ಜಿಯೋ ಗ್ರಾಹಕರು ಭರ್ಜರಿ ಸಿಹಿಸುದ್ದಿಗೆ ಇನ್ನೂ ಒಂದು ವರ್ಷ ಕಾಯಬೇಕು!

|

ದೇಶದ ಟೆಲಿಕಾಂ ವಲಯದಲ್ಲಿ ಕಡಿಮೆ ಬೆಲೆಗೆ ಡೇಟಾ ಪ್ಲ್ಯಾನ್ ಪರಿಚಯಿಸಿ ಸದ್ದು ಮಾಡಿದ್ದ ಜಿಯೋ ಟೆಲಿಕಾಂ ಕಳೆದ ವರ್ಷ ಜಿಯೋದಿಂದ ಹೊರಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿ ಗ್ರಾಹಕರಿಗೆ ಶಾಕ್ ತಂದಿತು. ಆದ್ರೆ ತನ್ನ ಚಂದಾದಾರರರಿಗೆ ಹೊರೆ ಆಗಬಾರದೆಂದು ಅದಕ್ಕೆ ಪೂರಕವಾಗಿ ಟಾಕ್‌ಟೈಮ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಆದ್ರೆ ಇದೀಗ ಜಿಯೋ ಮತ್ತೊಂದು ಸುದ್ದಿಯು ಚಂದಾದಾರರಿಗೆ ಬೇಸರ ಮೂಡಿಸಲಿದೆ.

ಜಿಯೋ 2020

ಹೌದು, ಟೆಲಿಕಾಂ ವಲಯದಲ್ಲಿ ಭಾರಿ ಮುಂಚೂಣಿಯಲ್ಲಿರುವ ಜಿಯೋ 2020ರ ಆರಂಭದಲ್ಲಿ ಇಲ್ಲವೇ ಮಧ್ಯಂತರದಲ್ಲಿ 6 ಪೈಸೆ ಕರೆ ದರ (IUC ) ತೆಗೆದುಹಾಕುವ ನಿರೀಕ್ಷೆಗಳಿದ್ದವು ಗ್ರಾಹಕರಲ್ಲಿ ಮೂಡಿದ್ದವು. ಆದರೆ ಅಂತಹ ಯಾವುದೇ ನಿರ್ಧಾರಗಳನ್ನು ಸದ್ಯ ಜಿಯೋ ತೆಗೆದುಕೊಂಡಿಲ್ಲ. ಜಿಯೋದಿಂದ ಇತರೆ ನೆಟವರ್ಕಗಳಿಗೆ ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ವ್ಯವಸ್ಥೆಯು ಇನ್ನು ಒಂದು ವರ್ಷ ಮುಂದುವರೆಯಲಿದೆ ಎಂದು ಸಂಸ್ಥೆಯು ಹೇಳಿದೆ.

ಜಿಯೋ IUC ಶುಲ್ಕ ಯಾಕೆ ಭರಿಸುತ್ತೆ?

ಜಿಯೋ IUC ಶುಲ್ಕ ಯಾಕೆ ಭರಿಸುತ್ತೆ?

ಹೊರ ಹೋಗುವ ಕರೆಗಳಿಗೆ ಟೆಲಿಕಾಂ ಸಂಸ್ಥೆಗಳು ಐಯುಸಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಒಂದು ಟೆಲಿಕಾಂ ಸೇವಾ ಸಂಸ್ಥೆಯು ಇನ್ನೊಂದು ಟೆಲಿಕಾಂ ಸಂಸ್ಥೆಗೆ ಕರೆ ಮಾಡಿದಾಗ ಹೊರ ಹೋಗುವ ಕರೆಗೆ ಆ ಸಂಸ್ಥೆಯು ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ (IUC) ಭರಿಸಬೇಕಾಗಿರುತ್ತದೆ. ಉದಾಹರಣೆಗೆ- ಏರ್‌ಟೆಲ್‌ನಿಂದ ಜಿಯೋಗೆ ಕರೆ ಮಾಡಿದರೇ ಏರ್‌ಟೆಲ್‌ ಜಿಯೋ ಟೆಲಿಕಾಂಗೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ಪಾವತಿಸಬೇಕಿರುತ್ತದೆ. ಸದ್ಯ ಜಿಯೋ ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯಾಗಿದ್ದು, ಹೊರ ಹೋಗುವ ಕರೆಗಳು ಹೆಚ್ಚಾಗಿವೆ. ಹಾಗೆಯೇ ಐಯುಸಿ ಶುಲ್ಕ ತುಂಬುವುದು ಹೆಚ್ಚಾಗಿದೆ ಎನ್ನಲಾಗಿದೆ.

ಚಂದಾದಾರಿಗೆ ಆಕರ್ಷಕ ಪ್ಲ್ಯಾನ್

ಚಂದಾದಾರಿಗೆ ಆಕರ್ಷಕ ಪ್ಲ್ಯಾನ್

ಜಿಯೋ ಟೆಲಿಕಾಂ ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿದ ನಂತರ ತನ್ನ ಚಂದಾದಾರಿಗೆ ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಜಿಯೊ ಟು ಜಿಯೋ ಕರೆಗಳು ಉಚಿತವಾಗಿವೆ. ಹಾಗೂ ಜಿಯೋದಿಂದ ಹೊರ ಹೋಗುವ ಕರೆಗಳಿಗೆ ನಿಗದಿತ ಉಚಿತ ನಿಮಿಷಗಳನ್ನು ಒಳಗೊಂಡಿವೆ. ನಿಗದಿಯ ಉಚಿತ ನಿಮಿಷಗಳು ಮುಗಿದ ಬಳಿಕ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕವಾಗುತ್ತದೆ. ಅದಕ್ಕೆ ಪೂರಕವಾಗಿ ಭಿನ್ನ ಬೆಲೆಯ ಐಯುಸಿ ಟಾಕ್‌ಟೈಮ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

IUC ಟಾಪ್‌-ಅಪ್‌ ಪ್ಲ್ಯಾನ್‌ಗಳು

IUC ಟಾಪ್‌-ಅಪ್‌ ಪ್ಲ್ಯಾನ್‌ಗಳು

ಜಿಯೋ ದಿಂದ ಇತರೆ ನೆಟವರ್ಕಗಳಿಗೆ ಹೊರಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿದ ನಂತರ ಜಿಯೋ ಈ IUC ಟಾಪ್‌-ಅಪ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿತು. ವ್ಯಾಲಿಡಿಟಿ ಇದ್ದು, ಇತರೆ ನೆಟವರ್ಕಗಳ ಉಚಿತ ಕರೆ ನಿಮಿಷದ ಮಿತಿ ಮುಗಿದಾಗ, ಜಿಯೋ ಗ್ರಾಹಕರ ಈ IUC ಟಾಪ್‌-ಅಪ್‌ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು 10ರೂ.ಯಿಂದ 1000ರೂ.ವರೆಗೂ ಸಹ IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳಿವೆ.

IUC ಟಾಪ್‌-ಅಪ್‌ ಡಾಟಾ ಪ್ರಯೋಜನಗಳು

IUC ಟಾಪ್‌-ಅಪ್‌ ಡಾಟಾ ಪ್ರಯೋಜನಗಳು

ಅಗ್ಗದ ಬೆಲೆಗೆ ಈ IUC ಟಾಪ್‌-ಅಪ್‌ ರೀಚಾರ್ಜ್‌ಗಳು ಅನುಕೂಲಕರ ಎನ್ನಬಹುದಾಗಿದೆ. IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳು ಕ್ರಮವಾಗಿ 10ರೂ, 20ರೂ, 50ರೂ, 100ರೂ, 500ರೂ, ಮತ್ತು 1000ರೂ. ಆಗಿವೆ. ಇನ್ನು ಈ ಫ್ಲ್ಯಾನ್‌ಗಳು ಡಾಟಾ ಪ್ರಯೋಜನ ಪಡೆದಿದ್ದು, ಕ್ರಮವಾಗಿ 1GB, 2GB, 5GB, 10GB, 50GB ಮತ್ತು 100GB ಡಾಟಾ ಸೌಲಭ್ಯವನ್ನು ಒದಗಿಸಲಿವೆ.

ಜಿಯೋ 4G ಡಾಟಾ ವೋಚರ್ಸ್‌ ಆಯ್ಕೆಗಳು

ಜಿಯೋ 4G ಡಾಟಾ ವೋಚರ್ಸ್‌ ಆಯ್ಕೆಗಳು

ಜಿಯೋ ಸಂಸ್ಥೆಯು ಹೆಚ್ಚುವರಿ ಡಾಟಾ ಬಳಕೆಗಾಗಿ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡಾಟಾ ಬಳಕೆಗಾಗಿ ಕೆಲವು 4G ಡಾಟಾ ವೋಚರ್ಸ್‌ ಆಯ್ಕೆಗಳು ಪರಿಚಯಿಸಿದೆ. 11ರೂ. ಡಾಟಾ ವೋಚರ್ ನಲ್ಲಿ 400MB ಡಾಟಾ ಲಭ್ಯ, 21ರೂ. ವೋಚರ್‌ನಲ್ಲಿ 1GB ಡಾಟಾ, 51ರೂ. ನಲ್ಲಿ 3GB ಡಾಟಾ, ಹಾಗೂ 101ರೂ. ಡಾಟಾ ವೋಚರ್ ಪ್ಲ್ಯಾನಿನಲ್ಲಿ ಒಟ್ಟು 6GB ಡಾಟಾ ಸಿಗಲಿದೆ.

Most Read Articles
Best Mobiles in India

English summary
Jio subscribers will have to keep paying 6 paise per minute over their usual calling limit for another year. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X