Subscribe to Gizbot

ವಿಸ್ತರಿಸಿಕೊಳ್ಳಬಹುದಾದ ಸ್ಮಾರ್ಟ್ ಫೋನ್ ವಿನ್ಯಾಸಕ್ಕೆ ಸ್ಯಾಮ್ ಸಂಗ್ ಗೆ ಪೇಟೆಂಟ್..!

Posted By: Precilla Dias

ಪೋಲ್ಡಿಂಗ್ ಸ್ಮಾರ್ಟ ಫೋನ್ ಲಾಂಚ್ ಮಾಡುವ ಆಲೋಚನೆಯನ್ನು ಬಿಟ್ಟ ಕೋರಿಯಾ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಸ್ಯಾಮ್ ಸಂಗ್, ಅದರ ಬದಲಿಗೆ ಡಿಸ್ ಪ್ಲೇಯನ್ನು ಎಕ್ಸ್ ಪ್ಯಾಂಡ್ ಮಾಡಬಹುದಾದ ಸ್ಮಾರ್ಟ್ ಫೋನ್ ನಿರ್ಮಾಣಕ್ಕೆ ಪೇಟೆಂಟ್ ಪಡೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ವಿಸ್ತರಿಸಿಕೊಳ್ಳಬಹುದಾದ ಸ್ಮಾರ್ಟ್ ಫೋನ್ ವಿನ್ಯಾಸಕ್ಕೆ ಸ್ಯಾಮ್ ಸಂಗ್ ಗೆ ಪೇಟೆಂಟ್!

ಮುಂದಿನ ತಲೆ ಮಾರಿನಲ್ಲಿ ಫೋಲ್ಡಬಲ್ ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗದ ಕಾರಣದಿಂದ ಸ್ಯಾಮ್ ಸಂಗ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಸ್ಯಾಮ್ ಸಂಗ್ ಬಿಟ್ಟ ಪ್ರಾಜೆಕ್ಟ್ ಅನ್ನು ZTE ಮುಂದುವರೆಸಲಿದೆ. 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಕ್ಸ್ ಪ್ಯಾಂಡಬಲ್ ಸ್ಮಾರ್ಟ್ ಫೋನ್:

ಎಕ್ಸ್ ಪ್ಯಾಂಡಬಲ್ ಸ್ಮಾರ್ಟ್ ಫೋನ್:

ಇದನ್ನು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಎಂದೇ ಕರೆಯಬಹುದಾಗಿದೆ. ಇದರಲ್ಲಿ ಎರಡು ಕಾರ್ಯಗಳನ್ನು ಮಾಡಬಹುದಾಗಿದೆ. ಮೊಬೈಲ್ ಮೋಡ್ ಮತ್ತು ಎಕ್ಸ್ ಪ್ಯಾಂಡ್ ಮೋಡ್ ಗಳನ್ನು ಕಾಣಬಹುದಾಗಿದೆ. ಇದರಲ್ಲಿ ಎರಡು ಭಾಗದಲ್ಲಿ ಸ್ಕೊರ್ಲ್ ಗಳನ್ನು ನೀಡಲಾಗಿದ್ದು, ಇದುಯ ಡಿಸ್ ಪ್ಲೇಯನ್ನು ಅಗಲ ಮಾಡಲಿವೆ. ಈ ಹೆಚ್ಚುವರಿ ಡಿಸ್ ಪ್ಲೇ ಹಿಂಭಾಗದಲ್ಲಿ ಅಡಿಗಿರಲಿದೆ.

ಪೇಟೆಂಟ್:

ಪೇಟೆಂಟ್:

ಈ ಹಿಂದೆ ಫೋಲ್ಡಬಲ್ ಸ್ಮಾರ್ಟ್ ಫೋನ್ ವಿನ್ಯಾಸಕ್ಕೆ ಪೇಟೆಂಟ್ ಸಲ್ಲಿಸಿದ್ದ ಸ್ಯಾಮ್ ಸಂಗ್, ಈ ಬಾರಿ ವಿಸ್ತರಿಸುವ ಡಿಸ್ ಪ್ಲೇಗಾಗಿ ಪೇಟಂಟ್ ಸಲ್ಲಿಸಿದೆ ಎನ್ನಲಾಗಿದೆ. ಶೀಘ್ರವೇ ವಿನ್ಯಾಸಕ್ಕೆ ಪೇಟೆಂಟ್ ಲಭ್ಯವಾಗುವ ಸಾಧ್ಯತೆ ಅಧಿಕವಾಗಿದೆ. ಆದರೆ ಈ ಡಿಸ್ ಪ್ಲೇಗಳನ್ನು ಯಾವ ಟೆಕ್ನಾಲಜಿಯಲ್ಲಿ ನಿರ್ಮಿಸಲಿದೆ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ ಎನ್ನಲಾಗಿದೆ.

How To Link Aadhaar With EPF Account Without Login (KANNADA)
ಫೋಲ್ಡ್ ಔಟ್ ಫೋನ್:

ಫೋಲ್ಡ್ ಔಟ್ ಫೋನ್:

ಸ್ಯಾಮ್ ಸಂಗ್ ಕೈ ಬಿಟ್ಟ ಫೋಲ್ಡಿಂಗ್ ಫೋನ್ ಮಾದರಿಯಲ್ಲಿಯೇ ಫೋಲ್ಟ್ಔಟ್ ಸ್ಮಾರ್ಟ್ ಫೋನ್ ಅನ್ನು ZTE ಕಂಪನಿಯೂ ಲಾಂಚ್ ಮಾಡಲು ಮುಂದಾಗಿದೆ. ಇದು ಸ್ಮಾರ್ಟ್ ಫೋನ್ ಅನ್ನು ಅರ್ಧಕ್ಕೆ ಕಟ್ ಮಾಡಿದ ರೀತಿಯಲ್ಲಿ ಮಡಚಿ ಜೇಬಿನಲ್ಲಿ ಇಟ್ಟುಕೊಳ್ಳುವಂತೆ ವಿನ್ಯಾಸವನ್ನು ಮಾಡಲು ಮುಂದಾಗಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ ಫೋನ್ ಖರೀದಿಸಲು ಆಫರ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung has filed a patent for a smartphone display that expands when pulled from the sides. The smartphone will double as a tablet. The system will comprise of three panels. Only the main display will be visible in the 'phone mode.' To expand the screen, users will have to grab the sides and pull the device outward.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot