ಜಿಯೋ 4G ಬೇಸಿಕ್ ಫೋನ್ ಫೀಚರ್ಸ್ ಬಿಡುಗಡೆ! ಹೇಗಿದೆ ಫೋನ್?..ಎಸ್‌ಕ್ಲೂಸಿವ್ ವಿಡಿಯೋ ನೋಡಿ!!

Written By:

ಬಿಡುಗಡೆಗೂ ಮುನ್ನವೇ ರೂಮರ್ಸ್ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುವ ಜಿಯೋ ಫೀಚರ್ ಫೋನ್ ಬಗ್ಗೆ ದಿನದಿಂದ ದಿನಕ್ಕೆ ಹೊಸ ಸುದ್ದಿಗಳು ಸ್ಪೋಟಗೊಳುತ್ತಿವೆ. ಈಗಷ್ಟೇ ಜಿಯೋ ಫೀಚರ್ ಫೋನ್ ಕೇವಲ 500 ರೂಪಾಯಿಗಳಿಗೆ ಬಿಡುಗಡೆಯಾಗುತ್ತದೆ ಎನ್ನವ ಮಾಹಿತಿ ಜೊತೆಗೆ ಜಿಯೋ ಫೋನ್ ಹೇಗಿದೆ ಎಂಬ ವಿಡಿಯೋ ಇದೀಗ ಬಿಡುಗಡೆಯಾಗಿದೆ.!!

ಟೆಕ್ ಪಿಪಿ ಎನ್ನುವ ವೆಬ್‌ಸೈಟ್ ಜಿಯೋ ಫೀಚರ್ ಫೋನ್ ಹೇಗಿದೆ ಎಂಬುದರ ವಿಡಿಯೋ ಬಿಡುಗಡೆ ಮಾಡಿದ್ದು, ಮೊಬೈಲ್ ಬಗ್ಗೆಯೂ ಮಾಹಿತಿಯನ್ನು ನೀಡಿದೆ.!! ಮೊಬೈಲ್ ಬಗೆಗಿನ ಮಾಹಿತಿ ಎಲ್ಲಡೇ ವೈರಲ್ ಆಗಿದ್ದು, ಹಾಗಾದರೆ, ರಿಲಾಯನ್ಸ್ ಜಿಯೋ ಫೋನ್ ಹೇಗಿದೆ? ಏನೆಲ್ಲಾ ಫೀಚರ್ಸ್ ಹೊಂದಿದೆ? ಬಿಡುಗಡೆ ಯಾವಾಗ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೇಗಿದೆ ಜಿಯೋ ಮೊಬೈಲ್?

ಹೇಗಿದೆ ಜಿಯೋ ಮೊಬೈಲ್?

ಜಿಯೋ ಮತ್ತು LYF ಎರಡೂ ಅಂಬಾನಿಯದೇ ಬ್ರಾಂಡ್ ಆಗಿದ್ದು, LYF ಎಂದು ಲೋಗೊ ಇರುವ ಈ ಫೋನ್ ಜಿಯೋದೆ ಆಗಿದೆ. ನೋಡಲು ಹಳೆ ನೋಕಿಯಾ ಮಲ್ಟಮೀಡಿಯಾ ಸ್ಮಾರ್ಟ್‌ಫೋನ್‌ಗಳಿಗೆ ಹೋಲುವಂತೆ ಜಿಯೋ ಫೋನ್ ರೂಪುಗೊಂಡಿದೆ.! ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ.!!

ಮಲ್ಟಿಮೀಡಿಯಾ ಆಯ್ಕೆ ಇದೆ.!!

ಮಲ್ಟಿಮೀಡಿಯಾ ಆಯ್ಕೆ ಇದೆ.!!

ಜಿಯೋ ಫೋನ್ ವಿಡಿಯೋ ಜೊತೆಗೆ ಫೋನ್ ಬಗ್ಗೆ ಮಾಹಿತಿಯನ್ನು ಟೆಕ್ ಪಿಪಿ ವೆಬ್‌ಸೈಟ್ ನೀಡಿದೆ. ಜಿಯೋ 4G ಫೋನ್ 512MB RAM ಮತ್ತು 4GB ಆಂತರಿಕ ಮೆಮೊರಿಯನ್ನು ಹೊಂದಿದೆ. ಜೊತೆಗೆ ಮೈಕ್ರೋ ಕಾರ್ಡ್ ಮೂಲಕ ಮೆಮೊರಿಯನ್ನು 128GB ವರೆಗೂ ವಿಸ್ತರಿಸಿಕೊಳ್ಳುವ ಆಯ್ಕೆ ಇದೆ.!!

ಜಿಯೋ ಫೋನ್ ಪ್ರೊಸೆಸರ್ ಯಾವುದು ಗೊತ್ತಾ?

