ಜಿಯೋ 'ಗಿಗಾ ಟಿವಿ' ಯಿಂದ 'ಕೇಬಲ್ ಟಿವಿ' ಮಾರುಕಟ್ಟೆ ಮುಳುಗಡೆ ಪಕ್ಕಾ!!..ಏಕೆ ಗೊತ್ತಾ?

|

ಒಂದೇ ಏಟಿಗೆ ಎರಡು ಹಕ್ಕಿಯನ್ನು ಹೊಡೆದಿರುವ ರಿಲಾಯನ್ಸ್ ಜಿಯೋ ಕಂಪೆನಿ, ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಅನ್ನು ರಿಲೀಸ್ ಮಾಡಿ ಬ್ರಾಡ್‌ಬ್ಯಾಂಡ್ ಮತ್ತು ಕೇಬಲ್ ಟಿವಿ ಮಾರುಕಟ್ಟೆಗೆ ಬಿಗ್ ಶಾಕ್ ನೀಡಿದೆ. ಜಿಯೋ 'ಡಿಟಿಹೆಚ್' ಬಿಡುಗಡೆಯಾಗುವುದಿಲ್ಲ ಎಂಬ ಶಾಕಿಂಗ್ ಸುದ್ದಿ ಮಾಸುವ ಮುನ್ನವೇ ಜಿಯೋ ಬಿಡುಗಡೆ ಮಾಡಿರುವ ಜಿಯೋ 'ಗಿಗಾ ಟಿವಿ' ಎಲ್ಲರನ್ನು ಚಕಿತಗೊಳಿಸಿದೆ.

41st Reliance AGM: WhatsApp for JioPhone, JioPhone 2, and Jio Giga Fiber

ಹೌದು, ಇಡೀ ಭಾರತವೇ ಎದುರುನೋಡುತ್ತಿದ್ದ ಸೇವೆಯೊಂದನ್ನು ರಿಲಾಯನ್ಸ್ ಕಂಪೆನಿಯ ನೆನ್ನೆಯಷ್ಟೆ ಘೋಷಣೆ ಮಾಡಿದೆ. ಕೇಬಲ್ ಟಿವಿ ದಂಧೆಗೆ ಕಡಿವಾಣ ಹಾಕಲು ಈ ವರೆಗೂ ಯಾರಿಗೂ ಸಾಧ್ಯವಾಗಲಿಲ್ಲ ಎಂಬ ಕೊರಗನ್ನು ಈ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ನೀಗಿಸಲಿದೆಯೇ ಎಂಬ ಪ್ರಶ್ನೆ ಎಲ್ಲರಿಗೂ ಹುಟ್ಟಿದೆ. ಜೊತೆಗೆ ಇಂಟರ್‌ನೆಟ್ ಆಧಾರಿತ ಈ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಬಗ್ಗೆ ಹಲವು ಕುತೋಹಲಗಳು ಮೂಡಿವೆ.

ಜಿಯೋ 'ಗಿಗಾ ಟಿವಿ' ಯಿಂದ 'ಕೇಬಲ್ ಟಿವಿ' ಮಾರುಕಟ್ಟೆ ಮುಳುಗಡೆ ಪಕ್ಕಾ!!

ಹಾಗಾಗಿ, ಇಂದಿನ ಲೇಖನದಲ್ಲಿ ಬ್ರಾಡ್‌ಬ್ಯಾಂಡ್ ಮತ್ತು ಕೇಬಲ್ ಟಿವಿ ಮಾರುಕಟ್ಟೆಗೆ ಬಿಗ್ ಶಾಕ್ ನೀಡಿರುವ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಹೇಗಿದೆ?, 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಬಿಡುಗಡೆಯಿಂದ ಸಾಮಾನ್ಯರಿಗೆ ಏನೆಲ್ಲಾ ಲಾಭ? 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಸೇವೆ ಎಲ್ಲೆಲ್ಲಿ ಲಭ್ಯವಿದೆ? ಈ ಸೇವೆಯಿಂದ ಕೇಬಲ್ ಟಿವಿ ದಂಧೆಗೆ ಕಡಿವಾಣ ಬೀಳಲಿದೆಯಾ ಎಂಬ ಪ್ರಶ್ನೆಗಳಿಗೆ ನಾವು ಉತ್ತರ ನೀಡುತ್ತಿದ್ದೇವೆ.

ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್!!

ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್!!

ನೆನ್ನೆ ನಡೆದ ರಿಲಯನ್ಸ್ ಇಂಡಸ್ಟ್ರೀಸ್ 41 ನೇ ವಾರ್ಷಿಕ ಸಭೆಯಲ್ಲಿ ಯಾರೂ ಕೂಡ ಊಹಿಸದಂತೆ ಬಿಡುಗಡೆಯಾದ ಒಂದು ಡಿವೈಸ್ ಎಂದರೆ ಅದು ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್.! ಜಿಯೋ ಡಿಟಿಹೆಚ್ ಬದಲಿಗೆ ಇಂಟರ್‌ನೆಟ್ ಆಧಾರಿತ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಅನ್ನು ಜಿಯೋ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಜಿಯೋ 'ಗಿಗಾ ಟಿವಿ' ವಿಶೇಷತೆಗಳೇನು?

ಜಿಯೋ 'ಗಿಗಾ ಟಿವಿ' ವಿಶೇಷತೆಗಳೇನು?

ನೆನ್ನೆ ರಿಲಯನ್ಸ್ ಘೋಷಣೆ ಮಾಡಿರುವ ಜಿಯೋ 'ಗಿಗಾರೂಟರ್' ಬಗೆಗಿನ ವಿಶೇಷತೆಗಳನ್ನು ರಿಲಯನ್ಸ್ ಕಂಪೆನಿ ಈಗಾಗಲೇ ಬಹಿರಂಗಪಡಿಸಿದೆ. 600 ಪ್ಲಸ್ ಚಾನೆಲ್‌ಗಳು, ಲಕ್ಷಾಂತರ ಹಾಡುಗಳು ಮತ್ತು 4K ರೆಸೊಲ್ಯೂಶನ್‌ನಲ್ಲಿ ಅಲ್ಟ್ರಾ ಹೆಚ್‌ಡಿಯಲ್ಲಿ ವೀಡಿಯೋಗಳನ್ನು ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಬಳಕೆದಾರರಿಗೆ ಜಿಯೋ ಉಚಿತವಾಗಿ ನೀಡುತ್ತಿದೆ.

ಹೆಚ್ಚಿನ ವಿಶೇಷತೆಗಳು ಯಾವುವು?

ಹೆಚ್ಚಿನ ವಿಶೇಷತೆಗಳು ಯಾವುವು?

ಟಿವಿ ಲೋಕಕ್ಕೆ ಆಶ್ಚರ್ಯ ಮೂಡಿಸಿರುವ ರಿಲಾಯನ್ಸ್ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಅನ್ನ ಧ್ವನಿ ಕಮಾಂಡ್ ಮೂಲಕ ಟಿವಿಯಲ್ಲಿ ನಿಯಂತ್ರಿಸುವ ವೈಶಿಷ್ಟ್ಯವನ್ನು ಸಹ ಹೊಂದಿದೆ/ ಜಿಯೋ ಗಿಗಾ ಫೈಬರ್‌ಗೆ ಸಂಪರ್ಕಿಸಿದ ಪ್ರತಿಯೊಂದು ಟಿವಿಗೆ ವೀಡಿಯೊ ಕರೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಯೋ ನೀಡಿರುವ ಪ್ರಕಟಣೆಯಿಂದ ತಿಳಿಯುತ್ತದೆ.

'ಗಿಗಾ ಟಿವಿ' ಸೇವೆ ಎಲ್ಲೆಲ್ಲಿ ಲಭ್ಯ

'ಗಿಗಾ ಟಿವಿ' ಸೇವೆ ಎಲ್ಲೆಲ್ಲಿ ಲಭ್ಯ

ರಿಲಾಯನ್ಸ್ ಜಿಯೋ ಕಂಪೆನಿ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಸೇವೆಯನ್ನು ಭಾರತದಾದ್ಯಂತ 1100 ನಗರಗಳಲ್ಲಿ ಒದಗಿಸುವುದಾಗಿ ಹೇಳಿಕೊಂಡಿದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಸೇವೆ ಸಿಗುವುದು ಈಗಾಗಲೇ ಪಕ್ಕಾ ಆಗಿದ್ದು, ಇನ್ನಿತರ ನಗರಗಳು ಯಾವುವು ಎಂಬ ಮಾಹಿತಿ ಈವರೆಗೂ ಸಿಕ್ಕಿಲ್ಲ.

'ಗಿಗಾ ಟಿವಿ' ಸೇವೆ ಬೆಲೆ ಎಷ್ಟು?

'ಗಿಗಾ ಟಿವಿ' ಸೇವೆ ಬೆಲೆ ಎಷ್ಟು?

ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಸೇವೆಯನ್ನು ಪ್ರಕಟಿಸಿರುವ ಜಿಯೋ, ಆದರ ಬೆಲೆ ಮತ್ತು ಸೇವೆಗಳ ಬೆಲೆ ಎಷ್ಟು ಮಾಹಿತಿಯನ್ನು ಈ ವರೆಗೂ ಬಿಡುಗಡೆ ಮಾಡಿಲ್ಲ. ಆದರೆ, ಆಗಸ್ಟ್ 15 ರಂದು ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಬೆಲೆ ಮತ್ತು ಸೇವೆಗಳ ಬೆಲೆ ಎಷ್ಟು ಎಂಬುದು ನಮಗೆ ನಿಖರವಾಗಿ ತಿಳಿಯಲಿದೆ. ಆದರೆ, ಬೆಲೆ ಮಾಹಿತಿ ಲೀಕ್ ಆಗಿದೆ.

1000 ರೂ.ಗೆ ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ?

1000 ರೂ.ಗೆ ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ?

ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಅನ್ನು ಜಿಯೋ 1000 ರೂಪಾಯಿಗಳಿಗೆ ಬಿಡುಗಡೆ ಮಾಡುತ್ತದೆ ಎನ್ನಲಾಗಿದೆ. ಒಮ್ಮೆ ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಅನ್ನು ಖರಿದಿಸಿದ ನಂತರ ಇಂಟರ್‌ನೆಟ್ ಆಧಾರಿತ ಟಿವಿಯನ್ನು ಅನ್‌ಲಿಮಿಟೆಡ್ ಲೈವ್‌ ಸ್ಟ್ರೀಮ್ ಮಾಡುವಷ್ಟು ಡೇಟಾವನ್ನು ಜಿಯೋ 350 ರೂಪಾಯಿಗಳ ಒಳಗೆ ಒದಗಿಸಲಿದೆಯಂತೆ.

ಕೇಬಲ್ ಟಿವಿ ಮುಳುಗಡೆ?

ಕೇಬಲ್ ಟಿವಿ ಮುಳುಗಡೆ?

ಜಿಯೋ 'ಗಿಗಾ ಟಿವಿ' ಸೆಟ್ ಟಾಪ್ ಬಾಕ್ಸ್ ಸೇವೆಯಿಂದ ಪ್ರಸ್ತುತದ ಕೇಬಲ್ ಟಿವಿ ದಂಧೆಗೆ ಕಡಿವಾಣ ಬೀಳಲಿರುವುದು ಪಕ್ಕಾ ಆಗಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಇಂಟರ್‌ನೆಟ್ ಆಧಾರಿತ ಅನ್‌ಲಿಮಿಟೆಡ್ ಟಿವಿ ಲೈವ್‌ ಸ್ಟ್ರೀಮ್ ನೀಡಿದರೆ ಎಲ್ಲರೂ ಜಿಯೋ ಕಡೆ ವಾಲುತ್ತಾರೆ. ಆ ನಂತರ ಕೇಬಲ್ ಟಿವಿ ಮಾರುಕಟ್ಟೆ ಜೊತೆಗೆ ಇತರೆ ಡಿಟಿಹೆಚ್‌ಗಳು ನೆಲಕಚ್ಚಲಿವೆ.

ಜಿಯೋ ಇಂದು ಘೋಷಣೆ ಮಾಡಿದ ಎಲ್ಲಾ 10 'ಮಾನ್ಸೂನ್ ಆಫರ್ಸ್' ಲೀಸ್ಟ್!!

ಜಿಯೋ ಇಂದು ಘೋಷಣೆ ಮಾಡಿದ ಎಲ್ಲಾ 10 'ಮಾನ್ಸೂನ್ ಆಫರ್ಸ್' ಲೀಸ್ಟ್!!

ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ 41 ನೇ ವಾರ್ಷಿಕ ಸಭೆಯಲ್ಲಿ ಭಾರತದ ಟೆಲಿಕಾಂ ಅನ್ನು ಅಲ್ಲೋಲ ಕಲ್ಲೋಲಗೊಳಿಸಿರುವ ಹೊಸ ಸೇವೆಗಳನ್ನು ಜಿಯೋ ಘೋಷಿಸಿದೆ.! ಕೇವಲ ಒಂದೇ ದಿನದಲ್ಲಿ ನಿಬ್ಬೆರಗಾಗಿಸುವ 10 ಹೊಸ ಸೇವೆಗಳನ್ನು ಜಿಯೋ ಘೋಷಿಸಿದೆ. ಟೆಲಿಕಾಂ ಪ್ರಪಂಚದ ನಿರೀಕ್ಷೆಗೂ ಮೀರಿ ರಿಲಯನ್ಸ್ ಕಂಪೆನಿ ಎಲ್ಲರಿಗೂ ಶಾಕ್ ನೀಡಿದೆ.

ಹೌದು, ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ , ಜಿಯೋ ಗಿಗಾ ರೂಟರ್ , ಜಿಯೋ ಫೋನ್ 2 ಮತ್ತು ಜಿಯೋ ವಾಯ್ಸ್ ಓವರ್ ವೈಫೈ ಸೇರಿದಂತೆ ಜಿಯೋ ಹೊಸದಾಗಿ ಹತ್ತು ಘೋಷಣೆಗಳನ್ನು ಮಾಡಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಜಿಯೋ ಇಂದು ಘೋಷಣೆ ಮಾಡಿರುವ ಎಲ್ಲಾ ಹತ್ತು ಮಾನ್ಸೂನ್ ಆಫರ್ಸ್ ಸೇವೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

1) ಜಿಯೋ ಫೋನ್

1) ಜಿಯೋ ಫೋನ್

2016ರಲ್ಲಿ ಬಿಡುಗಡೆಯಾಗಿ ಟೆಲಿಕಾಂ ಲೋಕವನ್ನು ಅಲುಗಾಡಿಸಿದ್ದ ಜಿಯೋ ಫೋನ್ ಪ್ರಸ್ತುತ 2.5 ಕೋಟಿ ಗ್ರಾಹಕರನ್ನು ಹೊಂದಿರುವುದಾಗಿ ಜಿಯೋ ತಿಳಿಸಿದೆ.ಜಿಯೋ ಫೋನ್‌ನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತೇವೆ ಮತ್ತು 100 ಮಿಲಿಯನ್ ಗ್ರಾಹಕರಿಗೆ ಜಿಯೋ ಫೋನ್ ಅನ್ನು ತಲುಪಿಸುವ ಗುರಿ ಹೊಂದಿದ್ದೇವೆ ಎಂದು ಅಂಬಾನಿ ಹೇಳಿದ್ದಾರೆ.

