ಸದ್ಯದಲ್ಲೇ ಬರಲಿದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್‌ ಪ್ಲಸ್‌! ವಿಶೇಷ ಫೀಚರ್ಸ್‌?

|

ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಆಧಾರಿತ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಇದೇ ಕಾರಣಕ್ಕೆ ಹಲವು ಹೊಸ ಮಾದರಿಯ ಸ್ಮಾರ್ಟ್‌ಡಿವೈಸ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಈ ಸ್ಮಾರ್ಟ್‌ಡಿವೈಸ್‌ಗಳು ಮನುಷ್ಯನ ಕೆಲಸಗಳನ್ನು ಸಾಕಷ್ಟು ಸುಲಭವಾಗಿಸುತ್ತಿವೆ. ಇದೇ ನಿಟ್ಟಿನಲ್ಲಿ ಇದೀಗ ಸ್ಯಾಮ್‌ಸಂಗ್‌ ಸಂಸ್ಥೆ ಎಆರ್‌ ಫೈಂಡರ್‌ ಬಳಸಿ ಕಳೆದು ಹೋದ ಕೀಗಳನ್ನು ಹುಡಕುಬಲ್ಲ ಹೊಸ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ + ಪರಿಚಯಿಸಲು ಮುಂದಾಗಿದೆ. ಇದು ದುಬಾರಿ ಆವೃತ್ತಿಯಾಗಿದ್ದು, ಇದೇ ಏಪ್ರಿಲ್ 16 ರಂದು ಜಾಗತಿಕವಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಸ್ಯಾಮ್‌ಸಂಗ್

ಹೌದು, ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಕಂ ಲಿಮಿಟೆಡ್ ತನ್ನ ಹೊಸ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ + ಅನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್ ಟ್ಯಾಗ್ ಒಂದು ಸಣ್ಣ ಟೈಲ್ ತರಹದ ಡಿವೈಸ್‌ ಆಗಿದ್ದು, ಕಳೆದುಹೋದ ಕೀ ಗಳನ್ನು ಹುಡುಕಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇನ್ನು ಸ್ಮಾರ್ಟ್‌ಟ್ಯಾಗ್ + ಬ್ಲೂಟೂತ್ ಲೋ ಎನರ್ಜಿ ಮತ್ತು ಅಲ್ಟ್ರಾ-ವೈಡ್‌ಬ್ಯಾಂಡ್ ತಂತ್ರಜ್ಞಾನವನ್ನು ಹೊಂದಿದ್ದು, ಸ್ಮಾರ್ಟ್‌ಫೋನ್‌ನ ಕ್ಯಾಮೆರಾದೊಂದಿಗೆ ಕಾಣೆಯಾದ ವಸ್ತುಗಳು ಎಲ್ಲಿವೆ ಎಂದು ಬಳಕೆದಾರರಿಗೆ ತಿಳಿಸಲು ಸಹಾಯ ಮಾಡಲಿದೆ. ಹಾಗಾದ್ರೆ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್‌ + ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಟ್ಯಾಗ್

ಇನ್ನು ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ + ಅನ್ನು ಬ್ಯಾಕ್‌ಪ್ಯಾಕ್ ಅಥವಾ ಕೀಚೈನ್‌ನಂತಹ ಯಾವುದೇ ದೈನಂದಿನ ಐಟಂಗೆ ಸುಲಭವಾಗಿ ಜೋಡಿಸಬಹುದು. ಈ ಡಿವೈಸ್‌ ಸಣ್ಣ ಟೈಲ್‌ನಂತೆ ಒಂದು ಬದಿಯಲ್ಲಿ ದುಂಡಗಿನ ರಂಧ್ರವನ್ನು ಹೊಂದಿದ್ದು ಅದನ್ನು ಮತ್ತೊಂದು ವಸ್ತುವಿಗೆ ಕಟ್ಟಬಹುದಾಗಿದೆ. ಇದನ್ನು ಒಮ್ಮೆ ಸಕ್ರಿಯಗೊಳಿಸಿದ ನಂತರ, ಸ್ಮಾರ್ಟ್‌ಫೋನ್‌ನಲ್ಲಿನ AR- ಫೈಂಡರ್ ಅನ್ನು ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಬಳಸಿ "ನೋಡಲು" ಬಳಸಬಹುದು.

ಗ್ಯಾಲಕ್ಸಿ

ಈ ಡಿವೈಸ್‌ ಅನ್ನು ಕೀಗಳ ಜೊತೆಗೆ ಇರಿಸುವುದರಿಂದ ಎಆರ್-ಫೈಂಡರ್ ನಂತರ ಬಳಕೆದಾರರಿಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 21 ಅಥವಾ ಎಸ್ 21 + ಅಲ್ಟ್ರಾ ನಂತಹ ಯಾವುದೇ UWB-ಸುಸಜ್ಜಿತ ಸ್ಮಾರ್ಟ್‌ಫೋನ್‌ನಲ್ಲಿ ಅನುಸರಿಸಲು ಸುಲಭವಾದ ಇಂಟರ್ಫೇಸ್‌ನೊಂದಿಗೆ ಮಾರ್ಗದರ್ಶನ ನೀಡುತ್ತದೆ. ಇದು ಸ್ಮಾರ್ಟ್‌ಟ್ಯಾಗ್ + ಎಷ್ಟು ದೂರದಲ್ಲಿದೆ ಎಂಬುದನ್ನು ತೋರಿಸುತ್ತದೆ ಮತ್ತು ಅದರ ದಿಕ್ಕನ್ನು ತೋರಿಸುತ್ತದೆ. ಅಲ್ಲದೆ ಬಳಕೆದಾರರು ವಸ್ತುವಿನ ಹತ್ತಿರ ಬಂದಾಗ ಸ್ಮಾರ್ಟ್‌ಟ್ಯಾಗ್ ಜೋರಾಗಿ "ಪಿಂಗ್" ಅನ್ನು ಉಂಟುಮಾಡಲಿದೆ. ಆದ್ದರಿಂದ ಇದನ್ನು ಮಂಚದ ಕೆಳಗೆ ಅಥವಾ ಲಾಂಡ್ರಿಯಲ್ಲಿ ಮರೆಮಾಡಿದ್ದರೂ ಸಹ, ಕಂಡುಹಿಡಿಯುವುದು ಸುಲಭವಾಗಿದೆ.

ಸ್ಮಾರ್ಟ್

ಇನ್ನು ಸ್ಮಾರ್ಟ್ ಟ್ಯಾಗ್ + ಸ್ಮಾರ್ಟ್ ಥಿಂಗ್ಸ್ ಫೈಂಡ್ ಪ್ಲಾಟ್‌ಫಾರ್ಮ್ ನಲ್ಲಿಯೂ ಸಹ ಬಳಸಬಹುದು. ಇದು ಬಳಕೆದಾರರಿಗೆ ನಕ್ಷೆಯಲ್ಲಿ ಟ್ಯಾಗ್ ಮಾಡಲಾದ ವಸ್ತುಗಳನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ಅದರಲ್ಲೂ ಎಲ್ಲೋ ದೂರದಲ್ಲಿ ಬಿದ್ದಿದ್ದರೂ ಸಹ ಹುಡಕಲು ಅನುಮತಿಸುತ್ತದೆ. ಈ ಟ್ಯಾಗ್‌ಗಳು ಬ್ಲೂಟೂತ್ ಲೋ ಎನರ್ಜಿ ಕನೆಕ್ಟಿವಿಟಿ ಮತ್ತು ನೆಟ್‌ವರ್ಕ್‌ನಲ್ಲಿರುವ ಇತರ ಗ್ಯಾಲಕ್ಸಿ ಸಾಧನಗಳ ಸಮೂಹವನ್ನು ಸ್ಮಾರ್ಟ್‌ಥಿಂಗ್ಸ್ ಮೂಲಕ ಮನೆಗೆ ಹೋಗುವ ಮಾರ್ಗವನ್ನು ಬಳಸುವುದರಿಂದ ಕಳೆದುಕೊಂಡ ಕೀ ಗಳನ್ನು ಹುಡುಕಲು ಸಹಾಯಕವಾಗಲಿದೆ. ಇತರ ಬಳಕೆದಾರರು ತಮ್ಮ ಸ್ಮಾರ್ಟ್‌ಟ್ಯಾಗ್ + ಡಿವೈಸ್‌ಗಳನ್ನು ಕಳೆದುಕೊಂಡರೆ ಅವುಗಳನ್ನು ಹುಡುಕಲು ಸಹಾಯ ಮಾಡಲು ಇತರ ಬಳಕೆದಾರರು ಸ್ಮಾರ್ಟ್‌ಥಿಂಗ್ಸ್ ಫೈಂಡ್ ಅನ್ನು ಆಯ್ಕೆ ಮಾಡಬಹುದು.

ಟ್ಯಾಗ್

ಸ್ಮಾರ್ಟ್ ಥಿಂಗ್ಸ್ ಫೈಂಡ್‌ನಲ್ಲಿ ಬಳಕೆದಾರರು ತಮ್ಮ ಟ್ಯಾಗ್ ಕಳೆದುಹೋದ ಬಗ್ಗೆ ವರದಿ ಮಾಡಿದ ನಂತರ, ಆರಿಸಿರುವ ಹತ್ತಿರದ ಯಾವುದೇ ಗ್ಯಾಲಕ್ಸಿ ಸಾಧನವು ಸ್ಮಾರ್ಟ್‌ಟಿಂಗ್ಸ್ ಸರ್ವರ್‌ಗೆ ಅದರ ಸ್ಥಳದ ಬಗ್ಗೆ ಎಚ್ಚರಿಕೆ ನೀಡುತ್ತದೆ ಮತ್ತು ಸ್ಥಳವನ್ನು ಕಳುಹಿಸಲಾಗುತ್ತದೆ. ಸ್ಮಾರ್ಟ್‌ಥಿಂಗ್ಸ್‌ನಲ್ಲಿನ ಎಲ್ಲಾ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಮತ್ತು ರಕ್ಷಿಸಲಾಗಿದೆ. ಆದ್ದರಿಂದ ಟ್ಯಾಗ್‌ನ ಸ್ಥಳವು ನೋಂದಾಯಿತ ಮಾಲೀಕರನ್ನು ಹೊರತುಪಡಿಸಿ ಯಾರಿಗೂ ಬಹಿರಂಗಪಡಿಸುವುದಿಲ್ಲ ಎಂದು ಹೇಳಲಾಗಿದೆ. ಸದ್ಯ ಗ್ಯಾಲಕ್ಸಿ ಸ್ಮಾರ್ಟ್‌ಟ್ಯಾಗ್ + ಏಪ್ರಿಲ್ 16 ರಿಂದ ಲಭ್ಯವಾಗಲಿದೆ.

Best Mobiles in India

English summary
Samsung introduces Galaxy SmartTag+ with AR to help find lost keys.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X