ಜಿಯೋ ಫೋನ್ ಪ್ರೊಸೆಸರ್ ಯಾವುದು ಗೊತ್ತಾ?

4G ವೋಲ್ಟ್ ಸೇವೆಗಾಗಿಯೇ ರಿಲಾಯನ್ಸ್ ಜಿಯೋ ಸ್ನ್ಯಾಪ್‌ಡ್ರಾಗನ್ 205 ಪ್ಲಾಟ್‌ಫಾರ್ಮ್ ಪ್ರೊಸೆಸರ್ ಹೊಂದಿದೆ. KAI OS ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಣೆ ನೀಡುವ ಫೋನ್, ಡ್ಯವೆಲ್ ಸಿಮ್ ಆಯ್ಕೆ ಹೊಂದಿದೆ. ಮತ್ತು ಒಂದು ಸ್ಲಾಟ್‌ನಲ್ಲಿ ನ್ಯಾನೋ ಸಿಮ್ ಹಾಕಬಹುದಾಗಿದೆ.!!

ಕ್ಯಾಮೆರಾ!!!

ಕ್ಯಾಮೆರಾ!!!

ಜಿಯೋ 4G ಫೋನ್ ಅನ್ನು ಬೇಸಿಕ್ ಫೋನ್ ಎಂದು ಹೇಳುವಹಾಗಿಲ್ಲ ಎನ್ನಬಹುದು.! ಹೌದು, ಜಿಯೋ 4G ಫೀಚರ್ ಫೋನ್ ಫ್ರಂಟ್ VGA ಹಾಗೂ ಹಿಂಬಾಗದಲ್ಲಿ 2MP ಕ್ಯಾಮೆರಾ ಹೊಂದಿದೆ.!! ಆದರೆ, ಕ್ಯಾಮೆರಾ ಗುಣಮಟ್ಟದ ಬಗ್ಗೆ ಮಾಹಿತಿ ತಿಳಿಸಿಲ್ಲಾ.!!

ಜಿಯೋ ಆಪ್ಸ್ ಕಾರ್ಯನಿರ್ವಹಿಸುತ್ತವೆ.!!

ಜಿಯೋ ಆಪ್ಸ್ ಕಾರ್ಯನಿರ್ವಹಿಸುತ್ತವೆ.!!

ಜಿಯೋ ಬೇಸಿಕ್ ಮೊಬೈಲ್‌ನಲ್ಲಿಯೂ ಜಿಯೋ ಆಪ್ಸ್ ಕಾರ್ಯನಿರ್ವಹಣೆ ನೀಡುತ್ತವೆ ಎಂದು ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. ಆದರೆ, ಜಿಯೋ ಸಿನಿಮಾ, ಜಿಯೋ ಟಿವಿಯಂತಹ ಕೆಲವೇ ಕೆಲವು ಆಪ್‌ಗಳು ಮಾತ್ರ ರನ್ ಆಗಿವೆ.!! ಇಷ್ಟು ಸಾಕಲ್ಲವೇ?

ಫೇಸ್‌ಬುಕ್ ವಾಟ್ಸ್ಆಪ್ ಸಹ ಬಳಸಬಹುದು.!!

ಫೇಸ್‌ಬುಕ್ ವಾಟ್ಸ್ಆಪ್ ಸಹ ಬಳಸಬಹುದು.!!

ಜಿಯೋ ಫೋನ್ ಖರೀದಿಸಿದರೆ ಫೇಸ್‌ಬುಕ್ ವಾಟ್ಸ್ಆಪ್ ಸಹ ಬಳಸಬಹುದು ಎಂದರೇ ನೀವು ನಂಬಲೇಬೇಕು. ಪ್ರಸ್ತುತ ಭಾರತೀಯರು ಹೆಚ್ಚು ಬಳಸುತ್ತಿರುವ ಫೇಸ್‌ಬುಕ್ ಮತ್ತು ವಾಟ್ಸ್‌ಆಪ್ ಬಳಕೆ ಮಾಡುವ ಆಯ್ಕೆಯನ್ನು ಸಹ ಜಿಯೋ ಫೋನ್ ಹೊಂದಿದೆ.!!

ವಿಡಿಯೋ ಕಾಲಿಂಗ್ ಮತ್ತು ಬ್ಲೂಟೂತ್ 4.1 ಆಯ್ಕೆ.!!

ವಿಡಿಯೋ ಕಾಲಿಂಗ್ ಮತ್ತು ಬ್ಲೂಟೂತ್ 4.1 ಆಯ್ಕೆ.!!

ಜಿಯೋ ಬೇಸಿಕ್ ಫೋನ್ ಮಾಹಿತಿ ಬಿಡುಗಡೆಯಾದ ತಕ್ಷಣ ಎಲ್ಲರೂ ನಿಬ್ಬೆರಗಾಗಿದ್ದು, ಮೊಬೈಲ್ ಫೀಚರ್ಸ್‌ಗಳಿಂದ.!! ವಿಡಿಯೋ ಕಾಲಿಂಗ್ ಮತ್ತು ಬ್ಲೂಟೂತ್ 4.1 ಆಯ್ಕೆಯನ್ನು ಹೊಂದಿರುವ ಜಿಯೋ ಫೋನ್ ಎಲ್ಲರಿಗೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು.!!

ಡೇಟಾ ಶೇರ್ ಮಾಡಬಹುದು.!!

ಡೇಟಾ ಶೇರ್ ಮಾಡಬಹುದು.!!

ಜಿಯೋ ಫೀಚರ್ ಫೋನ್ ಮೂಲಕ ನೀವು ನಿಮ್ಮಡೇಟಾವನ್ನು ಕೂಡ ಶೇರ್ ಮಾಡುವ ಆಯ್ಕೆ ಇದೆ.!! ಟೆದರಿಂಗ್ ಆಯ್ಕೆಯನ್ನು ಜಿಯೋ ಫೀಚರ್ ಫೋನ್ ಹೊಂದಿದ್ದು, ಜಿಯೋ ಡೇಟಾವನ್ನು ನಿಮ್ಮ ಗೆಳೆಯರು ಮತ್ತು ಫ್ಯಾಮಿಲಿ ಜೊತೆಗೆ ಹಂಚಿಕೊಳ್ಳಬಹುದು.!!

ಕನ್ನಡದಲ್ಲಿಯೂ ಮಾಹಿತಿ ಲಭ್ಯ.!!

ಕನ್ನಡದಲ್ಲಿಯೂ ಮಾಹಿತಿ ಲಭ್ಯ.!!

ಜಿಯೋ ಬೇಸಿಕ್ ಮೊಬೈಲ್ ಅನ್ನು ಭಾರತದ 22 ಭಾಷೆಗಳಲ್ಲಿ ಬಳಕೆ ಮಾಡಬಹುದಾಗಿದ್ದು, ಕನ್ನಡ ಭಾಷೆಯಲ್ಲಿಯೂ ಜಿಯೋ ಫೋನ್ ಬಳಕೆ ಮಾಡಬಹುದಾಗಿದೆ.!! ಗ್ರೆಆಮೀಣ ಜನರನ್ನು ಸೆಳೆಯಲು ಪ್ರಾದೇಶಕ ಭಾಷೆ ಅತ್ಯವಶ್ಯಕ ಎನ್ನಬಹುದು.!!

500 ರೂಪಾಯಿಗೆ ಜಿಯೋ ಫೋನ್?

500 ರೂಪಾಯಿಗೆ ಜಿಯೋ ಫೋನ್?

ಅಂಬಾನಿ 4G ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಅತ್ಯಂತ ಕಡಿಮೆ ಬೆಲೆಗೆ ಜಿಯೋ ಫೋನ್ ಬಿಡುಗಡೆ ಮಾಡುತ್ತಿದ್ದಾರೆ ಎನ್ನುವುದು ಬಹುತೇಕ ನಿಜ.!! ಆದರೆ, ಟೆಕ್ ಪಿಪಿ ವೆಬ್‌ಸೈಟ್ ಜಿಯೋ ಮೊಬೈಲ್‌ಗೆ 1500 ರೂ. ಬೆಲೆ ನಿಗದಿಪಡಿಸುತ್ತದೆ ಎಂದು ಹೇಳಿದೆ.!!

ಮೊಬೈಲ್ ಬಿಡುಗಡೆ ಯಾವಾಗ?

ಶೀಘ್ರದಲ್ಲಿಯೇ ಮೊಬೈಲ್ ಬಿಡುಗಡೆ ಮಾಡಲು ಅಂಬಾನಿ ಮುಂದಾಗಿದ್ದು, ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಜಿಯೋ 4G ಮೊಬೈಲ್ ಬಿಡುಗಡೆಯಾಗುತ್ತಿದೆ ಎಂಬ ರೂಮರ್ಸ್ ಹೊರಬಿದ್ದಿದೆ.!! ಇನ್ನು ಕೆಲವು ಮಾಧ್ಯಮಗಳ ಪ್ರಕಾರ ಅಂಬಾನಿ ಆಗಸ್ಟ್ 15 ಕ್ಕೆ ಭಾರತೀಯರಿಗೆ ಸ್ವಾತಂತ್ರ್ಯದ ಗಿಫ್ಟ್ ಆಗಿ ನೀಡಲಿದ್ದಾರೆ ಎಂದು ವರದಿ ಮಾಡಿವೆ.!

ಮೂಲ ಮಾಹಿತಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio's 4G VoLTE feature phone is hitting the rumor mills aggressively in the recent days. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot