ಜಿಯೋ ಹೇಳಿದ ಈ 12 ಸಂಗತಿಗಳು ಆಶ್ಚರ್ಯ ಮೂಡಿಸುತ್ತವೆ!!

|

ಜಿಯೋ, ಭಾರತದ ಟೆಲಿಕಾಂ ಪ್ರಪಂಚದಲ್ಲಿ ಅಸಾಮಾನ್ಯ ಸಾಮರ್ಥ್ಯವಿರುವ ಹಾಗೂ ದೇಶವ್ಯಾಪಿ ಪ್ರಸಾರವುಳ್ಳ ಡಿಜಿಟಲ್ ಸಂಪರ್ಕ ವೇದಿಕೆಯನ್ನು ಈಗಾಗಲೇ ನಿರ್ಮಾಣಮಾಡಿದೆ. ಇದರಿಂದ ರಿಲಯನ್ಸ್ ಜಿಯೋ ಭವಿಷ್ಯದಲ್ಲಿ ತಂತ್ರಜ್ಞಾನ ವೇದಿಕೆಯ ಕಂಪೆನಿಯಾಗುವ ನಿಟ್ಟಿನಲ್ಲಿ ತನ್ನನ್ನು ಪುನರ್ ರೂಪಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿದಂತಾಗಿದೆ. ಜಿಯೋ ಪರಿಮಿತಿಯಿಲ್ಲದ, ಸಾಹಸಶೀಲ ಬೆಳವಣಿಗೆಯ ಸಂಭ್ರಮದ ಭವಿಷ್ಯದತ್ತ ಹೊರಡಲು ಸನ್ನದ್ಧವಾಗಿದೆ.

ಹೌದು, ಡಿಜಿಟಲ್ ರಂಗಗಳು ನವಯುಗದ ಕಾರ್ಖಾನೆಗಳಾಗಿವೆ. ಸೇವಾ ಪೂರೈಕೆದಾರರನಾಗಿ ಬ್ರಾಡ್ ಬ್ಯಾಂಡ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಜಗತ್ತಿನ ಮೊದಲ ಐದು ಅಗ್ರದೇಶಗಳಲ್ಲಿ ಭಾರತವನ್ನು ಒಂದಾಗಿಸುವುದಕ್ಕೆ ಜಿಯೋ ಕಟಿಬದ್ಧವಾಗಿದೆ. ಈಗಾಗಲೇ ಭವಿಷ್ಯಕ್ಕೆ ಸೂಕ್ತವಾದ ಜಾಲಗಳನ್ನು ನಿರ್ಮಿಸಿರುವ ಜಿಯೋ ಮುಂಬರುವ ದಶಕಗಳಲ್ಲಿ ಅತ್ಯಾಧುನಿಕ ತಾಂತ್ರಿಕತೆಯನ್ನು ತನ್ನ ಗ್ರಾಹಕಸಮೂಹಕ್ಕೆ ಒದಗಿಸಲು ಸಮರ್ಥವಾಗಿದೆ.

ಜಿಯೋ ಹೇಳಿದ ಈ 12 ಸಂಗತಿಗಳು ಆಶ್ಚರ್ಯ ಮೂಡಿಸುತ್ತವೆ!!

ಗ್ರಾಹಕರಿಗೆ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ನೀಡಬೇಕೆಂಬ ನಿರಂತರ ಹಂಬಲದೊಡನೆ, ಜಿಯೋ ತನ್ನ ಕೊಡುಗೆಗಳ ಮಾಲಿಕೆಯನ್ನು ಹೆಚ್ಚಿಸುತ್ತಲೇ ಬಂದಿದೆ. ಜಿಯೋ ಪೋಷಕ ಸಂಸ್ಥೆಯು ಇಂಬೈಬ್ ಎಂಬ ವಿಶಿಷ್ಟ ಅಂಕಿಅಂಶಗಳ ಆಧಾರಿತ ಶೈಕ್ಷಣಿಕ ಸೇವಾವೇದಿಕೆಯಲ್ಲಿ ಅಧಿಕಪಾಲನ್ನು ಗಳಿಸಿಕೊಂದ್ದು, ಜಿಯೋ ದ ಸ್ವಂತ ಆಪ್ ಗಳೂ ಹೆಚ್ಚಿನ ಜನಪ್ರಿಯತೆ ಪಡೆಯತೊಡಗಿವೆ. ಇಲ್ಲಿಯವರೆಗಿನ ಜಿಯೋ ಕಾರ್ಯಾಚರಣೆಯ ಮುಖ್ಯಾಂಶಗಳನ್ನು ಅಂಕಿ ಅಂಶಗಳಲ್ಲಿ ನಾವು ತಿಳಿದುಕೊಂಡರೆ, ಅದು ನಮಗೆ ಸ್ಪಷ್ಟವಾಗುತ್ತದೆ.

