ರಿಲಯನ್ಸ್ ಜಿಯೋ ನೀಡುತ್ತಿದೆ ಬಂಪರ್ ಕೊಡುಗೆ..

By GizBot Bureau
|

ರಿಲಯನ್ಸ್ ಜಿಯೋ ಒಂದಿಲ್ಲೊಂದು ಆಫರ್ ಗಳನ್ನು ನೀಡುವ ಮುಖೇನ ಜನರನ್ನ ತನ್ನತ್ತ ಸೆಳೆಯುತ್ತಲೇ ಇರುತ್ತೆ. ಕಡಿಮೆ ಬೆಲೆ ಎಂಬ ಕಾರಣಕ್ಕೆ ಜನರೂ ಕೂಡ ಜಿಯೋವನ್ನು ಮೆಚ್ಚಿಕೊಂಡಿದ್ದಾರೆ. ಈಗ ಇದರ ಮುಂದುವರಿದ ಭಾಗವಾಗಿ ರಿಲಯನ್ಸ್ ಜಿಯೋ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳ ಮೇಲೆ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ. ಹೌದು, ಗ್ಯಾಲಕ್ಸಿ ಜೆ2(2018) ಮತ್ತು ಗ್ಯಾಲಕ್ಸಿ ಜೆ7 ಡುಯೋ ಗಳು ಕ್ಯಾಷ್ ಬ್ಯಾಕ್ ಆಫರ್ ಮತ್ತು ಇತರೆ ಲಾಭದಾಯಕ ಕೊಡುಗೆಗಳೊಂದಿಗೆ ನಿಮ್ಮ ಕೈ ಸೇರಲಿವೆ. ಹಾಗಾದ್ರೆ ಏನೆಲ್ಲ ಆಫರ್ ಇದೆ ಎಂದು ತಿಳಿಯಲು ಮುಂದೆ ಓದಿ..

ರಿಲಯನ್ಸ್ ಜಿಯೋ ನೀಡುತ್ತಿದೆ ಬಂಪರ್ ಕೊಡುಗೆ..

ಜಿಯೋ ಚಂದಾದಾರರು ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2(2018) ಕೊಂಡಲ್ಲಿ ಅವರಿಗೆ 2,750 ರುಪಾಯಿಯ ಕ್ಯಾಷ್ ಬ್ಯಾಕ್ ಆಫರ್ ಲಭ್ಯವಾಗಲಿದ್ದು, 50 ರುಪಾಯಿಯ 55 ವೋಚರ್ ಗಳ ರೂಪದಲ್ಲಿ ಸಿಗಲಿದೆ.ಅಷ್ಟೇ ಅಲ್ಲದೆ ಡಾಟಾ ಬೆನಿಫಿಟ್ ಗಳೂ ಕೂಡ ಸಿಗಲಿದ್ದು, 4ಜಿ ಡಾಟಾ 100ಜಿಬಿ ಸಿಗಲಿದ್ದು 10 ತಿಂಗಳವರೆಗೆ 10 ಜಿಬಿ ಪ್ರತಿ ತಿಂಗಳಿಗೆ ಬಳಕೆ ಮಾಡಬಹುದಾಗಿದೆ.

ಈ ಆಫರ್ ಸೆಪ್ಟೆಂಬರ್ 30,2018 ರ ವರೆಗೆ ಲಭ್ಯವಿದ್ದು, 198 ರೂಪಾಯಿ ಮತ್ತು 299 ರುಪಾಯಿ ಪ್ರೀಪೇಡ್ ಪ್ಲಾನ್ ನವರು ಇದಕ್ಕೆ ಮಾನ್ಯತೆ ಪಡೆದಿರುತ್ತಾರೆ. ಗ್ಯಾಲಕ್ಸಿ ಜೆ2 ನಂತೆ, ಗ್ಯಾಲಕ್ಸಿ ಜೆ7 ಡುಯೋಗೂ ಕೂಡ 2,750 ರುಪಾಯಿ ಕ್ಯಾಷ್ ಬ್ಯಾಕ್ ಇದ್ದು ಡಬಲ್ ಡಾಟಾ ಬೆನಿಫಿಟ್ ಮತ್ತು ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ರೀಚಾರ್ಜ್ ಮಾಡುವ ಲಾಭಗಳನ್ನು ನೀಡಿದೆ.

