Subscribe to Gizbot

ಮದುವೆಯಾದ ಕೋಹ್ಲಿಗೆ ಸಚಿನ್ ತೆಂಡೂಲ್ಕರ್ ಸಲಹೆ!..ವೈರಲ್ ಆಯ್ತು ಫೇಕ್ ಟ್ವಿಟ್!!

Written By:

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇರ್ವರು ಸುಸ್ತು ಬೀಳಲು ಟ್ವಿಟರ್ ಕಾರಣವಾಗಿದೆ.!! ಹೌದು, ಮದುವೆಯಾದ ಕೊಹ್ಲಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನೀಡಿದ ಸಲಹೆ ಇದೀಗ ವೈರಲ್ ಆಗಿದೆ.!!

ಸಚಿನ್ ತೆಂಡೂಲ್ಕರ್ ಎಂದು ಹೆಸರಿರುವ ಮಾಸ್ಟರ್ ಬ್ಲಾಸ್ಟರ್ ಎಂಬ ಟ್ವಿಟ್ ಖಾತೆಯಿಂದ ಕಂಗ್ರಾಟ್ಸ್ ವಿರಾಟ್, ಹ್ಯಾಪಿ ವೆಡ್ಡಿಂಗ್ ಲೈಫ್ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್‍ಗೆ ಉತ್ತರಿಸಿದ ವಿರಾಟ್ ಕೊಹ್ಲಿ ಥ್ಯಾಂಕ್ಸ್, ಸರ್ ಏನಾದರೂ ಸಲಹೆ? ಎಂದು ಕೇಳುತ್ತಾರೆ. ಇದಕ್ಕೆ 'ರಾತ್ರಿ ಹೆಲ್ಮೆಟ್ ಧರಿಸಿ' ಎಂಬುದು ಸಚಿನ್ ಟ್ವೀಟ್ ಪ್ರತಿಕ್ರಿಯೆ ನೀಡಿದ್ದಾರೆ.

ಮದುವೆಯಾದ ಕೋಹ್ಲಿಗೆ ಸಚಿನ್ ತೆಂಡೂಲ್ಕರ್ ಸಲಹೆ!..ವೈರಲ್ ಆಯ್ತು ಫೇಕ್ ಟ್ವಿಟ್!!

ಆದರೆ, ಈ ಎರಡೂ ಟ್ವಿಟ್ ಸಂಭಾಷಣೆಗಳು ಫೇಕ್ ಖಾತೆಗಳಿಂದ ಆಗಿದ್ದು, ಟ್ವಿಟ್ಟರ್ ಈ ಖಾತೆಗಳನ್ನು ವೆರಿಫಿಕೇಷನ್ ಮಾಡಿರುವುದು ಜನರಿಗೆ ಗೊಂದಲ ಮೂಡಿಸಿದೆ. ಈ ಟ್ವೀಟ್ ಫೋಟೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಇದು ನಕಲಿ ಎಂದು ಅರಿಯದೆ ಬಹುತೇಕ ಜನರು ಈ ಟ್ವಿಟ್ ಅನ್ನು ಶೇರ್ ಮಾಡುತ್ತಿದ್ದಾರೆ.

ಈ ಟ್ವಿಟ್ ನೋಡಿದ ಕೂಡಲೇ ಸಚಿನ್ ತೆಂಡೂಲ್ಕರ್ ಅವರ ಅಧಿಕೃತ ಖಾತೆಯಿಂದ ಟ್ವೀಟ್ ಆಗಿದೆ ಎಂದು ಎಲ್ಲರಿಗೂ ಅನಿಸಿದರೂ ಟ್ವೀಟ್ ಮಾಡಿರುವ ಖಾತೆ @MasterBlaster ಎಂದು. ಆದರೆ, ಇದು ಸಚಿನ್ ಅವರ ಟ್ವಿಟರ್ ಖಾತೆ ಅಲ್ಲ. ಸಚಿನ್ ತೆಂಡೂಲ್ಕರ್ ಅವರ ಅಧಿಕೃತ ಖಾತೆ @sachin_rt ಎಂದು!!

ಮದುವೆಯಾದ ಕೋಹ್ಲಿಗೆ ಸಚಿನ್ ತೆಂಡೂಲ್ಕರ್ ಸಲಹೆ!..ವೈರಲ್ ಆಯ್ತು ಫೇಕ್ ಟ್ವಿಟ್!!

ಇನ್ನು ಈ ನಕಲಿ ಟ್ವೀಟ್ ಫೋಟೊದಲ್ಲಿರುವ ವಿರಾಟ್ ಕೊಹ್ಲಿ ಖಾತೆ ಕೂಡಾ ನಕಲಿಯೇ ಆಗಿದ್ದು, ಇಲ್ಲಿರುವ ವಿರಾಟ್ ಕೊಹ್ಲಿ ಖಾತೆ ಹೆಸರು @ImVK.!! ಆದರೆ, ವಿರಾಟ್ ಕೊಹ್ಲಿಯ ಅಧಿಕೃತ ಟ್ವಿಟರ್ ಖಾತೆ @imVkohli ಆಗಿದೆ.!! ಈ ಎಲ್ಲಾ ಗೊಂದಲಗಳ ನಡುವೆಯೂ ಸಚಿನ್ ಮತ್ತು ಕೋಹ್ಲಿಯ ನಿಜವಾದ ಟ್ವಿಟ್‌ಗಳು ಈ ಕೆಳಕಂಡತಿವೆ.!!

English summary
Indian batting legend Sachin Tendulkar was trolled by fans.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot