300 ರುಪಾಯಿ ಒಳಗಿನ 1ಜಿಬಿ ಡಾಟಾ ಪ್ರತಿದಿನ ನೀಡುವ ಬೆಸ್ಟ್ ಪ್ರೀಪೇಯ್ಡ್ ಆಫರ್‌ಗಳು

|

ರಿಲಯನ್ಸ್ ಜಿಯೋ ಸಂಸ್ಥೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದ ನಂತರ ಬೇರೆಬೇರೆ ಕಂಪೆನಿಗಳು ಕೂಡ ಸಾಕಷ್ಟು ಪ್ರಿಪೇಯ್ಡ್ ಪ್ಲಾನ್ ಗಳನ್ನು ಸ್ಪರ್ಧಾತ್ಮಕವಾಗಿ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿವೆ. ಭಾರತದ ಎಲ್ಲಾ ಟೆಲಿಕಾಂ ಸೇವಾ ಪ್ರೊವೈಡರ್ ಗಳ ನಡುವೆ ಒಂದು ರೀತಿಯ ತಾರಿಫ್ ಪ್ಲಾನ್ ಗಳ ಯುದ್ಧ ನಡೆಯುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು.

300 ರುಪಾಯಿ ಒಳಗಿನ 1ಜಿಬಿ ಡಾಟಾ ಪ್ರತಿದಿನ ನೀಡುವ ಬೆಸ್ಟ್ ಪ್ರೀಪೇಯ್ಡ್ ಆಫರ್‌ಗಳು

ಏರ್ ಟೆಲ್, ರಿಲಯನ್ಸ್ ಜಿಯೋ ಮತ್ತು ವಡಾಫೋನ್ ಭಾರತದಲ್ಲಿ ಪ್ರಮುಖ ಟೆಲಿಕಾಂ ಸೇವಾ ಪ್ರೊವೈಡರ್ ಗಳು ಅನ್ನಿಸಿಕೊಂಡಿದ್ದು ಮೂವರಲ್ಲೂ ಕೂಡ ಒಂದೇ ರೀತಿಯ ತಾರಿಫ್ ಪ್ಲಾನ್ ಗಳು ಸದ್ಯ ಪ್ರಿಪೇಯ್ಡ್ ಗ್ರಾಹಕರಿಗಾಗಿ ಲಭ್ಯವಿದೆ. ಏರ್ ಟೆಲ್, ವಡಾಫೋನ್ ಮತ್ತು ರಿಲಯನ್ಸ್ ಜಿಯೋ ನಲ್ಲಿ 300 ರುಪಾಯಿ ಒಳಗೆ 1ಜಿಬಿ ಡಾಟಾ ಪ್ರತಿದಿನ ಲಭ್ಯವಿರುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ ಗಳ ಬಗ್ಗೆ ನಾವಿಲ್ಲಿ ಒಂದು ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

ರಿಲಯನ್ಸ್ ಜಿಯೋ ರುಪಾಯಿ 299 ರ ಪ್ರಿಪೇಯ್ಡ್ ಪ್ಲಾನ್ :

ರಿಲಯನ್ಸ್ ಜಿಯೋ ರುಪಾಯಿ 299 ರ ಪ್ರಿಪೇಯ್ಡ್ ಪ್ಲಾನ್ :

ರಿಲಯನ್ಸ್ ಜಿಯೋ ನಿಂದ 300 ರುಪಾಯಿ ಒಳಗೆ ಸಿಗುವ ಎಸ್ಎಂಎಸ್ ಬೆನಿಫಿಟ್, ಕಾಲಿಂಗ್ ಮತ್ತು ಡಾಟಾ ಬೆನಿಫಿಟ್ ಇರುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ ಎಂದರೆ ಅದು ರುಪಾಯಿ 299.ಇದರ ಅಡಿಯಲ್ಲಿ ರಿಲಯನ್ಸ್ ಜಿಯೋ 3ಜಿಬಿ 4ಜಿ ಡಾಟಾ ಪ್ರತಿದಿನ ಜೊತೆಗೆ ಅನಿಯಮಿತ ವಾಯ್ಸ್ ಕರೆಗಳು ಮತ್ತು 100ಎಸ್ಎಂಎಸ್ ಪ್ರತಿದಿನ ಉಚಿತವಾಗಿ 28 ದಿನಗಳ ಅವಧಿಗೆ ನೀಡುತ್ತದೆ. ಅಂದರೆ ಒಟ್ಟು 84 ಜಿಬಿ ಡಾಟಾ ಈ ಅವಧಿಯಲ್ಲಿ ಲಭ್ಯವಾಗುತ್ತದೆ.

ಇದೆಲ್ಲದರ ಜೊತೆಗೆ ಜಿಯೋ ಟಿವಿ, ಜಿಯೋ ಮನಿ ಮತ್ತು ಇತ್ಯಾದಿ ಆಪ್ ಗಳಿಗೆ ಕಾಂಪ್ಲಿಮೆಂಟರಿ ಆಕ್ಸಿಸ್ ನ್ನು ಕೂಡ ಇದು ನೀಡುತ್ತದೆ. ಗ್ರಾಹಕರು 3ಜಿಬಿ ಪ್ರತಿದಿನದ ಡಾಟಾ ಲಿಮಿಟ್ ನ್ನು ಮೀರಿದರೆ 64Kbps ನಲ್ಲಿ ಅಂತರ್ಜಾಲದ ಆಕ್ಸಿಸ್ ಸಾಧ್ಯವಿದೆ.

ಒಂದು ವೇಳೆ ನೀವು ಹೊಸ ಗ್ರಾಹಕರಾಗಿದ್ದರೆ ಜಿಯೋ ಪ್ರೈಮ್ ಮೆಂಬರ್ ಶಿಪ್ ನ್ನು ಈ ಕನೆಕ್ಷನ್ ಪಡೆಯುವಾಗ ಪಡೆಯಬೇಕಾಗುತ್ತದೆ ಇದಕ್ಕೆ ವಾರ್ಷಿಕವಾಗಿ 99 ರುಪಾಯಿ ಪಾವತಿ ಇರುತ್ತದೆ.

ವಡಾಫೋನ್ ರುಪಾಯಿ 255 ಪ್ರಿಪೇಯ್ಡ್ ಪ್ಲಾನ್ :

ವಡಾಫೋನ್ ರುಪಾಯಿ 255 ಪ್ರಿಪೇಯ್ಡ್ ಪ್ಲಾನ್ :

ವಡಾಫೋನ್ 255 ಪ್ರಿಪೇಯ್ಡ್ ಪ್ಲಾನ್ ಇದ್ದು ಇದು ಬೋನಸ್ ಕಾರ್ಡ್ ರೀಚಾರ್ಜ್ ನ ಅಡಿಯಲ್ಲಿ ಇದು ಲಭ್ಯವಿರುತ್ತದೆ. ಈ ಪ್ಲಾನ್ ನ ಅಡಿಯಲ್ಲಿ 2ಜಿಬಿ ಡಾಟಾ ಪ್ರತಿದಿನ 4G/3G/2G ಡಾಟಾ 28 ದಿನಗಳ ಅವಧಿಗೆ ಲಭ್ಯವಿರುತ್ತದೆ. ಅನಿಯಮಿತ ಸ್ಥಳೀಯ, ಎಸ್ ಟಿ ಮಚ್ಚು ರೋಮಿಂಗ್ ಕರೆಗಳು ಲಭ್ಯವಿದ್ದು 100ಎಸ್ಎಂಎಸ್ ಪ್ರತಿದಿನ ಉಚಿತವಾಗಿರುತ್ತದೆ. ಕಂಪೆನಿಯ ಲೈವ್ ಟಿವಿ, ಮೂವಿಗಳು ಮತ್ತು ಇತ್ಯಾದಿ ಆನ್ ಲೈನ್ ಕಟೆಂಟ್ ಗಳನ್ನು ಉಚಿತವಾಗಿ ನೋಡುವುದಕ್ಕೆ ಅವಕಾಶವಿರುತ್ತದೆ.

ವಡಾಫೋನಿನ ಅನಿಯಮಿತ ಕರೆಗಳು ಅಂದರೆ ಅದು ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ನಂತೆ ಅಲ್ಲ. ಇದು ವಾರದ ಮತ್ತು ದಿನದ ಲಿಮಿಟ್ ಗಳನ್ನು ಹೊಂದಿರುತ್ತದೆ. ಪ್ರತಿದಿನ ಬಳಕೆದಾರರು 250 ನಿಮಿಷ ಉಚಿತವಾಗಿ ಮಾತನಾಡಬಹುದು, ವಾರಕ್ಕೆ 1000 ನಿಮಿಷ ಉಚಿತವಾಗಿ ಮಾತನಾಡುವುದಕ್ಕೆ ಅವಕಾಶವಿರುತ್ತದೆ.

ಏರ್ ಟೆಲ್ ರುಪಾಯಿ 249 ಪ್ರಿಪೇಯ್ಡ್ ಪ್ಲಾನ್ :

ಏರ್ ಟೆಲ್ ರುಪಾಯಿ 249 ಪ್ರಿಪೇಯ್ಡ್ ಪ್ಲಾನ್ :

ಏರ್ ಟೆಲ್ ನಲ್ಲೂ ಕೂಡ ಇದೇ ರೀತಿಯ ಪ್ಲಾನ್ ಇದ್ದು ರುಪಾಯಿ 249 ರೀಚಾರ್ಜ್ ಮಾಡಬೇಕಾಗುತ್ತದೆ. ಇದರ ಅಡಿಯಲ್ಲಿ ಕಂಪೆನಿಯು 2ಜಿಬಿ ಡಾಟಾವನ್ನು 28 ದಿನಗಳ ಅವಧಿಗೆ ನೀಡುತ್ತದೆ. ಒಟ್ಟಾರೆ 56ಜಿಬಿ 4G/3G/2G ಡಾಟಾವು ಈ ಪ್ರಿಪೇಯ್ ಪ್ಲಾನ್ ನ ಅಡಿಯಲ್ಲಿ ಲಭ್ಯವಾಗುತ್ತದೆ ಜೊತೆಗೆ ಅನಿಯಮಿತ ಸ್ಥಳೀಯ/ಎಸ್ ಟಿಡಿ ಕರೆಗಳು ಮತ್ತು ರೋಮಿಂಗ್ ಕರೆಗಳ ಬೆನಿಫಿಟ್ ಕೂಡ ಇರುತ್ತದೆ.100ಎಸ್ಎಂಎಸ್ ಗಳನ್ನು ಪ್ರತಿದಿನ ಕಳುಹಿಸಲು ಅವಕಾಶವಿದ್ದು ಏರ್ ಟೆಲ್ ಟಿವಿ, Wynk ಮ್ಯೂಸಿಕ್ ಇತ್ಯಾದಿಗಳಿಗೆ ಈ ಪ್ಲಾನ್ ನ ಅಡಿಯಲ್ಲಿ ಆಕ್ಸಿಸ್ ಮಾಡಬಹುದು.

Best Mobiles in India

English summary
Reliance Jio vs Vodafone vs Airtel prepaid plans under Rs 300 with more than 1GB data per day

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X