2) ಜಿಯೋಫೋನ್ 2

2) ಜಿಯೋಫೋನ್ 2

ರಿಲಾಯನ್ಸ್ ಇಂದು ಜಿಯೋಫೋನಿನ ಅಭಿವೃದ್ದಿ ಭಾಗವಾಗಿ ಜಿಯೋ ಫೋನ್ 2 ಲಾಂಚ್ ಮಾಡುವುದಾಗಿ ಘೋಷಿಸಿದೆ. ಆಗಸ್ಟ್ 15 ರಿಂದ ಬಳಕೆದಾರರಿಗೆ ಜಿಯೋ ಫೋನ್ 2 ಲಭ್ಯವಿರುತ್ತದೆ ಎಂದು ರಿಲಾಯನ್ಸ್ ಸಂಸ್ಥೆ ತಿಳಿಸಿದೆ. ಫೂರ್ಣ ಕೀಬೋರ್ಡ್ ಹೊಂದಿರುವ ಈ ಫೋನ್‌ನ ಆರಂಭಿಕ ಬೆಲೆ 2,999 ರೂಪಾಯಿಗಳಾಗಿರಲಿದೆ.

3) ಜಿಯೋ ಫೋನ್‌ ಎಕ್ಸ್‌ಚೇಂಜ್ ಆಫರ್!

3) ಜಿಯೋ ಫೋನ್‌ ಎಕ್ಸ್‌ಚೇಂಜ್ ಆಫರ್!

ಇದೇ ತಿಂಗಳ ಜುಲೈ 21ರಿಂದ ಬಳಕೆದಾರರು ತಮ್ಮಲ್ಲಿರುವ ಯಾವುದೇ ಫೀಚರ್ ಫೋನ್‌ನ್ನು ಈ ಮೊದಲು ಜಿಯೋ ಬಿಡುಗಡೆ ಮಾಡಿದ್ದ ಜಿಯೋಫೋನ್‌ನೊಂದಿಗೆ ಕೇವಲ 501 ರೂ.ಗೆ ಎಕ್ಸ್‌ಚೇಂಜ್ ಆಗಿ ಪಡೆಯಬಹುದಾಗಿದೆ. ಆಗಸ್ಟ್‌ 15ರಂದು ಜಿಯೋಫೋನ್ 2 ಮೊಬೈಲ್‌ನ್ನು ಬಿಡುಗಡೆ ಮಾಡಲಿದ್ದು, ಈ ಫೋನಿನ ಎಕ್ಸ್‌ಚೇಂಜ್ ಆಫರ್ ಇರುವ ಬಗ್ಗೆ ಮಾಹಿತಿ ನೀಡಿಲ್ಲ.!

4) ಜಿಯೋ ಫೋನಿನಲ್ಲಿ ಫೇಸ್‌ಬುಕ್

4) ಜಿಯೋ ಫೋನಿನಲ್ಲಿ ಫೇಸ್‌ಬುಕ್

ಜಿಯೋಫೋನ್‌ನಲ್ಲಿ ವಾಟ್ಸ್‌ಆಪ್, ಫೇಸ್‌ಬುಕ್, ಯೂಟ್ಯೂಬ್ ಆಪ್‌ಗಳು ಬಳಕೆದಾರರಿಗೆ ಮುಂದೆ ಲಭ್ಯವಾಗಲಿವೆ ಎಂದು 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಲಾಗಿದೆ. ಈ ಆಪ್‌ಗಳು ವಾಯ್ಸ್‌ ಕಮಾಂಡ್‌ ಮೂಲಕವು ಬಳಸಬಹುದಾಗಿದ್ದು, ಅಧಿಕೃತವಾಗಿ ಆಗಸ್ಟ್‌ 15ರ ನಂತರ ಬಳಕೆದಾರರಿಗೆ ಲಭ್ಯವಾಗಲಿವೆ.

5) ಜಿಯೋ ಗಿಗಾ ಟಿವಿ ಸೆಟ್‌-ಆಪ್‌-ಬಾಕ್ಸ್!!

5) ಜಿಯೋ ಗಿಗಾ ಟಿವಿ ಸೆಟ್‌-ಆಪ್‌-ಬಾಕ್ಸ್!!

600 ಪ್ಲಸ್ ಚಾನೆಲ್‌ಗಳು, ಲಕ್ಷಾಂತರ ಹಾಡುಗಳು ಮತ್ತು 4K ರೆಸೊಲ್ಯೂಶನ್‌ನಲ್ಲಿ ಅಲ್ಟ್ರಾ ಹೆಚ್‌ಡಿಯಲ್ಲಿ ವೀಡಿಯೋ ವೀಕ್ಷಿಸಲು ಸಾಧ್ಯವಾಗುವ ಜಿಯೋ ಜಿಯೋ ಗಿಗಾ ಟಿವಿ ಸೆಟ್‌-ಆಪ್‌-ಬಾಕ್ಸ್ ಅನ್ನು ಇಂದು ಘೋಷಿಸಿದೆ. ಧ್ವನಿ ಕಮಾಂಡ್ ಮೂಲಕ ಟಿವಿಯಲ್ಲಿ ನಿಯಂತ್ರಿಸುವ ವೈಶಿಷ್ಟ್ಯವನ್ನು ಹೊಂದಿರುವ ಇದರಿಂದ ಟಿವಿಯಲ್ಲಿಯೂ ವೀಡಿಯೊ ಕರೆ ಮಾಡಲು ಸಾಧ್ಯವಾಗುತ್ತದೆ.

6) ಜಿಯೋ ಗಿಗಾ ಫೈಬರ್!

6) ಜಿಯೋ ಗಿಗಾ ಫೈಬರ್!

ಟೆಲಿಕಾಂ ಪ್ರಪಂಚದ ನಿರೀಕ್ಷೆಯಂತೆಯೇ ಜಿಯೋ ಇಂದು 1ಜಿಬಿಪಿಎಸ್ ವೇಗದ ಜಿಯೋ ಫೈಬರ್ ರೂಟರ್ ಅನ್ನು ಬಿಡುಗಡೆ ಮಾಡಿದೆ. 4k ಗುಣಮಟ್ಟದಲ್ಲಿ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ದೊರೆಯಲಿದೆ. ಸಂಪೂರ್ಣ ಉಚಿತ ವಾಯಿಸ್ ಕಾಲಿಂಗ್ ಸೌಲಭ್ಯವನ್ನು ಹೊಂದಿರುವ ಜಿಯೋ ಫೈಬರ್ ಮೂಲಕ ಜಿಯೋ ಗಿಗಾರೂಟರ್ ಸಂಪರ್ಕವನ್ನು ಸಾಧಿಸಬಹುದಾಗಿದೆ.

7) ಜಿಯೋ ಸ್ಮಾರ್ಟ್ ಹೋಮ್!

7) ಜಿಯೋ ಸ್ಮಾರ್ಟ್ ಹೋಮ್!

ಜಿಯೋ ಗಿಗಾ ಫೈಬರ್ ಜೊತೆಯಲ್ಲಿ, ಕಂಪೆನಿಯು ಸ್ಮಾರ್ಟ್ ಹೋಮ್ ಭವಿಷ್ಯವನ್ನು ಉತ್ತೇಜಿಸುತ್ತಿದೆ. ಸ್ಮಾರ್ಟ್ ಸ್ಪೀಕರ್‌ಗಳು, ಸ್ಮಾರ್ಟ್ ಪ್ಲಗ್, ಕ್ಯಾಮೆರಾಗಳು, ಟಿವಿ ಕ್ಯಾಮೆರಾ, ಅನಿಲ ಸೋರಿಕೆ ಸಂವೇದಕಗಳು ಮೊದಲಾದವುಗಳನ್ನು ಜಿಯೋ ಸ್ಮಾರ್ಟ್ ಮನೆಗಳ ವ್ಯಾಪ್ತಿಗಳನ್ನು ಒದಗಿಸುತ್ತದೆ. ಮೈ ಜಿಯೋ ಅಪ್ಲಿಕೇಶನ್ ಮೂಲಕ ಈ ಸ್ಮಾರ್ಟ್ ಮನೆ ಬಿಡಿಭಾಗಗಳನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತದೆ.

