ಸ್ಯಾಮ್ ಸಂಗ್ S9 ಸ್ಮಾರ್ಟ್ ಫೋನಿನಲ್ಲಿ ಡಿಸ್ ಪ್ಲೇ ಸಮಸ್ಯೆ; ಸ್ಯಾಂಮ್ ಸಂಗ್ ಹೇಳುವುದೇನು..?

By Precilla Dias
|

ಪ್ರತಿ ಬಾರಿಯಂತೆ ಈ ಬಾರಿಯೂ ಸ್ಯಾಮ್ ಸಂಗ್ ಟಾಪ್ ಎಂಡ್ ಸ್ಮಾರ್ಟ್ ಫೋನ್ ನಲ್ಲಿ ತೊಂದರೆಯೊಂದು ಕಾಣಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಕಾಲಿಟ್ಟು ಕೆಲವೇ ದಿನಗಳಾಗಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಸ್ಮಾರ್ಟ್ ಫೋನ್ ಬಳಕೆದಾರರಿಗೆ ಡಿಸ್ ಪ್ಲೇ ಸಮಸ್ಯೆಯೂ ಎದುರಾಗಿದೆ. ಅದರಲ್ಲಿಯೂ ಟಾಪ್ ಎಂಡ್ ಆವೃತ್ತಿಯೂ ಆದ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ ಡಿಸ್ ಪ್ಲೇ ತೊಂದರೆ ಹೆಚ್ಚಾಗಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಸ್ಯಾಮ್ ಸಂಗ್ S9 ಸ್ಮಾರ್ಟ್ ಫೋನಿನಲ್ಲಿ ಡಿಸ್ ಪ್ಲೇ ಸಮಸ್ಯೆ


ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ ಡೆಡ್ ಸ್ಕ್ರಿನ್ ಹೆಚ್ಚಾಗಿದ್ದು, ಕೆಲವು ಭಾಗದಲ್ಲಿ ಟೆಚ್ ವರ್ಕ್ ಆಗುತ್ತಿಲ್ಲ ಎನ್ನುವ ದೂರು ಬಳಕೆದಾರರಿಂದ ಕೇಳಿಬಂದಿದೆ. ಕೇಲವು ಬಾರಿ ಡಿಸ್ ಪ್ಲೇ ಟಚ್ ಕಾರ್ಯನಿರ್ವಹಿಸದೆ ಸ್ಥಗತ ಗೊಳ್ಳುವಂತೆಯೂ ಭಾಸವಾಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ. ಅಲ್ಲದೇ ವರ್ಚುವಲ್ ಕೀ ಬೋಡ್ ಬಳಕೆಯ ಸಂದರ್ಭದಲ್ಲಿ ಇದು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ಕೆಲವು ಬಳಕೆದಾರರಿಗೆ ಈ ಸಮಸ್ಯೆಯೂ ಪರಿಹಾರವಾಗುತ್ತಿಲ್ಲ. ಡಿಸ್ ಪ್ಲೇ ಸೆಸಿಟಿವಿಯನ್ನು ಕಳೆದುಕೊಳ್ಳುತ್ತಿದೆ. ಇದೇ ಕಾರಣಕ್ಕೆ ಹಲವು ಬಳಕೆದಾರರು ತಮ್ಮ ಡಿವೈಸ್ ಗಳನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಬಳಕೆದಾರರು ಹೊಸ ಸ್ಮಾರ್ಟ್ ಫೋನ್ ನಿಂದ ತೃಪ್ತಿಯನ್ನು ಪಡೆದುಕೊಂಡಿಲ್ಲ ಎನ್ನಲಾಗಿದೆ. ಶೀಘ್ರವೇ ಈ ಸಮಸ್ಯೆಗೆ ಪರಿಹಾರವನ್ನು ಸ್ಯಾಮ್ ಸಂಗ್ ನೀಡದೆ ಇದಲ್ಲಿ, ಹೊಸ ಸ್ಮಾರ್ಟ್ ಪೋನ್ ನೀಡುವಂತೆ ಬೇಡಿಕೆಯನ್ನು ಇಟ್ಟಿದ್ದಾರೆ.

ಈ ಕುರಿತು ಮಾಹಿತಿಯನ್ನು ನೀಡಿರುವ ಸ್ಯಾಮ್ ಸಂಗ್, ನಾವು ಬಳಕೆದಾರರಿಗೆ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಅನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇವೆ, ಆದರೆ ಎಲ್ಲೂ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರವೇ ಸಮಸ್ಯೆಯೂ ಕಾಣಿಸಿಕೊಂಡಿದೆ ಎನ್ನಲಾಗಿದೆ. ಶೀಘ್ರವೇ ಈ ಸಮಸ್ಯೆಗೆ ಪರಿಹಾರವನ್ನು ನೀಡಲಾಗುವುದು, ಈಗಾಗಲೇ ಸಮಸ್ಯೆಯನ್ನು ಎದುರಿಸುತ್ತಿರುವ ಬಳಕೆದಾರರೊಂದಿಗೆ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದೆ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?

ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಟಾಪ್ ಎಂಡ್ ಒನ್ ಪ್ಲಸ್ 6 ಸ್ಮಾರ್ಟ್ ಫೋನ್...!ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಟಾಪ್ ಎಂಡ್ ಒನ್ ಪ್ಲಸ್ 6 ಸ್ಮಾರ್ಟ್ ಫೋನ್...!

ಈಗಾಗಲೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಸ್ಮಾರ್ಟ್ ಫೋನ್ ಡಿಸ್ ಪ್ಲೇಯನ್ನು ಪರೀಕ್ಷಿಸಿರುವ ಡಿಸ್ ಪ್ಲೇ ಮ್ಯಾಟ್ ಟೆಕ್ನಾಲಜಿಯೂ ಎಕ್ಸಲೆಂಟ್ A+ ಗ್ರೇಡ್ ಅನ್ನು ಇದಕ್ಕೆ ನೀಡದೆ. ಅಲ್ಲದೇ ಇದುವರೆಗೂ ತಾನು ಪರೀಕ್ಷಿಸಿರುವ ಡಿಸ್ ಪ್ಲೇ ಪರ್ಫಾರ್ಮೆನ್ಸ್ ನಲ್ಲಿ ಉತ್ತಮವಾದ ಸ್ಮಾರ್ಟ್ ಪೋನ್ ಎಂದರೆ ಗ್ಯಾಲೆಕ್ಸಿ S9 ಎಂದು ವರದಿ ಮಾಡಿದೆ. ಆದರೆ ಬಳಕೆದಾರರು ಮಾತ್ರವೇ ಡಿಸ್ ಪ್ಲೇ ಬಗ್ಗೆ ಚಕಾರ ಎತ್ತಿದ್ದಾರೆ. ಇದೇ ಮಾದರಿಯಲ್ಲಿ ಕಳೆದ ವರ್ಷ ಬಿಡುಗಡೆಯಾಗಿದ್ದ ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಸಹ ಡಿಸ್ ಪ್ಲೇ ತೊಂದರೆಯನ್ನು ಎದುರಿಸುತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

Best Mobiles in India

Read more about:
English summary
Samsung has finally responded to reports of Galaxy S9 and Galaxy S9+ with touchscreen issues. Sensing the dissatisfaction among users, a Samsung spokesperson has said "We are looking into a limited number of reports of Galaxy S9/S9+ touchscreen responsiveness issues," in a statement to Engadget. The official also asked users with this problem to contact the company.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X