ಡೇಟಾ ಬಳಕೆಯಲ್ಲಿ ದಾಖಲೆ ನಿರ್ಮಿಸಿದ ಜಿಯೋ ಬಳಕೆದಾರರು!

|

ಜುಲೈ 19, 2019ಕ್ಕೆ ಅಂತ್ಯವಾದ 2019-20ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ 10,104 ಕೋಟಿ ರೂ. ನಿವ್ವಳ ಲಾಭವಾಗಿದ್ದು, ಜಿಯೋ ಚಂದಾದಾರರ ಸಂಖ್ಯೆ ಈ ಅವಧಿಯಲ್ಲಿ 30 ಕೋಟಿಯ ಗಡಿ ದಾಟಿ ಒಟ್ಟು 33.1 ಕೋಟಿಗೆ ತಲುಪಿದೆ. ಜಿಯೋ ಗ್ರಾಹಕರು ಈ ತ್ರೈಮಾಸಿಕದಲ್ಲಿ 1,090 ಕೋಟಿ ಜಿಬಿಯಷ್ಟು ಡೇಟಾ ಬಳಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಗ್ರಾಹಕರ ಡೇಟಾ ಬಳಕೆಯ ಮಾಸಿಕ ಪ್ರಮಾಣ ತಲಾ 11.4 ಜಿಬಿ ತಲುಪಿದ್ದು, ಅಲ್ಲದೇ ಜಿಯೋ ಬಳಕೆದಾರರು ಒಟ್ಟು 78,597 ಕೋಟಿ ನಿಮಿಷಗಳ ಕಾಲ ಕರೆಯನ್ನು ಮಾಡಿದ್ದಾರೆ.

ಡೇಟಾ ಬಳಕೆಯಲ್ಲಿ ದಾಖಲೆ ನಿರ್ಮಿಸಿದ ಜಿಯೋ ಬಳಕೆದಾರರು!

ಹೌದು, ರಿಲಯನ್ಸ್ ಇಂಡಸ್ಟ್ರೀಸ್‌ಗೆ ವರ್ಷದ ಮೊದಲಾರಂಭದಲ್ಲಿ 10,104 ಕೋಟಿ ರೂ. ನಿವ್ವಳ ಲಾಭವಾಗಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 6.8% ರಷ್ಟು ಏರಿಕೆ ಕಂಡಿದೆ. ಈ ಪ್ರಮಾಣ ಕ್ಷಿಪ್ರವಾಗಿ ಹೆಚ್ಚುತ್ತಿದ್ದು, ಈ ಏರಿಕೆಗೆ ರಿಲಯನ್ಸ್ ರೀಟೆಲ್ ಮತ್ತು ಡಿಜಿಟಲ್ ಸೇವೆಗಳು ಪ್ರಮುಖ ಕೊಡಗೆ ನೀಡಿದೆ. ಈ ಅವಧಿಯಲ್ಲಿ ಸಂಸ್ಥೆಯ ಒಟ್ಟುಆದಾಯ 172,956 ಕೋಟಿ ರೂ.ಗಳಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 22.1 ರಷ್ಟು ಹೆಚ್ಚು ಎಂದು ಸಂಸ್ಥೆಯು ಪ್ರಕಟಣೆ ಮೂಲಕ ತಿಳಿಸಿದೆ. ಜೊತೆಗೆ ಇದೇ ಮೊದಲ ಬಾರಿಗೆ 1,090 ಕೋಟಿ ಜಿಬಿ ಡೇಟಾ ಬಳಸಿರುವುದು ದಾಖಲೆ ಎಂದು ಹೇಳಿಕೊಂಡಿದೆ.

ರಿಲಯನ್ಸ್ ಸಮೂಹದ ಅಂಗಸಂಸ್ಥೆ ರಿಲಯನ್ಸ್ ಜಿಯೋ ಇನ್‌ಫೋಕಾಮ್, ಈ ಬಾರಿಯ ತ್ರೈ ಮಾಸಿಕದಲ್ಲಿ ಬಹಳಷ್ಟು ಲಾಭವನ್ನು ಗಳಿಕೆ ಮಾಡಿದೆ. ಈ ಅವಧಿಯಲ್ಲಿ ರಿಲಯನ್ಸ್ ಜಿಯೋ ಇನ್‌ಫೋಕಾಮ್ 891 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದೊಡನೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಶೇ. 6.1% ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲೇ ರಿಲಯನ್ಸ್ ರೀಟೇಲ್ ಕೂಡ ದಾಖಲೆಯ ಸಾಧನೆ ಮಾಡಿದ್ದು, ಈ ವಿಭಾಗದ ಆದಾಯ ಕಳೆದ ವರ್ಷದ ಹೋಲಿಕೆಯಲ್ಲಿ ಶೇ. 47.5ರಷ್ಟು ಏರಿಕೆ ಕಂಡು 38196 ಕೋಟಿ ರೂ. ತಲುಪಿದೆ.