Get 1GB free Jio 4G data with Cadbury Dairy Milk - KANNADA

ಪ್ರಪಂಚದಅತಿದೊಡ್ಡ ಸಂಪೂರ್ಣ ಐಪಿ ಜಾಲ:

ಅತ್ಯುನ್ನತ ತಂತ್ರಜ್ಞಾನ ಬಳಸುವ ಸಂಪೂರ್ಣ ಐಪಿ ಜಾಲದ ಬೆಂಬಲ, 800 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್ ಹಾಗೂ 2300 ಮೆಗಾಹರ್ಟ್ಸ್ ಬ್ಯಾಂಡುಗಳನ್ನು ವ್ಯಾಪಿಸಿರುವ ಎಲ್‌ಟಿಇ ತರಂಗಗುಚ್ಛ (ಸ್ಪೆಕ್ಟ್ರಂ) ಹಾಗೂ ಅತಿದೊಡ್ಡ ಫೈಬರ್ ಹೆಜ್ಜೆಗುರುತಿನೊಡನೆ ಜಿಯೋ ಭಾರತದ ಬೇರೆಲ್ಲ ಟೆಲಿಕಾಂ ಸಂಸ್ಥೆಗಳಿಗಿಂತ ದೊಡ್ಡದಾದ ಎಲ್‌ಟಿಇ ಪ್ರಸಾರವ್ಯಾಪ್ತಿಯನ್ನು ಹೊಂದಿದೆ. ಭಾರತದಲ್ಲಿ ಉಚಿತ ಕರೆಗಳ ಕನಸು ನನಸಾಗಿದೆ. ಜಿಯೋ ತನ್ನ ಎಲ್ಲ ಟ್ಯಾರಿಫ್ ಪ್ಲಾನುಗಳ ಜೊತೆಯಲ್ಲಿ ಅಪರಿಮಿತ ಉಚಿತ ಕರೆಗಳನ್ನು ನೀಡಿದೆ.

ಭಾರತಕ್ಕೆ ಈಗ ಮೊದಲ ಸ್ಥಾನ
ಟೆಲಿಕಾಂ ಮಾರುಕಟ್ಟೆ ಬಹಳ ಕ್ಷಿಪ್ರವಾಗಿ ಡೇಟಾದತ್ತ ಸಾಗಿದೆ ಹಾಗೂ ಮತ್ತೊಮ್ಮೆ ಗ್ರಾಹಕರಿಗೆ ಜಯ ದೊರೆತಿದೆ. ಭಾರತದಲ್ಲಿ ಮೊಬೈಲ್ ಡೇಟಾ ಬಳಕೆಯ ಪ್ರಮಾಣ ತಿಂಗಳಿಗೆ 20 ಕೋಟಿ ಜಿಬಿಯಿಂದ ಸುಮಾರು 370 ಕೋಟಿ ಜಿಬಿಗೆ ತಲುಪಿದೆ. ಈ ಪೈಕಿ ಜಿಯೋ ಗ್ರಾಹಕರೇ ಸುಮಾರು 240 ಕೋಟಿ ಜಿಬಿ ಡೇಟಾ ಬಳಸುತ್ತಿದ್ದಾರೆ. ಮೊಬೈಲ್ ಡೇಟಾ ಬಳಸುವ ರಾಷ್ಟ್ರಗಳ ಸಾಲಿನಲ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಈಗ ಮೊದಲ ಸ್ಥಾನಕ್ಕೆ ತಲುಪಿದೆ. ಪ್ರತಿ ತಿಂಗಳೂ 100 ಕೋಟಿ ಜಿಬಿಗಿಂತ ಹೆಚ್ಚು ಡೇಟಾ ನಿರ್ವಹಿಸುವ ಜಿಯೋ, ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ವಿಶ್ವದ ಮೊದಲ ಹಾಗೂ ಏಕೈಕ ಎಕ್ಸಾಬೈಟ್ ಟೆಲಿಕಾಂ ಜಾಲವಾಗಿ ಬೆಳೆದಿದೆ.

ನವಯುಗವನ್ನು ಸಾರಿದ ಜಿಯೋಫೋನ್:
ಫೀಚರ್‌ಗಳನ್ನು ಅಡಕಗೊಳಿಸಿದ ಫೋನ್‌ಗಳ ಬಳಕೆದಾರರಿಗೆ ಭಾರತದ ಹೊಸ ಸ್ಮಾರ್ಟ್ ಫೋನ್ ಎನಿಸಿದ ಜಿಯೋ ಫೋನ್ ಹೊಸದೊಂದು ಯುಗದ ಪ್ರಾರಂಭವನ್ನು ಸಾರುತ್ತಿದೆ. 2018 ಜೂನ್ 30ರ ವೇಳೆಗೆ, 25 ಮಿಲಿಯನ್ ಫೋನುಗಳನ್ನು ಮಾರಾಟಮಾಡಿರುವ ದಾಖಲೆ ಹೊಂದಿರುವ ಜಿಯೋ ಫೋನ್ ಮುಂದಿನ ದಿನಗಳಲ್ಲಿ ಅತಿ ಅಲ್ಪಾವಧಿಯಲ್ಲಿ 100 ಮಿಲಿಯ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ.

