ಫ್ಲಿಪ್‌ಕಾರ್ಟ್ ಸಂಸ್ಥಾಪಕ 'ಸಚಿನ್​ ಬನ್ಸಾಲ್' ಈ ವರ್ಷ ಕಟ್ಟಿದ ತೆರಿಗೆ ₹699 ಕೋಟಿ!!

|

ಭಾರತದ ಜನಪ್ರಿಯ ಶಾಪಿಂಗ್ ಜಾಲತಾಣ ಫ್ಲಿಪ್‌ಕಾರ್ಟ್ ಸಂಸ್ಥಾಪಕ 'ಸಚಿನ್​ ಬನ್ಸಾಲ್' ಅವರು ಈ ವರ್ಷದ ಆರಂಭದಲ್ಲಿ ಭಾರೀ ತೆರಿಗೆ ಪಾವತಿ​ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಫ್ಲಿಪ್‌ಕಾರ್ಟ್ ಅನ್ನು ಅಮೆರಿಕಾದ ವಾಲ್‌ಮಾರ್ಟ್ ಖರೀದಿಸಿದ ನಂತರ, ಪ್ರಸಕ್ತ ಆರ್ಥಿಕ ವರ್ಷದ ಮೊದಲ ಕ್ವಾರ್ಟರ್​​ನ ಮುಂಗಡ ತೆರಿಗೆಯಾಗಿ ಸಚಿನ್​ ಬನ್ಸಾಲ್ ಅವರು ಒಟ್ಟು ₹699 ಕೋಟಿ ತೆರಿಗೆ ಪಾವತಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಹೌದು, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿರುವಂತೆ, ಅಮೆರಿಕಾದ ರೀಟೇಲ್​​ ದಿಗ್ಗಜ ವಾಲ್​ಮಾರ್ಟ್​​​​ಗೆ ಫ್ಲಿಪ್​ಕಾರ್ಟ್​ನ ತಮ್ಮ ಶೇರ್​​​​​​ ಮಾರಾಟದಿಂದ ಬಂದ ಲಾಭದ ​ಟ್ಯಾಕ್ಸ್​ ಸೇರಿದಂತೆ ಒಟ್ಟು ₹699 ಕೋಟಿ ತೆರಿಗೆಯನ್ನು ಸಚಿನ್​ ಬನ್ಸಾಲ್ ಅವರು ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಸಚಿನ್​ ಬನ್ಸಾಲ್' ಅವರು ಫ್ಲಿಪ್​ಕಾರ್ಟ್​ ಮಾರಾಟದಿಂದ ಬಂದ ಒಟ್ಟು ಹಣ ಎಷ್ಟು ಎಂಬುದನ್ನು ವಿವರಿಸಿಲ್ಲ ಎಂದು ಹೇಳಲಾಗಿದೆ.

ಫ್ಲಿಪ್‌ಕಾರ್ಟ್ ಸಂಸ್ಥಾಪಕ 'ಸಚಿನ್​ ಬನ್ಸಾಲ್' ಈ ವರ್ಷ ಕಟ್ಟಿದ ತೆರಿಗೆ ₹699 ಕೋಟಿ

ಕಳೆದ ವರ್ಷ ಫ್ಲಿಪ್​ಕಾರ್ಟ್​​ನ ತಮ್ಮ ಶೇರುಗಳ​ ಮಾರಾಟದಿಂದ ಎಷ್ಟು ಕ್ಯಾಪಿಟಲ್​ ಗೇನ್ಸ್​ ಬಂದಿದೆ ಎನ್ನುವುದನ್ನ ಬಹಿರಂಗಪಡಿಸಲು ಸಚಿನ್​​​ ಹಾಗೂ ಬಿನ್ನಿ ಬನ್ಸಾಲ್​ ಸೇರಿದಂತೆ ಇನ್ನಿತರೆ ಪಾಲುದಾರರಿಗೆ, ಆದಾಯ ತೆರಿಗೆ ಇಲಾಖೆ ನೋಟಿಸ್​ ನೀಡಿತ್ತು. ಹಾಗೇ ವಾಲ್​ಮಾರ್ಟ್​​ಗೂ ಕೂಡ ನೋಟಿಸ್​ ಜಾರಿ ಮಾಡಲಾಗಿತ್ತು. ಇದಾದ ನಂತರ, ಕಳೆದ ವರ್ಷದ ಕೊನೆಯಲ್ಲಿ ವಾಲ್​ಮಾರ್ಟ್​​ ಆದಾಯ ತೆರಿಗೆ ಇಲಾಖೆಗೆ ₹7,440 ಕೋಟಿ ತೆರಿಗೆ(ವಿತ್​​ಹೋಲ್ಡಿಂಗ್​​ ಟ್ಯಾಕ್ಸ್​​) ಪಾವತಿ ಮಾಡಿತ್ತು.

