ಸ್ಯಾಮ್‌ಸಂಗ್‌ 'ಬಿಗ್‌ ಟಿವಿ' ಸೇಲ್‌: ಟಿವಿ ಖರೀದಿಸುವುದಕ್ಕೆ ಇದೇ ಬೆಸ್ಟ್‌ ಟೈಂ!

|

ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿದೆ. ತನ್ನ ವಿಶೇಷ ವಿನ್ಯಾಸದ ಸ್ಮಾರ್ಟ್‌ಟಿವಿಗಳ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಟವಿ ಪ್ರಿಯರಿಗಾಗಿ ಬಿಗ್‌ ಟಿವಿ ಸೇಲ್‌ ಅನ್ನು ಆಯೋಜಸಿದೆ. ಹೊಸ ವರ್ಷದ ಪ್ರಯುಕ್ತ ಆಯೋಜನೆಯಾಗಿರುವ ಈ ಸೇಲ್‌ ಜನವರಿ 31, 2022 ರವರೆಗೆ ನಡೆಯಲಿದೆ. ಇನ್ನು ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯ QLED ಸ್ಮಾರ್ಟ್‌ಟಿವಿಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಜೊತೆಗೆ ವಿಶೇಷ ಕ್ಯಾಶ್‌ಬ್ಯಾಕ್ ಆಫರ್‌ ಅನ್ನು ಸಹ ನೀಡುತ್ತಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಬಿಗ್‌ ಟಿವಿ ಸೇಲ್‌ ಅನ್ನು ನಡೆಸುತ್ತಿದೆ. ಬಿಗ್‌ ಟಿವಿ ಫೆಸ್ಟಿವಲ್‌ ಸೇಲ್‌ನಲ್ಲಿ ವಿಶೇಷ ಆಫರ್‌ಗಳನ್ನು ನೀಡುವ ಮೂಲಕ ಸ್ಮಾರ್ಟ್‌ಟಿವಿ ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದೆ. ಇನ್ನು ಪ್ರೀಮಿಯಂ NEO QLED ಟಿವಿ ಸರಣಿ ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಅನೇಕ ಪ್ರಾಡಕ್ಟ್‌ಗಳನ್ನು ಉಚಿತವಾಗಿ ನೀಡುತ್ತಿದೆ. ಸದ್ಯ ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್ 20% ತನಕ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಅಲ್ಲದೆ ಸ್ಮಾರ್ಟ್‌ಟಿವಿಗಳನ್ನು EMI ನಲ್ಲಿ ಖರೀದಿಸುವವರಿಗೆ ಇಎಂಐ 1,990ರೂ.ಗಳಿಂದ ಪ್ರಾರಂಭವಾಗಲಿದೆ ಎಂದು ಹೇಳಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಬಿಗ್‌ ಟಿವಿ ಸೇಲ್‌ನಲ್ಲಿ ಏನೆಲ್ಲಾ ಆಫರ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಆಫರ್‌ಗಳು