ರೂ. 15ಕ್ಕಿಂತ ಕಡಿಮೆ
ಪ್ರತಿ ಜಿಬಿಗೆ ರೂ. 250 - ರೂ. 10,000 ಇದ್ದ ದರಗಳು, ಜಿಯೋ ಪ್ರಾರಂಭದ ನಂತರ ಪ್ರತಿ ಜಿಬಿಗೆ ರೂ. 15ಕ್ಕಿಂತ ಕಡಿಮೆಯಾಗಿದ್ದು ದರಪಟ್ಟಿಗಳು ಜನಸಾಮಾನ್ಯರ ಕೈಗೆಟುಕುವ ಮಟ್ಟಕ್ಕೆ ತಲುಪಿವೆ. ಡೇಟಾ ಪ್ರಜಾತಾಂತ್ರೀಕರಣಕ್ಕೆ ದಾರಿತೋರಿದ ಜಿಯೋ, ವಿವಿಧ ಪ್ಲಾನುಗಳ ಮೂಲಕ ಜಿಯೋ ಗ್ರಾಹಕರು ಇನ್ನೂ ಕಡಿಮೆ ಶುಲ್ಕ ಪಾವತಿಸುತ್ತಿದ್ದಾರೆ.ಭಾರತದಲ್ಲಿ ಟೆಲಿಕಾಂ ಜಾಲಗಳ ಗುಣಮಟ್ಟದ ಮೇಲ್ವಿಚಾರಣೆಯನ್ನು ಅಧಿಕೃತವಾಗಿ ನೋಡಿಕೊಳ್ಳುವ ಟ್ರಾಯ್ ಸ್ಪೀಡ್ಟೆಸ್ಟ್ ಪೋರ್ಟಲ್ ಜಿಯೋ ಅನ್ನು 4ಜಿ ಜಾಲಗಳ ವ್ಯಾಪ್ತಿ, ಬಳಕೆ ಹಾಗೂ ಡೇಟಾ ವೇಗಗಳಲ್ಲಿ ಅಗ್ರಗಣ್ಯವೆಂದು ಸತತವಾಗಿ ಗುರುತಿಸಿದೆ.

ಟ್ಯಾರಿಫ್ ಸರಳೀಕರಣ:
ಜಿಯೋ ಬರುವ ಮೊದಲು ಮಾರುಕಟ್ಟೆಯಲ್ಲಿ ಸುಮಾರು 22,000 ಪ್ಲಾನುಗಳಿದ್ದವು. ಜಿಯೋ ಬಂದ ನಂತರ ಮೊಬೈಲ್ ಸೇವಾ ಸಂಸ್ಥೆಗಳು ಜಿಯೋ ಮಾದರಿಯನ್ನು ಅನುಸರಿಸುವ ಮೂಲಕ ಪ್ಲಾನುಗಳ ಸಂಖ್ಯೆಯನ್ನು ಕಡಿಮೆಮಾಡಲು ಪ್ರಯತ್ನಿಸುತ್ತಿವೆ. ಕೆಲವೇ ಸರಳ ಪ್ಲಾನುಗಳನ್ನು ಪರಿಚಯಿಸಿರುವ ಜಿಯೋ ಏಕಕಾಲದಲ್ಲಿ ಕೇವಲ ಒಂದೆರಡು ಪ್ಲಾನುಗಳನ್ನಷ್ಟೇ ಪ್ರಮುಖವೆಂದು ಪರಿಗಣಿಸುತ್ತಿದೆ. ಇದರಿಂದಾಗಿ ಗ್ರಾಹಕರ ಬದುಕು ಬಹಳ ಸರಳವಾಗಿದೆ ಹಾಗೂ ತಮಗಾಗಿ ಅತ್ಯುತ್ತಮ ಕೊಡುಗೆಯನ್ನು ಸ್ವತಃ ಅವರೇ ಆಯ್ದುಕೊಳ್ಳುವುದು ಸಾಧ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

1

ಭಾರತದ ಅತಿದೊಡ್ಡ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಿಸ್ತಂತು ಡೇಟಾ ಚಂದಾದಾರರ (215.3 ಮಿಲಿಯನ್) ಜಾಲವನ್ನು ಜಿಯೋ ಹೊಂದಿದೆ.

