ಕಿಡ್ಸ್‌ ಮೋಡ್‌ ಜತೆ ಬರ್ತಿದೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎ ಟ್ಯಾಬ್ಲೆಟ್..!

By GizBot Bureau
|

ಗ್ಯಾಲಕ್ಸಿ ಟ್ಯಾಬ್ ಎಸ್4 ಬಿಡುಗಡೆಗೊಳಿಸಿದ ಬೆನ್ನಲ್ಲೇ ಸ್ಯಾಮ್ ಸಂಗ್ ಮತ್ತೊಂದು ಟ್ಯಾಬ್ಲೆಟ್ ಬಿಡುಗಡೆಗೊಳಿಸಲು ರೆಡಿಯಾಗಿದೆ.ಅದುವೇ ಗ್ಯಾಲಕ್ಸಿ ಟ್ಯಾಬ್ ಎ. ಇದು 10.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ ಎಂದು ಸ್ಯಾಮ್ ಸಂಗ್ ಪ್ರಕಟಿಸಿದೆ. ಗ್ಯಾಲಕ್ಸಿ ಟ್ಯಾಬ್ ಎ ಬೆಲೆ ಎಷ್ಟು ಎಂಬುದನ್ನು ಸ್ಯಾಮ್ ಸಂಗ್ ಇನ್ನೂ ಪ್ರಕಟ ಮಾಡಿಲ್ಲ. ಆದರೆ ಇದರಲ್ಲಿನ ವೈಶಿಷ್ಟ್ಯತೆಗಳನ್ನು ಗಮನಿಸಿದರೆ ತೀರಾ ದುಬಾರಿಯೂ ಅಲ್ಲದ ಅಥವಾ ಅತೀ ಕಡಿಮೆ ಬೆಲೆಯೂ ಅಲ್ಲದ ಎಲ್ಲರ ಕೈಗೆಟುಕುವ ಬೆಲೆಯ ಟ್ಯಾಬ್ಲೆಟ್ ಎಂಬುದು ಖಚಿತವಾಗುತ್ತದೆ.

ಈ ಟ್ಯಾಬ್ಲೆಟ್ ಕಿಡ್ಸ್ ಮೋಡ್ ಹೊಂದಿರುತ್ತದೆ. ಇದು ಮಕ್ಕಳು ಟ್ಯಾಬ್ಲೆಟ್ ನಲ್ಲಿ ಏನೆಲ್ಲ ಚಟುವಟಿಕೆಗಳನ್ನು ಮಾಡುತ್ತಾರೆ ಎಂಬುದನ್ನು ಪೋಷಕರು ಗಮನಿಸಲು ನೆರವಾಗುತ್ತದೆ. ಆದರೆ, ಟ್ಯಾಬ್ ಎಸ್ 4 ನಂತೆ ಟ್ಯಾಬ್ ಎ ಸ್ಯಾಮ್ ಸಂಗ್ ಡೆಕ್ಸ್ ಅಥವಾ ಎಸ್ ಪೆನ್ ಗೆ ಬೆಂಬಲವನ್ನು ನೀಡುವುದಿಲ್ಲ.

ಕಿಡ್ಸ್‌ ಮೋಡ್‌ ಜತೆ ಬರ್ತಿದೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎ ಟ್ಯಾಬ್ಲೆಟ್..!

ಗ್ಯಾಲಕ್ಸಿ ಟ್ಯಾಬ್ ಎ 105 ಇಂಚಿನ ಡಿಸ್ಪ್ಲೇ ಹೊಂದಿದ್ದು ಅದರ ಅನುಪಾತ16:10 ಆಗಿದೆ ಮತ್ತು 1920×1200p ರೆಸಲ್ಯೂಷನ್ ನ್ನು ಹೊಂದಿದೆ. ಈ ಹೊಸ ಟ್ಯಾಬ್ ನಲ್ಲಿ ಹಿಂದಿನ ಎ ಸಿರೀಸ್ ನ ಟ್ಯಾಬ್ ಗಳಿಗೆ ಹೋಲಿಸಿದರೆ ಬಹಳ ತೆಳುವಾದ bezel ಇದೆ. ಇದು 4 ಸ್ಪೀಕರ್ ಗಳನ್ನು ಹೊಂದಿದ್ದು ಪ್ರತಿಯೊಂದನ್ನು ಡಿವೈಸ್ ನ ನಾಲ್ಕು ಮೂಲೆಗಳಲ್ಲಿ ಡಿಸೈನ್ ಮಾಡಲಾಗಿದೆ. ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಈ ಟ್ಯಾಬ್ ಬಂದಿರುತ್ತದೆ.

ಹಾರ್ಡ್ ವೇರ್ ವೈಶಿಷ್ಟ್ಯತೆಗಳ ಬಗ್ಗೆ ತಿಳಿಸುವುದಾದರೆ, ಗ್ಯಾಲಕ್ಸಿ ಟ್ಯಾಬ್ ಎ ನಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 450 ಆಕ್ಟಾ-ಕೋರ್ ಪ್ರೊಸೆಸರ್ 3ಜಿಬಿ RAM ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ನೊಂದಿಗೆ ಪೇರ್ ಆಗಿರುತ್ತದೆ. ಇಂಟರ್ನಲ್ ಸ್ಟೋರೇಜ್ ನ್ನು ಮೈಕ್ರೋ ಎಸ್ ಡಿ ಕಾರ್ಡ್ ಮುಖಾಂತರ 400 ಜಿಬಿ ವರೆಗೆ ಹಿಗ್ಗಿಸಿಕೊಳ್ಳಬಹುದಾದ ಅವಕಾಶವಿರುತ್ತದೆ.

ಕ್ಯಾಮರಾ ವಿಭಾಗವನ್ನು ಹೇಳುವುದಾದರೆ ಸ್ಯಾಮ್ ಸಂಗ್ ಟ್ಯಾಬ್ಲೆಟ್ ನಲ್ಲಿ 8 ಮೆಗಾಪಿಕ್ಸಲ್ ನ ಸೆನ್ಸರ್ ಹಿಂಭಾಹದಲ್ಲಿ ಇರುತ್ತದೆ ಮತ್ತು ಮುಂಭಾಗದಲ್ಲಿ 5 ಮೆಗಾಪಿಕ್ಸಲ್ ನ ಫ್ಲ್ಯಾಶ್ ಇರುವ ಸೆಲ್ಫೀ ಕ್ಯಾಮರಾ ಲಭ್ಯವಿರುತ್ತದೆ. ಟ್ಯಾಬ್ಲೆಟ್ ಅತೀ ದೊಡ್ಡ ಅಂದರೆ 7,300mAh ಬ್ಯಾಟರಿಯನ್ನು ಒಳಗೊಂಡಿದೆ. USB 2.0 (Type C) ಚಾರ್ಜಿಂಗ್ ಗೆ ಇದು ಬೆಂಬಲವನ್ನು ನೀಡುತ್ತದೆ. ಸಾಫ್ಟ್ ವೇರ್ ಬಗ್ಗೆ ಹೇಳುವುದಾದರೆ, ಗ್ಯಾಲಕ್ಸಿ ಟ್ಯಾಬ್ ಎ ನ 10.5- ಇಂಚಿನ ಡಿಸ್ಪ್ಲೇಯು ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ.

ಈ ಗ್ಯಾಲಕ್ಸಿ ಟ್ಯಾಬ್ ಎ ನ ಒಂದು ಪ್ರಮುಖ ವೈಶಿಷ್ಟ್ಯತೆಯೆಂದರೆ ಅದು ಕಿಡ್ ಮೋಡ್. ಕಿಡ್ ಮೋಡ್ ವೈಶಿಷ್ಟ್ಯತೆಯು ಪೋಷಕರಿಗೆ ಬಹಳವಾಗಿ ನೆರವಾಗುತ್ತದೆ ಮತ್ತು ತಮ್ಮ ಮಕ್ಕಳ ಮೊಬೈಲ್ ಚಟುವಟಿಕೆಗಳ ಬಗ್ಗೆ ಒಂದು ಕಣ್ಣಿಡಲು ಸಹಕಾರಿಯಾಗಿದೆ. ಕಿಡ್ ಮೋಡ್ ನ್ನು ಮಕ್ಕಳ ಸ್ನೇಹಿ ಟ್ಯಾಬ್ಲೆಟ್ ಆಗಿ ಮಾಡುವ ಉದ್ದೇಶದಿಂದಲೇ ಇದರಲ್ಲಿ ರಚನೆಮಾಡಲಾಗಿದೆಯಂತೆ. ಕಿಡ್ಸ್ ಮೋಡ್ ವೈಶಿಷ್ಟ್ಯವು ಕಿಡ್ಸ್ ಬ್ರೌಸರ್, ಗ್ಯಾಲಕ್ಸಿ ಆಪ್ ಫಾರ್ ಕಿಡ್ಸ್ ಹೀಗೆ ಹಲವನ್ನು ಹೊಂದಿರುತ್ತದೆ. ಹೆಚ್ಚು ಕಡಿಮೆ 20,000 ಬೆಲೆ ಇದಕ್ಕೆ ಭಾರತದ ಮಾರುಕಟ್ಟೆಯಲ್ಲಿ ನಿಗದಿಯಾಗುವ ನಿರೀಕ್ಷೆ ಇದೆ.

Best Mobiles in India

English summary
Samsung announces budget friendly Galaxy Tab A 10.5-inch tablet with Kids mode. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X