ರಿಲಾಯನ್ಸ್ ಜಿಯೋಗೆ ಸ್ಪರ್ಧಿಯಾಗಿ ಬಿಎಸ್‌ಎನ್‌ಎಲ್‌ನಿಂದ ಅನ್‌ಲಿಮಿಟೆಡ್‌ 3G ಡಾಟಾ ಆಫರ್!

By Suneel
|

ಟೆಲಿಕಾಂ ಕಂಪನಿಗಳ ನಡುವೆ ಇತ್ತೀಚಿನ ಕೆಲವು ತಿಂಗಳುಗಳಿಂದ ಅತ್ಯಧಿಕ ಸ್ಪರ್ಧೆ ಏರ್ಪಟ್ಟಿದ್ದು ಗ್ರಾಹಕರನ್ನು ಸೆಳೆಯುವ, ಉಳಿಸಿಕೊಳ್ಳುವ ಎರಡು ಚಟುವಟಿಕೆಗಳು ಸಹ ಜರುಗುತ್ತಿವೆ. ಅಂದಹಾಗೆ ಈ ಸ್ಪರ್ಧೆಯ ಸಾಲಿನಲ್ಲಿ ಏರ್‌ಟೆಲ್‌, ವೊಡಾಫೋನ್‌, ಬಿಎಸ್‌ಎನ್‌ಎಲ್‌, ಐಡಿಯಾ ಮತ್ತು ರಿಲಯನ್ಸ್‌ಗಳು ಮುಖ್ಯವಾಗಿವೆ. ಈ ವೇಳೆಯಲ್ಲಿ ಗ್ರಾಹಕರು ಪದೇ ಪದೇ ಉತ್ತಮ ಆಫರ್‌ಗಳನ್ನು ಪಡೆಯುತ್ತಿದ್ದಾರೆ.

ಕೌಂಟರ್‌ನಲ್ಲಿ ಸ್ಪರ್ಧೆ ಎದುರಾಗುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಮಾಲಿಕತ್ವದ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ನ್ಯಾಷನಲ್‌ ಅನ್‌ಲಿಮಿಟೆಡ್‌ 3G ಮೊಬೈಲ್‌ ಡಾಟಾ ಪ್ಲಾನ್‌ ಅನ್ನು ರಿಲಾಯನ್ಸ್ ಜಿಯೋಗೆ ಪ್ರತಿಸ್ಪರ್ಧಿಯಾಗಿ ಪ್ರಕಟಗೊಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌

ರಾಜ್ಯ ಮಾಲೀಕತ್ವದ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ನ್ಯಾಷನಲ್‌ ಅನ್‌ಲಿಮಿಟೆಡ್‌ 3G ಮೊಬೈಲ್ ಡಾಟಾ ಪ್ಲಾನ್‌ ಅನ್ನು ಬೆಲೆ ರೂ 1,099 ಗೆ ಪ್ರಕಟಣೆಗೊಳಿಸಿದ್ದು, ಕೆಲವು ಪ್ರಸ್ತುತ ಪ್ಲಾನ್‌ಗಳ ಜೊತೆಗೆ ಡಬಲ್‌ ಡಾಟಾ ಬಳಕೆ ನೀಡಲಿದೆ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌

"ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಅಭಿವೃದ್ದಿಯಿಂದ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇಂಟರ್ನೆಟ್‌ ವೇಗ ಕಡಿಮೆ ಮಾಡದೇ ರೂ. 1,099 ಕ್ಕೆ 3G ಅನ್‌ಲಿಮಿಟೆಡ್‌ ಆಫರ್‌ ಅನ್ನು ಟೆಲಿಕಾಂ ಇಂಡಸ್ಟ್ರಿಯಲ್ಲಿ ಮೊದಲ ಬಾರಿಗೆ ನೀಡಿದೆ. ಇದು ಗ್ರಾಹಕರಿಗೆ ಉತ್ತಮ ಅನುಭವ ನೀಡಲಿದೆ" ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುಪಂ ಶ್ರೀವತ್ಸವ ಹೇಳಿದ್ದಾರೆ.

ಬಿಎಸ್‌ಎನ್‌ಎಲ್‌ ಗ್ರಾಹಕರು

ಬಿಎಸ್‌ಎನ್‌ಎಲ್‌ ಗ್ರಾಹಕರು

ಬಿಎಸ್‌ಎನ್‌ಎಲ್‌ ಕಳೆದ ಏಪ್ರಿಲ್‌ನಲ್ಲಿ ಅತಿಹೆಚ್ಚು ಗ್ರಾಹಕರನ್ನು ಸಬ್‌ಸ್ಕ್ರೈಬರ್‌ರನ್ನಾಗಿ ಮಾಡಿಕೊಂಡಿತ್ತು. ಈ ಬಗ್ಗೆ ಟೆಲಿಕಾಂ ನಿಯಂತ್ರಕ ಟ್ರಾಯ್‌ ಡಾಟಾ ಬಿಡುಗಡೆ ಮಾಡಿತ್ತು.

 ಬಿಎಸ್‌ಎನ್‌ಎಲ್‌ ಗ್ರಾಹಕರು

ಬಿಎಸ್‌ಎನ್‌ಎಲ್‌ ಗ್ರಾಹಕರು

ಮೊಬೈಲ್ ವಿಭಾಗದಲ್ಲಿ ಬಿಎಸ್‌ಎನ್‌ಎಲ್‌ ಏಪ್ರಿಲ್‌ನಲ್ಲಿ 11.39 ಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಆಡ್‌ ಮಾಡಿಕೊಂಡಿತ್ತು. ಭಾರತಿ ಏರ್‌ಟೆಲ್‌ (9.78 ಲಕ್ಷ), ಏರ್‌ಸೆಲ್‌ (5.72 ಲಕ್ಷ),ರಿಲಾಯನ್ಸ್ ಕಮ್ಯೂನಿಕೇಶನ್ಸ್ (1.1 ಲಕ್ಷ), ವೊಡಾಫೋನ್ (46,600), ಕ್ವಾಡ್ರಾಂಟ್ (ವೀಡಿಯೋಕಾನ್ ಗ್ರೂಪ್ - 25,012) ಮತ್ತು ಎಂಟಿಎನ್ಎಲ್ (11,591) ಟೆಲಿಕಾಂಗಳು ಆಡ್‌ ಮಾಡಿಕೊಂಡಿದ್ದುವು.

ಕೌಂಟರ್ ಡಾಟಾ ರೇಟ್‌ ಆಫರ್

ಕೌಂಟರ್ ಡಾಟಾ ರೇಟ್‌ ಆಫರ್

ಖಾಸಗಿ ಟೆಲಿಕಾಂ ಆಪರೇಟರ್‌ಗಳ ಡಾಟಾ ರೇಟ್‌ ತಂತ್ರದ ತೀವ್ರತೆಯ ಶೇಕಡ 67 ರಲ್ಲಿ, ಬಿಎಸ್‌ಎನ್‌ಎಲ್‌ ಡಬಲ್‌ ಡಾಟಾ ಉಪಯೋಗ ರೂ 549 ಕ್ಕೆ 3G ಸೇವೆ ಸಿಗಲಿದ್ದು, ಇದು 5GB ಯಿಂದ 10GB ಗೆ ಏರಿಕೆಯಾಗಿದೆ. ಈ ಪ್ಲಾನ್‌ ವ್ಯಾಲಿಡಿಟಿ 30 ದಿನಗಳದಾಗಿದ್ದು, ಶೇಕಡ 100 ಡಾಟಾ ಬೆನಿಫಿಟ್‌ ಸಬ್‌ಸ್ಕ್ರೈಬರ್‌ಗಳಿಗೆ ಸಿಗಲಿದೆ ಎಂದು ಶ್ರೀವತ್ಸ'ರವರು ಹೇಳಿದ್ದಾರೆ.

ಬಿಎಸ್‌ಎನ್‌ಎಲ್‌ ಪ್ರಸ್ತುತ ಡಾಟಾ ಆಫರ್‌ ಏನು?

ಬಿಎಸ್‌ಎನ್‌ಎಲ್‌ ಪ್ರಸ್ತುತ ಡಾಟಾ ಆಫರ್‌ ಏನು?

ಬಿಎಸ್‌ಎನ್‌ಎಲ್‌ 3G ಡಾಟಾ ಬಳಕೆಯಲ್ಲಿ ಡಾಟಾ ಎರಡುಪಟ್ಟು ಸಿಗಲಿದ್ದು ರೂ.156 ಕ್ಕೆ 2G ಡಾಟಾವನ್ನು 10 ದಿನ ವ್ಯಾಲಿಡಿಟಿಯೊಂದಿಗೆ ಬಳಸಬಹುದಾಗಿದೆ.

ರಿಲಾಯನ್ಸ್ ಜಿಯೋ

ರಿಲಾಯನ್ಸ್ ಜಿಯೋ

ಜುಲೈ ತಿಂಗಳಲ್ಲಿ ಏರ್‌ಟೆಲ್‌, ವೊಡಾಫೋನ್‌, ಐಡಿಯಾ 3G/4G ಡಾಟಾ ಬಳಕೆಯನ್ನು ವಿಸ್ತರಿಸಿದ್ದು, ರಿಲಾಯನ್ಸ್ ಜಿಯೋ 90 ದಿನಗಳ ಕಾಲ ಅನ್‌ಲಿಮಿಟೆಡ್‌ ಡಾಟಾ ಬಳಕೆಯನ್ನು ಉಚಿತವಾಗಿ ನೀಡಿದೆ.

Best Mobiles in India

Read more about:
English summary
BSNL Launches Unlimited 3G Mobile Data Plan for Rs. 1,099. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X