ಈ ವರ್ಷದ ಎಫ್ರಿಲ್ ನಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2(2018) ನ್ನು ಬಿಡುಗಡೆಗೊಳಿಸಿದ್ದು 8,190 ರುಪಾಯಿ ಮಾರ್ಕೆಟ್ ಬೆಲೆ ಇದೆ. ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸರ್ ಹೊಂದಿದ್ದು, 2ಜಿಬಿ ರ್ಯಾಮ್ ಮತ್ತು 16 ಜಿಬಿ ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಇದು 5.0” ಸೂಪರ್ AMOLED ಡಿಸ್ಪ್ಲೇ ಹೊಂದಿದ್ದು,2,600mAh ಬ್ಯಾಟರಿ ಹೊಂದಿದೆ.

ಇನ್‌ಸ್ಟಾಗ್ರಾಂನಲ್ಲಿ ಬ್ಯುಸಿನೆಸ್ ಪ್ರೊಫೈಲ್ ಕ್ರಿಯೇಟ್ ಮಾಡುವುದು ಹೇಗೆ?

ಕ್ಯಾಮರಾ ವಿಭಾಗವನ್ನು ಪರಿಗಣಿಸಿದರೆ, ಗ್ಯಾಲಕ್ಸಿ ಜೆ2(2018) 8ಎಂಪಿ ಹಿಂಭಾಗದ ಕ್ಯಾಮರಾ ಮತ್ತು 5ಎಂಪಿ ಮುಂಭಾಗದ ಸೆಲ್ಫೀ ಕ್ಯಾಮರಾ ಕೆಪಾಸಿಟಿಯನ್ನು ಒಳಗೊಂಡಿದೆ. ಎರಡರಲ್ಲೂ LED ಫ್ಲ್ಯಾಶ್ ಇದೆ.

ಅದೇ ರೀತಿ ಗ್ಯಾಲಕ್ಸಿ ಜೆ7 ಡುಯೋದಲ್ಲಿ ಹಿಂಭಾಗದ ಕ್ಯಾಮರಾದಲ್ಲಿ ಡುಯಲ್ ಸೆಟ್ ಅಪ್ ಇದ್ದು,13 ಎಂಪಿ ಪ್ರಮುಖ ಸೆನ್ಸರ್ ಮತ್ತು 5ಎಂಪಿ ಸೆಕೆಂಡರಿ ಸೆನ್ಸರ್ ಇದೆ. ಮುಂಭಾಗದ ಕ್ಯಾಮರಾ ಕೆಪಾಸಿಟಿ 8ಎಂಪಿ ಆಗಿದೆ. ಎರಡೂ ಕ್ಯಾಮರಾವೂ f/1.9 ದ್ಯುತಿರಂಧ್ರ ಹೊಂದಿದ್ದು, LED ಫ್ಲ್ಯಾಶ್ ಹೊಂದಿದೆ. ಇದರಲ್ಲಿ 5.5 ಇಂಚಿನ HD AMOLED ಡಿಸ್ಪ್ಲೇ ಇದೆ.

Riversong Jelly Kids GPS tracker hands-on - GIZBOT KANNADA

ಕ್ಯಾಮರಾ ವಿಭಾಗದಲ್ಲೂ ಕೂಡ ಹಲವು ವೈಶಿಷ್ಟ್ಯತೆಗಳಿವೆ. ಸೆಲ್ಫೀ ಫೋಕಸ್ ನಲ್ಲಿ ಬ್ಯಾಕ್ ಗ್ರೌಂಡ್ ಬ್ಲರ್ ಮಾಡಿ ಫೋಟೋ ತೆಗೆಯಬಹುದು, ಬ್ಯೂಟಿ ಮೋಡ್ ನಲ್ಲಿ ನಿಮ್ಮ ಸೆಲ್ಫೀ ಪರ್ಫೆಕ್ಟ್ ಆಗಿ ಬರಲಿದೆ. ಫೇಸ್ ಅನ್ ಲಾಕ್ ವೈಶಿಷ್ಟ್ಯ ಕೂಡ ಇದೆ ಹಾಗಾಗಿ ನಿಮ್ಮ ಫೋನ್ ಯಾವುದೇ ಕಷ್ಟ ಇಲ್ಲದೆ ಅನ್ ಲಾಕ್ ಆಗುತ್ತೆ. ಇದು Exynos 7 ಸೀರೀಸ್ ಪ್ರೊಸೆಸರ್,4ಜಿಬಿ RAM ಮತ್ತು 32ಜಿಬಿ ಮೆಮೊರಿಯನ್ನು ಹೊಂದಿದ್ದು ಅದನ್ನು 256ಜಿಬಿ ವರೆಗೂ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಬಹುದು.

Most Read Articles
Best Mobiles in India

Read more about:
English summary
The telco is providing instant cash back of Rs 2, 750 with Galaxy J7 Duo and double data benefits that would come with four and more recharges.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more