ವಿದ್ಯಾರ್ಥಿಗಳಿಗಾಗಿ 'ಬ್ಯಾಕ್‌ ಟು ಸ್ಕೂಲ್‌' ಅಭಿಯಾನ ಆರಂಭಿಸಿದ ಸ್ಯಾಮ್‌ಸಂಗ್‌!

|

ಪ್ರಸ್ತುತ ದಿನಗಳಲ್ಲಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಹೆಚ್ಚಿನ ವಿಧ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ ಮೂಲಕ ಕಲಿಯುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತದ ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್‌ಫೋನ್ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಶಾಲೆಗೆ ಮತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಗ್ಯಾಲಕ್ಸಿ ಟ್ಯಾಬ್ಲೆಟ್‌ಗಳಲ್ಲಿ ಅತ್ಯಾಕರ್ಷಕ ರಿಯಾಯಿತಿಯನ್ನು ನೀಡುವ 'ಬ್ಯಾಕ್ ಟು ಸ್ಕೂಲ್' ಅಭಿಯಾನವನ್ನು ಪ್ರಕಟಿಸಿದೆ. ಆನ್‌ಲೈನ್ ಕ್ಲಾಸ್‌ಗಳ ನಡೆಯುತ್ತಿರುವ ಈ ಸಮಯದಲ್ಲಿ ಗ್ಯಾಲಕ್ಸಿ ಟ್ಯಾಬ್‌ಗಳು ವಿದ್ಯಾರ್ಥಿಗಳಿಗೆ ಸೂಕ್ತವಾದ ಸಾಧನವಾಗಿವೆ.

ಭಾರತ

ಹೌದು, ಭಾರತದಲ್ಲಿ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಯಾಮ್‌ಸಂಗ್‌ ಸಂಸ್ಥೆ ಬ್ಯಾಕ್‌ ಟು ಸ್ಕೂಲ್‌ ಅಬಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದ ಮೂಲಕ ಗ್ಯಾಲಕ್ಸಿ ಟ್ಯಾಬ್‌ಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ದೊರೆಯುವಂತೆ ಮಾಡುವುದಕ್ಕೆ ಮುಂದಾಗಿದೆ. ಅಲ್ಲದೆ ‘ಬ್ಯಾಕ್‌ ಟು ಸ್ಕೂಲ್‌ ' ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣತಜ್ಞರಿಗೆ ಕೈಗೆಟುಕುವ ಬೆಲೆಯಲ್ಲಿ ನವೀನ ಮತ್ತು ಶಿಕ್ಷಣ ಸ್ನೇಹಿ ಗ್ಯಾಲಕ್ಸಿ ಟ್ಯಾಬ್ಲೆಟ್‌ಗಳನ್ನು ನೀಡಲು ಮುಂದಾಗಿದೆ. ಹಾಗಾದ್ರೆ ಈ ಅಭಿಯಾನದಲ್ಲಿ ಟ್ಯಾಬ್ಲೆಟ್‌ಗಳ ಮೇಲೆ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಸಂಸ್ಥೆ ಭಾರತದಲ್ಲಿ ಬ್ಯಾಕ್‌ ಟು ಸ್ಕೂಲ್‌ ಅಭಿಯಾನದಡಿ ಕಡಿಮೆ ಬೆಲೆಗೆ ಗ್ಯಾಲಕ್ಸಿ ಟ್ಯಾಬ್ಲೆಟ್‌ಗಳು ದೊರೆಯಲಿವೆ. ಆನ್‌ಲೈನ್‌ ಕ್ಲಾಸ್‌ ಮೂಲಕ ಶಿಕ್ಷಣ ಪಡೆಯುವವರರಿಗೆ ಸಹಾಯ ಮಾಡುವ ಕೈಗೆಟುಕುವ ಇ-ಲರ್ನಿಂಗ್ ಪರಿಕರಗಳನ್ನು ಬಯಸುವ ವಿದ್ಯಾರ್ಥಿಗಳು ಮತ್ತು ಶಿಕ್ಷಣತಜ್ಞರ ಶಿಕ್ಷಣಕ್ಕೆ ನಾವು ಕೊಡುಗೆ ನೀಡುತ್ತೇವೆ ಎಂದು ಸ್ಯಾಮ್‌ಸಂಗ್‌ ಹೇಳಿದೆ. ಅಲ್ಲದೆ ಈ ಗ್ಯಾಲಕ್ಸಿ ಟ್ಯಾಬ್ಲೆಟ್‌ಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅನುಕೂಲವಾಗುವ ಫೀಚರ್ಸ್‌ಗಳನ್ನು ಹೊಂದಿರಲಿವೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಟ್ಯಾಬ್ಲೆಟ್ಸ್ ಬಿಸಿನೆಸ್ ನಿರ್ದೇಶಕ ಮಾಧುರ್ ಚತುರ್ವೇದಿ ಹೇಳಿದ್ದಾರೆ.

ಬ್ಯಾಕ್‌ ಟು ಸ್ಕೂಲ್‌

ಇನ್ನು ‘ಬ್ಯಾಕ್‌ ಟು ಸ್ಕೂಲ್‌' ಅಭಿಯಾನದ ಭಾಗವಾಗಿ, ಸ್ಯಾಮ್‌ಸಂಗ್.ಕಾಂನಲ್ಲಿ ಸ್ಯಾಮ್‌ಸಂಗ್ ಸ್ಟೂಡೆಂಟ್ ಅಡ್ವಾಂಟೇಜ್ ಮೂಲಕ ಖರೀದಿಸಿದ ಗ್ಯಾಲಕ್ಸಿ ಟ್ಯಾಬ್ ಎಸ್ 7 +, ಗ್ಯಾಲಕ್ಸಿ ಟ್ಯಾಬ್ ಎಸ್ 7, ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ಮತ್ತು ಗ್ಯಾಲಕ್ಸಿ ಟ್ಯಾಬ್ ಎ 7 ನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣತಜ್ಞರು 10% ವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಅಧಿಕೃತ ಶಾಲೆ ಅಥವಾ ಕಾಲೇಜು ಇಮೇಲ್ ವಿಳಾಸವನ್ನು ಬಳಸಿ ಸ್ಯಾಮ್‌ಸಂಗ್ ವಿದ್ಯಾರ್ಥಿ ಪ್ರಯೋಜನಕ್ಕೆ ಲಾಗಿನ್ ಆಗಬಹುದು ಅಥವಾ ಸ್ಯಾಮ್‌ಸಂಗ್‌ನ ಅಧಿಕೃತ ವಿದ್ಯಾರ್ಥಿ ID ಮೌಲ್ಯಮಾಪನ ಪಾಲುದಾರ ವಿದ್ಯಾರ್ಥಿ ಗುರುತಿಸುವಿಕೆಯ ಮೂಲಕ ಅವರ ರುಜುವಾತುಗಳನ್ನು ಮೌಲ್ಯೀಕರಿಸಬಹುದು ಎನ್ನಲಾಗಿದೆ.

ಗ್ಯಾಲಕ್ಸಿ

ಇದಲ್ಲದೆ ಗ್ಯಾಲಕ್ಸಿ ಟ್ಯಾಬ್ ಎಸ್ 7 + ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್ 7 ಖರೀದಿಸುವ ಗ್ರಾಹಕರು ಕೀಬೋರ್ಡ್ ಕವರ್‌ನಲ್ಲಿ 10000ರೂ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಕೀಬೋರ್ಡ್ ಕವರ್‌ನ ಪರಿಣಾಮಕಾರಿ ಬೆಲೆ ಕ್ರಮವಾಗಿ ಗ್ಯಾಲಕ್ಸಿ ಟ್ಯಾಬ್ ಎಸ್ 7 + ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್ 7 ಗೆ 7999ರೂ. ಮತ್ತು 5999ರೂ. ಆಗಿರುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು ಗ್ಯಾಲಕ್ಸಿ ಟ್ಯಾಬ್ ಎಸ್ 7 + ನಲ್ಲಿ 10000ರೂ. ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್ 7 ನಲ್ಲಿ 9000ರೂ. ಕ್ಯಾಶ್‌ಬ್ಯಾಕ್ ಆಫರ್ ಪಡೆಯಬಹುದಾಗಿದೆ.

Best Mobiles in India

English summary
Samsung announced ‘Back to School’ campaign in india: Discounts to Students on Galaxy Tablets.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X