀಡದಿರಬಹುದು ಎಂದು ಸಹ ಹೇಳಲಾಗ್ತಿದೆ.

Best Mobiles in India

English summary
Reliance Jio has started 5G field trials in Mumbai. The telecom operator has used its own indigenously developed 5G equipment.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X