ಶುರುವಾಯ್ತು 'ಜಿಯೋ ಗಿಗಾಫೈಬರ್' ಅಬ್ಬರ್!..ಆಫರ್‌ ಭರಪೂರ!

|

ಭಾರತೀಯ ಟೆಲಿಕಾಂ ವಲಯಕ್ಕೆ ಜಿಯೋ ಎಂಟ್ರಿ ಕೊಟ್ಟು ಹಲವು ಮಹತ್ತರ ಬದಲಾವಣೆಯನ್ನು ಮಾಡಿ, ಹೊಸ ಮೈಲುಗಲ್ಲು ಸ್ಥಾಪಿಸಿತು. ಜಿಯೋ ಸಂಸ್ಥೆಯು ಗ್ರಾಹಕರ ನಿರೀಕ್ಷಿಗಿಂತ ಕಡಿಮೆ ದರದಲ್ಲಿ ಮೊಬೈಲ್ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿತು. ಆ ಬಿರುಗಾಳಿ ಮುಂದುವರೆದು ಈಗ ಬ್ರಾಂಡ್‌ಬ್ಯಾಂಡ್‌ ಸೇವೆಯತ್ತ ಬಂದಿದೆ. ಕಂಪನಿಯ ಬಹುನಿರೀಕ್ಷಿತ ಜಿಯೋ ಗಿಗಾಫೈಬರ್ ಸೇವೆ ಲಾಂಚ್‌ ಆಗಿದ್ದು, ಇತರೆ ಕಂಪನಿಗಳಿಗೆ ಚಳಿ ಹೆಚ್ಚಾಗಿದೆ.

ಶುರುವಾಯ್ತು 'ಜಿಯೋ ಗಿಗಾಫೈಬರ್' ಅಬ್ಬರ್!..ಆಫರ್‌ ಭರಪೂರ!

ಹೌದು, ರಿಲಾಯನ್ಸ್ ಜಿಯೋ ಸಂಸ್ಥೆಯು ಇಂದು ನಡೆದ 42ನೇ (ಅಗಷ್ಟ 12) 'ಜಿಯೋ ವಾರ್ಷಿಕ ಸಭೆ'ಯಲ್ಲಿ ಮುಂಖೇಶ ಅಂಬಾನಿ ಅವರು 'ಜಿಯೋ ಗಿಗಾಫೈಬರ್' ಸೇವೆಯನ್ನು ಬಿಡುಗಡೆ ಮಾಡಿದರು. ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಜಿಯೋಗಿಗಾ ಫೈಬರ್‌ ಸೇವೆಯು ಇದೇ 'ಸೆಪ್ಟಂಬರ್ 5' ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಗಿಗಾಫೈಬರ್ ತಿಂಗಳ ಪ್ಯಾಕೆಜ್‌ ಬೆಲೆಗಳು 700ರೂ.ಗಳಿಂದ 10,000ರೂ.ಗಳ ವರೆಗೂ ಇರಲಿವೆ.

ಶುರುವಾಯ್ತು 'ಜಿಯೋ ಗಿಗಾಫೈಬರ್' ಅಬ್ಬರ್!..ಆಫರ್‌ ಭರಪೂರ!

ಜಿಯೋ ಗಿಗಾಫೈಬರ್, ದೇಶಿಯ ಬ್ರಾಂಡ್‌ಬ್ಯಾಂಡ್‌ ಸೇವೆಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಭರವಸೆಗಳನ್ನು ಮೂಡಿಸಿವ ಯೋಜನೆಗಳನ್ನು ಜಿಯೋ ಹೊರಹಾಕಿದೆ. ಜಿಯೋ ಗಿಗಾಫೈಬರ್‌ನ ಭರ್ಜರಿ ಕೊಡುಗೆಗಳ ಅಬ್ಬರದ ನಡುವೆ ಏರ್‌ಟೆಲ್ ಮತ್ತು ಟಾಟಾಸ್ಕೈ ಬ್ರಾಡ್‌ಬ್ಯಾಂಡ್‌ ಸೇವೆಗಳು ತತ್ತರವಾಗುವ ಸಾಧ್ಯತೆಗಳೆ ಹೆಚ್ಚಾಗಿವೆ. ಹಾಗಾದರೇ ಜಿಯೋ ಗಿಗಾಫೈಬರ್ ಗ್ರಾಹಕರಿಗೆ ಯಾವೆಲ್ಲಾ ಉಡುಗೊರೆಗಳನ್ನು ನೀಡುತ್ತದೆ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಜನಪ್ರಿಯ OTT ಸೇವೆಗಳು ಲಭ್ಯ

