ಜಿಯೋ ಫೈಬರ್‌ನಿಂದ ವೈಫೈ ಮೆಸ್ ರೂಟರ್ ಬಿಡುಗಡೆ!..ಬೆಲೆ ಜಸ್ಟ್ 2499ರೂ.!

|

ಭಾರತದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಭಿನ್ನ ಸೇವೆಗಳ ಮೂಲಕ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಜಿಯೋ ಇದೀಗ ತನ್ನ ಫೈಬರ್-ಟು-ಹೋಮ್ (FTTH) ಜಿಯೋ ಫೈಬರ್ ಸೇವೆಗಾಗಿ ವೈಫೈ ಮೆಶ್ ರೂಟರ್ ಅನ್ನು ಪರಿಚಯಿಸಿದೆ. ಹೈ ಸ್ಪೀಡ್ ಇಂಟರ್ನೆಟ್ ಬಳಕೆಯಲ್ಲಿ ವೈಫೈ ಮೆಶ್‌ ರೂಟರ್ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ಒದಗಿಸಲು ಸಹಕಾರಿ ಆಗಿದೆ.

ಮೆಶ್ ರೂಟರ್

ಹೌದು, ಜಿಯೋ ಟೆಲಿಕಾಂ ಈಗ ಹೊಸದಾಗಿ ವೈಫೈ ಮೆಶ್ ರೂಟರ್ (Jio WiFi Mesh Router) ಡಿವೈಸ್‌ ಅನ್ನು ಪರಿಚಯಿಸಿದೆ. ಈ ಡಿವೈಸ್‌ ಇಂಟರ್ನೆಟ್ ಸೇವಾ ಪೂರೈಕೆದಾರರು ನೀಡುವ ಡೀಫಾಲ್ಟ್ ರೂಟರ್ ಒದಗಿಸಿದ ವ್ಯಾಪ್ತಿಯನ್ನು ಮೀರಿ ಬಳಕೆದಾರರು ತಮ್ಮ ಮನೆ ಅಥವಾ ಕಚೇರಿಯಲ್ಲಿ ವೈಫೈ ವ್ಯಾಪ್ತಿಯನ್ನು ವಿಸ್ತರಿಸಲು ಜಾಲರಿ/ಮೆಸ್ ಮಾರ್ಗನಿರ್ದೇಶಕಗಳು ಶಕ್ತಗೊಳಿಸುತ್ತವೆ. ಇನ್ನು ಈ ಡಿವೈಸ್‌ ಬೆಲೆಯು 2499ರೂ. ಆಗಿದೆ.

ಫೈಬರ್

ಜಿಯೋ ಫೈಬರ್ ವೆಬ್‌ಸೈಟ್‌ನಲ್ಲಿ ಮೀಸಲಾದ ಸ್ವ-ಆರೈಕೆ ವಿಭಾಗದ ಪ್ರಕಾರ, ಜಿಯೋ ಹೋಮ್ ಗೇಟ್‌ವೇ ಒದಗಿಸಿದ ವೈಫೈ ವ್ಯಾಪ್ತಿಯು ಒಂದೇ ಮಹಡಿಯಲ್ಲಿ 1000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಎಂದು ಜಿಯೋ ಹೈಲೈಟ್ ಮಾಡುತ್ತದೆ. ಇದಲ್ಲದೆ, "ಇತರ ವೈಫೈ ಪ್ರವೇಶ ಬಿಂದುಗಳ ಹಸ್ತಕ್ಷೇಪ" ಮತ್ತು "ಮನೆಯಲ್ಲಿ ಹೋಮ್ ಗೇಟ್‌ವೇ ನಿಯೋಜನೆ" ನಂತಹ "ಹಲವಾರು ಬಾಹ್ಯ ಅಂಶಗಳಿಂದ ಶ್ರೇಣಿಯು ಪರಿಣಾಮ ಬೀರಬಹುದು" ಎಂದು ಕಂಪನಿ ಹೇಳಿದೆ.

ರಿಚಾರ್ಜ್

ಹಾಗೆಯೇ ಜಿಯೋ ಹೊಸದಾಗಿ 499ರೂ. ಮತ್ತು ಜಿಯೋ 777ರೂ. ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಜಿಯೋ 499ರೂ ಪ್ಲ್ಯಾನ್ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ. ಜಿಯೋ ಈ ಪ್ಲಾನ್‌ ರಿಚಾರ್ಜ್ ಮಾಡಿಸುವವರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡುವುದರೊಂದಿಗೆ IPL ಪಂದ್ಯಾವಳಿಗಳು ನಡೆಯುವ 56 ದಿನಗಳ ಕಾಲ ನಿತ್ಯ 1.5GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡಲಿದೆ.

777ರೂ.

ಜಿಯೋ 777ರೂ. ಪ್ಲ್ಯಾನ್ ರಿಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಜಿಯೋ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಜಿಯೋ ಈ ಪ್ಲಾನ್‌ ರಿಚಾರ್ಜ್ ಮಾಡಿಸುವವರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡುವುದರೊಂದಿಗೆ 84 ದಿನಗಳ ಕಾಲ ಬಳಕೆಗೆ 131 GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡುವುದರೊಂದಿಗೆ ಆನ್‌ಲಿಮಿಟೆಡ್‌ ವಾಯ್ಸ್‌ ಕಾಲ್ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶ ನೀಡಲಿದೆ.

ಜಿಯೋದ

ಹಾಗೆಯೇ ಜಿಯೋದ 2599ರೂ ವಾರ್ಷಿಕ ಪ್ಲ್ಯಾನ್ ರಿಚಾರ್ಜ್ ಮಾಡಿಸಿಕೊಂಡವರಿಗೆ ಜಿಯೋ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡಲಿದೆ ಮತ್ತು ಒಂದು ವರ್ಷದ ಅವಧಿಗೆ 740 GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡುವುದರೊಂದಿಗೆ ಆನ್‌ಲಿಮಿಟೆಡ್‌ ವಾಯ್ಸ್‌ ಕಾಲ್ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಿದೆ.

Best Mobiles in India

English summary
Jio WiFi mesh router is priced at a lower tier compared to Airtel Fiber Plus Mesh plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X