ಇದೀಗ ಸಚಿನ್​ ಬನ್ಸಾಲ್' ಅವರು ಓರ್ವರೇ ₹699 ಕೋಟಿ ತೆರಿಗೆ ಪಾವತಿಸಿ ಎಲ್ಲರ ಹುಬ್ಬೇರಿಸುವವಂತೆ ಮಾಡಿದ್ದಾರೆ. ಫ್ಲಿಪ್‌ಕಾರ್ಟ್ ಮತ್ತು ವಾಲ್‌ಮಾರ್ಟ್ ಡೀಲ್​​ನಿಂದ ಪ್ರತಿಯೊಬ್ಬರಿಗೆ ಎಷ್ಟು ಲಾಭ ಬಂದಿದೆ ಎಂಬ ಬಗ್ಗೆ ಹಾಗೂ ಫ್ಲಿಪ್​ಕಾರ್ಟ್​​ನ 46 ಷೇರುದಾರರ ಬಗ್ಗೆ ಮಾಹಿತಿ ನೀಡುವಂತೆ ವಾಲ್​​ಮಾರ್ಟ್​​ಗೆ ಕೇಳಲಾದ ನಂತರ ಸಚಿನ್​ ಬನ್ಸಾಲ್' ಅವರು ತೆರಿಗೆ ಪಾವತಿಸಿದ್ದಾರೆ. ಆದರೆ, ಕ್ಯಾಪಿಟಲ್​ ಗೇನ್ಸ್​​ ತೆರಿಗೆ ಎಷ್ಟು ಹಾಗೂ ತೆರಿಗೆ ಪಾವತಿಯ ಶೆಡ್ಯೂಲ್​ ಬಗ್ಗೆ ವಿವರಿಸಿಲ್ಲ.

ಫ್ಲಿಪ್‌ಕಾರ್ಟ್ ಸಂಸ್ಥಾಪಕ 'ಸಚಿನ್​ ಬನ್ಸಾಲ್' ಈ ವರ್ಷ ಕಟ್ಟಿದ ತೆರಿಗೆ ₹699 ಕೋಟಿ

ಇನ್ನು ಸಚಿನ್​ ಬನ್ಸಾಲ್​​​ 2018-19ನೇ ಸಾಲಿನ ಮೊದಲ ಕ್ವಾರ್ಟರ್‌ನಲ್ಲಿ ಮುಂಗಡ ತೆರಿಗೆಯಾಗಿ ₹699 ಕೋಟಿ ಪಾವತಿ​ ಮಾಡಿದ್ದರೆ,​​ ಅವರ ಪಾರ್ಟ್‌ನರ್​ ಹಾಗೂ ಫ್ಲಿಪ್​​ಕಾರ್ಟ್​ ಸಹಸಂಸ್ಥಾಪಕ ಬಿನ್ನಿ ಬನ್ಸಾಲ್​ ಅವರು ತಮ್ಮ ಶೇರ್​​ನ ಮಾರಾಟದಿಂದ ಬಂದ ಕ್ಯಾಪಿಟಲ್​ ಗೇನ್ಸ್​ (ಲಾಭಾಂಶ) ಎಷ್ಟು ಎನ್ನುವುದನ್ನು ಇನ್ನೂ ಬಹಿರಂಗಪಡಿಸಬೇಕಿದೆ ಎಂದು ತೆರಿಗೆ ಇಲಾಖೆಯ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

Best Mobiles in India

English summary
His partner Binny Bansal is yet to disclose capital gains made on his stake sale in the e-commerce platform

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X