ಜನಪ್ರಿಯ OTT ಸೇವೆಗಳು ಲಭ್ಯ

ಸದ್ಯ ಜನಪ್ರಿಯವಾಗಿರುವ ನೆಟ್‌ಫ್ಲೆಕ್ಸ್, ಹಾಟ್‌ಸ್ಟಾರ್, ಎಎಲ್‌ಟಿ ಬಾಲಾಜಿ, ಅಮೆಜಾನ್ ಪ್ರೈಮ್, ವಿಯು, ಸೋನಿ ಲೈವ್, ಜೀ5, ಸೇರಿದಂತೆ ಇತರೆ ಪ್ರಮುಖ ಆಪ್ಸ್‌ಗಳನ್ನು ಜಿಯೋ ಗಿಗಾಫೈಬರ್ ಒಳಗೊಂಡಿರಲಿದೆ. ಇದರೊಂದಿಗೆ ಜಿಯೋ ಸಂಸ್ಥೆಯ 'ಬಿಗ್‌ಫ್ಲೆಕ್ಸ್' ವಿಡಿಯೊ ಸ್ಟ್ರಿಮಿಂಗ್ ಸೇವೆಯು ಸಹ ಸೇರಿಕೊಳ್ಳಲಿದೆ ಎಂದು ಮುಖೇಶ ಅಂಬಾನಿ ತಿಳಿಸಿದರು.

ವಾರ್ಷಿಕ ಪ್ಲ್ಯಾನ್‌ ಬೇನಿಫೀಟ್ಸ್

ವಾರ್ಷಿಕ ಪ್ಲ್ಯಾನ್‌ ಬೇನಿಫೀಟ್ಸ್

ಜಿಯೋ ಗಿಗಾಫೈಬರ್‌ನ ವಾರ್ಷಿಕ ಪ್ಲ್ಯಾನ್‌ ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ HD 4k LED ಟೆಲಿವಿಷನ್ ನೀಡಲಿದ್ದು, ಇದರೊಂದಿಗೆ ಉಚಿತ ಸೆಟ್‌ಅಪ್‌ ಬಾಕ್ಸ್ ಸಹ ಲಭ್ಯವಾಗಲಿದೆ. ಮೆನಯಿಂದ ದೇಶದ ಯಾವುದೇ ಮೊಬೈಲ್ ನೆಟವರ್ಕ್‌ ಮತ್ತು ಲ್ಯಾಂಡ್‌ಲೈನ್‌ಗಳಿಗೆ ಲೈಫ್‌ಟೈಮ್ ಉಚಿತ ಕರೆಗಳ ಸೌಲಭ್ಯವು ಲಭ್ಯವಾಗಲಿದೆ.

ಫಸ್ಟ್‌ ಡೇ ಫಸ್ಟ್‌ ಶೋ

ಫಸ್ಟ್‌ ಡೇ ಫಸ್ಟ್‌ ಶೋ

ಸಿನಿಮಾ ರಿಲೀಸ್‌ ಆದ ಮೊದಲ ದಿನ ಮೊದಲ ಪ್ರದರ್ಶನವನ್ನು ನೋಡುವ ಅವಕಾಶವು ಸಹ ಜಿಯೋ ಗಿಗಾಫೈಬರ್‌ನಲ್ಲಿ ಗ್ರಾಹಕರಿಗೆ ದೊರೆಯಲಿದೆ. ಆದರೆ ಈ ಸೇವೆಯು 2020ರಲ್ಲಿ ಜಿಯೋ ಗಿಗಾಫೈಬರ್ ಸೇರಿಕೊಳ್ಳಲಿದೆ. ಹೀಗಾಗಿ ರಿಲಾಯನ್ಸ್ ಜಿಯೋ ತನ್ನ ಟ್ಯಾಗ್‌ಲೈನ್‌ ಡಿಜಟಲ್ ಲೈಫ್‌ ಪರಿಕಲ್ಪನೆಯನ್ನು ಸಾಕಾರವಾಗಿಸುವ ಪ್ರಯತ್ನಗಳನ್ನು ನಡೆಸಿದೆ ಎನ್ನಬಹುದು.

ಸಣ್ಣ ಉದ್ಯಮಗಳಿಗೆ ಆದ್ಯತೆ

ಸಣ್ಣ ಉದ್ಯಮಗಳಿಗೆ ಆದ್ಯತೆ

ಜಿಯೋ ಸಂಪರ್ಕ ಪಡೆಯುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಹಾಗೆಯೇ ನೂತನ ಸ್ಟಾರ್ಟ್‌ಅಪ್‌ ಉದ್ಯಮಗಳಿಗೂ ನೆರವಾಗಲಿದೆ. ಸ್ಟಾರ್ಟ್‌ಅಪ್‌ ಮುಂಬರುವ ಜನವರಿ 1, 2021ರ ವೇಳೆಗೆ ವಿಶೇಷ ಜಿಯೋ ಗಿಗಾಫೈಬರ್ ಕನೆಕ್ಟಿವಿಟಿ ಆಫರ್‌ಗಳನ್ನು ಪರಿಚಯಿಸುವ ತಿಂಗಳಿಗೆ 1,500ರೂ.ಗಳ ದರ ನಿಗದಿಪಡಿಸುವ ಯೋಜನೆ ಇದೆ.

<strong>ಓದಿರಿ : ಶಿಯೋಮಿ ಇಂಥ ಅಚ್ಚರಿ ನೀಡಲಿದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ!</strong>ಓದಿರಿ : ಶಿಯೋಮಿ ಇಂಥ ಅಚ್ಚರಿ ನೀಡಲಿದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ!

Best Mobiles in India

English summary
Premium Jio Fiber will be able to watch the movies on the same day it is released, says RIL CMD Mukesh Ambani. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X