Subscribe to Gizbot

ಈ ಸ್ಮಾರ್ಟ್‌ಫೋನ್ ಲಾಂಚ್ ಆದರೆ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಕಥೆ ಮುಗಿದ ಹಾಗೆ..!

Written By:

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಚೀನಾ ಮೂಲದ ಕಂಪನಿಯ ಆಗಮನವಾಗಿದ್ದು, ಈ ಫೋನಿನ ಹವಾ ನೋಡಿದರೆ ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಸ್ಮಾರ್ಟ್‌ಫೋನ್‌ ಕಂಪನಿಗಳಿಗೂ ಭರ್ಜರಿ ಸ್ಪರ್ಧೆ ನೀಡುವಂತೆ ಕಾಣುತ್ತಿದೆ. ಭಾರತದಲ್ಲಿರುವ ಇತರೇ ಚೀನಾ ಕಂಪನಿಗಳೆ ಭಾರೀ ಹೊಡೆತವನ್ನು ತಿನ್ನಲಿವೆ ಎನ್ನಲಾಗಿದೆ.

ಈ ಸ್ಮಾರ್ಟ್‌ಫೋನ್ ಲಾಂಚ್ ಆದರೆ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಕಥೆ ಮುಗಿದ ಹಾಗೆ..

ಓದಿರಿ: ಇದು ಅಧಿಕೃತ: ಜಿಯೋ ಫೋನಿನಲ್ಲಿದೆ ಫೇಸ್‌ಬುಕ್ ಇದೆ.!

ಟೆನ್ಆರ್ ಎನ್ನುವ ಕಂಪನಿಯೂ ಭಾರತದಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ನಿಂತಿದ್ದು, ಇತರೇ ಚೀನಾ ಕಂಪನಿಗಳಂತೆ ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆಗಳನ್ನು ಹೊಂದಿರುವ ಫೋನ್ ಅನ್ನು ಗ್ರಾಹಕರ ಕೈಗೆ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆನ್ಆರ್ ನಿಂದ ಎರಡು ಫೋನ್:

ಟೆನ್ಆರ್ ನಿಂದ ಎರಡು ಫೋನ್:

ಟೆನ್ಆರ್ E ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ಲಭ್ಯವಿದೆ. ಒಂದು 2GB RAM ಮತ್ತು 16GB ಇಂಟರ್ನಲ್ ಮೆಮೊರಿಯೊಂದಿಗೆ, ಮತ್ತೊಂದು 3GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಈ ಪೋನ್ ಶಿಯೋಮಿ ನೋಟ್ 4 ಮತ್ತು ಯುರೇಕಾ ಫೋನ್‌ಗೆ ಹೆಚ್ಚಿನ ಸ್ಪರ್ಧೆಯನ್ನು ನೀಡಲಿದೆ.

5.5 ಇಂಚಿನ FHD ಡಿಸ್‌ಪ್ಲೇ:

5.5 ಇಂಚಿನ FHD ಡಿಸ್‌ಪ್ಲೇ:

ಇಷ್ಟು ಕಡಿಮೆ ಬೆಲೆಗೆ FHD ಗುಣಮಟ್ಟದ ಡಿಸ್‌ಪ್ಲೇಯನ್ನು ಯಾವುದೇ ಫೋನಿನಲ್ಲಿಯೂ ಕಾಣಲು ಸಾಧ್ಯವಿಲ್ಲ. ಅಲ್ಲದೇ ಈ ಫೋನಿನಲ್ಲಿ ವೇಗದ ಕಾರ್ಯಚರಣೆಗಾಗಿ ಸ್ನಾಪ್‌ಡ್ರಾಗನ್ 430 ಚಿಪ್‌ಸೆಟ್ ಸಹ ಅಳವಡಿಸಾಗಿದೆ.

ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

ಇದಲ್ಲದೇ ಈ ಫೋನ್ ಆಂಡ್ರಾಯ್ಡ್ ನ್ಯಾಗಾ ದಲ್ಲಿ ಕಾರ್ಯನಿರ್ವಹಿಸಲಿದ್ದು, ಶೀಘ್ರವೇ ಆಂಡ್ರಾಯ್ಡ್ ಓರಿಯೋ ಆಪ್‌ಡೇಟ್ ಸಹ ದೊರೆಯಲಿದೆ ಎನ್ನಲಾಗಿದೆ.

13MP/5MP ಕ್ಯಾಮೆರಾ:

13MP/5MP ಕ್ಯಾಮೆರಾ:

ಇದಲ್ಲದೇ ಟೆನ್ಆರ್ E ಸ್ಮಾರ್ಟ್‌ಫೋನ್‌ನಲ್ಲಿ 13 MP ಹಿಂಭಾಗದ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾ ನೀಡಲಾಗಿದೆ. ಇದಲ್ಲದೇ ಉತ್ತಮ ಬ್ಯಾಟರಿ ಬ್ಯಾಕಪ್ ಗಾಗಿ 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದೆ:

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದೆ:

ಟೆನ್ಆರ್ E ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ನೀಡಲಾಗಿದ್ದು, ಇದು ವೇಗವಾಗಿ ಸ್ಕ್ರಿನ್ ಆನ್‌ಲಾಕ್ ಮಾಡಲಿದೆ ಎನ್ನಲಾಗಿದೆ.

RedMi Note 4 Features - ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಅಮೆಜಾನ್ ಆಯ್ಕೆಗಳು:

ಅಮೆಜಾನ್ ಆಯ್ಕೆಗಳು:

ಈ ಫೋನ್ ಅಮೆಜಾನ್ ನಲ್ಲಿ ಮಾತ್ರ ದೊರೆಯಲಿದ್ದು ಅದಕ್ಕಾಗಿ ಈ ಫೋನಿನಲ್ಲಿ ಅಮೆಜಾನ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಅಮೆಜಾನ್ ಕಿಂಡ್ಲೆ ಆಪ್‌ಗಳು ಪ್ರೀ ಲೋಡೆಡ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Another month, another Chinese brand entered the Indian market. 10.or (pronounced as (Tenor) owned by a Chinese firm Huaqin Technology has announced 10.or E smartphone, which will be exclusively available on Amazon India. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot