ನಿಮ್ಮ ಏರಿಯಾದಲ್ಲಿ 'ರಿಲಾಯನ್ಸ್ ಜಿಯೋ' ಸಿಮ್ ಸ್ಟೋರ್‌ ಪತ್ತೆ ಹೇಗೆ?

By Suneel
|

ಉಚಿತವಾಗಿ ರಿಲಾಯನ್ಸ್ ಜಿಯೋ 4G ಸಿಮ್ ಈಗಾಗಲೇ ಬಹುಸಂಖ್ಯಾತರ ಕೈ ಸೇರಿದೆ. ಅಂದಹಾಗೆ ರಿಲಾಯನ್ಸ್‌ ಜಿಯೋ 4G ಸಿಮ್ ಅನ್ನು 4G ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್ ಇರುವವರು ಯಾರು ಬೇಕಾದರು ಸಿಮ್ ಅನ್ನು ಉಚಿತವಾಗಿ ಪಡೆಯಬಹುದು.

Read:ರಿಲಾಯನ್ಸ್ ಜಿಯೋ 4G ಸಿಮ್ ಪಡೆಯಲು ಅನುಸರಿಸಬೇಕಾದ ಹಂತಗಳು

ಅಲ್ಲದೇ ಪ್ರಿವೀವ್‌ ಆಫರ್‌ನಲ್ಲಿ ರಿಲಾಯನ್ಸ್ ಜಿಯೋ 4G ಸಿಮ್‌ ಉಚಿತವಾಗಿ ಸಿಗಲಿದ್ದು, 90 ದಿನಗಳ ಕಾಲ (3 ತಿಂಗಳು) ಅನ್‌ಲಿಮಿಟೆಡ್‌ 4G ಇಂಟರ್ನೆಟ್‌ ಡಾಟಾ ಬಳಸಬಹುದು, ಅಲ್ಲದೇ ಉಚಿತ ಕರೆ ಮತ್ತು ಮೆಸೇಜ್‌ಗಳ ಆಫರ್‌ ಸಹ ಸಿಗಲಿದೆ.

ಅಂದಹಾಗೆ ಸಿಮ್‌ ಉಚಿತ ಎಂದಾಗಿನಿಂದ ಹಲವು ಜನರು ಸಿಮ್‌ ಖರೀದಿಸಲು 'ರಿಲಾಯನ್ಸ್‌ ಜಿಯೋ ' ಸ್ಟೋರ್‌ ಅನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಕೆಲವರಿಗೆ ಸ್ಟೋರ್‌ ಹುಡುಕಲು ಕಷ್ಟವಾಗಿ ಹಾಗೆ ಸುಮ್ಮನಾಗಿದ್ದಾರೆ. ಚಿಂತೆ ಬಿಡಿ ನೀವು ಇರುವ ಏರಿಯಾದಲ್ಲೇ 'ರಿಲಾಯನ್ಸ್‌ ಜಿಯೋ' ಸಿಮ್ ದೊರೆಯುವ ಸ್ಟೋರ್‌ ಎಲ್ಲಿದೆ ಎಂದು ಸುಲಭವಾಗಿ ತಿಳಿಯಬಹುದು. ಕೇವಲ ಒಂದು ನಿಮಿಷದಲ್ಲಿ ನಿಮ್ಮ ಏರಿಯಾದಲ್ಲಿ ಉಚಿತವಾಗಿ ರಿಲಾಯನ್ಸ್‌ ಜಿಯೋ 4G ಸಿಮ್ ಖರೀದಿಸಬಹುದಾದ ಸ್ಟೋರ್‌ ಎಲ್ಲಿದೆ ಎಂದು ತಿಳಿಯಬಹುದು. ಹೇಗೆ ಎಂದು ತಿಳಿಯಲು ಸ್ಲೈಡರ್‌ ಓದಿರಿ.

ಉಚಿತವಾಗಿ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿ ಮತ್ತು ಆಕ್ಟಿವೇಟ್ ಹೇಗೆ?

ಹಂತ 1

ಹಂತ 1

ಮೊದಲಿಗೆ ನಿಮ್ಮ ಸ್ಮಾರ್ಟ್‌ ಡಿವೈಸ್‌ ಅಥವಾ ಕಂಪ್ಯೂಟರ್‌ನಲ್ಲಿ www.jio.com ವೆಬ್‌ಸೈಟ್‌ಗೆ ಲಾಗಿನ್‌ ಆಗಿ.

ಹಂತ 2

ಹಂತ 2

ವೆಬ್‌ಸೈಟ್‌ಗೆ ಲಾಗಿನ್‌ ಆದ ನಂತರ ಓಪನ್ ಆದ ಪೇಜ್‌ನಲ್ಲಿ 'Find A Store' ಮೆನು ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

ಹಂತ 3

ಹಂತ 3

'Find A Store' ಮೆನು ಮೇಲೆ ಕ್ಲಿಕ್‌ ಮಾಡಿದ ನಂತರ ಓಪನ್‌ ಆದ ಪೇಜ್‌ ನಿಮಗೆ ಮ್ಯಾಪ್‌ ಅನ್ನು ಹಾಗೂ ಎಡಭಾಗದಲ್ಲಿ ಬೆಂಗಳೂರಿನಲ್ಲಿ 'ರಿಲಾಯನ್ಸ್‌ ಜಿಯೋ' ಸ್ಟೋರ್‌ಗಳ ವಿಳಾಸವನ್ನು ಪ್ರದರ್ಶಿಸುತ್ತದೆ. ನಿಮ್ಮ ಏರಿಯಾದಲ್ಲಿ ಸ್ಟೋರ್‌ ಪತ್ತೆ ಹೇಗೆ ಎಂದು ತಿಳಿಯಲು ಮುಂದಿನ ಸ್ಲೈಡರ್‌ ಓದಿರಿ.

ಹಂತ 4

ಹಂತ 4

ಅದೇ ಪೇಜ್‌ ನಲ್ಲೇ Jio ಐಕಾನ್‌ ಕೆಳಗೆ 'Enter your Area/Location/Pincode' ಎಂದು ಇರುವಲ್ಲಿ ನೀವು ಇರುವ ಏರಿಯಾದಲ್ಲಿ ಅಥವಾ ನಿಮಗೆ ಹತ್ತಿರದಲ್ಲಿ 'ರಿಲಾಯನ್ಸ್‌ ಜಿಯೋ' ಸ್ಟೋರ್‌ ಎಲ್ಲಿದೆ ಎಂದು ತಿಳಿಯಲು ನೀವಿರುವ ಸ್ಥಳದ ಹೆಸರು ಟೈಪಿಸಿ ಸರ್ಚ್‌ ಮಾಡಿ.

ಹಂತ 5

ಹಂತ 5

ನೀವು ಯಾವುದೇ ಪ್ರದೇಶದಲ್ಲಿ ಇದ್ದರೂ ಸಹ ನಿಮಗೆ ಹತ್ತಿರದಲ್ಲಿ 'ರಿಲಾಯನ್ಸ್‌ ಜಿಯೋ' ಸ್ಟೋರ್‌ ಎಲ್ಲಿದೆ ಎಂದು ತಿಳಿಯಲು ನೀವಿರುವ ಏರಿಯಾ ಹೆಸರು ಟೈಪಿಸಿದರೆ ಮ್ಯಾಪ್‌ನಲ್ಲಿ ನೀವು ಸ್ಟೋರ್‌ ಎಲ್ಲಿದೆ ಎಂದು ತಿಳಿಯಬಹುದು.

Best Mobiles in India

English summary
How To Find 'Reliance Jio Sim' Stores in your Near Areas. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X