Subscribe to Gizbot

ಶೀಘ್ರವೇ ರಿಲಯನ್ಸ್ ಜಿಯೋ ದಿಂದ 4G VoLTE ಫೀಚರ್ ಫೋನ್ ಬಿಡುಗಡೆ..!!

Written By: Lekhaka

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ 4G VoLET ಫೀಚರ್ ಫೋನ್ ಅನ್ನು ಜುಲೈ 21 ರಂದು ನಡೆಯಲಿರುವ ರಿಲಿಯನ್ಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಡುಗಡೆ ಗೊಳಿಸಲಿದೆ ಎನ್ನಲಾಗಿದೆ. ಇದರೊಂದಿಗೆ ಹೊಸ ಆಫರ್ ಸಹ ಘೋಷಣೆಯಾಗುವ ಸಾಧ್ಯತೆ ಇದೆ.

ಶೀಘ್ರವೇ ರಿಲಯನ್ಸ್ ಜಿಯೋ ದಿಂದ 4G VoLTE ಫೀಚರ್ ಫೋನ್ ಬಿಡುಗಡೆ..!!

ಈ ಕುರಿತು ಮಾಹಿತಿ ನೀಡಿರುವ ET ಜುಲೈ 21 ರಂದು ನಡೆಯಲಿರುವ ರಿಲಯನ್ಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ 4G VoLET ಫೀಚರ್ ಫೋನ್ ಮತ್ತು ಜಿಯೋ ಟಾರಿಫ್ ಪ್ಲಾನ್ ವೊಂದನ್ನು ಬಿಡುಗಡೆ ಮಾಡಲಿದೆ. ಕಾರಣ ಇದೇ ತಿಂಗಳಿನಲ್ಲಿ ಧನ್ ಧನಾ ಧನ್ ಆಫರ್ ಕೊನೆಯಾಗಲಿದೆ ಎನ್ನಲಾಗಿದೆ.

ಇದಲ್ಲದೇ ರಿಲಯನ್ಸ್ ಬಿಡುಗಡೆ ಮಾಡಲಿರುವ ಈ 4G VoLET ಫೀಚರ್ ಫೋನ್ ನ ಬೆಲೆ ಕೇವಲ ರೂ.500 ಆಗಿರಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಈ ಫೋನಿನಲ್ಲಿ ಕ್ವಾಲ್ಕಮ್ ಮತ್ತು ಸೆರೆಡ್ರಮ್ ಚಿಪ್ ಸೆಟ್ ಇರಲಿದೆ ಎನ್ನಲಾಗಿದೆ.

2.4 ಇಂಚಿನ ಪರದೆ ಈ ಫೋನಿನಲ್ಲಿದ್ದು, 512 MB RAM ಇದರಲ್ಲಿದೆ. 4GB ಮೆಮೊರಿ ಮತ್ತು ಕಾರ್ಡ್ ಹಾಕಿಕೊಳ್ಳುವ ಮೂಲಕ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಅವಕಾಶವು ಈ ಫೋನಿನಲ್ಲಿರಲಿದೆ. ಇಷ್ಟು ಮಾತ್ರವಲ್ಲದೇ ಹಿಂಭಾಗದಲ್ಲಿ 2 MP ಕ್ಯಾಮೆರಾ ಹಾಗೂ ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ VGA ಕ್ಯಾಮೆರಾವನ್ನು ಹೊಂದಿದೆ.

ರಿಲಯನ್ಸ್ ಜಿಯೋ ಮೇ ತಿಂಗಳಿನಲ್ಲಿ ಅತೀ ವೇಗದ 4G ನೆಟ್ ವರ್ಕ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಇದಲ್ಲದೇ ಜಿಯೋ 108.9 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು ಇದರಲ್ಲಿ 72 ಮಿಲಿಯನ್ ಮಂದಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.

Read more about:
English summary
Mukesh Ambani- owned Reliance Jio is likely to launch its 4G VoLTE enabled feature phone at the Annual General Meeting on July 21, along with new tariff plans.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot