Subscribe to Gizbot

ಇದೇ 21ಕ್ಕೆ 500 ರೂಪಾಯಿಗೆ ಜಿಯೋ 4G ಫೋನ್ ಬಿಡುಗಡೆ!..ಪ್ರಮುಖ ಪತ್ರಿಕೆ ವರದಿ!!

Written By:

ಜಿಎಸ್‌ಟಿಯಿಂದಾಗಿ ಜಿಯೋ ಫೀಚರ್ ಫೋನ್ ಬೆಲೆ ಹೆಚ್ಚಾಗುತ್ತಿದೆ ಎನ್ನುವ ವರದಿಗಳ ಬೆನ್ನಲ್ಲೇ ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಶಾಕ್ ಮೇಲೆ ಶಾಕ್ ನೀಡುತ್ತಿರುವ ಜಿಯೋ ಇದೀಗ ಕೇವಲ 500 ರೂಪಾಯಿಗೆ 4G ವೋಲ್ಟ್ ಫೀಚರ್ ಫೋನ್ ಬಿಡುಗಡೆ ಮಾಡುತ್ತಿದೆ ಎಂದು ಪ್ರಮುಖ ಪತ್ರಿಕೆ ಎಕನಾಮಿಕ್ಸ್ ಟೈಮ್ ವರದಿ ಮಾಡಿದೆ.!!

ಹೌದು, ಇದನ್ನು ನೀವು ನಂಬಲೇಬೇಕು. ಇದೇ ತಿಂಗಳಿನಲ್ಲಿ ಜಿಯೋ ಬೇಸಿಕ್ ಫೋನ್ ಲಾಂಚ್ ಎನ್ನಲಾಗುತ್ತದೆ ಎನ್ನುವ ಸುದ್ದಿ ಟೆಲಿಕಾಂ ವಲಯದಲ್ಲಿ ಭಾರಿ ಹರಿದಾಡಿದೆ.! ಜುಲೈ 21ಕ್ಕೆ ಜಿಯೋವಿನ ಫೀಚರ್ ಫೋನ್ ಲಾಂಚ್ ಆಗಲಿದ್ದು, ಈ ಮೊದಲು 100೦ ರೂಪಾಯಿಗೆ ಬಿಡುಗಡೆಯಾಗುತ್ತಿದೆ ಎನ್ನಲಾಗಿದ್ದ ಜಿಯೋ ಫೀಚರ್ ಫೋನ್ ಇದೀಗ ಅರ್ಧಬೆಲೆ ಇಳಿಕೆಯಾಗಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.!!

ಇಂದಿನ ಸುದ್ದಿಯ ಪ್ರಕಾರ 500 ರೂಪಾಯಿಗೆ ಜಿಯೋ 4G ಫೋನ್ ಬಿಡುಗಡೆಯಾಗುತ್ತಿದ್ದು, ಕೇವಲ 500 ರೂಪಾಯಿಗೆ ಜಿಯೋ ಮೊಬೈಲ್ ಬಿಡುಗಡೆಯಾಗುತ್ತಿರುವುದುದೇಕೆ? ಇದರ ಫೀಚರ್ಸ್ ಏನು? ಇದರಿಂದಇತರ ಟೆಲಿಕಾಂಗಳಿಗೆ ಸಂಕಟ ಏಕೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇದೆಲ್ಲಾ ಅಂಬಾನಿ ಆಟ!!

ಇದೆಲ್ಲಾ ಅಂಬಾನಿ ಆಟ!!

ಯಾವುದೇ ಮಾಹಿತಿಯನ್ನು ನೀಡದೇ ಹೊಸ ಹೊಸ ಆಫರ್‌ಗಳನ್ನು ಬಿಡುಗಡೆ ಮಾಡುವ ಅಂಬಾನಿಯ ಸಿಕ್ರೇಟ್ ಹೊರಬೀಳುವುದರಲ್ಲಿಯೇ ಕೆಲಸವು ಆಗಿಹೋಗಿರುತ್ತದೆ.!! ಹಾಗಾಗಿ, ಜುಲೈ 21 ಕ್ಕೆ ಫೋನ್ ಬಿಡುಗಡೆ ಮಾಡುತ್ತಾರೆ ಎನ್ನಲಾದರೂ ಇಲ್ಲಿಯವರೆಗೂ ಈ ಸುದ್ದಿ ಯಾರಿಗೂ ದೊರೆತಿರಲಿಲ್ಲ.!!

500 ರೂಪಾಯಿಗೆ 4G.!!

500 ರೂಪಾಯಿಗೆ 4G.!!