2

ಪ್ರತಿ ಗ್ರಾಹಕನಿಗೆ ಪ್ರತಿ ತಿಂಗಳೂ 10.6 ಜಿಬಿಯಂತೆ ಎರಡನೇ ತ್ರೈಮಾಸಿಕದಲ್ಲಿ (Q2) ಒಟ್ಟು 642 ಕೋಟಿ ಜಿಬಿ ಡೇಟಾ ಬಳಕೆಯಾಗಿದೆ.

3

ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಉದ್ದಿಮೆಯ ಒಟ್ಟು 4ಜಿ ಡೇಟಾ ಟ್ರಾಫಿಕ್‌ನ ಶೇ. 76ರಷ್ಟನ್ನು ಜಿಯೋ ಜಾಲ ನಿರ್ವಹಿಸಿದೆ.

4

ಎರಡನೇ ತ್ರೈಮಾಸಿಕದಲ್ಲಿ ಪ್ರತಿ ತಿಂಗಳೂ ಪ್ರತಿ ಗ್ರಾಹಕನಿಗೆ 744 ನಿಮಿಷದಂತೆ ಒಟ್ಟು 44,871 ಕೋಟಿ ನಿಮಿಷದಷ್ಟು ವಿಒಎಲ್‌ಟಿಇ ಟ್ರಾಫಿಕ್ ಇದೆ.

5

ತಿಂಗಳಿಗೆ 340 ಕೋಟಿ ಗಂಟೆಗಳಿಗೂ ಹೆಚ್ಚು ಪ್ರಮಾಣದಲ್ಲಿ ಉನ್ನತ ಗುಣಮಟ್ಟದ ವೀಡಿಯೋ ಬಳಸುವ ಅತಿದೊಡ್ಡ ಜಾಲ ಜಿಯೋವಾಗಿದೆ.

6

ಜಿಯೋ ಬಳಸುವ ಪ್ರತಿ ಗ್ರಾಹಕನಿಂದ ಪ್ರತಿ ತಿಂಗಳೂ 15.4 ಗಂಟೆಗಳಷ್ಟು ವೀಡಿಯೋ ವೀಕ್ಷಣೆಯಾಗುತ್ತಿದೆ.

7

ಟೆಲಿಕಾಂನಲ್ಲೇ ಅತಿಹೆಚ್ಚಿನ ಎಆರ್‌ಪಿಯನ್ನು ಜಿಯೋ ಗಳಿಸಿದೆ (ಪ್ರತಿ ಗ್ರಾಹಕನಿಂದ ಸರಾಸರಿ ಆದಾಯ), ಪ್ರತಿ ತಿಂಗಳು ರೂ. 134.5 ರಷ್ಟು ಆದಾಯವನ್ನು ಪಡೆದುಕೊಂಡಿದೆ.

8

ಅತ್ಯಂತ ಕಡಿಮೆ ಪ್ರಮಾಣದ ಕಾಲ್ ಡ್ರಾಪ್ ಅಮಸ್ಯೆಯನ್ನು ಜಿಯೋ ಎದುರಿಸಿದೆ. ಇದರ ಪ್ರಮಾಣ ಕೇವಲ ಶೇ. 0.13ರಷ್ಟಿದೆ.

9

1,100 ನಗರಗಳಲ್ಲಿ ಸ್ಥಿರ (ಫಿಕ್ಸೆಡ್-ಲೈನ್) ಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುವ ಉದ್ದೇಶವನ್ನು ಜಿಯೋ ಹೊಂದಿದೆ.

10

ಜಿಯೋವಿನ ಸರಾಸರಿ ಡೌನ್‌ಲೋಡ್ ವೇಗ 18.6 ಎಂಬಿಪಿಎಸ್ ನಷ್ಟಿದೆ.

11

ವ್ಯವಹಾರದ ಬಲಿಷ್ಠತೆಯನ್ನು ತೋರಿಸಿದ ಸದೃಢ ಆರ್ಥಿಕ ಪ್ರದರ್ಶನವನ್ನು ಜಿಯೋ ತೊರಿಸಿದೆ.

12

ಜೀರೋ ಟಚ್ ಪೋಸ್ಟ್‌ಪೇಯ್ಡ್ ಪ್ಲಾನುಗಳು, ಜಿಯೋಫೋನ್‌ನಲ್ಲಿ ಜನಪ್ರಿಯ ಆಪ್‌ಗಳು ಜಿಯೋ ಇಂಟರಾಕ್ಟ್ ಸೇರಿ ಹಲವು ಮೊದಲ ಹೆಜ್ಜೆಗಳನ್ನು ಜಿಯೋ ಇಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
Know about Reliance Jio: Reliance Jio – Past, Present and future.to know more visit to kannada.gizot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more