8) ಜಿಯೋ ವರ್ಚುವಲ್ ರಿಯಾಲಿಟಿ

8) ಜಿಯೋ ವರ್ಚುವಲ್ ರಿಯಾಲಿಟಿ

ಜಿಯೋ ಗಿಗಾ ಫೈಬರ್ 4K ಗುಣಮಟ್ಟದ ವರ್ಚುವಲ್ ರಿಯಾಲಿಟಿ ಅನುಭವವನ್ನು ಬೆಂಬಲಿಸಲು ಸಾಕಷ್ಟು ವೇಗವಾಗಿರುತ್ತದೆ. ಹೊಂದಾಣಿಕೆಯ ವಿಆರ್ ಹೆಡ್ಸೆಟ್‌ನೊಂದಿಗೆ, ಒಬ್ಬರ ಮನೆಯ ಸೌಕರ್ಯಗಳಿಂದ 360 ಡಿಗ್ರಿಗಳಷ್ಟು ವಿಷಯವನ್ನು ಆನಂದಿಸಬಹುದು ಎಂದು ಜಿಯೋ ಕಂಪೆನಿ ತಿಳಿಸಿದೆ.

9) ಜಿಯೋ ಗಿಗಾ ರೂಟರ್

9) ಜಿಯೋ ಗಿಗಾ ರೂಟರ್

ಸ್ಮಾರ್ಟ್ ಹೋಮ್ ಪರಿಹಾರಗಳಿಗಾಗಿ ಜಿಯೋ ಗಿಗಾ ರೂಟರ್ ಅನ್ನು ರಿಲಯನ್ಸ್ ಘೋಷಿಸಿದೆ. ಒಂದು ಜಿಬಿಪಿಎಸ್ ವೇಗದಲ್ಲಿ ಡೌನ್‌ಲೋಡ್ ಮತ್ತು ಸ್ಪೀಡ್ ಅಪ್ಲೋಡ್ ಮಾಡಲು ಸಮರ್ಥವಾಗಿರುವ ಈ ರೂಟರ್ ಮೆನಯಲ್ಲಿ ವೈಫೈ ಪ್ರಸಾರಕ್ಕೆ ಸಹಾಯಕವಾಗಿದೆ. ಮನೆಯಲ್ಲಿನ ಸ್ಮಾರ್ಟ್‌ ಸಾಧನಗಳಿಗೆ ಈ ಗಿಗಾ ರೂಟರ್ ಸಂಪರ್ಕವನ್ನು ಸಾಧಿಸಲಿದೆ.

10) ಫೈಬರ್‌ಗೆ ನೊಂದಾಯಿಸಿ

10) ಫೈಬರ್‌ಗೆ ನೊಂದಾಯಿಸಿ

ಇದೇ ಮಾನ್ಸೂನ್ ಆಫರ್‌ನಲ್ಲಿ ಆಗಸ್ಟ್‌ 15ರಿಂದ ಜಿಯೋ ಗಿಗಾ ಫೈಬರ್‌ಗೆ ಆಸಕ್ತ ಬಳಕೆದಾರರು ನೊಂದಾಯಿಸಿಕೊಳ್ಳಬಹುದಾಗಿದೆ. ಹೀಗಾಗಲೇ ಜಿಯೋಫೈಬರ್ ಬೇಟಾ ಟ್ರೈಯಲ್ ಕಾರ್ಯನಿರ್ವಹಿಸುತ್ತಿದೆ. ಎಲ್ಲಿ ಫೈಬರ್‌ನೆಟ್‌ ಬಗ್ಗೆ ಜನ ಹೆಚ್ಚು ಆಸಕ್ತಿ ಹೊಂದಿರುತ್ತಾರೋ ಅಲ್ಲಿ ಜಿಯೋ ಗಿಗಾಫೈಬರ್ ಆರಂಭಿಸಲು ಜಿಯೋ ನಿರ್ಧರಿಸಿದೆ.

Best Mobiles in India

English summary
The second device 'Jio GigaTV' set-top box, when connected to large screen TV, will enable subscribers to watch over 600 TV channels. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X