2G ಮತ್ತು 3G ಬಳಕೆದಾರರನ್ನು ಗುರಿಯಾಗಿಸಿಕೊಂಡು ಅಂಬಾನಿ ಈ ಫೋನ್ ಬಿಡುಗಡೆ ಮಾಡುತಿದ್ದಾರೆ ಎನ್ನಲಾಗಿದ್ದು, ಕೇವಲ 500 ರೂಪಾಯಿಗೆ 2G ಯಿಂದ 4Gಗೆ ಜನರನ್ನು ಸೆಳೆಯಲು ಮುಂದಾಗಿದ್ದಾರೆ. ಇದರಿಂದ ಹೆಚ್ಚು ಜನರು ಜಿಯೋಗೆ ಬರಲು ಮುಂದಾಗುವ ನಿರೀಕ್ಷೆ ಅಂಬಾನಿಯ ಬಳಿ ಇದೆ.!!

500 ರೂಪಾಯಿಗೆ ಜಿಯೋ 4G ಫೋನ್!!

500 ರೂಪಾಯಿಗೆ ಜಿಯೋ 4G ಫೋನ್!!

ಇಂದು ಹೊರಬಿದ್ದಿರುವ ಮಾಹಿತಿಯಂತೆ ಜಿಯೋ ಕೇವಲ 500 ರೂಪಾಯಿಗೆ ಫೋನ್ ಬಿಡುಗಡೆ ಮಾಡುತ್ತಿದೆ ಎನ್ನುವ ಸುದ್ದಿಯನ್ನು ಪ್ರಮುಖ ಪತ್ರಿಕೆ ವರದಿ ಮಾಡಿದ್ದು ನಮಗೆ ಶಾಕ್ ಆಗಿತ್ತು. ನೆನ್ನೆಯಷ್ಟೆ ಜಿಯೋ ಫೀಚರ್ ಫೋನ್ ಬೆಲೆ ಹೆಚ್ಚಾಗುತ್ತದೆ ಎನ್ನುವ ವರದಿಯನ್ನು ನಾವೇ ಪ್ರಕಟಿಸಿದ್ದೇವೆ.!!.!!

ಟೆಲಿಕಾಂಗೆ ಸಂಕಟ.!!

ಟೆಲಿಕಾಂಗೆ ಸಂಕಟ.!!

ಈಗಾಗಲೇ ಜಿಯೋಯಿಂದಾಗಿ 4G ಗ್ರಾಹಕರನ್ನು ಕಳೆದುಕೊಂಡಿರುವ ಇತರ ಎಲ್ಲಾ ಟೆಲಿಕಾಂಗಳು ಇದೀಗ 2G ಮತ್ತು 3G ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಗೆ ಸಿಲುಕಲಿವೆ. ಕೇವಲ 500 ರೂಪಾಯಿಗೆ 4G ವೊಲ್ಟ್ ಫೋನ್ ಬಂದರೆ ಏನಾಗಬಹುದು ಎಂದು ಯೋಚಿಸಿ.!!

ಫೋನ್ ಹೇಗಿರಲಿದೆ.!!

ಫೋನ್ ಹೇಗಿರಲಿದೆ.!!

500 ರೂಪಾಯಿಗೆ ಜಿಯೋ ನೀಡುವ ಫೋನ್ ಯಾವುದೇ ಡೇಟಾ ಕಾರ್ಯ ನಡೆಸುವುದಿಲ್ಲ. ಆದರೆ, ಜಿಯೋ ಕಾಲ್ ಮತ್ತು ಎಸ್‌ಎಮ್‌ಎಸ್ ಬಳಕೆಗೆ ಈ ಫೋನ್ ಮುಕ್ತವಾಗಿದ್ದು, ಇತರ ಫೀಚರ್‌ಗಳಿಂದ ಇದು ಹೊರತಾಗಿದೆ. 500 ರೂಪಾಯಿಗೆ ಇಷ್ಟು ಸಿಕ್ಕರೆ ಸಾಕಲ್ವ!!

ಓದಿರಿ:ಬ್ಯಾಟರಿ ತೆಗೆಯಲಾರದ ಸ್ಮಾರ್ಟ್‌ಫೋನ್‌ ನೀರಿಗೆ ಬಿದ್ದರೆ ರಕ್ಷಣೆ ಸಾಧ್ಯವೇ? ಇಲ್ಲಿದೆ ಉತ್ತರ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The launch would follow Jio’s likely announcement of a new tariff plan with aggressive price-points over the next couple of days with its 84-day Dhan Dhana Dhan offer.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot