ಅಮೇಜಾನ್‌ನಲ್ಲಿ ಸ್ಯಾಮ್‌ಸಂಗ್ ಹಬ್ಬ: 5,000 ರೂ.ವರೆಗೆ ರಿಯಾಯಿತಿ!!

  ದೇಶದಲ್ಲಿರುವ ಸ್ಯಾಮ್ ಸಂಗ್ ವಸ್ತುಗಳ ಪ್ರಿಯರಿಗಾಗಿ ಅಮೇಜಾನ್ ಸ್ಯಾಮ್ ಸಂಗ್ ದಿನಗಳು ಎಂಬ ಭರ್ಜರಿ ರಿಯಾಯಿತಿ ವ್ಯಾಪಾರವನ್ನು ಆರಂಭಿಸಿದೆ. ಇವತ್ತಿನಿಂದ ಈ ಮಾರಾಟ ಆರಂಭವಾಗಿದ್ದು, ಗ್ರಾಹಕರು ಬೇರೆಬೇರೆ ಸ್ಯಾಮ್ ಸಂಗ್ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಪಡೆಯಬಹುದಾಗಿದೆ. ನೀವೇನಾದರೂ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳನ್ನು ಕೊಂಡುಕೊಳ್ಳಬೇಕು ಎಂಬ ಇಚ್ಛೆಯಲ್ಲಿದ್ದರೆ ಅಥವಾ ಸ್ಮಾರ್ಟ್ ವಾಚ್ ಗಳನ್ನು ಕೊಂಡುಕೊಳ್ಳಲು ಪ್ಲಾನ್ ಮಾಡಿದ್ದರೆ ಇದು ನಿಮ್ಮ ಖರೀದಿಗೆ ಸರಿಯಾದ ಸಮಯವಾಗಿದೆ.

  ಅಮೇಜಾನ್‌ನಲ್ಲಿ ಸ್ಯಾಮ್‌ಸಂಗ್ ಹಬ್ಬ: 5,000 ರೂ.ವರೆಗೆ ರಿಯಾಯಿತಿ!!

  ಇತ್ತೀಚೆಗೆ ಬಿಡುಗಡೆಗೊಂಡಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್ 7 ಪ್ರೈಮ್ಸ್ 2000 ರುಪಾಯಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದರ ಎಂಆರ್ ಪಿ ಬೆಲೆಯು 14990 ರುಪಾಯಿಗಳಾಗಿದ್ದು, ಈಗ ನೀವು ಕೇವಲ 12990 ರುಪಾಯಿಗೆ ಖರೀದಿಸಬಹುದು. ಜೊತೆಗೆ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದ್ದು,11522ರುಪಾಯಿಗೆ ಖರೀದಿಸಬಹುದು. ರಿಲಯನ್ಸ್ ಜಿಯೋ ಹೆಚ್ಚುವರಿ ಕ್ಯಾಷ್ ಬ್ಯಾಕ್ ಆಫರ್ ನೀಡುತ್ತಿದ್ದು,2000 ರುಪಾಯಿಯನ್ನು ಉಳಿತಾಯ ಮಾಡಬಹುದು. ಇದರ ಜೊತೆಗೆ ಇಎಂಐ ಆಯ್ಕೆಯೂ ನಿಮಗಿದ್ದು,ತಿಂಗಳಿಗೆ 680 ರುಪಾಯಿ ಕಂತಿನ ಪ್ರಕಾರ ಪಾವತಿಸಿಯೂ ಖರೀದಿಸಬಹುದು.

  ಬಜೆಟ್ ಸ್ಮಾರ್ಟ್ ಪೋನ್ ಆಗಿರುವ Samsung Galaxy On7 Pro ಅದು ಕೂಡ ಭರ್ಜರಿ ರಿಯಾಯಿತಿಯಲ್ಲಿ ದೊರಕಲಿದ್ದು, 2500 ರುಪಾಯಿ ಕಡಿಮೆ ಬೆಲೆಗೆ ಲಭ್ಯವಿದೆ. 9,490 ರುಪಾಯಿಯ ಸ್ಮಾರ್ಟ್ ಫೋನ್ ರಿಯಾಯಿತಿ ಪಡೆದು ಕೇವಲ 6,990 ರುಪಾಯಿಗೆ ಖರೀದಿಸಬಹುದು. ಒಂದು ವೇಳೆ ಗ್ರಾಹಕರು ಎಕ್ಸ್ ಚೇಂಜ್ ಆಫರ್ ಪಡೆದರೆ 6,290 ರುಪಾಯಿಗೆ ಈ ಮೊಬೈಲನ್ನು ಖರೀದಿಸಬಹುದು.ಇನ್ನೊಂದು ಸ್ಮಾರ್ಟ್ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್ ಸಿರೀಸ್ ಕೂಡ 2000 ರುಪಾಯಿ ರಿಯಾಯಿತಿಯಲ್ಲಿ ಲಭ್ಯವಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್ ಪ್ರೋ ರಿಯಾಯಿತಿ ಪಡೆದು 5,990 ರುಪಾಯಿಗೆ ಖರೀದಿಸಬಹುದು. ಅದೇ ರೀತಿ ಆನ್ ಪ್ರೋ 7 ಗೆ ಎಕ್ಸ್ ಚೇಂಜ್ ಆಫರ್ ಕೂಡ ಇದ್ದು,5,350 ರೂಪಾಯಿಗೆ ಎಕ್ಸ್ ಚೇಂಜ್ ಆಫರ್ ಪಡೆಯಬಹುದು.

  ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
  ಮಿಡ್ ಸೆಗ್ಮೆಂಟ್ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಎ8+ ಕೂಡ ಎಮೇಜಾನ್ ನ 4 ದಿನದ ಈ ಸ್ಯಾಮ್ ಸಂಗ್ ದಿನಗಳ ಮಾರಾಟದಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. 41990 ರುಪಾಯಿಯ ಈ ಸ್ಮಾರ್ಟ್ ಫೋನ್ ಕೇವಲ 29,990 ರುಪಾಯಿಗೆ ಲಭ್ಯವಿದ್ದು, 11910 ರುಪಾಯಿಯ ಭರ್ಜರಿ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇನ್ನು ಈ ಡಿವೈಸ್ ಗೂ ಕೂಡ ಎಕ್ಸ್ ಚೇಂಜ್ ಆಫರ್ ಲಭ್ಯವಿದ್ದು, 13050 ರುಪಾಯಿ ಎಕ್ಸ್ ಚೇಂಜ್ ಆಫರ್ ಸಿಗಲಿದೆ. ಸಿಟಿಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಇಲ್ಲವೆ ಡೆಬಿಟ್ ಕಾರ್ಡ್ ಹೊಂದಿದ್ದರೆ ಹೆಚ್ಚುವರಿ 2500 ರುಪಾಯಿ ಕ್ಯಾಷ್ ಬ್ಯಾಕ್ ಆಫರ್ ನ್ನೂ ಕೂಡ ಪಡೆಯಬಹುದು.

  ಮೈಕ್ರೋಸಾಫ್ಟ್ SMS ಆರ್ಗನೈಸರ್ ಮೂಲಕ ತಿಳಿಯಿರಿ SSLC, ಪಿಯು, CBSC ಪರೀಕ್ಷಾ ಫಲಿತಾಂಶ!

  ಇತ್ತೀಚೆಗೆ ಬಿಡುಗಡೆಗೊಂಡಿರುವ ಗ್ಯಾಲಕ್ಸಿ ಎ6+ ಕೂಡ 2,010 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. 28,000 ರುಪಾಯಿ ಬೆಲೆಗೆ ಈ ಸ್ಮಾರ್ಟ್ ಫೋನ್ ಬಿಡುಗಡೆಗೊಂಡಿತ್ತು. ಈಗ ಇದನ್ನು 25,990 ರುಪಾಯಿಗೆ ಖರೀದಿಸಬಹುದು. ಒಂದು ವೇಳೆ ನೀವು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿದ್ದರೆ ಹೆಚ್ಚುವರಿ 3000 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇನ್ನು ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದ್ದು 15,050 ರುಪಾಯಿ ಎಕ್ಸ್ ಚೇಂಜ್ ಆಫರ್ ನಲ್ಲೂ ಖರೀದಿಸಬಹುದು.

  ಸ್ಮಾರ್ಟ್ ಫೋನ್ ಗಳನ್ನು ಹೊರತು ಪಡಿಸಿ,ಅಮೇಜಾನ್ ಸ್ಯಾಮ್ ಸಂಗ್ ಗಿಯರ್ ಎಸ್ 3 ಮತ್ತು ಗಿಯರ್ ಸ್ಪೋರ್ಟ್ಸ್ ಗೂ ಕೂಡ ರಿಯಾಯಿತಿ ನೀಡುತ್ತಿದೆ. Samsung Gear S3 Frontier 4000 ರುಪಾಯಿಯ ರಿಯಾಯಿತಿಯಲ್ಲಿದೆ. ಇದು 28,500 ರುಪಾಯಿಗೆ ಬಿಡುಗಡೆಗೊಂಡಿದ್ದು, ಈಗ 24,500 ರುಪಾಯಿಗೆ ಖರೀದಿಸಬಹುದು. Samsung Gear Sport ಕೂಡ 4000 ರುಪಾಯಿಯ ರಿಯಾಯಿತಿ ದರದಲ್ಲಿದೆ. 18990 ರುಪಾಯಿಯ ರಿಯಾಯಿತಿ ದರದಲ್ಲಿ ಗ್ರಾಹಕರು ಇದನ್ನು ಖರೀದಿಸಬಹುದು.

  Read more about:
  English summary
  During this four-day sale, the company offers up to Rs. 5,000 discount on select smartphones from the South Korean tech giant. Some phones get an exchange offer up to Rs. 2,000 on exchanging old Samsung smartphones. The Galaxy A8+ is available with Rs. 3,000 cashback on using an ICICI credit card for EMI payment.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more