ಡೇಟಾ ಬಳಕೆಯಲ್ಲಿ ದಾಖಲೆ ನಿರ್ಮಿಸಿದ ಜಿಯೋ ಬಳಕೆದಾರರು!

ಇನ್ನು ಈ ತ್ರೈಮಾಸಿಕದಲ್ಲಿ, ರಿಲಯನ್ಸ್ ಬ್ರಾಂಡ್ಸ್ ಬ್ರಿಟಿಷ್ ಟಾಯ್ ಚಿಲ್ಲರೆ ವ್ಯಾಪಾರಿ ಹ್ಯಾಮ್ಲೀಸ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು ಮತ್ತು ಬ್ರಿಟಿಷ್ ಫುಟ್‌ವೇರ್ ಮತ್ತು ಹ್ಯಾಂಡ್‌ಬ್ಯಾಗ್ಸ್ ಬ್ರಾಂಡ್ ಕರ್ಟ್ ಗೀಗರ್ ಅವರೊಂದಿಗೆ ವಿಶೇಷ ಪಾಲುದಾರಿಕೆಯನ್ನು ಹೊಂದಿದೆ. ರಿಲಯನ್ಸ್ ಚಿಲ್ಲರೆ ತ್ರೈಮಾಸಿಕದಲ್ಲಿ 265 ಮಳಿಗೆಗಳನ್ನು ತೆರೆಯುವುದರೊಂದಿಗೆ ಹೊಸ ಮಳಿಗೆಗಳನ್ನು ಸೇರಿಸುತ್ತಲೇ ಇದೆ. ಇದಲ್ಲದೆ ರಿಲಯನ್ಸ್ ರಿಟೇಲ್ 6,700 ಕ್ಕೂ ಹೆಚ್ಚು ನಗರಗಳಲ್ಲಿ 10,644 ಚಿಲ್ಲರೆ ಅಂಗಡಿಗಳನ್ನು 23 ದಶಲಕ್ಷ ಚದರ ಅಡಿ ಮತ್ತು 516 ಪೆಟ್ರೋ ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿದೆ.

ಮೊಬೈಲ್ ನಂಬರ್ ಬದಲಿಸುವಾಗ ಹುಷಾರ್!..ಈ ಸುದ್ದಿ ಭಯ ಹುಟ್ಟಿಸುತ್ತಿದೆ!ಮೊಬೈಲ್ ನಂಬರ್ ಬದಲಿಸುವಾಗ ಹುಷಾರ್!..ಈ ಸುದ್ದಿ ಭಯ ಹುಟ್ಟಿಸುತ್ತಿದೆ!

ಜಿಯೋ ತನ್ನ ನೆಟ್‌ವರ್ಕ್‌ನಲ್ಲಿ ಕಡಿಮೆ-ಪಾವತಿಸುವ ಬಳಕೆದಾರರನ್ನು ಸೇರಿಸುವ ಮೂಲಕ ತನ್ನ ಚಂದಾದಾರರ ಸಂಖ್ಯೆಯನ್ನು ವಿಸ್ತರಿಸುತ್ತಲೇ ಇರುವುದರಿಂದ, ಪ್ರತಿಸ್ಪರ್ಧಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಗೆಟ್ಟಿವೆ. ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯವನ್ನು ಪಡೆಯುವ ಸಲುಬವಾಗಿ ಆರಂಭಿಸಿದ ಕನಿಷ್ಟ ರೀಚಾರ್ಜ್ ಆಯ್ಕೆ ಕೂಡ ಅವುಗಳಿಗೆ ಶಾಪವಾಗಿದೆ.ಕಳೆದ 11 ತಿಂಗಳುಗಳಲ್ಲಿ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಎರಡೂಚಂದಾದಾರರನ್ನು ಕಳೆದುಕೊಂಡಿವೆ. ಮೇ ತಿಂಗಳಲ್ಲಿ, ಏರ್‌ಟೆಲ್ 1.5 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡರೆ, ವೊಡಾಫೋನ್ ಐಡಿಯಾ 5.7 ಮಿಲಿಯನ್ ಚಂದಾದಾರರಿಂದ ದೂರವಾಗಿದೆ.

Best Mobiles in India

English summary
Reliance Jio has announced its financial report for Q1 FY 2019-20, and while the numbers have remained consistently strong, what would give the operator further heart is its steadily increasing volume of data and voice usage per user per month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X