ಸ್ಯಾಮ್‌ಸಂಗ್ ಆಫರ್‌ಗಳು

ಸ್ಯಾಮ್‌ಸಂಗ್ ಬಿಗ್‌ ಟಿವಿ ಸೇಲ್‌ನಲ್ಲಿ 85 ಅಥವಾ 75 ಇಂಚಿನ NEO QLED 8K ಟಿವಿಗಳನ್ನು ಖರೀದಿಸುವವರಿಗೆ 94,990ರೂ. ಮೌಲ್ಯದ ಉಚಿತ ಸೌಂಡ್‌ಬಾರ್ ಅನ್ನು ನೀಡುತ್ತಿದೆ. ಇನ್ನು ಸ್ಯಾಮ್‌ಸಂಗ್‌ QLED 8K 65 ಇಂಚಿನ ಸ್ಮಾರ್ಟ್‌ಟಿವಿ ಬೆಲೆ 3,74,990ರೂ. ಆಗಿದೆ. ಆದರೆ 85 ಇಂಚಿನ ಆವೃತ್ತಿಯ ಬೆಲೆ 13,49,990ರೂ.ಆಗಿದೆ. ಇನ್ನು 75 ಇಂಚಿನ ರೂಪಾಂತರದ ಬೆಲೆಯನ್ನು ಸ್ಯಾಮ್‌ಸಂಗ್‌ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿಲ್ಲ. ಇದಲ್ಲದೆ 65 ಇಂಚಿನ Neo QLED 8K, 75 ಇಂಚಿನ UHD TV, 65 ಇಂಚಿನ ಮತ್ತು 55-ಇಂಚಿನ Neo QLED TV ಟಿವಿಗಳನ್ನು ಖರೀದಿಸುವವರಿಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A7 LTE ಅನ್ನು ಉಚಿತವಾಗಿ ನೀಡಲು ಮುಂದಾಗಿದೆ.

ಇದಲ್ಲದೆ ಸ್ಯಾಮ್‌ಸಂಗ್ ಕಂಪೆನಿ ತನ್ನ 55 ಇಂಚಿನ ಮತ್ತು ಅದಕ್ಕಿಂತ ಹೆಚ್ಚಿನ ಟಿವಿಗಳ ಪ್ರೀಮಿಯಂ ಶ್ರೇಣಿಯ ಮೇಲೆ 1,990ರೂ.ಗಳಿಂದ ಪ್ರಾರಂಭವಾಗುವ EMI ಆಯ್ಕೆಗಳನ್ನು ಸಹ ನೀಡುತ್ತಿದೆ. ಈ ಟಿವಿಗಳನ್ನು ಖರೀದಿಸುವ ಗ್ರಾಹಕರಿಗೆ 20% ವರೆಗೆ ಕ್ಯಾಶ್‌ಬ್ಯಾಕ್‌ ಹಾಗೂ ವಿಸ್ತೃತ ವಾರಂಟಿಯನ್ನು ಪಡೆಯಬಹುದು. ಜೊತೆಗೆ QLED ಟಿವಿಗಳ ಮೇಲೆ 10 ವರ್ಷಗಳ ನೋ-ಸ್ಕ್ರೀನ್ ಬರ್ನ್-ಇನ್ ವಾರಂಟಿಯನ್ನು ಸಹ ನೀಡಲಾಗುತ್ತಿದೆ. ಆದರೆ ಇತರೆ ಸ್ಯಾಮ್‌ಸಂಗ್‌ ಟಿವಿಗಳ ಮೇಲೆ ಗ್ರಾಹಕರು ಒಂದು ವರ್ಷದ ಪ್ರಮಾಣಿತ ಮತ್ತು ಒಂದು ವರ್ಷದ ಹೆಚ್ಚುವರಿ ವಾರಂಟಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ ನಿಯೋ QLED 8K ಮತ್ತು 4K ಟಿವಿಗಳು

ಸ್ಯಾಮ್‌ಸಂಗ್‌ ನಿಯೋ QLED 8K ಮತ್ತು 4K ಟಿವಿಗಳು

ಸ್ಯಾಮ್‌ಸಂಗ್‌ನ ನಿಯೋ QLED 8K ಮತ್ತು 4K ಟಿವಿಗಳ ಶ್ರೇಣಿಯು ವಿವಿಧ ಮಾದರಿಗಳಲ್ಲಿ ಲಭ್ಯವಿದೆ. ಇದರಲ್ಲಿ QN800A 75 ಇಂಚಿನ ಮತ್ತು 65 ಇಂಚಿನ ಆಯ್ಕೆಯಲ್ಲಿ ಲಭ್ಯವಾಗಲಿದೆ. 65 ಇಂಚಿನ ಸ್ಮಾರ್ಟ್‌ಟಿವಿ 3,74,990 ರೂ.ಗಳಿಂದ ಪ್ರಾರಂಭವಾಗುತ್ತದೆ. 75 ಇಂಚಿನ ಆವೃತ್ತಿಯ ಬೆಲೆಯನ್ನು ಸ್ಯಾಮ್‌ಸಂಗ್‌ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿಲ್ಲ. ಈ ಎರಡು ಸ್ಮಾರ್ಟ್‌ಟಿವಿಗಳು 8K ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಜೊತೆಗೆ QN900A 85 ಇಂಚಿನ 8K ಆವೃತ್ತಿಯ ಸ್ಮಾರ್ಟ್‌ಟಿವಿ 13,49,990ರೂ. ಬೆಲೆಗೆ ಲಭ್ಯವಾಗಲಿದೆ. ಆದರೆ 65 ಇಂಚಿನ QN700A ಸ್ಮಾರ್ಟ್‌ಟಿವಿ 3,24,990ರೂ.ಗಳಿಂದ ಪ್ರಾರಂಭವಾಗುತ್ತದೆ.

ಇನ್ನು ಸ್ಯಾಮ್‌ಸಂಗ್‌ನ QLED ಟಿವಿಗಳು 43 ಇಂಚಿನ ಆವೃತ್ತಿಯ ಸ್ಮಾರ್ಟ್‌ಟಿವಿ 63,990ರೂ.ಗಳಿಂದ ಪ್ರಾರಂಭವಾಗುತ್ತದೆ. ಇದರಲ್ಲಿ 65 ಇಂಚಿನ ಆಯ್ಕೆಯ ಸ್ಮಾರ್ಟ್‌ಟಿವಿ 1,74,990ರೂ.ಗಳ ತನಕ ಲಭ್ಯವಾಗಲಿದೆ. ಹಾಗೆಯೇ Q80A ಶ್ರೇಣಿಯು 55 ಇಂಚಿನ ರೂಪಾಂತರಕ್ಕೆ 1,35,990 ರೂ.ಬೆಲೆ ನಿಗಧಿ ಪಡಿಸಲಾಗಿದೆ. ಇನ್ನು QN85A Neo QLED 4K 55-ಇಂಚಿನ ಆವೃತ್ತಿಗೆ 1,60,990ರೂ.ಗಳಿಂದ ಪ್ರಾರಂಭವಾಗುತ್ತದೆ. ಆದರೆ QN90A 55-ಇಂಚಿನ ಆವೃತ್ತಿಗೆ 1,75,990ರೂ.ಗಳಿಂದ ಪ್ರಾರಂಭವಾಗುತ್ತದೆ.

ಸ್ಯಾಮ್‌ಸಂಗ್‌ QLED ಸ್ಮಾರ್ಟ್‌ಟಿವಿಗಳ ವಿಶೇಷ

ಸ್ಯಾಮ್‌ಸಂಗ್‌ QLED ಸ್ಮಾರ್ಟ್‌ಟಿವಿಗಳ ವಿಶೇಷ

ಸ್ಯಾಮ್‌ಸಂಗ್‌ QLED TV ಕ್ವಾಂಟಮ್ ಡಾಟ್ ಟೆಕ್ನಾಲಜಿಯನ್ನು ಪಡೆದುಕೊಂಡಿದೆ. ಇದು ಟಿವಿಯ ಬ್ರೈಟ್‌ನೆಸ್ ಮಟ್ಟವನ್ನು ಉತ್ತಮಗೊಳಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಗಳಲ್ಲಿ ಸಿನಿಮೀಯ ಅನುಭವಕ್ಕಾಗಿ ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ ಮತ್ತು ಆಕ್ಟಿವ್ ವಾಯ್ಸ್ ಆಂಪ್ಲಿಫೈಯರ್ ಅನ್ನು ಸಹ ನೀಡಲಾಗಿದೆ. ಇನ್ನು QLED ಸ್ಮಾರ್ಟ್‌ಟಿವಿಯು ಆಂಬಿಯೆಂಟ್ ಮೋಡ್ ಅನ್ನು ಸಹ ಹೊಂದಿದೆ. ಇದರಿಂದ ಮನೆಯ ಒಳಾಂಗಣದೊಂದಿಗೆ ಸಂಯೋಜಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಟಿವಿ ಒನ್ ರಿಮೋಟ್ ಕಂಟ್ರೋಲ್‌ನಲ್ಲಿ ಹೊಸ ಬಿಕ್ಸ್‌ಬಿ ಮತ್ತು ಅಲೆಕ್ಸಾ ಫೀಚರ್ಸ್‌ ಮೂಲಕ ಬೆಸ್ಟ್‌ ವಾಯ್ಸ್‌ ಕಂಟ್ರೋಲ್‌ ಬೆಂಬಲವನ್ನು ಸಹ ಅನುಮತಿಸುತ್ತದೆ.

ಕ್ರಿಸ್ಟಲ್ 4K UHD ಸ್ಮಾರ್ಟ್‌ಟಿವಿಗಳು

ಕ್ರಿಸ್ಟಲ್ 4K UHD ಸ್ಮಾರ್ಟ್‌ಟಿವಿಗಳು

ಸ್ಯಾಮ್‌ಸಂಗ್‌ನ 4K UHD ಸ್ಮಾರ್ಟ್‌ಟಿವಿಗಳು ಕ್ರಿಸ್ಟಲ್ ಟೆಕ್ನಾಲಜಿಯನ್ನು ಒಳಗೊಂಡಿವೆ. ಜೊತೆಗೆ ಕ್ರಿಸ್ಟಲ್ 4K ಡಿಸ್‌ಪ್ಲೇ, ಮಲ್ಟಿ ವ್ಯೂ, ಅಡಾಪ್ಟಿವ್ ಸೌಂಡ್, ಟ್ಯಾಪ್ ವ್ಯೂ, ಸ್ಕ್ರೀನ್ ಮಿರರಿಂಗ್ ಮತ್ತು ಲ್ಯಾಗ್ ಫ್ರೀ ಗೇಮಿಂಗ್‌ನಂತಹ ಫೀಚರ್ಸ್‌ಗಳನ್ನು ಹೊಂದಿರಲಿವೆ.

QLED 8K ಟಿವಿ

QLED 8K ಟಿವಿ

ಸ್ಯಾಮ್‌ಸಂಗ್‌ನ ವಿಶ್ವದ ಮೊದಲ QLED 8K ಟಿವಿಗಳು ಅಲ್ಟ್ರಾ ಪ್ರೀಮಿಯಂ ಟಿವಿಗಳಾಗಿವೆ. ಈ ಸ್ಮಾರ್ಟ್‌ಟಿವಿಗಳು ಇನ್ಫಿನಿಟಿ ಸ್ಕ್ರೀನ್, ಅಡಾಪ್ಟಿವ್ ಪಿಕ್ಚರ್, ಆಕ್ಟಿವ್ ವಾಯ್ಸ್ ಆಂಪ್ಲಿಫೈಯರ್, ಕ್ಯೂ-ಸಿಂಫನಿ ಮತ್ತು ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್+ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿವೆ. ಇದಲ್ಲದೆ ಕ್ವಾಂಟಮ್ ಪ್ರೊಸೆಸರ್ 8K ಮತ್ತು ಕ್ವಾಂಟಮ್ HDR ನೊಂದಿಗೆ ಬರುತ್ತವೆ. ಅದರಲ್ಲೂ 8K QLED ಟಿವಿಗಳು 33 ಮಿಲಿಯನ್ ಪಿಕ್ಸೆಲ್‌ಗಳೊಂದಿಗೆ ಬರುತ್ತವೆ, ಇದು 4K UHD ಟಿವಿಗಳಿಗಿಂತ ನಾಲ್ಕು ಪಟ್ಟು ಹೆಚ್ಚು ಎಂದು ಹೇಳಲಾಗಿದೆ.

Best Mobiles in India

English summary
Samsung has announced its ‘Big TV’ Festival, where is it offering discounts, cashback on its QLED TVs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X