ವಿವೋ ಸಹಭಾಗಿತ್ವದಲ್ಲಿ ಬರಲಿದೆ ಕೈಗೆಟಕುವ ಬೆಲೆಯ ಜಿಯೋ ಸ್ಮಾರ್ಟ್‌ಫೋನ್‌!

|

ಭಾರತದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಜಿಯೋ ತನ್ನ ಪ್ರಾಬಲ್ಯವನ್ನು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲೂ ಮುಂದುವರೆಸುವುದಕ್ಕೆ ಮುಂದಾಗಿದೆ. ಸದ್ಯ ಇದೀಗ ರಿಲಯನ್ಸ್ ಜಿಯೋ ವಿವೊ ಸಹಭಾಗಿತ್ವದಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಪಾಲುದಾರಿಕೆಯಡಿಯಲ್ಲಿ, ಜಿಯೋ ಒಟಿಟಿ ಅಪ್ಲಿಕೇಶನ್‌ಗಳು, ಶಾಪಿಂಗ್ ಪ್ರಯೋಜನಗಳು, ರಿಯಾಯಿತಿಗಳು, ಸ್ಕ್ರೀನ್‌ ರಿಪ್ಲೇಸ್‌ ಮೆಂಟ್‌ ಸೇರಿದಂತೆ ಹೆಚ್ಚಿನ ರೀತಿಯ ವಿಶೇಷತೆಗಳನ್ನು ಒದಗಿಸವುದಕ್ಕೆ ರಿಲಾಯನ್ಸ್‌ ಜಿಯೋ ಮುಂದಾಗಿದೆ ಎನ್ನಲಾಗಿದೆ.

ರಿಲಾಯನ್ಸ್‌ ಜಿಯೋ

ಹೌದು, ರಿಲಾಯನ್ಸ್‌ ಜಿಯೋ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿವೊ ಸಹಭಾಗಿತ್ವದಲ್ಲಿ ಹೊಸ ಹೆಜ್ಜೆ ಇಡಲು ಸಿದ್ದತೆ ನಡೆಸಿದೆ ಎನ್ನುವ ಮಾಹಿತಿ ದೊರೆತಿದೆ. ರಿಲಯನ್ಸ್ ಜಿಯೋ ಗೂಗಲ್‌ನೊಂದಿಗೆ ಕೈಗೆಟುಕುವ 4G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಪ್ಲ್ಯಾನ್‌ ರೂಪಿಸುತ್ತಿದೆ ಎನ್ನುವ ಸಮಯದಲ್ಲಿಯೇ ಈ ಅಪ್‌ಡೇಟ್ ಬರುತ್ತದೆ. ಕಂಪನಿಯು ತನ್ನ ಮುಂಬರುವ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸಲು ದೇಶೀಯ ಹ್ಯಾಂಡ್‌ಸೆಟ್ ತಯಾರಕರೊಂದಿಗೆ ಚರ್ಚಿಸುತ್ತಿದೆ ಎನ್ನಲಾಗಿದೆ. ಅಷ್ಟಕ್ಕೂ ಜಿಯೋ ರೂಪಿಸಿರುವ ಪ್ಲ್ಯಾನ್‌ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ

ರಿಲಯನ್ಸ್ ಜಿಯೋ ವಿವೋ ಸಹಭಾಗಿತ್ವದಲ್ಲಿ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸುವುದಕ್ಕೆ ಮುಂದಾಗಿದೆ ಎಂದು ಹೇಳಲಾಗ್ತಿದೆ. ಆದರೆ ಇದಕ್ಕೂ ಮೊದಲು ಐಟೆಲ್ ಕಂಪೆನಿ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಸಹ ವರದಿಯಾಗಿತ್ತು. ಆದರೆ ಇದೀಗ ವಿವೋ ಜೊತೆಗೆ ಹೆಜ್ಜೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಈ ಸಹಭಾಗಿತ್ವದಲ್ಲಿ ಬರುವ ಸ್ಮಾರ್ಟ್‌ಫೋನ್‌ ಜೊತೆಗೆ ಜಿಯೋ ಒಟಿಟಿ ಅಪ್ಲಿಕೇಶನ್‌ಗಳು, ಶಾಪಿಂಗ್ ಪ್ರಯೋಜನಗಳು, ರಿಯಾಯಿತಿಗಳು, ಸ್ಕ್ರೀನ್‌ ರಿಪ್ಲೇಸ್‌ ಮೆಂಟ್‌ ಸೇರಿದಂತೆ ಹೆಚ್ಚಿನ ರೀತಿಯ ವಿಶೇಷತೆಗಳನ್ನು ಒದಗಿಸವುದಕ್ಕೆ ರಿಲಾಯನ್ಸ್‌ ಜಿಯೋ ಮುಂದಾಗಿದೆ ಎನ್ನಲಾಗಿದೆ.

ಜಿಯೋ

ಇನ್ನು ಒಟಿಟಿ ಮತ್ತು ಡೇಟಾ ಪ್ರಯೋಜನಗಳು ಡಿಫರೆನ್ಷಿಯೇಟರ್‌ಗಳಲ್ಲಿ ಒಂದಾಗಿದೆ. ಇದಲ್ಲದೆ ಜಿಯೋ ಕಂಪೆನಿ ಪ್ರಮುಖ ಸ್ಮಾರ್ಟ್‌ಫೋನ್ ಪ್ಲೇಯರ್‌ಗಳೊಂದಿಗೆ ಕೈಜೋಡಿಸುವುದು ರಿಲಯನ್ಸ್ ಜಿಯೋ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಜಿಯೋ 4G ಫೀಚರ್ ಫೋನ್ ಬಳಕೆದಾರರನ್ನು ಸ್ಮಾರ್ಟ್‌ಫೋನ್ ಬಳಕೆದಾರರನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಏಕೆಂದರೆ ಜಿಯೋ ವಿವೋ ಸಹಭಾಗಿತ್ವದಲ್ಲಿ ಕೇವಲ 8,000. ರೂ ಬೆಲೆಯ ಸ್ಮಾರ್ಟ್‌ಫೋನ್ ಪರಿಚಯಿಸುವ ಪ್ಲ್ಯಾನ್‌ ಇದೆ. ಇದರಿಂದ ಇದು ರಿಲಯನ್ಸ್ ಜಿಯೋಗೆ ಸ್ಮಾರ್ಟ್‌ಫೋನ್‌ ವಲಯದಲ್ಲೂ ಸಂಚಲನ ಸೃಷ್ಟಿಸಲಿದೆ ಎನ್ನಲಾಗಿದೆ.

Best Mobiles in India

English summary
Reliance Jio is likely to launch new smartphones in partnership with Vivo under its Jio exclusive strategy.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X